For Quick Alerts
ALLOW NOTIFICATIONS  
For Daily Alerts

ಸಿಹಿಸುದ್ದಿ! ಪಿಎಂ ಅವಾಸ ಯೋಜನೆಯಡಿ 2019ರ ಮಾರ್ಚ್ ವೇಳೆಗೆ 75 ಲಕ್ಷ ಮನೆ ನಿರ್ಮಾಣ

ಪ್ರಧಾನ ಮಂತ್ರಿ ಆವಾಸ್ ಯೋಜನೆ ಅಡಿಯಲ್ಲಿ 2019 ರ ಮಾರ್ಚ್ ತಿಂಗಳ ಒಳಗಾಗಿ ಸುಮಾರು 75 ಲಕ್ಷ ಮನೆ ನಿರ್ಮಾಣ ಮಾಡುವ ಗುರಿಯನ್ನು ವಸತಿ ಮತ್ತು ನಗರ ವ್ಯವಹಾರಗಳ ಸಚಿವಾಲಯ ಹೊಂದಿದೆ.

By Siddu
|

2022ರ ವೇಳೆಗೆ ದೇಶದ ಪ್ರತಿಯೊಂದು ಕುಟುಂಬಕ್ಕೂ ಅಗ್ಗದ ಮನೆ ಸಿಗಬೇಕು ಎನ್ನುವುದು ಕೇಂದ್ರ, ರಾಜ್ಯ ಸರ್ಕಾರಗಳ ಉದ್ದೇಶ. ಈ ಆಶಯಕ್ಕಾಗಿ ಕೇಂದ್ರ ಸರ್ಕಾರ "ಪ್ರಧಾನ ಮಂತ್ರಿ ಅವಾಸ ಯೋಜನೆ" (Pradhan ,Mantri Awas Yojana) ಪ್ರಾರಂಭಿಸಿದೆ. ಇದರಲ್ಲಿ ಬಡವರು, ಅತಿ ಕೆಳವರ್ಗದವರು, ಮಧ್ಯಮ ವರ್ಗದವರು, ಕಡಿಮೆ ಆದಾಯ ಹೊಂದಿರುವವರು, ನೌಕರರು ಹೀಗೆ ಎಲ್ಲರೂ ಒಳಗೊಂಡಿದ್ದಾರೆ. ಕೊಳಗೇರಿ ವಾಸಿಗಳು, ಗ್ರಾಮೀಣ, ನಗರ, ಅರೆ ನಗರ ಕ್ಚೇತ್ರಗಳಿ ಒಳಪಟ್ಟಿವೆ. ಪ್ರಧಾನ ಮಂತ್ರಿ ಅವಾಸ ಯೋಜನೆಗೆ ಅರ್ಜಿ ಸಲ್ಲಿಸುವುದು ಹೇಗೆ?

75 ಲಕ್ಷ ಮನೆ ನಿರ್ಮಾಣ ಗುರಿ

75 ಲಕ್ಷ ಮನೆ ನಿರ್ಮಾಣ ಗುರಿ

ಪ್ರಧಾನ ಮಂತ್ರಿ ಆವಾಸ ಯೋಜನೆ ಅಡಿಯಲ್ಲಿ 2019 ರ ಮಾರ್ಚ್ ತಿಂಗಳ ಒಳಗಾಗಿ ಸುಮಾರು 75 ಲಕ್ಷ ಮನೆ ನಿರ್ಮಾಣ ಮಾಡುವ ಗುರಿಯನ್ನು ವಸತಿ ಮತ್ತು ನಗರ ವ್ಯವಹಾರಗಳ ಸಚಿವಾಲಯ ಹೊಂದಿದೆ ಎಂದು ಹಿರಿಯ ಅಧಿಕಾರಿಯೊಬ್ಬರು (ಪಿಎಂಎವೈ ನಗರ) ಹೇಳಿದ್ದಾರೆ. ಮುಂದಿನ ವರ್ಷದ ಮಾರ್ಚ್ ವೇಳೆಗೆ ಸುಮಾರು 30 ಲಕ್ಷ ಮನೆಗಳ ನಿರ್ಮಾಣ ಪೂರ್ಣಗೊಳ್ಳಲಿದೆ ಎಂದು ಹೇಳಿದರು.

ಕಳೆದ ವರ್ಷ ಮನೆಗಳ ನಿರ್ಮಾಣ

ಕಳೆದ ವರ್ಷ ಮನೆಗಳ ನಿರ್ಮಾಣ

2017-18ರಲ್ಲಿ ಸಚಿವಾಲಯವು ಸುಮಾರು 26.7 ಲಕ್ಷ ಮನೆಗಳನ್ನು ಮಂಜೂರು ಮಾಡಿದ್ದು, 2018-19ರಲ್ಲಿ ಸುಮಾರು 30.6 ಲಕ್ಷ ಮನೆ ನಿರ್ಮಾಣ ಮಾಡುವ ಗುರಿ ಇತ್ತು. ಅದರಂತೆ ಈ ವರ್ಷ 26.7 ಲಕ್ಷ ಮನೆಗಳ ನಿರ್ಮಾಣವಾಗಿದ್ದು, ಸುಮಾರು 53.7 ಲಕ್ಷ ಮನೆ ನಿರ್ಮಾಣ ಕಾರ್ಯ ನಡೆಯುತ್ತಿದೆ.

ವಾಸ ಯೋಗ್ಯ ಮನೆಗಳು

ವಾಸ ಯೋಗ್ಯ ಮನೆಗಳು

ಈಗಾಗಲೇ ಹೆಚ್ಚುಕಡಿಮೆ 30 ಲಕ್ಷ ಮನೆಗಳ ನಿರ್ಮಾಣ ಕಾರ್ಯ ಮುಗಿದು ವಾಸ ಮಾಡಲು ಯೋಗ್ಯವಾಗಿವೆ. ಹಲವು ಮನೆಗಳ ಕಾರ್ಯ ಮುಕ್ತಾಯ ಹಂತದಲ್ಲಿದೆ. ಇನ್ನು ಕೆಲವು 18 ತಿಂಗಳಲ್ಲಿ ಮುಗಿಯಲಿದ್ದರೆ, ಇನ್ನುಳಿದ ಮನೆಗಳ ಕಾರ್ಯ 30 ರಿಂದ 36 ತಿಂಗಳುಗಳಲ್ಲಿ ಪೂರ್ಣಗೊಳ್ಳಲಿದೆ.

ರೂ. 27,653.88 ಕೋಟಿ ಮಂಜೂರು

ರೂ. 27,653.88 ಕೋಟಿ ಮಂಜೂರು

2015ರಲ್ಲಿ ಪ್ರಧಾನ ಮಂತ್ರಿ ಆವಾಸ್ ಯೋಜನಾ ಜಾರಿ ಬಂದಿದ್ದು, 2022 ರ ಒಳಗೆ ಎಲ್ಲರಿಗೂ ಸೂರು ಒದಗಿಸುವ ಗುರಿ ಇದೆ.
ಪ್ರಧಾನ ಮಂತ್ರಿ ಆವಾಸ್ ಯೋಜನೆಯಡಿ ಮನೆ ನಿರ್ಮಾಣಕ್ಕೆ ನರೇಂದ್ರ ಮೋದಿ ಸರ್ಕಾರ ಮೂರು ವರ್ಷಗಳಲ್ಲಿ ರೂ. 78,008.36 ಕೋಟಿ ಸಹಾಯ ಅನುಮೋದಿಸಿದೆ. ರೂ. 27,653.88 ಕೋಟಿ ಮಂಜೂರಾಗಿ ಬಿಡುಗಡೆಯಾಗಿದೆ. ಕಳೆದ ಮುರು ವರ್ಷಗಳಲ್ಲಿ ಸುಮಾರು ರೂ. 9,565 ಕೋಟಿ ಹಣವನ್ನು ಮನೆ ನಿರ್ಮಾಣಕ್ಕೆ ಖರ್ಚು ಮಾಡಲಾಗಿದೆ. ಪ್ರಧಾನ ಮಂತ್ರಿ ಅವಾಸ ಯೋಜನೆ: ಅರ್ಜಿ ಸಲ್ಲಿಸುವುದು ಹೇಗೆ? ಬೇಕಾಗುವ ದಾಖಲೆಗಳೇನು?

English summary

Government plans to sanction 75 lakh houses before March 2019 under PMAY

The Ministry of Housing and Urban Affairs has set a target to sanction around 75 lakh houses till March 2019 under the Pradhan Mantri Awas Yojna (Urban).
Story first published: Tuesday, August 21, 2018, 13:17 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X