ಪ್ರವಾಹದಿಂದ ನಾಶವಾಗಿರುವ ರಾಜ್ಯದ ಪುನರ್ ನಿರ್ಮಾಣಕ್ಕಾಗಿ ಯುನೈಟೆಡ್ ಅರಬ್ ಎಮಿರೇಟ್ಸ್ (ಯುಎಇ) ಸರ್ಕಾರ ಆರ್ಥಿಕ ನೆರವನ್ನು ರೂ. 700 ಕೋಟಿಗೆ ವಿಸ್ತರಿಸಿದೆ ಎಂದು ಕೇರಳ ಮುಖ್ಯಮಂತ್ರಿ ಪಿನರೈ ವಿಜಯನ್ ಹೇಳಿದ್ದಾರೆ.
News
oi-Siddu
By Siddu
ಕೇರಳ ಪ್ರವಾಹಕ್ಕೆ ಸಿಲುಕಿ ನಾಶವಾಗಿರುವುದರಿಂದ ರಾಜ್ಯದ ಪುನರ್ ನಿರ್ಮಾಣಕ್ಕಾಗಿ ಯುನೈಟೆಡ್ ಅರಬ್ ಎಮಿರೇಟ್ಸ್ (ಯುಎಇ) ಸರ್ಕಾರ ಆರ್ಥಿಕ ನೆರವನ್ನು ರೂ. 700 ಕೋಟಿಗೆ ವಿಸ್ತರಿಸಿದೆ ಎಂದು ಕೇರಳ ಮುಖ್ಯಮಂತ್ರಿ ಪಿನರೈ ವಿಜಯನ್ ಹೇಳಿದ್ದಾರೆ.
ಕೇರಳದಲ್ಲಿ ವಿನಾಶಕಾರಿ ಪ್ರವಾಹಗಳಿಂದಾಗಿ ಆಗಸ್ಟ್ 8 ರಿಂದ 223 ಜನರು ತಮ್ಮ ಪ್ರಾಣ ಕಳೆದುಕೊಂಡಿದ್ದಾರೆ. "ಕೇರಳದ ವಿನಾಶಕಾರಿ ಪ್ರವಾಹಗಳು ಮತ್ತು ಭೂಕುಸಿತಗಳ ತೀವ್ರತೆ ಮತ್ತು ಪರಿಮಾಣವನ್ನು ಗಮನದಲ್ಲಿಟ್ಟುಕೊಂಡು "ತೀವ್ರ ಸ್ವರೂಪದ ವಿಪತ್ತು" ಎಂದು ಕೇಂದ್ರವು ಘೋಷಿಸಿದೆ.
ಕೇರಳದ ಹಲವಾರು ಜನರಿಗೆ ಯು.ಎ.ಇ ನೆಲೆಯಾಗಿದೆ. ಅಂದಾಜಿನ ಪ್ರಕಾರ, ಯುಎಇನಲ್ಲಿ 2 ಮಿಲಿಯನ್ ಭಾರತೀಯರು ವಾಸಿಸುತ್ತಿದ್ದಾರೆ.