For Quick Alerts
ALLOW NOTIFICATIONS  
For Daily Alerts

ಅಮುಲ್ ಬಿಸಿನೆಸ್ ಪ್ರಾರಂಭಿಸಿ.. ಪ್ರತಿ ತಿಂಗಳು ರೂ. 5-10 ಲಕ್ಷದವರೆಗೆ ಹಣ ಗಳಿಸಿ..

ಬಿಸಿನೆಸ್ ಪ್ರಾರಂಭಿಸುವ ಆಸಕ್ತಿ ಇರುವವರಿಗೆ ಭಾರತದ ಡೈರಿ ದೈತ್ಯ ಅಮುಲ್ ಹೊಸ ಅವಕಾಶ ನೀಡುತ್ತಿದೆ.ಅಮುಲ್ ನೊಂದಿಗೆ, ಉದ್ಯಮಿಗಳು ಅಮುಲ್ ಫ್ರ್ಯಾಂಚೈಸಿ ಅನ್ನು ಪಡೆದುಕೊಂಡು ತಿಂಗಳಿಗೆ ರೂ. 5 ರಿಂದ 10 ಲಕ್ಷದವರೆಗೆ ಆದಾಯ ಗಳಿಸಬಹುದು.

By Siddu
|

ಅಮುಲ್ ನೀಡುತ್ತಿದೆ ಸುವರ್ಣ ಅವಕಾಶ! ಬಿಸಿನೆಸ್ ಪ್ರಾರಂಭಿಸುವ ಆಸಕ್ತಿ ಇರುವವರಿಗೆ ಭಾರತದ ಡೈರಿ ದೈತ್ಯ ಅಮುಲ್ ಹೊಸ ಅವಕಾಶ ನೀಡುತ್ತಿದೆ.
ಅಮುಲ್ ನೊಂದಿಗೆ, ನೀವು ಅಮುಲ್ ಫ್ರ್ಯಾಂಚೈಸಿ ಅನ್ನು ಪಡೆದುಕೊಂಡು ತಿಂಗಳಿಗೆ ರೂ. 5 ರಿಂದ 10 ಲಕ್ಷದವರೆಗೆ ಆದಾಯ ಗಳಿಸಬಹುದು.

ಕುತೂಹಲಕಾರಿ ಅಂಶವೆಂದರೆ, ಫ್ರ್ಯಾಂಚೈಸಿಗಳು ಯಾವುದೇ ರಾಯಲ್ಟಿಗಳನ್ನು ಅಥವಾ ಲಾಭಗಳನ್ನು ಅಮುಲ್ ಗೆ ಪಾವತಿಸಬೇಕಿಲ್ಲ. ಸಣ್ಣ ಬಂಡವಾಳ ಹೂಡಿಕೆ ಮತ್ತು ಉತ್ತಮ ವ್ಯವಹಾರದ ಕುಶಾಗ್ರಮತಿ ಹೊಂದಿರುವ ಯಾರಾದರೂ ಕೂಡ ಅಮುಲ್ ಫ್ರ್ಯಾಂಚೈಸಿ ಪಡೆಯಬಹುದು. ಇದು ಬಹಳ ಕಡಿಮೆ ಬಂಡವಾಳ ಮತ್ತು ಕೆಲಸದ ಬಂಡವಾಳದ ಬಯಸುತ್ತದೆ. 'ಉದ್ಯೋಗಿನಿ ಯೋಜನೆ' ಅಡಿಯಲ್ಲಿ 3 ಲಕ್ಷ ಸಾಲ, 90 ಸಾವಿರ ಸಬ್ಸಿಡಿ ಪಡೆಯಿರಿ

ಬಿಸಿನೆಸ್ ಮಾದರಿ

ಬಿಸಿನೆಸ್ ಮಾದರಿ

ಅಮುಲ್ ಔಟ್ಲೆಟ್, ಅಮುಲ್ ರೈಲ್ವೇ ಪಾರ್ಲರ್ ಅಥವಾ ಅಮುಲ್ ಕಿಯೋಸ್ಕ್ ಹೀಗೆ ಹಲವು ವಿಧದ ಫ್ರ್ಯಾಂಚೈಸಿ ಗಳನ್ನು ಅಮುಲ್ ನೀಡುತ್ತದೆ. ನೀವು ರೂ. 1.5 ಲಕ್ಷದಿಂದ 2 ಲಕ್ಷ ರೂಪಾಯಿ ಹೂಡಿಕೆ ಮಾಡಬೇಕು.
ಇದರ ಪೈಕಿ ರೂ. 25,000 ಮರುಪಾವತಿಸಲಾಗದ ಬ್ರ್ಯಾಂಡ್ ಭದ್ರತೆ ಆಗಿರುತ್ತದೆ. ರೂ. 1 ಲಕ್ಷ ನವೀಕರಣಕ್ಕಾಗಿ ಮತ್ತು ಉಪಕರಣಗಳಿಗೆ ರೂ. 75,000 ಖರ್ಚು ಮಾಡಲಾಗುವುದು. ಕಂಪನಿಯ ವೆಬ್ಸೈಟ್ನಲ್ಲಿ ನೀವು ಹೆಚ್ಚಿನ ಮಾಹಿತಿ ಪಡೆಯಬಹುದು. ಕಡಿಮೆ ಬಂಡವಾಳದಲ್ಲಿ ನಡೆಸಬಹುದಾದ 20 ಮ್ಯಾನುಫ್ಯಾಕ್ಚರಿಂಗ್ ಉದ್ಯಮ

ನೀವು ಎಷ್ಟು ಸಂಪಾದಿಸಬಹುದು?

ನೀವು ಎಷ್ಟು ಸಂಪಾದಿಸಬಹುದು?

ಅಮುಲ್ ಪ್ರಕಾರ, ಫ್ರ್ಯಾಂಚೈಸಿ ಮೂಲಕ ತಿಂಗಳಿಗೆ ಸುಮಾರು 5 ರಿಂದ 10 ಲಕ್ಷ ಆದಾಯವನ್ನು ನೀವು ಪಡೆಯಬಹುದು. ಆದಾಗ್ಯೂ, ಇದು ಸ್ಥಳದ ಮೇಲೆ ಅವಲಂಬಿತವಾಗಿರುತ್ತದೆ.
ಅಮುಲ್ ಉತ್ಪನ್ನಗಳ ಕನಿಷ್ಠ ಮಾರಾಟ ಬೆಲೆಯ (ಎಮ್ಆರ್ಪಿ) ಮೇಲೆ ನಿಮಗೆ ಕಮಿಷನ್ ಪಾವತಿಸಲಾಗುತ್ತದೆ. ಹಾಲಿನ ಪೌಚ್ ಮೇಲೆ ಶೇ. ೨.೫, ಹಾಲುತ್ಪನ್ನಗಳ ಮೇಲೆ ಶೇ. ೧೦, ಐಸ್ ಕ್ರೀಮ್ ಗಳ ಮೇಲೆ ಶೇ. ೫೦ರಷ್ಟು ಕಮಿಷನ್ ಪಾವತಿಸಲಾಗುತ್ತದೆ. ಜನ್ ಔಷಧಿ ಮಳಿಗೆ ಪ್ರಾರಂಭಿಸಿ ಕೈತುಂಬಾ ಹಣ ಗಳಿಸಿ. ಕೇಂದ್ರದಿಂದ ಸಿಗುವ ಧನಸಹಾಯ-ಸೌಲಭ್ಯಗಳೇನು?

ಬಿಸಿನೆಸ್ ಮಾದರಿ 2

ಬಿಸಿನೆಸ್ ಮಾದರಿ 2

ಅಮುಲ್ ಐಸ್-ಕ್ರೀಮ್ ಸ್ಕೂಪಿಂಗ್ ಪಾರ್ಲರ್ ಇನ್ನೊಂದು ಬಿಸಿನೆಸ್ ಮಾದರಿಯಾಗಿದೆ.
ಇದಕ್ಕಾಗಿ ಕನಿಷ್ಟ 300 ಚದರ ಅಡಿ ಜಾಗ ಬೇಕಾಗುತ್ತದೆ. ಫ್ರಾಂಚೈಸಿ ಮಾಲೀಕರು ರೂ. 6 ಲಕ್ಷವನ್ನು ಹೂಡಿಕೆ ಮಾಡಬೇಕಾಗಿದ್ದು, ರೂ. 50,000 ಮರುಪಾವತಿಸಲಾಗದ ಬ್ರ್ಯಾಂಡ್ ಭದ್ರತೆಗಾಗಿ ಪಾವತಿಸಬೇಕು. ಪ್ರಾಂಚೈಸಿ ನವೀಕರಣಕ್ಕೆ ರೂ. 4,00,000 ಮತ್ತು ಉಪಕರಣಗಳಿಗಾಗಿ ರೂ. 1,50,000 ಬೆಕಾಗುತ್ತದೆ.

ಅಮುಲ್ ಐಸ್ಕ್ರೀಮ್ ಸ್ಕೂಪಿಂಗ್ ಪಾರ್ಲರ್ ಮೂಲಕ ಆದಾಯ ಹೆಚ್ಚು

ಅಮುಲ್ ಐಸ್ಕ್ರೀಮ್ ಸ್ಕೂಪಿಂಗ್ ಪಾರ್ಲರ್ ಮೂಲಕ ಆದಾಯ ಹೆಚ್ಚು

ನೀವು ಅಮುಲ್ ಐಸ್ಕ್ರೀಮ್ ಸ್ಕೂಪಿಂಗ್ ಪಾರ್ಲರ್ ಫ್ರಾಂಚೈಸಿ ಪಡೆದುಕೊಂಡರೆ, ಪಾಕ ವಿಧಾನಗಳನ್ನು ಆಧರಿಸಿದ ಐಸ್ಕ್ರೀಮ್, ಶೇಕ್, ಪಿಜ್ಜಾ, ಸ್ಯಾಂಡ್ವಿಚ್, ಬಿಸಿ ಚಾಕೊಲೇಟ್ ಪಾನೀಯ ಮೇಲೆ ಶೇ. 50 ರಷ್ಟು ಆದಾಯ ಲಭ್ಯವಿದೆ. ಅದೇ ರೀತಿ, ಪ್ಯಾಕ್ ಮಾಡಿದ ಐಸ್ಕ್ರೀಮ್ ಮೇಲೆ ಶೇ. 20 ಮತ್ತು ಅಮುಲ್ ಉತ್ಪನ್ನಗಳ ಮೇಲೆ ಶೇ. 10 ರಷ್ಟು ಕಮಿಷನ್ ಇರುತ್ತದೆ. 
(ಫ್ರಾಂಚೈಸಿಗಳ ಬಗ್ಗೆ ಹೆಚ್ಚಿನ ಮಾಹಿತಿಗಾಗಿ ಈ ಲಿಂಕ್ ಮೇಲೆ ಕ್ಲಿಕ್ ಮಾಡಿ.)

ಅಮುಲ್ ಫ್ರಾಂಚೈಸಿ ನಿಯಮಗಳು

ಅಮುಲ್ ಫ್ರಾಂಚೈಸಿ ನಿಯಮಗಳು

ನೀವು ಅಮುಲ್ ಔಟ್ಲೆಟ್ ಅನ್ನು ತೆಗೆದುಕೊಂಡರೆ ನೀವು 150 ಚದರ ಅಡಿ ಜಾಗ ಹೊಂದಿರಬೇಕು. ಅದೇ ರೀತಿ ಅಮುಲ್ ಐಸ್ಕ್ರೀಮ್ ಪಾರ್ಲರ್ ಫ್ರ್ಯಾಂಚೈಸಿಗೆ ಕನಿಷ್ಠ 300 ಚದರ ಅಡಿ ಜಾಗ ಇರಬೇಕು. ಇದಕ್ಕಿಂತಲೂ ಕಡಿಮೆ ಸ್ಥಳವಿದ್ದರೆ ಅಮುಲ್ ಫ್ರ್ಯಾಂಚೈಸಿಯನ್ನು ನೀಡಲಾಗುವುದಿಲ್ಲ. ಎಲ್ಲಾ ರೀತಿಯ ಉಪಕರಣಗಳು ಮತ್ತು ಬ್ರ್ಯಾಂಡಿಂಗ್ ಗೆ ಸಬ್ಸಿಡಿ ನೀಡಲಾಗುತ್ತದೆ. ಪ್ರಾಂಚೈಸಿ ಮಾಲೀಕರು ಅಥವಾ ಮಾಲೀಕರ ಹುಡುಗನಿಗೆ ತರಬೇತಿಯನ್ನು ನೀಡಲಾಗುತ್ತದೆ.  
ಅಮುಲ್ ಫ್ರಾಂಚೈಸಿ ಬಗ್ಗೆ ಇನ್ನಷ್ಟು ತಿಳಿದುಕೊಳ್ಳಲು ಮತ್ತು ಅರ್ಜಿ ಸಲ್ಲಿಸಲು ಈ ಲಿಂಕ್ ಅನ್ನು ಕ್ಲಿಕ್ ಮಾಡಿ.

English summary

Start Amul Business, Earn Rs 5 to Rs 10 Lakh Every Month

You can take Amul’s franchisee for earning a decent amount every month. you can get it just by spending Rs 2 lakh to Rs 6 lakh for a good profit.
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X