ದೇಶದಲ್ಲಿ ಶತಕೋಟ್ಯಾಧಿಪತಿಗಳ ಸಂಖ್ಯೆ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ನೂರು ಕೋಟಿ ಪಟ್ಟಿಯಲ್ಲಿರುವವರ ಬಗ್ಗೆ ಚರ್ಚೆ ನಡೆದಿದೆ. ದೇಶದ ಶತಕೋಟ್ಯಾಧಿಪತಿಗಳಲ್ಲಿ ಪುರುಷರೇ ಹೆಚ್ಚಿರುತ್ತಿದ್ದ ಈ ಪಟ್ಟಿಯಲ್ಲಿ ಮಹಿಳೆಯರೂ ಕೂಡ ಇದ್ದಾರೆ.
ದೇಶದಲ್ಲಿ ಶತಕೋಟ್ಯಾಧಿಪತಿಗಳ ಸಂಖ್ಯೆ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ನೂರು ಕೋಟಿ ಪಟ್ಟಿಯಲ್ಲಿರುವವರ ಬಗ್ಗೆ ಚರ್ಚೆ ನಡೆದಿದೆ. ದೇಶದ ಶತಕೋಟ್ಯಾಧಿಪತಿಗಳಲ್ಲಿ ಪುರುಷರೇ ಹೆಚ್ಚಿರುತ್ತಿದ್ದ ಈ ಪಟ್ಟಿಯಲ್ಲಿ ಮಹಿಳೆಯರೂ ಕೂಡ ತಾವೇನೂ ಹಿಂದಿಲ್ಲ ಎನ್ನುವಂತೆ ಸ್ಥಾನ ಪಡೆದಿದ್ದಾರೆ.
ಜೀವನದಲ್ಲಿ ಕಷ್ಟಪಟ್ಟು ಉನ್ನತಮಟ್ಟಕ್ಕೆ ಬೆಳೆದಿರುವ ಭಾರತದ ಬಿಲಿಯನೇರ್ ಮಹಿಳೆಯರು ಯಾರು ಎಂಬುದನ್ನು ನೋಡೋಣ ಬನ್ನಿ.. ಮನೆಯಿಂದ ಕೆಲಸ ಮಾಡಲು ಬಯಸುವಿರಾ? ಈ 17 ಕಂಪನಿಗಳು ನೇಮಕಾತಿ ಮಾಡುತ್ತವೆ..
ಸಾವಿತ್ರಿ ಜಿಂದಾಲ್
ದೇಶದ ಅತೀಶ್ರೀಮಂತ ಮಹಿಳೆಯರ ಪಟ್ಟಿಯಲ್ಲಿ ಸಾವಿತ್ರಿ ಜಿಂದಾಲ್ ಮೊದಲ ಸ್ಥಾನದಲ್ಲಿದ್ದಾರೆ. ಜಿಂದಾಲ್ ಸ್ಟೀಲ್ ಮತ್ತು ಪವರ್ ಲಿಮಿಟೆಡ್ ನ ಗೌರವ ಚೇರ್ ಮನ್ ಆಗಿರುವ ಸಾವಿತ್ರಿ ಜಿಂದಾಲ್ ರೂ. 53,048 ಕೋಟಿ ಸಂಪತ್ತಿನ ಒಡೆಯರು.
ಕಿರಣ್ ಮಜುಂದಾರ್ ಷಾ
ಬಯೋಕಾನ್ ಸಂಸ್ಥೆಯ ಅಧ್ಯಕ್ಷೆ ಕಿರಣ್ ಮಜುಮ್ದಾರ್ ಷಾ ಬಿಲಿಯನೇರ್ ಪಟ್ಟಿಯಲ್ಲಿ ಎರಡನೇ ಸ್ಥಾನದಲ್ಲಿದ್ದಾರೆ. ಕಿರಣ್ ಮಜುಮ್ದಾರ್ ಷಾ 3.29 ಬಿಲಿಯನ್ ಸಂಪತ್ತು ಹೊಂದಿದ್ದಾರೆ. ಇತ್ತೀಚಿನ ಫೋರ್ಬ್ ಪಟ್ಟಿಯಲ್ಲಿ 629 ನೇ ಸ್ಥಾನ ಪಡೆದಿರುವ ಕಿರಣ್ ಮಜುಮ್ದಾರ್ ಷಾ ಟೈಮ್ಸ್ ಮ್ಯಾಗಜೀನ್ ಪಟ್ಟಿಯಲ್ಲೂ ಸ್ಥಾನ ಪಡೆದಿದ್ದಾರೆ.
ಸ್ಮಿತಾ ಕೃಷ್ಣ
ಗೊದ್ರೇಜ್ ಸಂಸ್ಥೆಯ ಸ್ಮಿತಾ ಕೃಷ್ಣ ಈ ಪಟ್ಟಿಯಲ್ಲಿ ಮೂರನೇ ಸ್ಥಾನದಲ್ಲಿದ್ದು, ಕಂಪನಿಯಲ್ಲಿ ಐದನೇ ಒಂದು ಭಾಗದಷ್ಟು ಪಾಲು ಹೊಂದಿರುವ ಸ್ಮಿತಾ ಕೃಷ್ಣ 3 ಬಿಲಿಯನ್ ಸಂಪತ್ತಿನ ಒಡೆಯರಾಗಿದ್ದಾರೆ.
ಲೀನಾ ತಿವಾರಿ
ಯುಎಸ್ವಿ ಇಂಡಿಯಾದ ( USV India) ಚೇರ್ ಪರ್ಸನ್ ಆಗಿರುವ ಲೀನಾ ತಿವಾರಿ ಬಿಲಿಯನೇರ್ಸ್ ಗಳ ಪಟ್ಟಿಯಲ್ಲಿ ನಾಲ್ಕನೇ ಸ್ಥಾನದಲ್ಲಿದ್ದು, ಭಾರತದ ಅತಿ ಶ್ರಿಮಂತ ಮಹಿಳೆಯರಲ್ಲಿ ಒಬ್ಬರಾಗಿದ್ದಾರೆ. ಇವರು 2.2 ಬಿಲಿಯನ್ ಆಸ್ತಿ ಹೊಂದಿದ್ದಾರೆ.
ವಿನೋದಾ ಗುಪ್ತಾ
ಹ್ಯಾವೆಲ್ಸ್ ಇಂಡಿಯಾದ ವಿನೋದಾ ಗುಪ್ತಾ ಅವರು ಭಾರತದ ಬಿಲಿಯನೇರ್ಸ್ ಗಳ ಪಟ್ಟಿಯ ಐದನೇ ಮತ್ತು ಕೊನೆಯ ಸ್ಥಾನದಲ್ಲಿದ್ದಾರೆ. ತಮ್ಮ ಪುತ್ರ ಅನಿಲ್ ರೈ ಜೊತೆ 2.7 ಬಿಲಿಯನ್ ಆಸ್ತಿ ಪಾಲು ಹೊಂದಿದ್ದಾರೆ.


Click it and Unblock the Notifications