For Quick Alerts
ALLOW NOTIFICATIONS  
For Daily Alerts

ಆಧಾರ್ ನಲ್ಲಿ ವಿಳಾಸ ಬದಲಾವಣೆಗೆ ಹೊಸ ವಿಧಾನ, ಇಲ್ಲಿದೆ ವಿವರ..

ಭಾರತೀಯ ವಿಶಿಷ್ಟ ಗುರುತು ಪ್ರಾಧಿಕಾರವು ಆಧಾರ್ ಕಾರ್ಡ್ ನಲ್ಲಿ ವಿಳಾಸ ಬದಲಾವಣೆ ಮಾಡಲು ನೂತನ ವಿಧಾನ ಜಾರಿಗೊಳಿಸಲು ಸಿದ್ದತೆ ನಡೆಸಿದೆ.

By Siddu
|

ಆಧಾರ್ ಕಾರ್ಡ್ ನಲ್ಲಿನ ಕಾಗುಣಿತ ತಪ್ಪುಗಳಿಂದಾಗಿ ತುಂಬಾ ಜನ ತೊಂದರೆ ಅನುಭವಿಸಿದ್ದು, ವಿಳಾಸ ಬದಲಾವಣೆಗೆ ಪರದಾಡಿದವರಿದ್ದಾರೆ.

ಭಾರತೀಯ ವಿಶಿಷ್ಟ ಗುರುತು ಪ್ರಾಧಿಕಾರವು ಆಧಾರ್ ಕಾರ್ಡ್ ನಲ್ಲಿ ವಿಳಾಸ ಬದಲಾವಣೆ ಮಾಡಲು ನೂತನ ವಿಧಾನ ಜಾರಿಗೊಳಿಸಲು ಸಿದ್ದತೆ ನಡೆಸಿದೆ. ಆಧಾರ್ ಕಾರ್ಡ್ ನಲ್ಲಿ ಮೊಬೈಲ್ ನಂಬರ್ ಬದಲಾಯಿಸುವುದು ಹೇಗೆ?

ವಿಳಾಸ ಬದಲಾವಣೆ ಹೇಗೆ?

ವಿಳಾಸ ಬದಲಾವಣೆ ಹೇಗೆ?

ನೀವು ಪ್ರಸ್ತುತ ವಾಸವಾಗಿರುವ ಮನೆಯ ವಿಳಾಸವನ್ನು ಆಧಾರ್ ನಲ್ಲಿ ನಮೂದಿಸಲು ಸೂಕ್ತ ದಾಖಲೆಗಳಿಲ್ಲದಿದ್ದಲ್ಲಿ ಚಿಂತೆ ಪಡಬೇಕಿಲ್ಲ. ಸಿಕ್ರೆಟ್ ಪಿನ್ ಮೂಲಕ ಆಧಾರ್ ಕಾರ್ಡ್ ನಲ್ಲಿ ವಿಳಾಸ ಬದಲಾಯಿಸಬಹುದು. ಒಂದು ವೇಳೆ ಪ್ರಸ್ತುತ ವಾಸವಿರುವ ಮನೆಯ ವಿಳಾಸಕ್ಕೆ ಸರ್ಕಾರದ ಗುರುತು ಚೀಟಿಗಳು ಇಲ್ಲವೆಂದಾದಲ್ಲಿ, ಹೊಸ ವಿಧಾನದಲ್ಲಿ ವಿಳಾಸ ಬದಲಾಯಿಸಬಹುದು.

ವಿಳಾಸ ಪರಿಶೀಲನೆ

ವಿಳಾಸ ಪರಿಶೀಲನೆ

ನೀವು ಪ್ರಸ್ತುತ ವಾಸವಾಗಿರುವ ಮನೆಗೆ ಯುಐಡಿಎಐ ಪ್ರಾಧಿಕಾರದಿಂದ ಸಿಕ್ರೆಟ್ ಪಿನ್ ನಂಬರ್ ಹೊಂದಿರುವ ಪೋಸ್ಟ್ ಬರಲಿದೆ. ಈ ಸಿಕ್ರೆಟ್ ನಂಬರ್ ಇರುವ ವಿಳಾಸ ತೋರಿಸಿದರೆ ನಿಮ್ಮ ಪ್ರಸ್ತುತ ವಿಳಾಸ ಅಪ್ಡೆಟ್ ಆಗುತ್ತದೆ. ಆಧಾರ್ ಕೇಂದ್ರದಿಂದ ಸ್ಥಳ ಪರಿಶೀಲನೆ ನಡೆಯುತ್ತದೆ.

ನೀಡಬೆಕಾದ ದಾಖಲೆ
 

ನೀಡಬೆಕಾದ ದಾಖಲೆ

ಪ್ರಸ್ತುತ ಆಧಾರ್ ದಾಖಲಾತಿ/ನವೀಕರಣ ಅರ್ಜಿಯೊಂದಿಗೆ 35 ದಾಖಲೆಗಳ ಪೈಕಿ ಕೆಲವೊಂದು ಒದಗಿಸಬೇಕು. ಪಾಸ್‌ಪೋರ್ಟ್‌, ಬ್ಯಾಂಕ್‌ ಪಾಸ್ಬುಕ್, ಮತದಾನ ಚೀಟಿ, ಡ್ರೈವಿಂಗ್ ಲೈಸೆನ್ಸ್, ಮದುವೆ ಪ್ರಮಾಣ ಪತ್ರ, ಮನೆ ಬಾಡಿಗೆ ಪತ್ರಗಳನ್ನು ನೀಡಬಹುದಾಗಿದೆ.

ಏಪ್ರಿಲ್ ನಿಂದ ಜಾರಿ

ಏಪ್ರಿಲ್ ನಿಂದ ಜಾರಿ

ಯುಐಡಿಎಐ ಜಾರಿಗೊಳಿಸುತ್ತಿರುವ ನೂತನ ಕ್ರಮ ಏಪ್ರಿಲ್ 2019ರಿಂದ ಕಾರ್ಯರೂಪಕ್ಕೆ ಬರಲಿದೆ. 2019ರ ಹೊಸ ವರ್ಷದಿಂದ ಪ್ರಾಯೋಗಿಕವಾಗಿ ಆರಂಭವಾಗಲಿದೆ ಎನ್ನಲಾಗಿದೆ.

 

 

English summary

Updating address in Aadhaar set to get easy

The UIDAI will start new service from April next to help Aadhaar holders who do not have valid proof of residence of current location to update their address easily by using a letter containing a secret PIN.
Story first published: Thursday, August 2, 2018, 15:09 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X