ಕೇವಲ 10 ನಿಮಿಷದಲ್ಲಿ ಆನ್ಲೈನ್ ಮೂಲಕ ರೇಷನ್ ಕಾರ್ಡ್ ಪಡೆಯುವುದು ಹೇಗೆ?

By Siddu
Subscribe to GoodReturns Kannada
For Quick Alerts
ALLOW NOTIFICATIONS  
For Daily Alerts

  ರೇಷನ್ ಕಾರ್ಡ್ ನಿಂದ ಹಿಡಿದು ಆದಾಯ, ಜಾತಿ ಪ್ರಮಾಣ ಪತ್ರಗಳಿಗಾಗಿ ಕಚೇರಿಗಳಿಗೆ ಅಲೆಯುವುದೆಂದರೆ ದೊಡ್ಡ ತಲೆನೋವು! ಹತ್ತಾರು ಬಾರಿ ಅಲೆದು ದಾರಿ ಸವೆಯುತ್ತದೆಯೇ ಹೊರತು ಪ್ರಮಾಣ ಪತ್ರಗಳು ಮಾತ್ರ ಸಿಗಲ್ಲ. ಕೆಲವೊಮ್ಮೆ ಅಧಿಕಾರಿಗಳ ಬೇಜವ್ಧಾರಿ ವರ್ತನೆ, ಲಂಚದ ಆಸೆಯಿಂದ ರೋಸಿ ಹೋಗುವಂತಾಗುತ್ತದೆ. ಅದರಲ್ಲೂ ಹಳ್ಳಿ ಜನರಿಗಂತು ತುಂಬಾ ಕಿರುಕುಳ ಕೊಡುತ್ತಾರೆ.

  ಹೊಸ ಪಡಿತರ ಚೀಟಿ (ರೇಷನ್ ಕಾರ್ಡ್) ಪಡೆಯಲು ಬಯಸುವವರಿಗೆ ಸರ್ಕಾರ ಸಿಹಿಸುದ್ದಿ ನೀಡಿದೆ.! ಹೊಸದಾಗಿ ರೇಷನ್ ಕಾರ್ಡ್ ಮಾಡಿಸಲು ತಾತ್ಕಾಲಿಕವಾಗಿ ನೀಡಲಾಗಿದ್ದ ತಡೆಯನ್ನು ಹಿಂಪಡೆಯಲಾಗಿದೆ. ಆನ್ಲೈನ್ ಮೂಲಕ ಹೊಸದಾಗಿ ಅರ್ಜಿ ಸಲ್ಲಿಸಲು ಅವಕಾಶ ಕಲ್ಪಿಸಲಾಗಿದೆ. ಅಲ್ಲದೇ ನಿಮ್ಮ ಪಡಿತರ ಚೀಟಿಗಳಲ್ಲಿರುವ ತಪ್ಪುಗಳನ್ನು ಸರಿಪಡಿಸಿಕೊಳ್ಳಲು ಅವಕಾಶ ನೀಡಲಾಗಿದೆ. ಕೇವಲ 5 ನಿಮಿಷದಲ್ಲಿ ಮೊಬೈಲ್/ಆನ್ಲೈನ್ ಮೂಲಕ ಜಾತಿ, ಆದಾಯ ಪ್ರಮಾಣ ಪತ್ರ ಪಡೆಯೋದು ಹೇಗೆ?

   

  ಅಕ್ರಮಗಳನ್ನು ತಡೆಯುವ ಸಲುವಾಗಿ ಕ್ರಾಂತಿಕಾರಕ ಹೆಜ್ಜೆಯಿಟ್ಟಿರುವ ಇಲಾಖೆ ಕಾರ್ಡುದಾರರಿಗೆ ಎಸ್ಎಂಎಸ್ ಮೂಲಕ ಕಳುಹಿಸುವ ವ್ಯವಸ್ಥೆಗೆ ಮುಂದಾಗಿದೆ. ಕೇವಲ ಹತ್ತು ನಿಮಿಷದಲ್ಲಿ ಪಡಿತರ ಚೀಟಿ ಪಡೆಯಬಹುದಾಗಿದೆ. ಇದರ ಸಂಪೂರ್ಣ ಮಾಹಿತಿ ಇಲ್ಲಿದೆ ನೋಡಿ..

  ಇಲಾಖೆ ವೆಬ್ಸೈಟ್ ನಲ್ಲಿ ಅವಕಾಶ

  ರಾಜ್ಯ ಸರ್ಕಾರ ಹೊಸ ಕಾರ್ಡು ಮಾಡಿಸಿಕೊಳ್ಳಲು ಅವಕಾಶ ನೀಡಿದ್ದು, ಇದಕ್ಕಾಗಿ ಆಹಾರ, ನಾಗರಿಕ ಸರಬರಾಜು ಮತ್ತು ಗ್ರಾಹಕ ವ್ಯವಹಾರಗಳ ಇಲಾಖೆ ವೆಬ್ಸೈಟ್ ನಲ್ಲಿ ಅವಕಾಶ ಒದಗಿಸಲಾಗಿದೆ. ವೆಬ್ಸೈಟ್ ನ ಈ ಲಿಂಕ್ ಮೇಲೆ ಕ್ಲಿಕ್ ಮಾಡಿ (https://ahara.kar.nic.in/home.aspx) ಆನ್ಲೈನ್ ಮೂಲಕ ಪಡಿತರ ಚೀಟಿ ಪಡೆಯಲು ಅವಕಾಶ ನೀಡಿರುವುದು ನಾಗರಿಕರಿಗೆ ತುಂಬಾ ಸಹಕಾರಿಯಾಗಲಿದೆ.

  ಅರ್ಜಿ ಸಲ್ಲಿಕೆ ಹೇಗೆ?

  ಮೊದಲ ಹಂತದಲ್ಲಿ ಆಹಾರ, ನಾಗರಿಕ ಸರಬರಾಜು ಮತ್ತು ಗ್ರಾಹಕ ವ್ಯವಹಾರಗಳ ಇಲಾಖೆ ವೆಬ್ಸೈಟ್ https://ahara.kar.nic.in/home.aspx ಪುಟ ತೆರೆಯಬೇಕು. ಇಲ್ಲಿ ಕಾಣುವ ಇ-ಸೇವೆಗಳು ಎಂಬ ಆಯ್ಕೆಯ ಮೇಲೆ ಕ್ಲಿಕ್ ಮಾಡಿ. ಅಲ್ಲಿ ಅನೇಕ ಆಯ್ಕೆಗಳು ಕಾಣಲಿವೆ ಆದರೆ ನಿಮಗೆ ಬೇಕಾಗಿರುವ ಇ-ಪಡಿತರ ಚೀಟಿ ಮೇಲೆ ಕ್ಲಿಕ್ ಮಾಡಿ ಮುಂದುವರೆಯಿರಿ.

  ಹೊಸ ಪಡಿತರ ಚೀಟಿ

  ಇ-ಪಡಿತರ ಚೀಟಿ ಮೇಲೆ ಕ್ಲಿಕ್ ಮಾಡಿದರೆ ಹೊಸ ಪಡಿತರ ಚೀಟಿ ಆಯ್ಕೆಯೊಂದಿಗೆ ಆಧಾರ್ ಅಪ್ಡೇಟ್, ವಿತರಣೆಯಾಗದ ಹೊಸ ಪಡಿತರ ಚಿಟಿ ಇತ್ಯಾದಿ ವಿಧಾನಗಳು ಕಾಣಲಿವೆ.

  ಕನ್ನಡ ಬಾಷೆ ಆಯ್ಕೆ ಮಾಡಿ

  ಹೊಸ ಪಡಿತರ ಚೀಟಿ ಮೇಲೆ ಕ್ಲಿಕ್ ಮಾಡಿದರೆ ಕನ್ನಡ, ಇಂಗ್ಲೀಷ ಎರಡು ಭಾಷೆಗಳನ್ನು ಕಾಣುತ್ತವೆ. ಇಲ್ಲಿ ನಿಮಗೆ ಬೇಕಾಗುವ ಭಾಷೆಯನ್ನು ಆಯ್ಕೆ ಮಾಡಿ. ಕನ್ನಡದಲ್ಲಿ ರೇಷನ್ ಕಾರ್ಡ್ ಪಡೆಯಬಯಸುವರು ಕನ್ನಡ ಆಯ್ಕೆ ಮಾಡಿ.

  ಮುಂದಿನ ಹಂತ

  ಕನ್ನಡ ಭಾಷೆ ಆಯ್ಕೆ ಮಾಡಿ ಮುಂದಿನ ಹಂತಕ್ಕೆ ಹೋದರೆ ಹೊಸ ಪಡಿತರ ಚೀಟಿ, ಉಳಿಸಲಾದ ಅರ್ಜಿ ಮತ್ತು ಅರ್ಜಿ ಹಿಂಪಡೆಯಲು ಎಂಬ ಮೂರು ಆಯ್ಕೆಗಳಿರುತ್ತವೆ. ಇಲ್ಲಿ ಹೊಸ ಪಡಿತರ ಚೀಟಿ ಮೇಲೆ ಕ್ಲಿಕ್ ಮಾಡಿ.

  ಎರಡು ಆಯ್ಕೆಗಳು ಕಾಣಲಿವೆ

  ಹೊಸ ಪಡಿತರ ಚೀಟಿ ಮೇಲೆ ಕ್ಲಿಕ್ ಮಾಡಿ ಮುನ್ನಡೆದರೆ ಆದ್ಯತಾ ಕುಟುಂಬ ಹಾಗು ಆದ್ಯತೇತರ ಕುಟುಂಬ ಎಂಬ ಎರಡು ಆಯ್ಕೆಗಳು ನಿಮಗೆ ಕಾಣಲಿವೆ. ಇದರಲ್ಲಿ ನಿಮ್ಮ ಆಯ್ಕೆ ಯಾವುದು ಎಂಬುದನ್ನು ಅವುಗಳ ಮೇಲೆ ಕ್ಲಿಕ್ ಮಾಡಿ.

  ಮುಂದಿನ ಹಂತದಲ್ಲಿ ಎಚ್ಚರಿಕೆ ಇರಲಿ
  ಆದ್ಯತಾ ಕುಟುಂಬ ಹಾಗು ಆದ್ಯತೇತರ ಕುಟುಂಬ ಎಂಬ ಎರಡು ಆಯ್ಕೆಗಳಿದ್ದು, ಇವುಗಳಲ್ಲಿ ಆದ್ಯತ ಕುಟುಂಬ ಆಯ್ಕೆ ಮಾಡಿದರೆ ಬಯೊಮೆಟ್ರಿಕ್ ಕಡ್ಡಾಯವಾಗಿರುತ್ತದೆ. ನಿಮ್ಮ ಬಳಿ ಬಯೊಮೆಟ್ರಿಕ್ ಡಿವೈಸ್ ಇಲ್ಲದಿದ್ದರೆ ಹತ್ತಿರದ ಕೇಂದ್ರಕ್ಕೆ ತೆರಳಿ ಮಾಡಿಸಿಕೊಳ್ಳಿ. ಜತೆಗೆ ಇನ್ನಿತರ ಮಾಹಿತಿಯನ್ನು ಒದಗಿಸಿ. ಒಂದು ವೇಳೆ ನಿಮ್ಮ ಆಯ್ಕೆ ಆದ್ಯತೇತರ ಕುಟುಂಬ ಆದಲ್ಲಿ ನಿಮ್ಮ ಆಧಾರ್ ಸಂಖ್ಯೆ ನಮೂದಿಸಿ.


  ಬಿಪಿಎಲ್ ಪಡಿತರ ಚೀಟಿಗಾಗಿ ಅರ್ಜಿಸಲ್ಲಿಸುವ ಅರ್ಜಿದಾರರು ನೀಡಲೇ ಬೇಕಾದ ಮಾಹಿತಿ.

  1. 1.ವೇತವನ್ನು ಗಣನೆಗೆ ತೆಗೆದುಕೊಳ್ಳದೇ ಎಲ್ಲಾ ಖಾಯಂ ನೌಕರರು ಅಂದರೆ ಸರ್ಕಾರದ ಅಥವಾ ಸರ್ಕಾರದಿಂದ ಅನುದಾನವನ್ನು ಪಡೆಯುತ್ತಿರುವ ಸಂಸ್ಥೆಗಳು ಅಥವಾ ಸರ್ಕಾರಿ ಪ್ರಾಯೋಜಿತ ಸರ್ಕಾರಿ ಸ್ವಾಮ್ಯದ ಸಂಸ್ಥೆಗಳು/ ಮಂಡಳಿಗಳು/ ನಿಗಮಗಳು/ ಸ್ವಾಯತ್ತ ಸಂಸ್ಥೆಗಳು ಇತ್ಯಾದಿ; ಒಳಗೊಂಡಂತೆ ಆದಾಯ ತೆರಿಗೆ/ ಸೇವಾ ತೆರಿಗೆ/ ವ್ಯಾಟ್/ ವೃತ್ತಿ ತೆರಿಗೆ ಪಾವತಿಸುವ ಎಲ್ಲಾ ಕುಟುಂಬಗಳು?

  ಹೌದು
  ಇಲ್ಲಾ

  2. ಗ್ರಾಮೀಣ ಪ್ರದೇಶದಲ್ಲಿ 3 ಹೆಕ್ಟೇರ್ ಒಣಭೂಮಿ ಅಥವಾ ತತ್ಸಮಾನ ನೀರಾವರಿ ಭೂಮಿ ಹೊಂದಿರುವ ಕುಟುಂಬಗಳು ಅಥವಾ ಗ್ರಾಮೀಣ ಪ್ರದೇಶವನ್ನು ಹೊರತುಪಡಿಸಿ ನಗರ ಪ್ರದೇಶಗಳಲ್ಲಿ 1000 ಚದರ ಅಡಿಗಿಂತಲೂ ಹೆಚ್ಚಿನ ವಿಸ್ತೀರ್ಣದ ಪಕ್ಕಾ ಮನೆಯನ್ನು ಸ್ವಂತವಾಗಿ ಹೊಂದಿರುವ ಕುಟುಂಬಗಳು?

  ಹೌದು
  ಇಲ್ಲಾ

  3. ಜೀವನೋಪಾಯಕ್ಕಾಗಿ ಸ್ವತಃ ಓಡಿಸುವ ಒಂದು ವಾಣಿಜ್ಯ ವಾಹನವನ್ನು ಅಂದರೆ ಟ್ರಾಕ್ಟರ್, ಮ್ಯಾಕ್ಸಿಕ್ಯಾಬ್, ಟ್ಯಾಕ್ಸಿ ಇತ್ಯಾದಿಗಳನ್ನು ಹೊಂದಿದ ಕುಟುಂಬವನ್ನು ಹೊರತುಪಡಿಸಿ ನಾಲ್ಕು ಚಕ್ರದ ವಾಹನಗಳನ್ನು ಹೊಂದಿರುವ ಎಲ್ಲಾ ಕುಟುಂಬಗಳು?

  ಹೌದು
  ಇಲ್ಲಾ

  4. ಕುಟುಂಬದ ವಾರ್ಷಿಕ ಆದಾಯವು ರೂ. 1. 20 ಲಕ್ಷಗಳಿಗಿಂತಲೂ ಹೆಚ್ಚು ಇರುವ ಕುಟುಂಬಗಳು?

  ಧೃಢೀಕರಣ ವಿಧಾನ

  ನಿಮ್ಮ ಆಧಾರ್ ಸಂಖ್ಯೆ ಮತ್ತು ಮೊಬೈಲ್ ನಂಬರ್ ನೀಡಬೇಕು. ನಂತರ ಮೊಬೈಲ್ ನಂಬರ್ ಗೆ ಬರುವ ಓಟಿಪಿಯನ್ನು ನೋಂದಾಯಿಸಿ. ಇಲ್ಲವೇ ಕೈಬೆರಳಿನ ಜೀವಮಾಪನ ನೀಡಿ. ಓಟಿಪಿಯನ್ನು ನಮೂದಿಸಿ, ಕ್ಯಾಪ್ಚಾ ಕೋಡ್ ನಮೂದಿಸಿ ಮುನ್ನಡೆಯಿರಿ.

  ಮುಂದಿನ ಹಂತ

  ಓಟಿಪಿ ಮತ್ತು ಕ್ಯಾಪ್ಚಾ ಕೋಡ್ ನಮೂದಿಸಿದರೆ ಆಧಾರ್ ಇಲಾಖೆಯಿಂದ ದತ್ತಾಂಶ ಪಡೆದುಕೊಳ್ಳಲಾಗುತ್ತದೆ. ಅಲ್ಲಿ ನಿಮ್ಮ ಹೆಸರು, ವಿವರ ಕಾಣುತ್ತದೆ. ಅದರ ಪಕ್ಕದಲ್ಲಿ 'ಸೇರಿಸಿ' ಎಂಬ ಆಯ್ಕೆ ಇರುತ್ತದೆ. ಇದರೊಂದಿಗೆ ನಿಮ್ಮ ಕುಟುಂಬದವರ ಮಾಹಿತಿಯನ್ನು ಸೇರಿಸಬಹುದು.

  ವಾಸವಾಗಿರುವ ಮಾಹಿತಿ

  ನಂತರದಲ್ಲಿ ಗ್ರಾಮೀಣ ವಾಸಿಗಳೇ ಇಲ್ಲವೇ ನಗರದಲ್ಲಿ ವಾಸಿಸುವವರೆ ಎಂಬ ಮಾಹಿತಿ ಒದಗಿಸಬೇಕಾಗುತ್ತದೆ. ಅಲ್ಲಿ ಕಾಣುವ ಆಯ್ಕೆಗಳ ಮೇಲೆ ಕ್ಲಿಕ್ ಮಾಡಿರಿ.

  ರೇಷನ್ ಕಾರ್ಡ್ ಪ್ರಿಂಟ್ ಮಾಡಿಕೊಳ್ಳಿ

  ಮೇಲಿನ ಎಲ್ಲಾ ಹಂತಗಳನ್ನು ಯಶಸ್ವಿಯಾಗಿ ತುಂಬಿದ ನಂತರ ರೇಷನ್ ಕಾರ್ಡ್ ಮುಂದಿನ ಹಂತದಲ್ಲಿ ನಿಮಗೆ ಕಾಣುತ್ತದೆ. ಅಲ್ಲಿಂದಲೇ ಪ್ರಿಂಟ್ ತೆಗೆದುಕೊಳ್ಳಬಹುದು.

  ಕೇವಲ 10-15 ನಿಮಿಷದಲ್ಲಿ ರೇಷನ್ ಕಾರ್ಡ್

  ಹೌದು..! ಕೇವಲ ಹತ್ತರಿಂದ ಹದಿನೈದು ನಿಮಿಷಗಳ ಒಳಗೆ ನಿಮ್ಮ ಕೈಯಲ್ಲಿ ಪಡಿತರ ಚಿಟಿ ಇರುತ್ತದೆ. ಅತ್ಯಂತ ಸುಲಭ ವಿಧಾನದಲ್ಲಿ ನೀವು ರೇಷನ್ ಕಾರ್ಡ್ ಪಡೆಯಬಹುದು.

  ಅಧಿಕಾರಿಗಳಿಗೆ ಲಂಚ ಕೊಡಬೇಕಿಲ್ಲ, ಅಲೆದಾಟ ಇಲ್ಲ

  ರೇಷನ್ ಕಾರ್ಡ್ ಪಡೆಯಲು ಅಲೆದಾಡುವವರ ಪರಿಪಾಟಲು ಹೇಳುವವರಿಲ್ಲ. ಇಲಾಕೆ ಅಧಿಕಾರಿಗಳು ಸತಾಯಿಸಿ ಬಿಡುತ್ತಾರೆ. ನಾಳೆ ಬಾ, ನಾಡಿದ್ದು ಬಾ ಇಲ್ಲವೆ ಅದು ಸರಿಯಿ ಇದು ಸರಿಯಿಲ್ಲ ಅಂತಾ ಸುಮ್ಮನೆ ಕಾಡುತ್ತಿರುತ್ತಾರೆ. ಹೆಚ್ಚಿನವರು ಲಂಚದ ಆಸೆಯಿಂದ ಗ್ರಾಹಕರಿಗೆ ಕಿರುಕುಳ ನೀಡುತ್ತಾರೆ.

  ಶೇರ್ ಮಾಡಿ

  ಈ ಮಾಹಿತಿ ಎಲ್ಲರಿಗೂ ತಲುಪಿ. ಹೆಚ್ಚಿನ ಜನರು ಇದರ ಸದುಪಯೋಗ ಪಡೆದುಕೊಳ್ಳಲಿ. ನಿಮ್ಮ ಗ್ರೂಪ್ ನೊಂದಿಗೆ ಹಂಚಿಕೊಳ್ಳಿ. ಇನ್ನೊಬ್ಬರಿಗೆ ಪಡಿತರ ಚೀಟಿ ಸುಲಭವಾಗಿ ಪಡೆಯಲು ಸಹಕರಿಸಿ.

  English summary

  How to get Ration Card by Online?

  How to get Ration Card by Online within 10 minutes? Here are the complete details.
  Company Search
  Enter the first few characters of the company's name or the NSE symbol or BSE code and click 'Go'

  Find IFSC

  Get Latest News alerts from Kannada Goodreturns

  We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Goodreturns sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Goodreturns website. However, you can change your cookie settings at any time. Learn more