For Quick Alerts
ALLOW NOTIFICATIONS  
For Daily Alerts

32 ಕಿ.ಮೀ ನಡೆದು ಕೆಲಸಕ್ಕೆ ಹಾಜರಾದ ಯುವಕನಿಗೆ ಸ್ವಂತ ಕಾರನ್ನೇ ಗಿಪ್ಟ್ ಕೊಟ್ಟ ಸಿಇಒ!

ಇದು ತುಂಬಾ ಪ್ರೋತ್ಸಾಹದಾಯಕ ಮತ್ತು ಕುತೂಹಲಕರ ಸುದ್ದಿ! ಕಾಲೇಜು ವಿದ್ಯಾರ್ಥಿಯೊಬ್ಬ ತನ್ನ ಉದ್ಯೋಗದ ಮೊದಲ ದಿನವೇ ತಪ್ಪಬಾರದೆಂದು ರಾತ್ರಿಯಿಡಿ ಹೆಚ್ಚುಕಡಿಮೆ 32 ಕಿ.ಮೀ ನಡೆದುಕೊಂಡು ಕೆಲಸಕ್ಕೆ ಹಾಜರಾಗಿದ್ದಾನೆ!

By Siddu Thoravat
|

ಇದು ತುಂಬಾ ಪ್ರೋತ್ಸಾಹದಾಯಕ ಮತ್ತು ಕುತೂಹಲಕರ ಸುದ್ದಿ! ಕಾಲೇಜು ವಿದ್ಯಾರ್ಥಿಯೊಬ್ಬ ತನ್ನ ಉದ್ಯೋಗದ ಮೊದಲ ದಿನವೇ ತಪ್ಪಬಾರದೆಂದು ರಾತ್ರಿಯಿಡಿ ಹೆಚ್ಚುಕಡಿಮೆ 32 ಕಿ.ಮೀ ನಡೆದುಕೊಂಡು ಕೆಲಸಕ್ಕೆ ಹಾಜರಾಗಿದ್ದಾನೆ!

 

ಅಮೆರಿಕದಲ್ಲಿ ಈ ಘಟನೆ ನಡೆದಿದ್ದು, ಯುವಕನ ಉತ್ಸಾಹ, ಕೆಲಸದ ಮೇಲಿನ ಶ್ರದ್ಧೆಯನ್ನು ನೋಡಿ ಸ್ವತಹ ಕಂಪನಿಯ ಸಿಇಒ ಪ್ರಭಾವಿರಾಗಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಅಷ್ಟೆ ಅಲ್ಲ ತನ್ನ ಕಾರನ್ನು ಕೂಡ ಉಡುಗೊರೆಯಾಗಿ ಆತನಿಗೆ ನೀಡಿದ್ದಾರೆ! ಕೇವಲ 10 ನಿಮಿಷದಲ್ಲಿ ಆನ್ಲೈನ್ ಮೂಲಕ ರೇಷನ್ ಕಾರ್ಡ್ ಪಡೆಯುವುದು ಹೇಗೆ?

ಫೋರ್ಡ್‌ ಎಸ್ಕೇಪ್‌ ಕಾರು ಉಡುಗೊರೆ

ಫೋರ್ಡ್‌ ಎಸ್ಕೇಪ್‌ ಕಾರು ಉಡುಗೊರೆ

ಇಪ್ಪತ್ತು ವಯಸ್ಸಿನ ಆ ಹುಡುಗ ಹೆಸರು ವಾಲ್ಟರ್ ಕಾರ್ರ್. ಅಲಬಾಮಾ ಕಾಲೇಜಿನ ವಿದ್ಯಾರ್ಥಿಯಾಗಿದ್ದ ಇತ ಬೆಲ್ ಹೋಪ್ಸ್ ಕಂಪನಿಯಲ್ಲಿ ಕೆಲಸಕ್ಕೆ ಸೇರಿಕೊಂಡಿದ್ದನು. ಬೆಲ್ ಹೋಪ್ಸ್ ಕಂಪನಿಯ ಸಿಇಒ ಲ್ಯೂಕ್ ಮಾರ್ಟಿನ್ ತನ್ನ 2014ರ ಫೋರ್ಡ್‌ ಎಸ್ಕೇಪ್‌ ಕಾರನ್ನು ಉಡುಗೊರೆಯಾಗಿ ನೀಡಿರುವುದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಸಿಇಒ ಲ್ಯೂಕ್ ಮಾರ್ಟಿನ್ ಅವರ ನಡೆಯನ್ನು ಸಾರ್ವಜನಿಕರು ಪ್ರಶಂಸಿದ್ದಾರೆ. ಹೊಸ 100 ರೂಪಾಯಿ ನೋಟು ಬಿಡುಗಡೆ! ಇಂಟರೆಸ್ಟಿಂಗ್ ವಿಶೇಷತೆಗಳೇನು ಗೊತ್ತೆ?

ಮಧ್ಯರಾತ್ರಿಯೇ ನಡೆದುಕೊಂಡು ಹೊರಟ್ಟಿದ್ದ

ಮಧ್ಯರಾತ್ರಿಯೇ ನಡೆದುಕೊಂಡು ಹೊರಟ್ಟಿದ್ದ

ಕಚೇರಿ ಮನೆಯಿಂದ ಸುಮಾರು ೩೨ ಕಿ.ಮೀ ದೂರವಿದ್ದ ಕಾರಣ ಹುಡುಗ ಮಧ್ಯರಾತ್ರಿಯೇ ನಡೆದುಕೊಂಡು ಹೊರಟ್ಟಿದ್ದ. ಶನಿವಾರ ಮುಂಜಾನೆ ರಸ್ತೆ ಬದಿಯಲ್ಲಿ ನಡೆದುಕೊಂಡು ಹೋಗುತ್ತಿದ್ದ ಇತನನ್ನು ವಿಚಾರಿಸಿದ ಪೋಲಿಸರು ಕಚೆರಿಗೆ ತಲುಪಿಸಿದರು.

ಕಚೇರಿ ಅಧಿಕಾರಿಗಳಿಗೆ ಶಾಕ್
 

ಕಚೇರಿ ಅಧಿಕಾರಿಗಳಿಗೆ ಶಾಕ್

ವಾಲ್ಟರ್ ಕಚೇರಿಗೆ ತಲುಪಿದ ನಂತರ ಕಥೆ ಕೇಳಿದ ಅಧಿಕಾರಿಗಳು ಶಾಕ್ ಆದರು. ಅದಿಕಾರಿಗಳು ವಿಶ್ರಾಂತಿ ತೆಗೆದುಕೊಳ್ಳುವಂತೆ ಹೇಳಿದರು ವಾಲ್ಟರ್‌ ಕರ್ತವ್ಯಕ್ಕೆ ಹಾಜರಾದನು. ಈ ವಿಷಯ ತಿಳಿದ ಸಿಇಒ ವಾಲ್ಟರ್ ಗೆ ಸ್ವಂತ ಕಾರಿನ ಕೀಯನ್ನು ಕೊಟ್ಟು ತಬ್ಬಿ ಬೆನ್ನು ತಟ್ಟಿದರು. ಈಗ ಶಾಕ್ ಆಗುವ ಸರದಿ ವಾಲ್ಟರ್ ನದು! ನಿಜವಾಗಿಯೂ ಕಾರುಕೊಡುತ್ತಿದ್ದೀರಾ ಎಂದು ಭಾವುಕನಾಗಿ ಕೇಳಿದ್ದನು.

Read more about: finance news money employee
English summary

CEO Gifts His Car to College Student Who Walked 20 Miles to Work

A 20-year-old Alabama student is experiencing good karma after making a nearly 7-hour journey on foot to ensure he wasn’t late for his first day of work.
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X