For Quick Alerts
ALLOW NOTIFICATIONS  
For Daily Alerts

ಜಿಯೋ ಧಮಾಕಾ..! ಜಿಯೋ ಗಿಗಾ ಫೈಬರ್ ಬ್ರಾಡ್ಬ್ಯಾಂಡ್ ಆಫರ್ 3 ತಿಂಗಳು ಉಚಿತ!!

ರಿಲಯನ್ಸ್ ಜಿಯೋ ಮೂರು ತಿಂಗಳವರೆಗೆ ಪ್ರಿವ್ಯೂ ಆಫರ್ (ಪೂರ್ವಭಾವಿ) ಮೂಲಕ ಜಿಯೋ ಗಿಗಾ ಫೈಬರ್ ಬ್ರಾಡ್ಬ್ಯಾಂಡ್ ಸೇವೆ ಉಚಿತವಾಗಿ ನೀಡುವುದಾಗಿ ಘೋಷಿಸಿದೆ.

By Siddu
|

ಜಿಯೋ ಗ್ರಾಹಕರಿಗೆ ಸಿಹಿಸುದ್ದಿ! ಸ್ವಾತಂತ್ರ್ಯ ದಿನಾಚರಣೆಯಂದು ಬಹು ನಿರೀಕ್ಷಿತ ಬ್ರಾಡ್ಬ್ಯಾಂಡ್ ಸೇವೆ ಆರಂಭಿಸಿರುವ ರಿಲಯನ್ಸ್ ಜಿಯೋ ಮೂರು ತಿಂಗಳವರೆಗೆ ಪ್ರಿವ್ಯೂ ಆಫರ್ (ಪೂರ್ವಭಾವಿ) ಮೂಲಕ ಜಿಯೋ ಗಿಗಾ ಫೈಬರ್ ಬ್ರಾಡ್ಬ್ಯಾಂಡ್ ಸೇವೆ ಉಚಿತವಾಗಿ ನೀಡುವುದಾಗಿ ಘೋಷಿಸಿದೆ.

ಉಚಿತ ಬ್ರಾಡ್ಬ್ಯಾಂಡ್ ಸೇವೆ ಘೋಷಿಸಿರುವುದು ಬ್ರಾಡ್ಬ್ಯಾಂಡ್ ಕ್ಷೇತ್ರದಲ್ಲಿ ಮತ್ತೊಂದು ದರ ಸಮಸರಕ್ಕೆ ಕಾರಣವಾಗಬಹುದು! ಜಿಯೋ ಗಿಗಾಫೈಬರ್ ನೋಂದಣಿ ಮಾಡೋದು ಹೇಗೆ?

3 ತಿಂಗಳು ಪ್ರಿವ್ಯೂ ಆಫರ್

3 ತಿಂಗಳು ಪ್ರಿವ್ಯೂ ಆಫರ್

ರಿಲಯನ್ಸ್ ಜಿಯೋ ಸಂಸ್ಥೆ ಜಿಯೋ ಗಿಗಾ ಫೈಬರ್ ಬ್ರಾಡ್ಬ್ಯಾಂಡ್ ಗ್ರಾಹಕರಿಗೆ ಮೂರು ತಿಂಗಳವರೆಗೆ ಪ್ರಿವ್ಯೂ (ಪೂರ್ವಭಾವಿ) ಆಫರ್ ಘೋಷಿಸಿದೆ. ಈ ಆಫರ್ ಅಡಿ 90 ದಿನ ಉಚಿತವಾಗಿ ಜಿಯೋಗಿಗಾ ಫೈಬರ್ ಬ್ರಾಡ್ಬ್ಯಾಂಡ್ ಸೇವೆ ಲಭ್ಯವಾಗಲಿದೆ.

ಸಿಗಲಿರುವ ಸೇವೆಗಳು

ಸಿಗಲಿರುವ ಸೇವೆಗಳು

- ಪ್ರತಿ ತಿಂಗಳು 100GB ಡೇಟಾ ಉಚಿತ
- ಮೂರು ತಿಂಗಳು 300GB
- 100Mbps ವೇಗದ ಇಂಟರ್ನೆಟ್ ಸೌಲಭ್ಯ
- ಅತೀ ವೇಗದ ಡೌನ್ಲೋಡ್

ಉಚಿತ ಇನ್ಸ್ಟಾಲೇಷನ್

ಉಚಿತ ಇನ್ಸ್ಟಾಲೇಷನ್

ಜಿಯೋಗಿಗಾ ಫೈಬರ್ ಬ್ರಾಡ್ಬ್ಯಾಂಡ್ ಪ್ರಿವ್ಯೂ ಆಫರ್ ಅಡಿಯಲ್ಲಿ ಸಂಪೂರ್ಣ ಉಚಿತವಾಗಿ ಇನ್ಸ್ಟಾಲೇಷನ್ ಸಿಗಲಿದೆ. ಶೂನ್ಯ ಅನುಸ್ಥಾಪನಾ ಶುಲ್ಕ (installation charges) ಮತ್ತು ಗ್ರಾಹಕರು ಮರುಪಾವತಿಸಬಹುದಾದ ಭದ್ರತಾ ಠೇವಣಿ ರೂ. 4,500 ಜಿಯೋನ ಬ್ರಾಡ್ಬ್ಯಾಂಡ್ ರೂಟರ್ ಗಾಗಿ ಪಾವತಿಸಬೇಕಾಗುತ್ತದೆ. ಜಿಯೋ ರೂಟರ್ ಅನ್ನು ಗಿಗಾಹಬ್ ಹೋಮ್ ಗೇಟ್ ವೇ ಎಂದು ಹೆಸರಿಸಲಾಗಿದೆ.

ಡೌನ್ಲೋಡ್ ವೇಗ

ಡೌನ್ಲೋಡ್ ವೇಗ

ಸದ್ಯಕ್ಕೆ, ಜಿಯೋನ ಪ್ರಮುಖ ಎದುರಾಳಿಗಳು ಪ್ರತಿ ಸೆಕೆಂಡಿಗೆ 100 ಮೆಗಾಬೈಟ್ ಡೌನ್ಲೋಡ್ ವೇಗವನ್ನು ಪ್ರತಿ ತಿಂಗಳಿಗೆ ರೂ. 1000 ದರದಲ್ಲಿ ಒದಗಿಸುತ್ತಿದೆ. ಜಿಯೋ ಗಿಗಾಫೈಬರ್ ಒಂದು ಸೆಕೆಂಡಿಗೆ ಒಂದು ಗಿಗಾಬಿಟ್ (1Gbps) ಡೌನ್ಲೋಡ್ ವೇಗವನ್ನು ನೀಡುತ್ತದೆ. ಮನೆ ಬಳಕೆದಾರರಿಗೆ 10 ಪಟ್ಟು ಹೆಚ್ಚು ವೇಗದಲ್ಲಿ ಕೊಡುಗೆ ನೀಡಲಾಗುವುದು ಎಂದು ಜಿಯೋ ಹೇಳಿದೆ.

ಜಿಯೋ ಗಿಗಾಫೈಬರ್ ನೋಂದಣಿ ಹೇಗೆ?

ಜಿಯೋ ಗಿಗಾಫೈಬರ್ ನೋಂದಣಿ ಹೇಗೆ?

- Ji0 GigaFiber ನ ಅಧಿಕೃತ ವೆಬ್ಸೈಟ್ ಗೆ ಭೇಟಿ ನೀಡಿ.
- ನಂತರ ನೀವು ನಿಮ್ಮ ವಿಳಾಸವನ್ನು ನಮೂದಿಸಬೇಕು. ನಿಮ್ಮ ಪ್ರಸ್ತುತ ಸ್ಥಳವು ಬರೆಯಲ್ಪಟ್ಟಿರುವುದನ್ನು ನೋಡುತ್ತೀರಿ. ನಕ್ಷೆಯಲ್ಲಿ ಪಿನ್ ಅನ್ನು ಚಲಿಸುವ ಮೂಲಕ ಅಥವಾ 'ಬದಲಾವಣೆ' ಬಟನ್ ಒತ್ತುವುದರ ಮೂಲಕ ಬದಲಾಯಿಸಬಹುದು
- ನಂತರ ಸಬ್ಮಿಟ್ ಬಟನ್ ಒತ್ತಿ
- ಮುಂದಿನ ಹಂತದಲ್ಲಿ ನಿಮ್ಮ ಮನೆ ಅಥವಾ ಆಫೀಸ್ ವಿಳಾಸ ಆಯ್ಕೆ ಮಾಡುವುದು.
- ನಂತರ ನಿಮ್ಮ ಹೆಸರು, ಸಂಪರ್ಕ ಸಂಖ್ಯೆ ವಿವರಗಳನ್ನು ಭರ್ತಿ ಮಾಡಿ
- 'ಜನರೇಟ್ ಒಪಿಟಿ' ಬಟನ್ ಮೇಲೆ ಒತ್ತಿರಿ
- ಸ್ವೀಕರಿಸಿದ ಒಟಿಪಿ ನಂಬರ್ ನಮೂದಿಸಿ, ನೀವು ವಾಸವಾಗಿರುವ (society, township, developer so and so forth) ಆಯ್ಕೆ ಮಾಡಿ.
- ಕೊನೆದಾಗಿ ಸಬ್ಮಿಟ್ ಮೇಲೆ ಕ್ಲಿಕ್ ಮಾಡಿ.

ಜಿಯೋ ಫೋನ 2 ಬುಕಿಂಗ್ ಹೇಗೆ?

ಜಿಯೋ ಫೋನ 2 ಬುಕಿಂಗ್ ಹೇಗೆ?

ಜಿಯೋ ಫೋನ್ 2 ಇದರ ದರವನ್ನು ರೂ. 2,999 ನಿಗದಿಪಡಿಸಲಾಗಿದೆ. ಗ್ರಾಹಕರು My Jio app ಹಾಗೂ ಅಧಿಕೃತ ವೆಬ್ಸೈಟ್ www.jio.com ಮೂಲಕ ಜಿಯೋ ಫೋನ್ ೨ ಕಾಯ್ದಿರಿಸಬಹುದು. ಈ ಸೇವೆ ಇಡೀ ದೇಶದ ಜನರಿಗೆ ಲಭ್ಯವಾಗಲಿದೆ. 1,100 ನಗರಗಳಲ್ಲಿ ಈ ಸೇವೆ ಪ್ರಾರಂಭವಾಗಲಿದೆ.

English summary

Jio Dhamaka..! JiooGiga Fiber Broadband Offer 3 Months Free!!

Reliance Jio has announced free preview plans for Jio GigaFiber broadband.
Story first published: Tuesday, August 21, 2018, 15:15 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X