ಜಿಯೋ ಗಿಗಾಫೈಬರ್ ನೋಂದಣಿ ಆರಂಭ.. ಇಲ್ಲಿದೆ ಬ್ರಾಡ್ಬ್ಯಾಂಡ್ ಸೇವೆಯ ಸಂಪೂರ್ಣ ವಿವರ..

ಜಿಯೋ 4G ಮೊಬೈಲ್ ಸೇವೆಗಳನ್ನು ನೀಡಿದ ನಂತರ ಆಗಸ್ಟ್ ೧೫ರಿಂದ ಫೈಬರ್ ಬ್ರಾಡ್ಬ್ಯಾಂಡ್ ಸೇವೆಯನ್ನು ಪ್ರಾರಂಭಿಸಿದೆ. ರಿಲಯನ್ಸ್ ಕಂಪನಿ ಬ್ರಾಡ್ಬ್ಯಾಂಡ್ ಕ್ಷೇತ್ರವನ್ನು ಪ್ರವೇಶಿಸಿದ ಬಳಿಕ ಮತ್ತೊಂದು ದರ ಸಮರಕ್ಕೆ ಕಾರಣವಾಗಬಹುದು ಎಂಬುದು ವಿಶ್ಲೇಷ

ಸ್ವಾತಂತ್ರ್ಯ ದಿನಾಚರಣೆಯ ಸಂದರ್ಭದಲ್ಲಿ ರಿಲಯನ್ಸ್ ಜಿಯೋ ಸಂಸ್ಥೆ ತನ್ನ ಗ್ರಾಹಕರಿಗೆ ವಿಶೇಷ ಕೊಡುಗೆ ನೀಡಿದೆ! ಜಿಯೋ 4G ಮೊಬೈಲ್ ಸೇವೆಗಳನ್ನು ನೀಡಿದ ನಂತರ ಆಗಸ್ಟ್ ೧೫ರಿಂದ ಜಿಯೋ ಗಿಗಾಫೈಬರ್ ಬ್ರಾಡ್ಬ್ಯಾಂಡ್ ಸೇವೆಯನ್ನು ಪ್ರಾರಂಭಿಸಿದೆ. ರಿಲಯನ್ಸ್ ಕಂಪನಿ ಬ್ರಾಡ್ಬ್ಯಾಂಡ್ ಕ್ಷೇತ್ರವನ್ನು ಪ್ರವೇಶಿಸಿದ ಬಳಿಕ ಮತ್ತೊಂದು ದರ ಸಮರಕ್ಕೆ ಕಾರಣವಾಗಬಹುದು ಎಂಬುದು ವಿಶ್ಲೇಷಕರ ಮಾತಾಗಿದೆ. ಜಿಯೋ ಡಬಲ್ ಧಮಾಕಾ! ಜಿಯೋ ಫೋನ್ 2, ಜಿಯೋ ಗೀಗಾ ಫೈಬರ್ ಆಫರ್ ಪಡೆಯೋದು ಹೇಗೆ?

ಆಗಸ್ಟ್ 15 ರಿಂದ ನೋಂದಣಿ ಆರಂಭ

ಆಗಸ್ಟ್ 15 ರಿಂದ ನೋಂದಣಿ ಆರಂಭ

ಸ್ವಾತಂತ್ರ್ಯ ದಿನಾಚರಣೆಯ ಆಗಸ್ಟ್ 15 ರಿಂದ ಜಿಯೋ ಫೈಬರ್ ಬ್ರಾಡ್ಬ್ಯಾಂಡ್ ಸೇವೆಯನ್ನು ಪ್ರಾರಂಭಿಸಿದೆ. ಇದು 1Gbps ವರೆಗಿನ ಡೌನ್ಲೋಡ್ ವೇಗವನ್ನು ಒದಗಿಸಲಿದ್ದು, ಮನೆ ಮತ್ತು ಎಂಟರ್ಪ್ರೈಸ್ Wi-Fi ಜಾಲಗಳು ಮಾತ್ರವಲ್ಲದೇ ಟಿವಿಗಳು ಮತ್ತು ಸ್ಮಾರ್ಟ್ ಹೋಮ್ ಗೂ ಪ್ರವೇಶ ನೀಡಲಿದೆ. ಆರಂಭದಲ್ಲಿ ಸುಮಾರು 1,100 ನಗರಗಳಲ್ಲಿ ಕಾರ್ಯಾರಂಭ ಮಾಡಲಿದೆ. ಮೈಜಿಯೋ ಆಪ್ ಮತ್ತು ಜಿಯೋ ಡಾಟ್ ಕಾಮ್ ಮೂಲಕ ನೋಂದಣಿ ಮಾಡಬಹುದು.

ಡೌನ್ಲೋಡ್ ವೇಗ

ಡೌನ್ಲೋಡ್ ವೇಗ

ಸದ್ಯಕ್ಕೆ, ಜಿಯೋನ ಪ್ರಮುಖ ಎದುರಾಳಿಗಳು ಪ್ರತಿ ಸೆಕೆಂಡಿಗೆ 100 ಮೆಗಾಬೈಟ್ ಡೌನ್ಲೋಡ್ ವೇಗವನ್ನು ಪ್ರತಿ ತಿಂಗಳಿಗೆ ರೂ. 1000 ದರದಲ್ಲಿ ಒದಗಿಸುತ್ತಿದೆ. ಜಿಯೋ ಗಿಗಾಫೈಬರ್ ಒಂದು ಸೆಕೆಂಡಿಗೆ ಒಂದು ಗಿಗಾಬಿಟ್ (1Gbps) ಡೌನ್ಲೋಡ್ ವೇಗವನ್ನು ನೀಡುತ್ತದೆ. ಮನೆ ಬಳಕೆದಾರರಿಗೆ 10 ಪಟ್ಟು ಹೆಚ್ಚು ವೇಗದಲ್ಲಿ ಕೊಡುಗೆ ನೀಡಲಾಗುವುದು ಎಂದು ಜಿಯೋ ಹೇಳಿದೆ.

ಜಿಯೋ ಗಿಗಾಫೈಬರ್ ನೋಂದಣಿ ಹೇಗೆ?

ಜಿಯೋ ಗಿಗಾಫೈಬರ್ ನೋಂದಣಿ ಹೇಗೆ?

- Ji0 GigaFiber ನ ಅಧಿಕೃತ ವೆಬ್ಸೈಟ್ ಗೆ ಭೇಟಿ ನೀಡಿ.
- ನಂತರ ನೀವು ನಿಮ್ಮ ವಿಳಾಸವನ್ನು ನಮೂದಿಸಬೇಕು. ನಿಮ್ಮ ಪ್ರಸ್ತುತ ಸ್ಥಳವು ಬರೆಯಲ್ಪಟ್ಟಿರುವುದನ್ನು ನೋಡುತ್ತೀರಿ. ನಕ್ಷೆಯಲ್ಲಿ ಪಿನ್ ಅನ್ನು ಚಲಿಸುವ ಮೂಲಕ ಅಥವಾ 'ಬದಲಾವಣೆ' ಬಟನ್ ಒತ್ತುವುದರ ಮೂಲಕ ಬದಲಾಯಿಸಬಹುದು
- ನಂತರ ಸಬ್ಮಿಟ್ ಬಟನ್ ಒತ್ತಿ
- ಮುಂದಿನ ಹಂತದಲ್ಲಿ ನಿಮ್ಮ ಮನೆ ಅಥವಾ ಆಫೀಸ್ ವಿಳಾಸ ಆಯ್ಕೆ ಮಾಡುವುದು.
- ನಂತರ ನಿಮ್ಮ ಹೆಸರು, ಸಂಪರ್ಕ ಸಂಖ್ಯೆ ವಿವರಗಳನ್ನು ಭರ್ತಿ ಮಾಡಿ
- 'ಜನರೇಟ್ ಒಪಿಟಿ' ಬಟನ್ ಮೇಲೆ ಒತ್ತಿರಿ
- ಸ್ವೀಕರಿಸಿದ ಒಟಿಪಿ ನಂಬರ್ ನಮೂದಿಸಿ, ನೀವು ವಾಸವಾಗಿರುವ (society, township, developer so and so forth) ಆಯ್ಕೆ ಮಾಡಿ.
- ಕೊನೆದಾಗಿ ಸಬ್ಮಿಟ್ ಮೇಲೆ ಕ್ಲಿಕ್ ಮಾಡಿ.

ಜಿಯೋ ಗಿಗಾಫೈಬರ್ ಬ್ರಾಡ್ ಬ್ಯಾಂಡ್ ಮೊತ್ತ

ಜಿಯೋ ಗಿಗಾಫೈಬರ್ ಬ್ರಾಡ್ ಬ್ಯಾಂಡ್ ಮೊತ್ತ

ಜಿಯೋ ಫೈಬರ್ ಯೋಜನೆಯಲ್ಲಿ ಇನ್ನೂ ಅಧಿಕೃತ ಯೋಜನೆಗಳಿಲ್ಲ. ಆದರೆ, ಗ್ರಾಹಕರು ರೂಟರ್ ಗಾಗಿ ರೂ. 4,500 ಪಾವತಿಸಬೇಕಿದ್ದು, ಇದು ಮರುಪಾವತಿಸಬಹುದಾದ ಮೊತ್ತವಾಗಿರುತ್ತದೆ. ಅಂದರೆ ಆರಂಭಿಕ ಹಂತದಲ್ಲಿ ರೂ. 4,500 ಭದ್ರತಾ ಠೇವಣಿ ಇಡಬೇಕಾಗುತ್ತದೆ. ಜಿಯೊ ಗಿಗಾಫೈಬರ್ ನೆಟ್ವರ್ಕ್ ಅನ್ನು ಇನ್ಸ್ಟಾಲೆಷನ್ ಮಾಡಲು ಕಂಪನಿಯು ನಿಮ್ಮ ಮನೆ ಅಥವಾ ಕಚೇರಿಯಲ್ಲಿ Jio GigaRouter ಅನ್ನು ಒದಗಿಸುತ್ತದೆ. ಈ ರೂಟರ್ "ವಾಲ್-ಟು-ವಾಲ್ ಗೆ ಹೆಚ್ಚಿನ ವೇಗದ Wi-Fi ಕವರೇಜ್ ಒದಗಿಸುತ್ತದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+