For Quick Alerts
ALLOW NOTIFICATIONS  
For Daily Alerts

ಪ್ರಧಾನ ಮಂತ್ರಿ ಅವಾಸ ಯೋಜನೆ ಅವಧಿ ವಿಸ್ತರಣೆ, ಈಗಲೇ ಅರ್ಜಿ ಸಲ್ಲಿಸಿ ಸ್ವಂತ ಮನೆ ಪಡೆಯಿರಿ

ಪಿಎಂಎವೈ ಯೋಜನೆ ಮೂಲಕ ದೇಶದ ಪ್ರತಿಯೊಬ್ಬರಿಗೂ ಸೂರು ಕಲ್ಪಿಸಬೇಕು, ೨೦೨೨ರ ವೇಳೆಗೆ ಎಲ್ಲರಿಗೂ ಸ್ವಂತ ಮನೆ ಇರಬೇಕು ಎನ್ನುವುದು ಕೇಂದ್ರ ಹಾಗು ರಾಜ್ಯ ಸರ್ಕಾರಗಳ ಉದ್ದೇಶ.

By Siddu
|

ಪಿಎಂಎವೈ ಯೋಜನೆ ಮೂಲಕ ದೇಶದ ಪ್ರತಿಯೊಬ್ಬರಿಗೂ ಸೂರು ಕಲ್ಪಿಸಬೇಕು, ೨೦೨೨ರ ವೇಳೆಗೆ ಎಲ್ಲರಿಗೂ ಸ್ವಂತ ಮನೆ ಇರಬೇಕು ಎನ್ನುವುದು ಕೇಂದ್ರ ಹಾಗು ರಾಜ್ಯ ಸರ್ಕಾರಗಳ ಉದ್ದೇಶ.
ಕೇಂದ್ರ, ರಾಜ್ಯ ಸರ್ಕಾರಗಳ ಈ ಯೋಜನೆಯಲ್ಲಿ ಬಡವರು, ಅತಿ ಕೆಳವರ್ಗದವರು, ಮಧ್ಯಮ ವರ್ಗದವರು, ಕಡಿಮೆ ಆದಾಯ ಹೊಂದಿರುವವರು, ನೌಕರರು ಹೀಗೆ ಎಲ್ಲರೂ ಒಳಗೊಂಡಿದ್ದಾರೆ. ಗ್ರಾಮೀಣ, ನಗರ, ಅರೆನಗರ ಹೀಗೆ ಎಲ್ಲಾ ಕ್ಷೇತ್ರಗಳು ಒಳಪಟ್ಟಿವೆ. ಕೊಳಗೇರಿ ವಾಸಿಗಳು, ಗ್ರಾಮೀಣ, ನಗರ, ಅರೆನಗರದ ಬಡತನ ರೇಖೆಗಿಂತ ಕೆಳಗಿರುವ ಜನರಿಗೆ ವಸತಿ ಕಲ್ಪಿಸುವುದು ಈ ಯೋಜನೆಯ ಉದ್ದೇಶವಾಗಿದೆ. ಪ್ರಧಾನ ಮಂತ್ರಿ ಅವಾಸ ಯೋಜನೆಗೆ ಅರ್ಜಿ ಸಲ್ಲಿಸುವುದು ಹೇಗೆ?

 

ಅವಧಿ ವಿಸ್ತಾರ

ಅವಧಿ ವಿಸ್ತಾರ

ಪ್ರಧಾನಮಂತ್ರಿ ಅವಾಸ ಯೋಜನೆಗೆ ಹೆಸರು ನೋಂದಾಯಿಸಿಕೊಳ್ಳುವವರಿಗೆ ಸಂತಸದ ಸುದ್ದಿ ಇದ್ದು, ನೋಂದಣಿ ಅವಧಿಯನ್ನು ಈ ತಿಂಗಳ 30 ರವರೆಗೆ ವಿಸ್ತರಿಸಲಾಗಿದೆ.

ಆನ್ಲೈನ್ ಮೂಲಕ ನೋಂದಣಿ

ಆನ್ಲೈನ್ ಮೂಲಕ ನೋಂದಣಿ

ಪ್ರಧಾನ ಮಂತ್ರಿ ಅವಾಸ ಯೋಜನೆಯ ಅಧಿಕೃತ ವೆಬ್ಸೈಟ್ pmaymis.gov.in ಗೆ ಭೇಟಿ ನೀಡಿ. 'ಸಿಟಿಜನ್ ಅಸೆಸ್ಮೆಂಟ್' ಮೆನು ಮೂಲಕ ಪ್ರಧಾನಮಂತ್ರಿ ಅವಾಸ ಯೋಜನೆ ಅರ್ಜಿ ಆಪ್ಸನ್ ಆಯ್ಕೆ ಮಾಡಿ. ನಿಮಗೆ ಎರಡು ಆಯ್ಕೆಗಳನ್ನು ನೋಡಬಹುದು: 1. ಸ್ಲಂ ನಿವಾಸಿಗಳು (Slum Dwellers) 2. ಇತರ ಮೂರು ಘಟಕಗಳ ಪ್ರಯೋಜನಗಳು (rural, urban or semi-urban)

'ಸಿಟಿಜನ್ ಅಸೆಸ್ಮೆಂಟ್' ಮೆನು ಮೂಲಕ ಒಂದು ಲಿಂಕ್ ಆಯ್ಕೆ ಮಾಡಿ. ಪ್ರಸ್ತುತ ನೀವು ಕೊಳಗೇರಿ ಪ್ರದೇಶಗಳಲ್ಲಿ ವಾಸವಾಗಿದ್ದರೆ ಸ್ಲಂ ನಿವಾಸಿಗಳು(Slum Dwellers) ಆಯ್ಕೆ ಮಾಡಿ. ಒಂದು ವೇಳೆ ನೀವು ಗ್ರಾಮೀಣ, ನಗರ, ಅರೆ ನಗರ ಪ್ರದೇಶಗಳಲ್ಲಿ ವಾಸವಾಗಿದ್ದರೆ ಇತರ ಮೂರು ಘಟಕಗಳ ಪ್ರಯೋಜನಗಳು(Benefits under other 3 Components) ಆಪ್ಷನ್ ಆಯ್ಕೆ ಮಾಡಿ.

ನೋಂದಣಿ ಶುಲ್ಕ
 

ನೋಂದಣಿ ಶುಲ್ಕ

ದಾಖಲೆಗಳನ್ನು ಮಾಡುವುದು ಒಳಗೊಂಡಂತೆ ಒಬ್ಬ ರ್ಜಿದಾರ ನೋಂದಣಿ ಪ್ರಕ್ರಿಯೆ ಮುಗಿಸಲು ರೂ. ೧೦೦ ಶುಲ್ಕವನ್ನು ನಿಗದಿ ಮಾಡಲಾಗಿದೆ.

15 ಲಕ್ಷ ನಿವೇಶನ

15 ಲಕ್ಷ ನಿವೇಶನ

ವಸತಿ ಯೋಜನೆ ಅವಧಿ ವಿಸ್ತರಣೆ ಮಾಹಿತಿ ನೀಡಿರುವ ವಸತಿ ಸಚಿವ ಯು.ಟಿ.ಖಾದರ್, ಪ್ರಧಾನಮಂತ್ರಿ ಅವಾಸ ಯೋಜನೆಯಡಿ ಇದುವರೆಗೆ ೧೫ ಲಕ್ಷ ನಿವೇಶನ ಹಾಗು ವಸತಿ ರಹಿತರನ್ನು ಗುರುತಿಸಲಾಗಿದೆ ಎಂದು ಹೇಳಿದ್ದಾರೆ.

ರಾಜ್ಯ, ಕೇಂದ್ರದಿಂದ ನೆರವು

ರಾಜ್ಯ, ಕೇಂದ್ರದಿಂದ ನೆರವು

ಪ್ರಧಾನಮಂತ್ರಿಅವಾಸ ಯೋಜನೆಯಡಿ ಮನೆ ಕಟ್ಟಿಸಿಕೊಳ್ಳಲು ಪ್ರತಿಯೊಬ್ಬ ಫಲಾನುಭವಿಗೆ ಕೇಂದ್ರದಿಂದ ರೂ. ೧.೨೦ ಲಕ್ಷ ನೆರವು ಹಾಗು ರಾಜ್ಯದಿಂದ ರೂ. ೪೮ ಸಾವಿರ ನೆರವು ಸಿಗಲಿದೆ.

ಅರ್ಹರನ್ನು ಕೈಬಿಟ್ಟರೆ ಕಾನೂನು ಕ್ರಮ

ಅರ್ಹರನ್ನು ಕೈಬಿಟ್ಟರೆ ಕಾನೂನು ಕ್ರಮ

ವಸತಿ ಯೋಜನೆಯಿಂದ ಯಾರು ಕೂಡ ತಪ್ಪಬಾರದು ಎಂಬ ಕಾರಣಕ್ಕಾಗಿ ಅರ್ಹ ಫಲಾನುಭವಿಗಳನ್ನು ಕೈ ಬಿಡದಂತೆ ಸಮೀಕ್ಷೆ ನಡೆಸಲು ಸೂಚಿಸಲಾಗಿದೆ. ಒಂದು ವೇಳೆ ಅರ್ಹರನ್ನು ಕೈಬಿಟ್ಟರೆ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದಿದ್ದಾರೆ.

ಯೋಜನೆಯ ಉಸ್ತುವಾರಿ

ಯೋಜನೆಯ ಉಸ್ತುವಾರಿ

ಜಿಲ್ಲಾ ಪಂಚಾಯಿತಿಯ ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಹಾಗು ತಾಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ಸಮೀಕ್ಷೆಯ ಮೇಲುಸ್ತುವಾರಿ ತೆಗೆದುಕೊಳ್ಳಲಿದ್ದಾರೆ.

ಸರ್ಕಾರದ ಬದ್ದತೆ

ಸರ್ಕಾರದ ಬದ್ದತೆ

ವಸತಿ ಯೋಜನೆಯನ್ನು ಇಡೀ ರಾಜ್ಯಕ್ಕೆ ವಿಸ್ತರಣೆ ಮಾಡಿದರೆ ವಸತಿ ಸಮಸ್ಯೆ ಎದುರಾಗುವುದಿಲ್ಲ. ಮತ ನೀಡಿದವರು ಅಥವಾ ಮತ ನೀಡದೆ ಇದ್ದವರು ಎಂದು ವಿಭಜನೆ ಮಾಡದೆ ಎಲ್ಲಾ ಅರ್ಹ ಫಲಾನುಭವಿಗಳನ್ನು ಗುರುತಿಸಿ ಸರ್ಕಾರ ಯೋಜನೆ ತುಪಿಸುವಂತಾಗಬೇಕು.

ಬೇಕಾಗುವ ದಾಖಲಾತಿಗಳು

ಬೇಕಾಗುವ ದಾಖಲಾತಿಗಳು

1. ಆಧಾರ್ ಕಾರ್ಡ್ ಪ್ರತಿ
2. ಬ್ಯಾಂಕ್ ಖಾತೆ ಜೆರಾಕ್ಸ್ ಪ್ರತಿ
3. ಪಡಿತರ ಚೀಟಿ (ರೇಷನ್ ಕಾರ್ಡ್ ಜೆರಾಕ್ಸ್)
4. ಚುನಾವಣಾ ಚೀಟಿ
5. ಪಾಸ್ ಪೋರ್ಟ್ ಸೈಜ್ ಪೋಟೊ

ಸ್ಟೇಟಸ್ ಪರಿಶೀಲನೆ

ಸ್ಟೇಟಸ್ ಪರಿಶೀಲನೆ

ಪಿಎಂಎವೈ ಅರ್ಜಿಯ ಪ್ರಸ್ತುತ ಸ್ಟೇಟಸ್ ನ್ನು pmaymis.gov.in ವೆಬ್ಸೈಟ್ ಮೂಲಕ ತಿಳಿದುಕೊಳ್ಳಬಹುದು. ನಿಮ್ಮಿಂದ ತುಂಬಲ್ಪಟ್ಟಿರುವ ನಿಮ್ಮ ಬಗೆಗಿನ ಸಂಪೂರ್ಣ ಮಾಹಿತಿ ಒಳಗೊಂಡಿರುವ ಆನ್ಲೈನ್ ಅರ್ಜಿಯ ಒಂದು ಪ್ರತಿಯನ್ನು ಪ್ರಿಂಟ್ ಔಟ್ ತೆಗೆದುಕೊಳ್ಳಿ. ನಿಮ್ಮ ಅರ್ಜಿಯ ಸ್ಟೇಟಸ್ ತಿಳಿದುಕೊಳ್ಳಲು ಈ ಲಿಂಕ್ ಮೇಲೆ ಕ್ಲಿಕ್ ಮಾಡಿ. (http://pmaymis.gov.in/Track_Application_Status.aspx)

English summary

Pradhan Mantri Awas Yojana date extended: How to apply PMAY

A shelter is regarded to be a man's most basic need. PMAY is a bold vision of providing affordable housing solutions for all Indian citizens.
Story first published: Saturday, July 7, 2018, 9:35 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X