For Quick Alerts
ALLOW NOTIFICATIONS  
For Daily Alerts

ಪ್ರಧಾನ ಮಂತ್ರಿ ಅವಾಸ ಯೋಜನೆಗೆ ಅರ್ಜಿ ಸಲ್ಲಿಸುವುದು ಹೇಗೆ?

ಮನೆ ಎನ್ನುವುದು ಮಾನವನ ಮೂಲಭೂತ ಅಗತ್ಯವಾಗಿದ್ದು, ದೇಶದ ಪ್ರತಿಯೊಬ್ಬರಿಗೂ 2022ರ ಹೊತ್ತಿಗೆ ಮನೆ ಸಿಗಬೇಕು ಎನ್ನುವುದು ಪ್ರಧಾನಿ ಮೋದಿಯವರ ಆಶಯ.

|

ಮನೆ ಎನ್ನುವುದು ಮಾನವನ ಮೂಲಭೂತ ಅಗತ್ಯವಾಗಿದ್ದು, ದೇಶದ ಪ್ರತಿಯೊಬ್ಬರಿಗೂ 2022ರ ಹೊತ್ತಿಗೆ ಮನೆ ಸಿಗಬೇಕು ಎನ್ನುವುದು ಪ್ರಧಾನಿ ಮೋದಿಯವರ ಆಶಯ. ಈ ಆಶಯಕ್ಕಾಗಿ ಕೇಂದ್ರ ಸರ್ಕಾರ "ಪ್ರಧಾನ ಮಂತ್ರಿ ಅವಾಸ ಯೋಜನೆ" (Pradhan ,Mantri Awas Yojana) ಪ್ರಾರಂಭಿಸಿದೆ. ಇದರಲ್ಲಿ ಬಡವರು, ಅತಿ ಕೆಳವರ್ಗದವರು, ಮಧ್ಯಮ ವರ್ಗದವರು, ಕಡಿಮೆ ಆದಾಯ ಹೊಂದಿರುವವರು, ನೌಕರರು ಹೀಗೆ ಎಲ್ಲರೂ ಒಳಗೊಂಡಿದ್ದಾರೆ.

 

ಕೇಂದ್ರದ ಸಹಾಯದೊಂದಿಗೆ ನಗರ ಸ್ಥಳೀಯ ಸಂಸ್ಥೆಗಳು(Urban Local Bodies), ಫಲಾನುಭವಿ ನೇತೃತ್ವ(Beneficiary Led Construction), ನ್ಯಾಷನಲ್ ಹೌಸಿಂಗ್ ಬ್ಯಾಂಕ್NHB() ಮತ್ತು ಹುಡ್ಕೊ(HUDCO) ಸಂಸ್ಥೆಗಳು ಮತ್ತು ರಾಜ್ಯ/ಕೇಂದ್ರಾಡಳಿತ ಸಂಸ್ಥೆಗಳ ಸಹಯೋಗದಲ್ಲಿ ಮನೆಗಳನ್ನು ನಿರ್ಮಿಸಲಾಗುವುದು. ಜನ್ ಔಷಧಿ ಮಳಿಗೆ ಪ್ರಾರಂಭಿಸಿ ಕೈತುಂಬಾ ಹಣ ಗಳಿಸಿ.

ಪ್ರಧಾನ ಮಂತ್ರಿ ಅವಾಸ ಯೋಜನೆಗೆ ಅರ್ಜಿ ಸಲ್ಲಿಸುವ ವಿವಿಧ ಹಂತಗಳನ್ನು ಇಲ್ಲಿ ನೀಡಲಾಗಿದೆ.

1. ಅರ್ಜಿ ಸಲ್ಲಿಸುವ ಮುನ್ನ

1. ಅರ್ಜಿ ಸಲ್ಲಿಸುವ ಮುನ್ನ

ಪಿಎಂ ಅವಾಸ ಯೋಜನೆಗೆ ಅರ್ಜಿ ಸಲ್ಲಿಸುವ ಮುನ್ನ ನೀವು ಅರ್ಹತೆಯನ್ನು ಖಾತರಿಪಡಿಸಿಕೊಳ್ಳಬೇಕು. ಆಧಾರ್ ನಂಬರ್ ಕಡ್ಡಾಯವಾಗಿ ಹೊಂದಿರಬೇಕು. ಜತೆಗೆ ನೀವು ನಿಮ್ಮ ವಾರ್ಷಿಕ ಆದಾಯದ ನಿಖರವಾದ ವಿವರಗಳನ್ನು ಒದಗಿಸಬೇಕು. ಪಿಎಂ ಅವಾಸ ಯೋಜನೆಯ ಮಾನದಂಡದ ಪರಿಧಿಯೊಳಗೆ ಇದ್ದರೆ ಮಾತ್ರ ನೀವು ಫಲಾನುಭವಿಗಳಾಗುತ್ತಿರಿ. 

2. ಅಧಿಕೃತ ವೆಬ್ಸೈಟ್

2. ಅಧಿಕೃತ ವೆಬ್ಸೈಟ್

ಪ್ರಧಾನಮಂತ್ರಿ ಅವಾಸ ಯೋಜನೆಯ ಅಧಿಕೃತ ವೆಬ್ಸೈಟ್ pmaymis.gov.in ಗೆ ಭೇಟಿ ನೀಡಿ. 'ಸಿಟಿಜನ್ ಅಸೆಸ್ಮೆಂಟ್' ಮೆನು ಮೂಲಕ ಪ್ರಧಾನಮಂತ್ರಿ ಅವಾಸ ಯೋಜನೆ ಅರ್ಜಿ ಆಪ್ಸನ್ ಆಯ್ಕೆ ಮಾಡಿ.
ನಿಮಗೆ ಎರಡು ಆಯ್ಕೆಗಳನ್ನು ನೋಡಬಹುದು:
1. ಸ್ಲಂ ನಿವಾಸಿಗಳು(Slum Dwellers)
2. ಇತರ ಮೂರು ಘಟಕಗಳ ಪ್ರಯೋಜನಗಳು( rural, urban or semi-urban) ಕೇವಲ 5 ನಿಮಿಷದಲ್ಲಿ ಮೊಬೈಲ್/ಆನ್ಲೈನ್ ಮೂಲಕ ಜಾತಿ, ಆದಾಯ ಪ್ರಮಾಣ ಪತ್ರ ಪಡೆಯೋದು ಹೇಗೆ?

3. ಘಟಕಗಳ ಆಯ್ಕೆ ಹೇಗೆ?
 

3. ಘಟಕಗಳ ಆಯ್ಕೆ ಹೇಗೆ?

'ಸಿಟಿಜನ್ ಅಸೆಸ್ಮೆಂಟ್' ಮೆನು ಮೂಲಕ ಒಂದು ಲಿಂಕ್ ಆಯ್ಕೆ ಮಾಡಿ. ಪ್ರಸ್ತುತ ನೀವು ಕೊಳಗೇರಿ ಪ್ರದೇಶಗಳಲ್ಲಿ ವಾಸವಾಗಿದ್ದರೆ ಸ್ಲಂ ನಿವಾಸಿಗಳು(Slum Dwellers) ಆಯ್ಕೆ ಮಾಡಿ. ಒಂದು ವೇಳೆ ನೀವು ಗ್ರಾಮೀಣ, ನಗರ, ಅರೆ ನಗರ ಪ್ರದೇಶಗಳಲ್ಲಿ ವಾಸವಾಗಿದ್ದರೆ ಇತರ ಮೂರು ಘಟಕಗಳ ಪ್ರಯೋಜನಗಳು(Benefits under other 3 Components) ಆಪ್ಷನ್ ಆಯ್ಕೆ ಮಾಡಿ.

- ಈಗಾಗಲೇ ಅಸ್ತಿತ್ವದಲ್ಲಿರುವ ಕೊಳೆಗೇರಿ ನಿವಾಸಿಗಳ ಭೂಮಿಯನ್ನು ಸಂಪನ್ಮೂಲವಾಗಿ ಬಳಸಿ ಖಾಸಗಿ ಸಹಭಾಗಿತ್ವ ಮೂಲಕ ಪುನರ್ವಸತಿ ಕಲ್ಪಿಸುವುದು.
_ ಕ್ರೆಡಿಟ್ ಲಿಂಕ್ಡ್ ಸಬ್ಸಿಡಿ
- ಪಾಲುದಾರಿಕೆಯಲ್ಲಿ ಕೈಗೆಟಕುವ ವಸತಿ
- ಫಲಾನುಭವಿ ನೇತೃತ್ವದ ಅಡಿಯಲ್ಲಿ ಪ್ರತ್ಯೇಕ ಮನೆ ನಿರ್ಮಾಣ/ವರ್ಧನೆಗಾಗಿ ಸಬ್ಸಿಡಿ

4. ವಿವರ ತುಂಬಿ

4. ವಿವರ ತುಂಬಿ

ನಂತರದ ಹೊಸ ವಿಂಡೋದಲ್ಲಿ ನಿಮ್ಮ ವಿವರಗಳನ್ನು ಸರಿಯಾಗಿ ತುಂಬಬೇಕು. ಇದು ವೈಯಕ್ತಿಕ ವಿವರ, ಸಂಪರ್ಕ ವಿವರ, ಪ್ರಸ್ತುತ ವಸತಿ ವಿಳಾಸ, ಆಧಾರ್ ನಂಬರ್, ಬ್ಯಾಂಕ್ ಖಾತೆ ವಿವರ, ಮನೆ ವಿವರ, ಮೊಬೈಲ್ ನಂಬರ್ ಮತ್ತು ಆದಾಯ ವಿವರಗಳನ್ನು ಒಳಗೊಂಡಿದ್ದು, ಯಾವುದೇ ತಪ್ಪುಗಳಾಗದಂತೆ ಅರ್ಜಿಯಲ್ಲಿ ತುಂಬಬೇಕು.

5. ಪ್ರಿಂಟ್ ಔಟ್ ಪ್ರಕ್ರಿಯೆ

5. ಪ್ರಿಂಟ್ ಔಟ್ ಪ್ರಕ್ರಿಯೆ

ಅರ್ಜಿಯನ್ನು ತುಂಬಿದ ನಂತರ ಚೆಕ್ ಬಾಕ್ಸ್ ಮೇಲೆ ಕ್ಲಿಕ್ ಮಾಡಿ. ಇದು "I am aware that any claims regarding my inclusions/exclusions shall remain with State govt/urban local body and MoHUPA is just facilitating the process" ಎಂಬುದನ್ನು ತೋರಿಸುತ್ತದೆ.
ಅರ್ಜಿಯ ಕೊನೆಯಲ್ಲಿ ಕ್ಯಾಪ್ಚಾ ಕೋಡ್ ತುಂಬಿದ ನಂತರ ಸೇವ್(Save) ಬಟನ್ ಕ್ಲಿಕ್ ಮೇಲೆ ಮಾಡಿ. ಅಂತಿಮವಾಗಿ ನೀವು ಪ್ರಿಂಟ್ ಬಟನ್ ಮೇಲೆ ಕ್ಲಿಕ್ ಮಾಡಿ ಪ್ರಿಂಟ್ ಔಟ್ ಪಡೆಯಬಹುದು.

6. ಅಪ್ಲಿಕೇಶನ್ ಸಂಖ್ಯೆ

6. ಅಪ್ಲಿಕೇಶನ್ ಸಂಖ್ಯೆ

ಉಳಿಸಿ(Save) ಬಟನ್ ಮೇಲೆ ಕ್ಲಿಕ್ ಮಾಡಿದ ನಂತರ ನಿಮಗೆ ಹೊಸ ಸ್ಕ್ರೀನ್ ಕಾಣಿಸುತ್ತದೆ. ಅಲ್ಲಿ ನಿಮ್ಮ ಆಪ್ಲಿಕೇಶನ್ ಸಂಖ್ಯೆ ನೀಡಲಾಗುತ್ತದೆ. ಈ ಅರ್ಜಿ ಸಂಖ್ಯೆಯನ್ನು ಜಾಗೂರಕವಾಗಿ ಬರೆದಿಡಬೇಕು. ಅಲ್ಲದೆ ಪ್ರಿಂಟ್ ಔಟ್ ತೆಗೆದುಕೊಳ್ಳುವುದು ಇನ್ನೂ ಉತ್ತಮ. ಈ ಅರ್ಜಿ ಸಂಖ್ಯೆಯನ್ನು ಭವಿಷ್ಯತ್ತಿನಲ್ಲಿ ರೆಫರೆನ್ಸ್ ಆಗಿ ಬಳಸಲ್ಪಡುತ್ತದೆ.

7. ಸ್ಟೇಟಸ್ ಪರಿಶೀಲನೆ

7. ಸ್ಟೇಟಸ್ ಪರಿಶೀಲನೆ

ಪಿಎಂಎವೈ ಅರ್ಜಿಯ ಪ್ರಸ್ತುತ ಸ್ಟೇಟಸ್ ನ್ನು pmaymis.gov.in ವೆಬ್ಸೈಟ್ ಮೂಲಕ ತಿಳಿದುಕೊಳ್ಳಬಹುದು. ನಿಮ್ಮಿಂದ ತುಂಬಲ್ಪಟ್ಟಿರುವ ನಿಮ್ಮ ಬಗೆಗಿನ ಸಂಪೂರ್ಣ ಮಾಹಿತಿ ಒಳಗೊಂಡಿರುವ ಆನ್ಲೈನ್ ಅರ್ಜಿಯ ಒಂದು ಪ್ರತಿಯನ್ನು ಪ್ರಿಂಟ್ ಔಟ್ ತೆಗೆದುಕೊಳ್ಳಿ.
ನಿಮ್ಮ ಅರ್ಜಿಯ ಸ್ಟೇಟಸ್ ತಿಳಿದುಕೊಳ್ಳಲು ಈ ಲಿಂಕ್ ಮೇಲೆ ಕ್ಲಿಕ್ ಮಾಡಿ. (http://pmaymis.gov.in/Track_Application_Status.aspx)

8. ಅಪ್ಲಿಕೇಶನ್ ಫಾರ್ಮ್ ಎಡಿಟ್ ಮಾಡಿ

8. ಅಪ್ಲಿಕೇಶನ್ ಫಾರ್ಮ್ ಎಡಿಟ್ ಮಾಡಿ

ನೀವು PMAY ಆನ್ಲೈನ್ ಅಪ್ಲಿಕೇಶನ್ ಫಾರ್ಮ್ ನಲ್ಲಿ ಬದಲಾವಣೆ ಮಾಡಲು ಬಯಸಿದ್ದಲ್ಲಿ ಅರ್ಜಿಯನ್ನು ಎಡಿಟ್ ಮಾಡಬಹುದು. ಕೇವಲ ನಿಮ್ಮ ಅರ್ಜಿ ಸಂಖ್ಯೆ ಮತ್ತು ಆಧಾರ್ ಸಂಖ್ಯೆಗಳನ್ನು ನಮೂದಿಸಿ ಬದಲಾವಣೆ ಮಾಡಬಹುದು. ಒಂದು ವೇಳೆ ಅರ್ಜಿದಾರರು ತಪ್ಪು ಮಾಹಿತಿ ತುಂಬಿದಲ್ಲಿ ಅದನ್ನು ಸರಿಪಡಿಸುವುದಕ್ಕಾಗಿ ಈ ಅವಕಾಶ ನೀಡಲಾಗಿದೆ.

ಕೊನೆ ಮಾತು

ಕೊನೆ ಮಾತು

2022ರಲ್ಲಿ ಎಲ್ಲರಿಗೂ ಮನೆ ಪ್ರಧಾನಿ ಮೋದಿಯವರ ಆಶಯದಂತೆ ಅವಾಸ್ ಯೋಜನೆ ಅಡಿಯಲ್ಲಿ 2022ರಲ್ಲಿ ಪ್ರತಿಯೊಬ್ಬರಿಗೂ ಮನೆ ಸಿಗುವಂತಾಗಬೇಕು. ಭಾರತ ಗುಡಿಸಲು ಮುಕ್ತ, ಟೆಂಟ್ ಮುಕ್ತ ದೇಶವಾಗಬೇಕು ಎಂಬ ಗುರಿ ಹೊಂದಿದ್ದಾರೆ. ಈ ನಿಟ್ಟಿನಲ್ಲಿ ಪ್ರಧಾನಮಂತ್ರಿ ಅವಾಸ್ ಯೋಜನೆಗೆ ತೀವ್ರವಾದ ವೇಗವನ್ನು ಕೊಟ್ಟು ಆದಾಯದ ಮಿತಿ ಮತ್ತು ಅವಧಿಯಲ್ಲಿ ಸಡಿಲಿಕೆ ಘೋಷಿಸಿದ್ದಾರೆ. ವಾರ್ಷಿಕವಾಗಿ ಆದಾಯ ರೂ. 6 ಲಕ್ಷ ಇರುವವರು ಪ್ರಸ್ತುತ ಈ ಸಬ್ಸಿಡಿಯ ಲಾಭವನ್ನು ಪಡೆಯುತ್ತಿದ್ದಾರೆ. ಆದರೆ ಈಗ ಇದರ ಮಿತಿಯನ್ನು 6 ಲಕ್ಷದಿಂದ 18 ಲಕ್ಷಕ್ಕೆ ಹೆಚ್ಚಿಸಲಾಗಿದೆ. ಅಂದರೆ ಈ ಸಬ್ಸಿಡಿ ಪರಿಮಿತಿಯಲ್ಲಿ ಇದೀಗ ರೂ. 18 ಲಕ್ಷದವರೆಗೆ ಆದಾಯ ಗಳಿಸುವವರು ಫಲಾನುಭವಿಗಳು ಆಗಲಿದ್ದಾರೆ. ನಿಮ್ಮ ವಾರ್ಷಿಕ ಆದಾಯ ರೂ. 18 ಲಕ್ಷ ಇದ್ದು, ಮೊದಲ ಬಾರಿ ಮನೆ ಖರೀದಿಸುತ್ತಿದ್ದರೆ ಮನೆ ಸಾಲದ ಬಡ್ಡಿಯ ಭಾಗವಾಗಿ ಸರ್ಕಾರದಿಂದ ರೂ. 2.4 ಲಕ್ಷ ಸಬ್ಸಿಡಿ ಪಡೆಯಬಹುದು.ಪ್ರಧಾನ ಮಂತ್ರಿ ಅವಾಸ ಯೋಜನೆ ಅಡಿ ಸ್ವಂತ ಮನೆ ಪಡೆಯಿರಿ

English summary

How To Apply For Pradhan Mantri Awas Yojana (PMAY)?

A shelter is regarded to be a man's most basic need. PMAY is a bold vision of providing affordable housing solutions for all Indian citizens.
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X