ಬಯೋಮೆಟ್ರಿಕ್ ಅಥವಾ ಒಟಿಪಿ ಧೃಢೀಕರಣ ಇಲ್ಲದೇ ಕೇವಲ ಆಧಾರ್ ಕಾರ್ಡ್ ಪೋಟೊ ಕಾಪಿ ನೀಡುವುದರ ಮೂಲಕ ಯಾವುದೇ ಬ್ಯಾಂಕಿನಲ್ಲಿ ಖಾತೆ ತೆರೆಯಲು ಸಾಧ್ಯವಿಲ್ಲ ಎಂದು ಯುಐಡಿಎಐ ಹೇಳಿದೆ.
ಬಯೋಮೆಟ್ರಿಕ್ ಅಥವಾ ಒಟಿಪಿ ಧೃಢೀಕರಣ ಇಲ್ಲದೇ ಕೇವಲ ಆಧಾರ್ ಕಾರ್ಡ್ ಪೋಟೊ ಕಾಪಿ ನೀಡುವುದರ ಮೂಲಕ ಯಾವುದೇ ಬ್ಯಾಂಕಿನಲ್ಲಿ ಖಾತೆ ತೆರೆಯಲು ಸಾಧ್ಯವಿಲ್ಲ ಎಂದು ಯುಐಡಿಎಐ ಹೇಳಿದೆ.
ಈ ಹಿಂದೆ ಬ್ಯಾಂಕುಗಳಲ್ಲಿ ಖಾತೆ ತೆರೆಯುವಾಗ ದಾಖಲಾತಿಯಾಗಿ ಆಧಾರ್ ಕಾರ್ಡ್ ಪ್ರತಿ ನೀಡಲಾಗುತ್ತಿತ್ತು. ಆದರೆ ಇನ್ನುಮುಂದೆ ಆಧಾರ್ ಕಾರ್ಡ್ ಪೊಟೋ ಕಾಪಿ ನೀಡಿ ಖಾತೆ ತೆರೆಯಲು ಆಗುವುದಿಲ್ಲ ಎಂದು ಯುಐಡಿಎಐ ಸ್ಪಷ್ಟಪಡಿಸಿದೆ. 'ಉದ್ಯೋಗಿನಿ ಯೋಜನೆ' ಅಡಿಯಲ್ಲಿ 3 ಲಕ್ಷ ಸಾಲ, 90 ಸಾವಿರ ಸಬ್ಸಿಡಿ ಪಡೆಯಿರಿ
ಆರ್ಬಿಐ ಅಧಿಸೂಚನೆ
ಆರ್ಬಿಐ ಹಾಗು ಪಿಎಂಎಲ್ ಅದಿಸೂಚನೆಗಳ ಅಡಿಯಲ್ಲಿ, ಬ್ಯಾಂಕ್ ಖಾತೆ ತೆರೆಯಲು ಬಯೋಮೆಟ್ರಿಕ್ ಅಥವಾ ಒಟಿಪಿ ಧೃಢೀಕರಣ ಅಗತ್ಯವಿದೆ. ಬ್ಯಾಂಕಿಂಗ್ ವ್ಯವಹಾರ ಅಥವಾ ಗ್ರಾಹಕರ ಕೆವೈಸಿ ಸ್ವೀಕರಿಸುವ ಮುನ್ನ ಇದು ಅಗತ್ಯವಾಗಿರುತ್ತದೆ.
ಬ್ಯಾಂಕುಗಳು ಹೊಣೆ
ಒಂದು ವೇಳೆ ಬ್ಯಾಂಕುಗಳು ಗ್ರಾಹಕರಿಂದ ಬ್ಯಾಂಕ್ ಒಟಿಪಿ ಅಥವಾ ಬಯೋಮೆಟ್ರಿಕ್ ದಾಖಲೆ ಪಡೆಯದೆ ಖಾತೆ ತೆರೆದ ನಂತರ ಮುಂದಾಗಬಹುದಾದ ನಷ್ಟಕ್ಕೆ ಆಯಾ ಬ್ಯಾಂಕುಗಳೇ ಹೊಣೆಯೇ ಹೊರತು ಬ್ಯಾಂಕುಗಳ ತಪ್ಪಿಗೆ ನಾವು ಹೊಣೆಯಲ್ಲ ಎಂದು ಯುಐಡಿಎಐ ಹೇಳಿದೆ.
ಗ್ರಾಹಕರ ತಪ್ಪಲ್ಲ, ಬ್ಯಾಂಕುಗಳ ಹೊಣೆ
ಆಧಾರ್ ಹೊಂದಿರುವ ಗ್ರಾಹಕರು ಬ್ಯಾಂಕುಗಳ ಮಾಡುವ ದೋಷಕ್ಕೆ ಜವಾಬ್ಧಾರರಲ್ಲ. ಕೆಲ ವಂಚನೆಗಾರರು ಬೇರೆಯವರ ವೋಟರ್ ಐಡಿ, ರೇಷನ್ ಕಾರ್ಡ್ ಅಥವಾ ಆಧಾರ್ ಕಾರ್ಡ್ ಪ್ರತಿ ಪಡೆದು ಖಾತೆ ತೆರೆದರೆ ಅದು ಕೇವಲ ಕಾರ್ಡುದಾರರ ಮಾತ್ರ ತಪ್ಪಲ್ಲ. ಬದಲಾಗಿ ಬ್ಯಾಂಕುಗಳು ಕೂಡ ಜವಾಬ್ಧಾರರಾಗಿರುತ್ತಾರೆ.
ಪ್ರಶ್ನೆಗೆ ಯುಐಡಿಎಐ ಉತ್ತರ
ಇದಕ್ಕೆ ಸಂಬಂಧಿಸಿದಂತೆ ಯುಐಡಿಎಐ ವೆಬ್ಸೈಟ್ ನಲ್ಲಿ ಪ್ರಶ್ನೆ ಕೇಳಲಾಗಿತ್ತು. ನನಗೆ ಗೊತ್ತಿಲ್ಲದೆ ಬೇರೆಯವರು ಆಧಾರ್ ಕಾರ್ಡ್ ಫೋಟೋ ಕಾಪಿ ಪಡೆದು ಖಾತೆ ತೆರೆಯಬಹುದಾ ಎಂದು ಪ್ರಶ್ನೆ ಮಾಡಲಾಗಿತ್ತು.
ಇದಕ್ಕೆ ಯುಐಡಿಎಐ ಉತ್ತರ ನೀಡಿದ್ದು, ಆಧಾರ್ ಕಾರ್ಡ್ ಫೋಟೋ ಕಾಪಿ ಮಾತ್ರ ನೀಡಿ ಖಾತೆಯನ್ನು ತೆರೆಯಲು ಸಾಧ್ಯವಿಲ್ಲ ಎಂದಿದೆ. ಹೀಗಾಗಿಯೇ ಒಟಿಪಿ ಅಥವಾ ಬಯೋಮೆಟ್ರಿಕ್ ಧೃಢೀಕರಣ ಅಗತ್ಯ ಎಂದಿದೆ.


Click it and Unblock the Notifications