For Quick Alerts
ALLOW NOTIFICATIONS  
For Daily Alerts

100 ರೂಪಾಯಿ ಹೊಸ ನೋಟು - ಹೊಸ ಸವಾಲು! ಹಂಚಿಕೆಗೆ 100 ಕೋಟಿ ವೆಚ್ಚ ಆಗಲಿದೆ!!

ಹೊಸ 100 ರೂಪಾಯಿ ನೋಟುಗಳು ಸ್ವದೇಶಿ ನಿರ್ಮಿತ ಉತ್ಪನ್ನಗಳಿಂದಲೇ ಸಿದ್ಧವಾಗಿರುವುದು ಇದರ ವಿಶೇಷತೆಯಾಗಿದೆ. ಆದರೆ ಹೊಸ ನೋಟುಗಳ ಹಂಚಿಕೆಗೆ ಸಾಕಷ್ಟು ಸಮಸ್ಯೆಗಳು ಎದುರಾಗಲಿವೆ ಎಂಬ ಮಾತುಗಳು ಕೇಳಿ ಬರುತ್ತಿವೆ.

By Siddu Thoravat
|

ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ (ಆರ್ಬಿಐ) ಈಗಾಗಲೇ ಹೊಸ 100 ರೂಪಾಯಿ ನೋಟಿನ ಫಸ್ಟ್ ಲುಕ್ ಬಿಡುಗಡೆ ಮಾಡಿದೆ.
ನೇರಳೆ ಬಣ್ಣದ ಈ ನೋಟುಗಳು ಅತೀ ಶೀಘ್ರದಲ್ಲೇ ನಿಮ್ಮ ಕೈಗೆ ಸೇರಲಿವೆ ಎಂದು ಆರ್ಬಿಐ ತಿಳಿಸಿದೆ.
ಹೊಸ 100 ರೂಪಾಯಿ ನೋಟುಗಳು ಸ್ವದೇಶಿ ನಿರ್ಮಿತ ಉತ್ಪನ್ನಗಳಿಂದಲೇ ಸಿದ್ಧವಾಗಿರುವುದು ಇದರ ವಿಶೇಷತೆಯಾಗಿದೆ. ಆದರೆ ಹೊಸ ನೋಟುಗಳ ಹಂಚಿಕೆಗೆ ಸಾಕಷ್ಟು ಸಮಸ್ಯೆಗಳು ಎದುರಾಗಲಿವೆ ಎಂಬ ಮಾತುಗಳು ಕೇಳಿ ಬರುತ್ತಿವೆ. ಹೊಸ 100 ರೂಪಾಯಿ ನೋಟು ಬಿಡುಗಡೆ! ಇಂಟರೆಸ್ಟಿಂಗ್ ವಿಶೇಷತೆಗಳೇನು ಗೊತ್ತೆ?

 

ವಿತರಣೆಗೆ 100 ಕೋಟಿ ವೆಚ್ಚ

ವಿತರಣೆಗೆ 100 ಕೋಟಿ ವೆಚ್ಚ

ರು. 100 ಹೊಸ ನೋಟುಗಳ ಹಂಚಿಕೆಗೆ ಸಾಕಷ್ಟು ಸವಾಲುಗಳು ಎದುರಾಗುತ್ತಿದ್ದು, ಈ ಹೊಸ ನೋಟುಗಳನ್ನು ದೇಶದ ಎಲ್ಲಾ ಎಟಿಎಂ ಗಳಿಗೆ ವಿತರಣೆ ಮಾಡುವುದಕ್ಕೆ ಸುಮಾರು ರೂ. 100 ಕೋಟಿಖರ್ಚಾಗಲಿದೆ ಎಂದು ಎಟಿಎಂ ಆಪರೇಟರ್ಸ್ ಸಂಘ ಹೇಳಿದೆ.

12 ತಿಂಗಳು ಕಾಲಾವಕಾಶಬೇಕು

12 ತಿಂಗಳು ಕಾಲಾವಕಾಶಬೇಕು

ದೇಶದಾದ್ಯಂತ ಸುಮಾರು 2.4 ಲಕ್ಷ ಎಟಿಎಂ ಗಳಿವೆ. ಎಲ್ಲಾ ಎಟಿಎಂ ಗಳಲ್ಲಿ ಹೊಸ ನೂರು ರುಪಾಯಿ ಮುಖಬೆಲೆಯ ನೋಟುಗಳು ಸಿಗುವಂತೆ ಮಾಡಲು ಕನಿಷ್ಟ ಒಂದು ವರ್ಷದ ಕಾಲಾವಕಾಶ ಬೇಕಾಗಲಿದೆ.

ನೋಟುಗಳ ಹಂಚಿಕೆ ಸುಲಭವಲ್ಲ
 

ನೋಟುಗಳ ಹಂಚಿಕೆ ಸುಲಭವಲ್ಲ

ಇಲ್ಲಿಯವರೆಗೆ ರೂ. 200 ರೂಪಾಯಿ ಮುಖಬೆಲೆಯ ನೋಟುಗಳನ್ನು ಎಟಿಎಂ ಮೂಲಕ ವಿತರಣೆ ಮಾಡುವ ಕಾರ್ಯವೇ ಸರಿಯಾಗಿ ಯಶಸ್ವಿಯಾಗಿಲ್ಲ. ಇನ್ನೂ ರೂ. 100 ಹೊಸ ನೋಟುಗಳ ಹಂಚಿಕೆ ಮಾಡುವುದು ತುಂಬಾ ಕಠಿಣ ಕಾರ್ಯ ಎಂದು ಎಟಿಎಂ ಆಪರೇಟರ್ಸ್ ಹೇಳಿದ್ದಾರೆ.

ಪೂರೈಕೆ ಕೂಡ ಸವಾಲಿನ ಕೆಲಸ

ಪೂರೈಕೆ ಕೂಡ ಸವಾಲಿನ ಕೆಲಸ

ಹಳೆ ನೂರು ರೂಪಾಯಿ ನೋಟುಗಳ ಜೊತೆಗೆ ಹೊಸ ನೋಟುಗಳನ್ನು ನೋಟುಗಳನ್ನು ಪೂರೈಸುವುದು ಕೂಡ ಸವಾಲಿನ ಕೆಲಸವಾಗಿದ್ದು, ಹೊಸ ನೋಟುಗಳ ಕಾಲಕಾಲಕ್ಕೆ ಎಟಿಎಂ ಗಳಲ್ಲಿ ತುಂಬಿಸಬೇಕಾಗುತ್ತದೆ. ಈ ಕಾರ್ಯ ಯಶಸ್ವಿಯಾಗಿ ನಡೆಯದಿದ್ದರೆ ಗ್ರಾಹಕರ ಪರಿಸ್ಥಿತಿ ಹದಗೆಡಲಿದೆ ಎಂದು ಆರ್ಥಿಕ ತಜ್ಞರು ಅಭಿಪ್ರಾಯಪಟ್ಟಿದ್ದಾರೆ.

Read more about: rbi money atm banking
English summary

₹100 crore needed to recalibrate ATMs for new ₹100 notes

The ATM operations industry on Friday said introduction of a new ₹100 note creates many challenges and an investment of ₹100 crore will be required to recalibrate the country’s 2.4 lakh.
Story first published: Saturday, July 21, 2018, 13:07 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X