ಸ್ವಂತ ಉದ್ಯಮ ಆರಂಭಿಸುವ ಬಗ್ಗೆ ಆಲೋಚನೆ ನಿಮ್ಮದಾಗಿದ್ದರೆ ಪೋರ್ಟೆಬಲ್ ಪೆಟ್ರೋಲ್ ಪಂಪ್ ಆರಂಭಿಸಿ ಕೈತುಂಬಾ ಹಣ ಗಳಿಸಬಹುದು. ಈ ಉದ್ಯಮಕ್ಕಾಗಿ ಹೆಚ್‌ಚಿನ ಸ್ಥಳ, ಸಿಬ್ಬಂದಿ ಹಾಗು ಬಜೆಟ್ ಅಗತ್ಯವಿಲ್ಲ.
ಸ್ವಂತ ಉದ್ಯಮ ಆರಂಭಿಸುವ ಬಗ್ಗೆ ಆಲೋಚನೆ ನಿಮ್ಮದಾಗಿದ್ದರೆ ಪೋರ್ಟೆಬಲ್ ಪೆಟ್ರೋಲ್ ಪಂಪ್ ಆರಂಭಿಸಿ ಕೈತುಂಬಾ ಹಣ ಗಳಿಸಬಹುದು. ಈ ಉದ್ಯಮಕ್ಕಾಗಿ ಹೆಚ್‌ಚಿನ ಸ್ಥಳ, ಸಿಬ್ಬಂದಿ ಹಾಗು ಬಜೆಟ್ ಅಗತ್ಯವಿಲ್ಲ. ಅಮುಲ್ ಬಿಸಿನೆಸ್ ಪ್ರಾರಂಭಿಸಿ.. ಪ್ರತಿ ತಿಂಗಳು ರೂ. 5-10 ಲಕ್ಷದವರೆಗೆ ಹಣ ಗಳಿಸಿ
ನಾಲ್ಕು ಉತ್ಪಾದನಾ ಘಟಕ ಸ್ಥಾಪನೆ
ಭಾರತದಲ್ಲಿ ಪೋರ್ಟೆಬಲ್ ಪೆಟ್ರೋಲ್ ಪಂಪ್ ಪರಿಕಲ್ಪನೆ ಹೊಸದಾಗಿದೆ. ಅಲಿಂಜ್ ಪೋರ್ಟೆಬಲ್ ಪೆಟ್ರೋಲ್ ಪಂಪ್ಸ್ ಝೆಕ್ (Czech) ಕಂಪನಿಯ ಸಹಯೋಗದೊಂದಿಗೆ ಭಾರತದಲ್ಲಿ ನಾಲ್ಕು ಉತ್ಪಾದನಾ ಘಟಕಗಳನ್ನು ಸ್ಥಾಪಿಸಲು ನಿರ್ಧರಿಸಿದ್ದು, ರೂ. 600 ಕೋಟಿ ಬಂಡವಾಳ ಹೂಡಲು ಮುಂದಾಗಿದೆ. ಅತಿ ಕಡಿಮೆ ಬಂಡವಾಳದಲ್ಲಿ ನಡೆಸಬಹುದಾದ 10 ಉದ್ಯಮ
ಪೆಟ್ರೋಲಿಯಂ ಸಚಿವಾಲಯ ಒಪ್ಪಿಗೆ
ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಸಚಿವಾಲಯ ಪೋರ್ಟೆಬಲ್ ಪೆಟ್ರೋಲ್ ಪಂಪ್ ಪರಿಕಲ್ಪನೆ ಭಾರತದಲ್ಲಿ ಅಳವಡಿಸಲು ಒಪ್ಪಿಗೆ ಸೂಚಿಸಿದೆ ಎಂದು ಅಲಿಂಜ್ (Alinz ವ್ಯವಸ್ಥಾಪಕ ನಿರ್ದೇಶಕ ಇಂದರ್ಜೀತ್ ಪ್ರೂತಿ ಹೇಳಿದ್ದಾರೆ.
ಬಜೆಟ್ ಎಷ್ಟು ಬೆಕಾಗಬಹುದು?
ಪೋರ್ಟೆಬಲ್ ಪೆಟ್ರೋಲ್ ಪಂಪ್ ಬಿಸಿನೆಸ್ ಪ್ರಾರಂಭಿಸಲು ರೂ. 90 ಲಕ್ಷದಿಂದ ಸುಮಾರು 1.20 ಕೋಟಿ ಖರ್ಚಾಗುವ ಸಾಧ್ಯತೆಯಿದೆ. ಇದರಲ್ಲಿ ಶೇ. 80 ರಷ್ಟನ್ನು ಬ್ಯಾಂಕ್ ನೀಡಲಿದೆ. ಇದಕ್ಕಾಗಿ ಸರ್ಕಾರ ಟೆಂಡರ್ ಕರೆಯಲಿದ್ದು, ತದನಂತರ ಪೋರ್ಟೆಬಲ್ ಪೆಟ್ರೋಲ್ ಪಂಪ್ ಶುರು ಮಾಡಬಹುದಾಗಿದೆ.
ಲಾಭಗಳೇನು?
ಸಾಮಾನ್ಯ ಪೆಟ್ರೋಲ್ ಬಂಕ್ ಗಳಂತೆ ಇದಕ್ಕೆ ಹೆಚ್ಚು ಜಾಗ ಹಾಗು ಸಿಬ್ಬಂದಿಗಳ ಅಗತ್ಯವಿಲ್ಲ. ಇದನ್ನು ಅಳವಡಿಸಲು 2 ಗಂಟೆ ಸಾಕು. ಡಿಜಿಟಲ್ ಪೇಮೆಂಟ್ ಮೂಲಕ ಪಾವತಿ ವಹಿವಾಟು ನಡೆಯಲಿದೆ. ಶೀಘ್ರವೇ ಪೋರ್ಟಬಲ್ ಪೆಟ್ರೋಲ್ ಬಂಕ್ ಕೆಲಸ ಶುರು ಮಾಡಲಿದೆ.
ಗ್ರಾಮೀಣ ಹಾಗೂ ದೂರ ದೂರದ ಪ್ರದೇಶಗಳಿಗೆಅನುಕೂಲಕರವಾಗಲಿದ್ದು, 400 ಚದರ ಮೀಟರ್ ಜಾಗ ಇದ್ದರೆ ಪೆಟ್ರೋಲ್ ಬಂಕ್ ಶುರು ಮಾಡಬಹುದು.


Click it and Unblock the Notifications