For Quick Alerts
ALLOW NOTIFICATIONS  
For Daily Alerts

ಜಿಯೋ ಮಾನ್ಸೂನ್ ಹಂಗಾಮಾ ಆಫರ್ ಆರಂಭ! ಇಲ್ಲಿದೆ ವಿವರ...

ಟೆಲಿಕಾಂ ಕಂಪನಿಗಳಿಗೆ ಸ್ಪರ್ಧೆ ಒಡ್ಡುತ್ತಿರುವ ಜಿಯೋ ಮೊ ಐಲ್ ತಯಾರಿಕಾ ಕಂಪನಿಗಳಿಗೂ ಪೈಪೋಟಿ ನೀಡಲಿದೆ. ಮಾರುಕಟ್ಟೆಗೆ ಬರಲಿರುವ ಜಿಯೋಫೋನ್ ೨ ಇದೇ ಆಗಸ್ಟ್ ಗೆ ಮಾರುಕಟ್ಟೆಗೆ ಬರಲಿದೆ.

By Siddu Thoravat
|

ರಿಲಯನ್ಸ್ ಜಿಯೋ ಟೆಲಿಕಾಂ ವಲಯದಲ್ಲಿ ಹೊಸತನದೊಂದಿಗೆ ತನ್ನದೆಯಾದ ಛಾಪನ್ನು ಮೂಡಿಸಿದೆ.
ಟೆಲಿಕಾಂ ಕಂಪನಿಗಳಿಗೆ ಸ್ಪರ್ಧೆ ಒಡ್ಡುತ್ತಿರುವ ಜಿಯೋ ಮೊ ಐಲ್ ತಯಾರಿಕಾ ಕಂಪನಿಗಳಿಗೂ ಪೈಪೋಟಿ ನೀಡಲಿದೆ. ಮಾರುಕಟ್ಟೆಗೆ ಬರಲಿರುವ ಜಿಯೋಫೋನ್ ೨ ಇದೇ ಆಗಸ್ಟ್ ಗೆ ಮಾರುಕಟ್ಟೆಗೆ ಬರಲಿದೆ. ಕೇವಲ 10 ನಿಮಿಷದಲ್ಲಿ ಆನ್ಲೈನ್ ಮೂಲಕ ರೇಷನ್ ಕಾರ್ಡ್ ಪಡೆಯುವುದು ಹೇಗೆ?

ಜಿಯೊ ಮಾನ್ಸೂನ್ ಹಂಗಮಾ ಆಫರ್

ಜಿಯೊ ಮಾನ್ಸೂನ್ ಹಂಗಮಾ ಆಫರ್

ಜಿಯೊಫೋನ್ ಮಾನ್ಸೂನ್ ಹಂಗಮಾ ಆಫರ್ ಅಡಿಯಲ್ಲಿ, ಗ್ರಾಹಕರು ಯಾವುದೇ ಬ್ರಾಂಡ್ ನ ಹಳೆಯ ಫೀಚರ್ ಫೋನ್ ಗಳನ್ನು ರೂ. 501ಕ್ಕೆ ಬದಲಾಯಿಸಿ ಹೊಸ ಜಿಯೋಫೋನ್ ಪಡೆದುಕೊಳ್ಳುವ ಆಯ್ಕೆ ನೀಡಿದೆ. ಅಂದರೆ ಹಳೆಯ ಫೀಚರ್ ಫೋನ್ ಜೊತೆ ರೂ.501 ಪಾವತಿಸಿ ಹೊಸ ಜಿಯೋಫೋನ್2 ಖರೀದಿಸಬಹುದು.

ಜಿಯೋಫೋನ್ ಹೊಸ ಆವೃತ್ತಿ

ಜಿಯೋಫೋನ್ ಹೊಸ ಆವೃತ್ತಿ

ರಿಲಯನ್ಸ್ ಜಿಯೊ ಜಿಯೋಫೋನ್ ನ ಹೊಸ ಆವೃತ್ತಿಯಾಗಿ ಜಿಯೋಫೋನ್ 2 ಬಿಡುಗಡೆಮಾಡಿದೆ. ಜಿಯೋಫೋನ್ ನ ಹೊಸ ಆವೃತ್ತಿ ಬೆಲೆ ರೂ. 2,999 ಇರಲಿದೆ. ಜಿಯೋಫೋನ್ 2 ಇದೇ ಆಗಸ್ಟ್ 15 ರಿಂದ ಮಾರುಕಟ್ಟೆಗೆ ಬರಲಿದೆ.

ಜಿಯೋಫೋನ್ ವೈಶಿಷ್ಟ್ಯ

ಜಿಯೋಫೋನ್ ವೈಶಿಷ್ಟ್ಯ

ವಿನ್ಯಾಸ ಮತ್ತು ಡಿಸ್‌ಪ್ಲೇ ವಿಚಾರದಲ್ಲಿ ಜಿಯೋ ಫೋನ್ 2 ಜಿಯೋ ಫೋನ್‌ಗಿಂತಲೂ ವಿಭಿನ್ನವಾಗಿರಲಿದೆ. QWERTY ಕೀಪ್ಯಾಡ್‌ ಜತೆಗೆ 4 ವೇ ನ್ಯಾವಿಗೇಷನ್ ಪ್ಯಾಡ್‌ನ್ನು ಜಿಯೋ ಫೋನ್ 2 ಹೊಂದಿದೆ. ಜಿಯೋ ಫೋನ್ 2.4 ಇಂಚ್ ಡಿಸ್‌ಪ್ಲೇ ಹೊಂದಿದೆ. ಜಿಯೋ ಫೋನ್ 2 2 MP ಹಿಂಬದಿ ಕ್ಯಾಮೆರಾ ಮತ್ತು 0.3 MP (VGA) ಕ್ಯಾಮೆರಾವನ್ನು ಮುಂಬದಿಯಲ್ಲಿ ಹೊಂದಿದೆ. ಎರಡು ಫೋನ್‌ಗಳು ವಿಡಿಯೋ ರೆಕಾರ್ಡಿಂಗ್ ಮಾಡುವ ಸೌಲಭ್ಯ ಹೊಂದಿದ್ದು, ಫೀಚರ್ ಫೋನ್‌ಗಳಲ್ಲಿ ಉತ್ತಮ ಫೀಚರ್ಸ್‌ ಅನ್ನು ಹೊಂದಿದೆ. ಜಿಯೋ ಫೋನ್ 2 ಡ್ಯುಯಲ್ ಸಿಮ್ ಮತ್ತು ವೈ-ಫೈ ಫೀಚರ್ ಹೊಂದಿದೆ.

ಅತೀ ಕಡಿಮೆ ಬೆಲೆಯಲ್ಲಿ JioPhone 2

ಅತೀ ಕಡಿಮೆ ಬೆಲೆಯಲ್ಲಿ JioPhone 2

ಮುಖೇಶ್ ಅಂಬಾನಿ ಜಿಯೋಫೋನ್ 2 ಅನ್ನು ಅತೀ ಕಡಿಮೆ ಬೆಲೆಯಲ್ಲಿ ಲಾಂಚ್ ಮಾಡುವ ಯೋಜನೆ ಹೊಂದಿದ್ದು, ಇದರ ಬೆಲೆ ಕೇವಲ ರೂ. 2,999 ಆಗಿದೆ. ಇದರಲ್ಲಿ ವಾಟ್ಸ್ಆಪ್, ಫೇಸ್ಬುಕ್, ಯೂಟ್ಯೂಬ್, ವಾಯ್ಸ್ ಕಮ್ಯಾಂಡ್ ವೈಶಿಷ್ಟ್ಯವನ್ನು ಹೊಂದಿರುತ್ತದೆ. Jiophone2 ಆಗಸ್ಟ್ 15 ರಿಂದ ಮಾರುಕಟ್ಟೆಯಲ್ಲಿ ಲಭ್ಯವಾಗಲಿದೆ.

ರಿಲಯನ್ಸ್ ಜಿಯೋ ಪ್ರಿಪೇಯ್ಡ್ ರಿಚಾರ್ಜ್ ಯೋಜನೆಗಳಲ್ಲಿ 100% ಕ್ಯಾಶ್ಬ್ಯಾಕ್ ಅನ್ನು ಹೇಗೆ ಪಡೆಯುವುದು?

ರಿಲಯನ್ಸ್ ಜಿಯೋ ಪ್ರಿಪೇಯ್ಡ್ ರಿಚಾರ್ಜ್ ಯೋಜನೆಗಳಲ್ಲಿ 100% ಕ್ಯಾಶ್ಬ್ಯಾಕ್ ಅನ್ನು ಹೇಗೆ ಪಡೆಯುವುದು?

jio.com ಪ್ರಕಾರ ಗ್ರಾಹಕರಿರು ರೂ. 398 ಅಥವಾ ಅದಕ್ಕಿಂತ ಮೇಲ್ಪಟ್ಟು ರೀಚಾರ್ಜ್ ಯೋಜನೆಯನ್ನು ರ್ಭರ್ತಿ ಮಾಡಬೇಕಾಗಿದೆ. ರೂ. 400 ಮೌಲ್ಯದ ವೋಚರ್ ಶೇ. 100ರಷ್ಟು ಕ್ಯಾಶ್ಬ್ಯಾಕ್ ರೂಪದಲ್ಲಿ ಬರುತ್ತದೆ.
ಪೇಮೆಂಟ್ ವಾಲೆಟ್ ಮೂಲಕ ಕೂಡ ಈ ಸೌಲಭ್ಯ ಲಭ್ಯವಿದೆ.

English summary

Reliance Jio To Kickstart Monsoon Hungama Offer Today. Details Here

Reliance Jio To Kickstart Monsoon Hungama Offer Today. Details Here
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X