ಅತ್ಯುತ್ತಮ ಆಡಳಿತದಲ್ಲಿ ಕೇರಳ, ಮಾನವ ಸಂಪನ್ಮೂಲದಲ್ಲಿ ಕರ್ನಾಟಕ ನಂಬರ್ 1

ಸುಸ್ಥಿರ ಅಭಿವೃದ್ಧಿಗೆ ಅಗತ್ಯವಾಗಿರುವ ನಾಲ್ಕು ಪ್ರಮುಖ ಸಂಪನ್ಮೂಲಗಳಾಗಿರುವ ಸಾಮಾಜಿಕ, ಆರ್ಥಿಕ, ನೈಸರ್ಗಿಕ ಹಾಗು ಮಾನವ ಸಂಪನ್ಮೂಲಗಳ ನಿರ್ವಹಣೆ ಆಧರಿಸಿ ಪಬ್ಲಿಕ್ ಅಫೇರ್ಸ್ ಸೆಂಟರ್ ವರದಿ ಬಿಡುಗಡೆ ಮಾಡಿದೆ.

ಸುಸ್ಥಿರ ಅಭಿವೃದ್ಧಿಗೆ ಅಗತ್ಯವಾಗಿರುವ ನಾಲ್ಕು ಪ್ರಮುಖ ಸಂಪನ್ಮೂಲಗಳಾಗಿರುವ ಸಾಮಾಜಿಕ, ಆರ್ಥಿಕ, ನೈಸರ್ಗಿಕ ಹಾಗು ಮಾನವ ಸಂಪನ್ಮೂಲಗಳ ನಿರ್ವಹಣೆ ಆಧರಿಸಿ ಪಬ್ಲಿಕ್ ಅಫೇರ್ಸ್ ಸೆಂಟರ್ ವರದಿ ಬಿಡುಗಡೆ ಮಾಡಿದೆ.

ಅತ್ಯುತ್ತಮ ಆಡಳಿತದಲ್ಲಿ ಕೇರಳ, ಮಾನವ ಸಂಪನ್ಮೂಲದಲ್ಲಿ ಕರ್ನಾಟಕ ಟಾಪ್

ಪಬ್ಲಿಕ್ ಅಫೇರ್ಸ್ ಸೆಂಟರ್ ವರದಿ ಪ್ರಕಾರ ಕರ್ನಾಟಕ ರಾಜ್ಯ ನೈಸರ್ಗಿಕ ಮತ್ತು ಮಾನವ ಸಂಪನ್ಮೂಲಗಳ ಪೈಕಿ ದೇಶದಲ್ಲೇ ಅಗ್ರಸ್ಥಾನದಲ್ಲಿದೆ.

ಸಾಮಾಜಿಕ ಸಂಪನ್ಮೂಲದಲ್ಲಿ ಕರ್ನಾಟಕ ಹದಿನಾಲ್ಕನೇ ಸ್ಥಾನದಲ್ಲಿದ್ದರೆ, ಆರ್ಥಿಕ ಸಂಪನ್ಮೂಲದಲ್ಲಿ ನಾಲ್ಕನೇ ಸ್ಥಾನದಲ್ಲಿದೆ. ಕೇರಳ ದೇಶದಲ್ಲೇ ಅತ್ಯುತ್ತಮ ಆಡಳಿತ ರಾಜ್ಯವಾಗಿದ್ದು, ಕರ್ನಾಟಕ ನಾಲ್ಕನೆಯ ಸ್ಥಾನದಲ್ಲಿದೆ. ಅತ್ಯುತ್ತಮ ಆಡಳಿತ ನಿರ್ವಹಣೆಯಲ್ಲಿ ಎರಡನೇ ಸ್ಥಾನದಲ್ಲಿ ತಮಿಳುನಾಡು, ಮೂರನೇ ಸ್ಥಾನದಲ್ಲಿ ತೆಲಂಗಾಣ ಹಾಗು ಐದನೇ ಸ್ಥಾನದಲ್ಲಿ ಗುಜರಾತ್ ಇವೆ.
ಮೂಲಸೌಕರ್ಯ, ಆರ್ಥಿಕ ನಿರ್ವಹಣೆ ಹಾಗು ಆರ್ಥಿಕ ಸ್ವಾತಂತ್ರ್ಯವನ್ನು ಪರಿಗಣಿಸಿ ಈ ಸೂಚ್ಯಂಕಗಳನ್ನು ನಿರ್ಧರಿಸಲಾಗುತ್ತದೆ ಎಂದು ಪಬ್ಲಿಕ್ ಅಫೇರ್ಸ್ ಸೆಂಟರ್ ವರದಿಯಲ್ಲಿ ಹೇಳಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+