For Quick Alerts
ALLOW NOTIFICATIONS  
For Daily Alerts

ಆರ್ಬಿಐ ಬಡ್ಡಿದರ ಹೆಚ್ಚಳ: ಗೃಹಸಾಲ, ವಾಹನ ಸಲ, ವೈಯಕ್ತಿಕ ಸಾಲ ದುಬಾರಿ

ಭಾರತೀಯ ರಿಸರ್ವ್ ಬ್ಯಾಂಕ್ ತನ್ನ ಬಡ್ಡಿದರಗಳನ್ನು ಶೇ. 0.25ರಷ್ಟು ಹೆಚ್ಚಿಸಿದೆ. ಕಳೆದ ಎರಡು ದ್ವೈಮಾಸಿಕ ಹಣಕಾಸು ಪರಾಮರ್ಶೆಯಲ್ಲಿ ಆರ್ಬಿಐ ಒಟ್ಟು ಶೇ. 0.50ರಷ್ಟು ರೆಪೊ ದರ ಏರಿಸಿದ್ದು, ಈಗ ಶೇ. 6.50ರಷ್ಟಿದೆ.

By Siddu
|

ಭಾರತೀಯ ರಿಸರ್ವ್ ಬ್ಯಾಂಕ್ ತನ್ನ ಬಡ್ಡಿದರಗಳನ್ನು ಶೇ. 0.25ರಷ್ಟು ಹೆಚ್ಚಿಸಿದೆ. ಕಳೆದ ಎರಡು ದ್ವೈಮಾಸಿಕ ಹಣಕಾಸು ಪರಾಮರ್ಶೆಯಲ್ಲಿ ಆರ್ಬಿಐ ಒಟ್ಟು ಶೇ. 0.50ರಷ್ಟು ರೆಪೊ ದರ ಏರಿಸಿದ್ದು, ಈಗ ಶೇ. 6.50ರಷ್ಟಿದೆ. ಆರ್ಬಿಐ ರೆಪೊ ದರ ಹೆಚ್ಚಿಸಿರುವ ಹಿನ್ನೆಲೆಯಲ್ಲಿ ವಿವಿಧ ಸಾಲಗಳ ಮೇಲಿನ ಬಡ್ಡಿದರ ಕೂಡ ಹೆಚ್ಚಾಗಲಿದೆ.

ಆರ್ಬಿಐ ವಾಣಿಜ್ಯ ಬ್ಯಾಂಕುಗಳಿಂದ ತರುವ ಸಾಲದ ಮೇಲಿನ ರಿವರ್ಸ್ ರೆಪೊ ದರ ಕೂಡ 25 ಪಾಯಿಂಟ್ ಹೆಚ್ಚಿಸಿದ್ದು ಶೇ. 6.25ರಷ್ಟಿದೆ.

ಗೃಹ ಸಾಲ

ಗೃಹ ಸಾಲ

ರೆಪೊ ದರ ಮತ್ತು ರಿವರ್ಸ್ ರೆಪೊ ದರ ಹೆಚ್ಚಳದ ಹಿನ್ನೆಲೆಯಲ್ಲಿ ಗೃಹಸಾಲದ ಮೇಲಿನ ಇಎಂಐ (ತಿಂಗಳ ಸಮಾನ ಕಂತುಗಳು) ಪ್ರಮಾಣದಲ್ಲಿ ಏರಿಕೆಯಾಗಲಿದೆ. ಈಗಾಗಲೇ ಸಾಲ ಪಡೆದವರು ಅಥವಾ ಸಾಲ ಪಡೆಯಲಿರುವವರು ಪಾವತಿಸುವ ಇಎಂಐ ಹೆಚ್ಚಾಗಲಿದೆ.

ವಾಹನ ಸಾಲ

ವಾಹನ ಸಾಲ

ನೀವು ವಾಹನ ಸಾಲ ಪಾವತಿಸುತ್ತಿದ್ದರೆ, ಒಂದು ವೇಳೆ ಬ್ಯಾಮಕುಗಳು ತಮ್ಮ ವೆಚ್ಚದ ಹೊರೆಯನ್ನು ಗ್ರಾಹಕರಿಗೆ ವಗಾ್ಯಿಸಿದರೆ ನಿಮ್ಮ ವಾಹನ ಸಾಲ ದುಬಾರಿಯಾಗಬಹುದು.

ವೈಯಕ್ತಿಕ ಸಾಲ

ವೈಯಕ್ತಿಕ ಸಾಲ

ಆರ್ಬಿಐ ಬಡ್ಡಿದರ ಹೆಚ್ಚಳದಿಂದಾಗಿ ನಿಮ್ಮ ವೈಯಕ್ತಿಕ ಸಾಲದ ಮೇಲೂ ಪರಿಣಾಮವನ್ನುಂಟು ಮಾಡಬಹುದು. ದೀರ್ಘಾವಧಿ ಮರುಪಾವತಿ ಇದ್ದರೆ ಅದರ ಮೇಲೆ ಗರಿಷ್ಠ ಪ್ರಭಾವ ಬೀರಬಹುದು.

ಪರಿಣಾಮಗಳೇನು?
 

ಪರಿಣಾಮಗಳೇನು?

- ರೆಪೊ, ರಿವರ್ಸ್ ರೆಪೊ ದರಗಳು ಹೆಚ್ಚಿದ್ದರಿಂದ ಬ್ಯಾಂಕ್ ಠೇವಣಿಗಳ ಬಡ್ಡಿದರ ಏರಿಕೆಯಾಗಬಹುದು.
ದೀರ್ಘಾವಧಿಗೆ ಸಾಲ ಪಡೆಯುವವರ ಮೇಲೆ ಹೆಚ್ಚು ಪರಿಣಾಮ
- ಎಸ್ಬಿಐ ಈಗಾಗಲೇ ಬಡ್ಡಿದರಗಳನ್ನು ಹೆಚ್ಚಿಸಿದ್ದು, ಇನ್ನುಳಿದ ಬ್ಯಾಂಕ್ ಗಳು ಬಡ್ಡಿದರ ಹೆಚ್ಚಳಕ್ಕೆ ಮುಂದಾಗಬಹುದು.

ಹೊಸ ಸಾಲಗಾರರು

ಹೊಸ ಸಾಲಗಾರರು

ಹೊಸದಾಗಿ ಸಾಲ ಪಡೆಯಲು ಬಯಸಿದಲ್ಲಿ ಕಾಯಬೇಡಿ. ಆರ್ಬಿಐ ಬಡ್ಡಿದರ ಹೆಚ್ಚಿಸಲು ಪ್ರಾರಂಭಿಸುವ ಮುನ್ನ ಬ್ಯಾಂಕುಗಳು ಸಾಲಗಳ ಬಡ್ಡಿದರಗಳನ್ನು ಹೆಚ್ಚಿಸಲು ಪ್ರಾರಂಭಿಸಿವೆ.
ಜೂನ್ ತಿಂಗಳಲ್ಲಿ ನಡೆದ ಎಂಪಿಸಿ ಸಭೆಗೆ ಕೆಲವೇ ದಿನಗಳ ಮುಂಚೆ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (ಎಸ್ಬಿಐ) ಮತ್ತು ಐಸಿಐಸಿಐ ಬ್ಯಾಂಕ್ ಎಂಸಿಎಲ್ಆರ್ ಅನ್ನು ಹೆಚ್ಚಿಸಿದ್ದವು. ಬ್ಯಾಂಕ್ ಆಫ್ ಇಂಡಿಯಾ ರೆಪೊ ದರ ಏರಿಕೆ ನಂತರ ಬದ್ದಿದರ ಹೆಚ್ಚಿಸಿತ್ತು. ಹೀಗಾಗಿ ಬ್ಯಾಂಕುಗಳು ಬಡ್ಡಿದರ ಏರಿಸುವ ಸಾಧ್ಯತೆ ಇದೆ.

ಹಣಕಾಸು ನೀತಿಯ ಪ್ರಮುಖ ಅಂಶಗಳು:

ಹಣಕಾಸು ನೀತಿಯ ಪ್ರಮುಖ ಅಂಶಗಳು:

- ರೆಪೊ ದರ 6.25 ರಿಂದ ಶೇ. 6.5 ಕ್ಕೆ ಏರಿಕೆ
- ರಿಸರ್ವ್ ರೆಪೊ ದರ ಶೇ. 6.25
- ಜೂನ್ ತಿಂಗಳಲ್ಲಿ ಮೊದಲನೆ ಹೆಚ್ಚಳ ಮಾಡಿದ ನಂತರ, ಆರ್ಬಿಐನಿಂದ ಎರಡನೇ ನೇರ ಹೆಚ್ಚಳ
- 2018-19ರಲ್ಲಿ ಜಿಡಿಪಿ ಶೇಕಡಾ 7.4 ಕ್ಕೆ ಇಳಿಕೆ
- 6 ಎಂಪಿಸಿ ಸದಸ್ಯರ ಪೈಕಿ 5 ಮಂದಿ ಏರಿಕೆಗೆ ಮತ ಚಲಾವಣೆ

English summary

RBI hikes repo rate: Home, Auto, Personal loans to get expensive

The Reserve Bank of India (RBI) Wednesday increased its benchmark interest rate by 25 basis points on inflationary concerns.
Story first published: Thursday, August 2, 2018, 10:02 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X