ಹಲವಾರು ಪ್ರಖ್ಯಾತ ಕಂಪನಿಗಳು ಸಹ ’ವರ್ಕ್ ಫ್ರಾಮ್ ಹೋಮ್’ ರೀತಿಯ ಕೆಲಸಗಳಿಗೆ ಹೆಚ್ಚಿನ ಸಂಖ್ಯೆಯಲ್ಲಿ ನೇಮಕಾತಿ ಮಾಡಿಕೊಳ್ಳುತ್ತಿರುವುದು ಕಂಡು ಬರುತ್ತಿದೆ.
ಇತ್ತೀಚಿನ ದಿನಗಳಲ್ಲಿ ಮನೆಯಿಂದಲೇ ಕಂಪನಿಗಳಿಗಾಗಿ ಕೆಲಸ ಮಾಡುವ (Work From Home) ಟ್ರೆಂಡ್ ಹೆಚ್ಚಾಗುತ್ತಿದೆ. ಈ ಟ್ರೆಂಡ್‌ಗೆ ಪೂರಕವೆಂಬಂತೆ ಹಲವಾರು ಪ್ರಖ್ಯಾತ ಕಂಪನಿಗಳು ಸಹ 'ಮನೆಯಿಂದ ಕೆಲಸ' ರೀತಿಯ ಕೆಲಸಗಳಿಗೆ ಹೆಚ್ಚಿನ ಸಂಖ್ಯೆಯಲ್ಲಿ ನೇಮಕಾತಿ ಮಾಡಿಕೊಳ್ಳುತ್ತಿರುವುದು ಕಂಡು ಬರುತ್ತಿದೆ.
ಬೆಳಗಿನ 9 ಗಂಟೆಯಿಂದ ಸಂಜೆ 5 ರವರೆಗೆ ಕೆಲಸ ಮಾಡುವ ಏಕತಾನತೆ ನಿಮಗೆ ಬೇಡವಾಗಿದ್ದರೆ, ನಿಮ್ಮ ಅನುಕೂಲದ ಸಮಯದಲ್ಲಿ ಇರುವ ಸ್ಥಳದಿಂದಲೇ ಕೆಲಸ ಮಾಡುವ ಹಂಬಲ ನಿಮಗಿದ್ದರೆ ಈ ವರ್ಕ್ ಫ್ರಾಮ್ ಹೋಮ್ ಕೆಲಸ ನಿಮಗೆ ಹೇಳಿ ಮಾಡಿಸಿದಂತಿವೆ.
ಸದ್ಯ ಜಗತ್ತಿನ ಪ್ರಮುಖ ಕಂಪನಿಗಳು ವಿವಿಧ 'ವರ್ಕ್ ಫ್ರಾಮ್ ಹೋಮ್' ಕೆಲಸಗಳಿಗಾಗಿ ನೇಮಕಾತಿಯನ್ನು ಮಾಡಿಕೊಳ್ಳುತ್ತಿವೆ. ಆಪಲ್ ನಿಂದ ಹಿಡಿದು ಝೇಪಿಯರ್‌ನಂಥ ಕಂಪನಿಗಳಲ್ಲಿ ಸಹ ಮನೆಯಿಂದ ಕೆಲಸ ಮಾಡುವ ಅವಕಾಶಗಳಿವೆ. ಮನೆಯಿಂದಲೇ ಕೆಲಸ ಮಾಡಿದರೂ ಟೀಂ ವರ್ಕ್, ಕಾರ್ಯಾಗಾರಗಳು, ಮೀಟಿಂಗ್ ಹಾಗೂ ನೂತನ ತಾಂತ್ರಿಕತೆಗಳ ಬಗ್ಗೆ ತರಬೇತಿ ಹೀಗೆ ಹಲವಾರು ಕ್ರಿಯಾಶೀಲ ಚಟುವಟಿಕೆಗಳ ಮೂಲಕ ಉದ್ಯೋಗಿಗಳು ಸಂಪರ್ಕದಲ್ಲಿರುವಂತೆ ಮಾಡಲಾಗುತ್ತದೆ. ಮನೆಯಿಂದ ಕೆಲಸ ಮಾಡಿ ಹಣ ಗಳಿಸಬೇಕೆ? ಇಲ್ಲಿವೆ 12 ಮಾರ್ಗ
ಕಂಪನಿಗಳ ಈ ಅವಕಾಶಗಳನ್ನು ಬಳಸಿಕೊಳ್ಳಲು ಬಯಸುವಿರಾದರೆ ಕೆಳಗಿನ 17 ಟಾಪ್ ಕಂಪನಿಗಳ 'ಮನೆಯಿಂದ ಕೆಲಸ' ಮಾಡುವ ಆಫರ್‌ಗಳನ್ನು ಒಮ್ಮೆ ಚೆಕ್ ಮಾಡಿ ನೋಡಿ.
ಹಲವಾರು ಪ್ರಖ್ಯಾತ ಕಂಪನಿಗಳಲ್ಲಿ ಲಭ್ಯವಿರುವ ಕೆಲಸದ ಅವಕಾಶಗಳು ಹಾಗೂ ಈಗಾಗಲೇ ಅವುಗಳಿಗಾಗಿ ಕೆಲಸ ಮಾಡುತ್ತಿರುವ ಉದ್ಯೋಗಿಗಳ ಅನಿಸಿಕೆಯನ್ನು ಇಲ್ಲಿ ನೀಡಲಾಗಿದೆ..
1. ಫಾರ್ವರ್ಡ್
ಲಭ್ಯವಿರುವ ಕೆಲಸ: ಕೇರ್ ಕೊ ಆರ್ಡಿನೇಟರ್, ನರ್ಸ್ ವೃತ್ತಿಪರರು
ಉದ್ಯೋಗಿಯ ಅಭಿಪ್ರಾಯ: ಆರೋಗ್ಯ ವ್ಯವಸ್ಥೆಯಲ್ಲಿ ಶೀಘ್ರವಾಗಿ ಸುಧಾರಣೆ ಮೂಡಿಸಿ, ಉತ್ತಮ ಆರೋಗ್ಯ ಸೇವೆಗಳನ್ನು ನೀಡಲು 'ಫಾರ್ವರ್ಡ್' ಶ್ರಮಿಸುತ್ತಿದೆ. ಈ ಕಂಪನಿಯಲ್ಲಿ ಅತ್ಯಂತ ಕ್ರಿಯಾಶೀಲ, ಬುದ್ಧಿವಂತ ಹಾಗೂ ಪರಿಣಾಮಕಾರಿ ವ್ಯಕ್ತಿಗಳೊಂದಿಗೆ ಕೆಲಸ ಮಾಡುವ ಅವಕಾಶ ನನಗೆ ಲಭಿಸಿದ್ದು, ಸಾಕಷ್ಟು ಹೊಸ ಸಂಗತಿಗಳನ್ನು ಕಲಿಯುತ್ತಿದ್ದು, ಇದೊಂದು ಅಪೂರ್ವ ಅವಕಾಶವಾಗಿದೆ.
2. ಆಪಲ್
ಲಭ್ಯವಿರುವ ಕೆಲಸ: ಆಪಲ್ ಕೇರ್ ಹೋಂ ಟೀಂ ಮ್ಯಾನೇಜರ್, ಆಪಲ್ ಕೇರ್ ಕಾಲೇಜ್ ಪ್ರೊಗ್ರಾಂ, ಆಪಲ್ ಕೇರ್ ಆಟ್ ಹೋಂ ಅಡ್ವೈಸರ್.
ಉದ್ಯೋಗಿಯ ಅಭಿಪ್ರಾಯ: ಮನೆಯಿಂದಲೇ ಕೆಲಸ ಮಾಡುವ ಅಪೂರ್ವ ಅವಕಾಶ ಆಪಲ್ ಕಂಪನಿಯಲ್ಲಿ ಸಿಕ್ಕಿದೆ. ಕಂಪನಿಯ ಭತ್ಯೆ ಹಾಗೂ ಡಿಸ್ಕೌಂಟ್‌ಗಳು ಸಹ ಅತ್ಯಾಕರ್ಷಕವಾಗಿವೆ. ಅತ್ಯುತ್ತಮ ಸಂಬಳ ಹಾಗೂ ವಿಮಾ ಸೌಲಭ್ಯವೂ ಇದೆ.
3. ಇಂಟ್ಯೂಟ್ (Intuit)
ತೆರಿಗೆ ವಿಷಯ ಪರಿಣಿತ, ಸೀಸನಲ್ ತೆರಿಗೆ ಪರಿಣಿತ, ಸ್ಪ್ಯಾನಿಷ್ ಭಾಷೆ ಬಲ್ಲ ದ್ವಿಭಾಷಾ ತೆರಿಗೆ ಪರಿಣಿತ.
4. ರಿಸೋರ್ಸ್ ಪ್ರೊ
ಲಭ್ಯವಿರುವ ಕೆಲಸ: ಗ್ರಾಹಕ ಪ್ರತಿನಿಧಿ, ಮಾರಾಟ ಪ್ರತಿನಿಧಿ
ಉದ್ಯೋಗಿಯ ಅಭಿಪ್ರಾಯ: ಕೆಳಹಂತದ ಉದ್ಯೋಗಿಗಳೊಂದಿಗೆ ಮೇಲಿನ ಮ್ಯಾನೇಜಮೆಂಟ್ ಅಧಿಕಾರಿಗಳ ಅತ್ಯುತ್ತಮ ಸಂವಹನ ಇಲ್ಲಿದೆ. ಕಂಪನಿಯ ಸಿಇಓ, ಸಿಒಒ ಅಥವಾ ವೈಸ್ ಪ್ರೆಸಿಡೆಂಟ್ ಅವರೊಂದಿಗೆ ನೇರವಾಗಿ ಮಾತನಾಡುವ ಅವಕಾಶವೂ ನಿಮಗೆ ಈ ಕಂಪನಿಯಲ್ಲಿ ಸಿಗಬಹುದು.
5. ಝೇಪಿಯರ್
ಲಭ್ಯವಿರುವ ಕೆಲಸ: ಕಸ್ಟಮರ್ ಚಾಂಪಿಯನ್, ವಿಪಿ ಎಂಜಿನೀಯರಿಂಗ್, ಪ್ರೊಡಕ್ಟ್ ಎಂಜಿನಿಯರ್
ಉದ್ಯೋಗಿಯ ಅಭಿಪ್ರಾಯ: ಜಗತ್ತಿನ ಎಲ್ಲ ಭಾಗಗಳಿಂದ ಜನರನ್ನು ಕಂಪನಿಯ ಕೆಲಸಕ್ಕೆ ನೇಮಿಸಿಕೊಳ್ಳುವುದರಿಂದ ಸಹಜವಾಗಿಯೇ ಅತ್ಯಂತ ಕುಶಲ ಹಾಗೂ ಪರಿಣಿತ ಜನ ಕಂಪನಿಗೆ ಕೆಲಸ ಮಾಡಲು ಅವಕಾಶವಾಗುತ್ತದೆ. ರಿಮೋಟ್ ಆಗಿ ಕೆಲಸ ಮಾಡಿ, ಸಾಕಷ್ಟು ಸಮಸ್ಯೆಗಳನ್ನು ನಾವು ಪರಿಹರಿಸಲು ಯಶಸ್ವಿಯಾಗಿದ್ದೇವೆ.
6. ಮೂವ್ ಆನ್ ಡಾಟ್ ಆರ್ಗ್ (MoveOn.org)
ಲಭ್ಯವಿರುವ ಕೆಲಸ: ಫುಲ್ ಸ್ಟ್ಯಾಕ್ ಸಾಫ್ಟವೇರ್ ಎಂಜಿನಿಯರ್, ರಿಯಲ್ ವೋಟರ್ ವಾಯ್ಸ್ ಫುಲ್ ಸ್ಟ್ಯಾಕ್ ಸಾಫ್ಟವೇರ್ ಎಂಜಿನಿಯರ್, ಫೈನಾನ್ಸ್ ಮ್ಯಾನೇಜರ್.
ಉದ್ಯೋಗಿಯ ಅಭಿಪ್ರಾಯ: ಉದ್ಯೋಗಿಯ ವೈಯಕ್ತಿಕ ಕಾಳಜಿಯೊಂದಿಗೆ ಕೆಲಸ ಹಾಗೂ ನಿತ್ಯದ ಜೀವನವನ್ನು ಸಮತೋಲಿತವಾಗಿರಿಸಲು ಈ ಕಂಪನಿ ಸಾಕಷ್ಟು ಶ್ರಮ ವಹಿಸುತ್ತದೆ. ಹೊಸ ತಾಂತ್ರಿಕತೆಗಳನ್ನು ಅಳವಡಿಸಿಕೊಂಡು ರಿಮೋಟ್ ಕೆಲಸವನ್ನು ಸುಲಭವಾಗಿಸಲಾಗಿದೆ.
7. ಇನ್ ವಿಜನ್ ಆಪ್
ಲಭ್ಯವಿರುವ ಕೆಲಸ: ಡೈರೆಕ್ಟರ್ ಆಫ್ ಸ್ಟ್ರ್ಯಾಟೆಜಿಕ್ ಸೇಲ್ಸ್, ಬ್ರಾಂಡ್ ಮತ್ತು ಕಂಟೆಂಟ್ ವಿಪಿ, ಪ್ರಾಡಕ್ಟ್ ಮಾರಾಟ ಅಧಿಕಾರಿ, ವ್ಯಾಪಾರ ಅಭಿವೃದ್ಧಿ ಪ್ರತಿನಿಧಿ, ಡಿಸೈನ್ ಎಜ್ಯುಕೇಶನ್ ಹಿರಿಯ ಮ್ಯಾನೇಜರ್, ಎಡಿಟೋರಿಯಲ್ ಡೈರೆಕ್ಟರ್, ಮಾರಾಟ ಪರಿಹಾರ ವಿಶ್ಲೇಷಕ, ಅಕೌಂಟ್ಸ್ ಪ್ರತಿನಿಧಿ, ಇನ್ ವಿಜನ್ ಬ್ಲಾಗ್ ಕಾರ್ಯನಿರ್ವಾಹಕ ಸಂಪಾದಕ, ನೇಮಕಾತಿ ಅಧಿಕಾರಿ, ಕಂಟೆಂಟ್ ಪ್ರಾಜೆಕ್ಟ್ ಮ್ಯಾನೇಜರ್ ಇತ್ಯಾದಿ.
8. ಕೊಲೇಜ್ ಡಾಟ್ ಕಾಂ (Collage.com)
ಲಭ್ಯವಿರುವ ಕೆಲಸ: ಹಿರಿಯ ಎಸ್‌ಇಓ ನೈಪುಣ್ಯ ಅಧಿಕಾರಿ, ಸಹಭಾಗಿತ್ವ ಕಾರ್ಯಾಚರಣೆ ಹಾಗೂ ಸಂಗ್ರಹಣಾ ವ್ಯವಸ್ಥಾಪಕ, ಪ್ರಾಡಕ್ಟ್ ವಿಪಿ, ಸೀನಿಯರ್ UX/UI ಡಿಸೈನರ್, ಕಂಟೆಂಟ್ ಮಾರ್ಕೆಟಿಂಗ್ ಹಾಗೂ ಪಿಆರ್ ಮ್ಯಾನೇಜರ್, ಲೀಡ ಸಾಫ್ಟವೇರ್ ಎಂಜಿನಿಯರ್ ಇತ್ಯಾದಿ.
9. ಆಹಾ! (Aha!)
ಲಭ್ಯವಿರುವ ಕೆಲಸ: ಸೀನಿಯರ್ ಡಿಜಿಟಲ್ ಮಾರ್ಕೆಟಿಂಗ್ ಮ್ಯಾನೇಜರ್, ಸೀನಿಯರ್ ರೈಟರ್, ಕಸ್ಟಮರ ಸಕ್ಸೆಸ್ ಸೀನಿಯರ್ ಮ್ಯಾನೇಜರ್, ನಾಲೆಜ್ ಬೇಸ್ ಮ್ಯಾನೇಜರ್, ಸೀನಿಯರ್ ಕಾರ್ಪೊರೇಟ್ ಕೌನ್ಸೆಲ್, ಸಾಮಾಜಿಕ ಜಾಲತಾಣ ಮಾರ್ಕೆಟಿಂಗ್ ಮ್ಯಾನೇಜರ್ ಇತ್ಯಾದಿ.
10. ಕ್ಲೋಸ್ ಡಾಟ್ ಐಓ (Close.io)
ಲಭ್ಯವಿರುವ ಕೆಲಸ: ಸೈಟ್ ರಿಲಯಬಿಲಿಟಿ ಎಂಜಿನಿಯರ್, ಹಿರಿಯ ಸಾಫ್ಟವೇರ್ ಎಂಜಿನಿಯರ್, ಹಿರಿಯ ಅಭಿವೃದ್ಧಿ ಅಧಿಕಾರಿ, ಗ್ರಾಹಕ ಬೆಂಬಲ ಪರಿಣಿತ ಇತ್ಯಾದಿ.
11. ಗೇನ್ ಸೈಟ್
ಲಭ್ಯವಿರುವ ಕೆಲಸ: ಪಾರ್ಟನರ್ ಔಟ್‌ಕಂ ಮ್ಯಾನೇಜರ್ (ಪ್ರೈವೇಟ ಇಕ್ವಿಟಿ), ಕಸ್ಟಮರ ಸಕ್ಸೆಸ್ ಮ್ಯಾನೇಜರ್, ಸೀನಿಯರ್ ಸೊಲ್ಯುಷನ್ಸ್ ಆರ್ಕಿಟೆಕ್ಟ್, ಸೊಲ್ಯೂಷನ್ಸ್ ಎಂಜಿನಿಯರ್.
12. ಅಲಾಯನ್ಸ್ ಅಡ್ವೈಸರ್ಸ್
ಲಭ್ಯವಿರುವ ಕೆಲಸ: ಕಾಲ್ ಸೆಂಟರ ಪ್ರತಿನಿಧಿ, ವರ್ಚುವಲ್ ಕಾಲ್ ಸೆಂಟರ ಪ್ರತಿನಿಧಿ.
ಉದ್ಯೋಗಿಯ ಅಭಿಪ್ರಾಯ: ಅತ್ಯಂತ ಅನುಕೂಲಕರ ಕೆಲಸದ ಅವಧಿಯನ್ನು ನೀಡಲಾಗುತ್ತದೆ. ೧೦೯೯ ನಂತಲ್ಲದೆ ೧೪ ಡಾಲರ್ ವೇತನ ನೀಡಲಾಗುತ್ತಿದೆ. ಅಲ್ಲದೆ ಸಂಬಳ ನೇರವಾಗಿ ಜಮೆ ಆಗುತ್ತಿದ್ದು, ಕೆಲಸವೂ ಸರಳವಾಗಿದೆ. ನನ್ನ ಮೇಲಧಿಕಾರಿ ಸಹ ನನ್ನೊಂದಿಗೆ ಉತ್ತಮವಾಗಿ ವ್ಯವಹರಿಸುತ್ತಾರೆ. ಈ ಕೆಲಸ ನನಗೆ ಅಚ್ಚು ಮೆಚ್ಚಿನದಾಗಿದೆ.
13. ನೋಟರೈಜ್
ಲಭ್ಯವಿರುವ ಕೆಲಸ: ನೋಟರಿ ಆಪರೇಶನ್ಸ್ ಸ್ಪೆಷಲಿಸ್ಟ್ (ಅರೆಕಾಲಿಕ ಹಾಗೂ ಪೂರ್ಣಾವಧಿ)
14. ಅಟೊಮ್ಯಾಟಿಕ್
ಲಭ್ಯವಿರುವ ಕೆಲಸ: ಇವೆಂಟ್ಸ್ ರ್‍ಯಾಂಗ್ಲರ್, ಕೋಡ್ ರ್‍ಯಾಂಗ್ಲರ್, ಡೇಟಾ ಎಂಜಿನಿಯರ್, ಹ್ಯಾಪಿನೆಸ್ ಎಂಜಿನಿಯರ್, ಹ್ಯುಮನ್ ರಿಸೋರ್ಸ್ ರ್‍ಯಾಂಗ್ಲರ್, ಎಕ್ಸಲೆನ್ಸ್ ರ್‍ಯಾಂಗ್ಲರ್, ಬೆಂಬಲ ಕಾರ್ಯಾಚರಣೆ ನಿರ್ದೇಶಕ, ಜಾವಾ ಸ್ಕ್ರಿಪ್ಟ್ ಎಂಜಿನಿಯರ್, ಲೀಗಲ್ ಆಪರೇಶನ್ಸ್ ಎಂಜಿನಿಯರ್ ಇತ್ಯಾದಿ.
15. ಹೋಟೆಲ್ ಟುನೈಟ್ (HotelTonight)
ಲಭ್ಯವಿರುವ ಕೆಲಸ: ಗ್ರಾಹಕರ ಕುಂದು ಕೊರತೆ ಪ್ರತಿನಿಧಿ, ದ್ವಿಭಾಷಾ ಗ್ರಾಹಕರ ಕುಂದು ಕೊರತೆ ಪ್ರತಿನಿಧಿ.
16. ಎಲ್. ಎಲ್. ಬೀನ್ (L.L. Bean)
ಲಭ್ಯವಿರುವ ಕೆಲಸ: ಹೋಂ ಏಜೆಂಟ್, ಹೋಂ ಏಜೆಂಟ್ ಕಾಲ್ ಸೆಂಟರ್ ಪ್ರತಿನಿಧಿ, ಗ್ರಾಹಕ ಸೇವಾ ಹೋಂ ಏಜಂಟ್.
17. ಪಾರ್ಟನರ್ ಸೆಂಟ್ರಿಕ್ (PartnerCentric)
ಲಭ್ಯವಿರುವ ಕೆಲಸ: ವ್ಯವಹಾರ ವಿಶ್ಲೇಷಕ, ಆಂತರಿಕ ಬೆಂಬಲ ಪರಿಣಿತ, ಅಕೌಂಟ್ಸ್ ಮ್ಯಾನೇಜರ್.
More From GoodReturns

Gold Rate: ಬೆಂಗಳೂರಲ್ಲಿ ಚಿನ್ನದ ಬೆಲೆ ಏರಿಕೆ…24K/100 ಗ್ರಾಂ ಚಿನ್ನದಲ್ಲಿ ಬರೋಬ್ಬರಿ 5,500 ರೂ. ಏರಿಕೆ!

Bengaluru Airport: ಫ್ರಾಂಕ್ಫರ್ಟ್ ಕಾರ್ಗೋ ಜೊತೆ ಕೆಂಪೇಗೌಡ ಏರ್ಪೋರ್ಟ್ ಮೈತ್ರಿ… ಭಾರತ–ಯುರೋಪ್ ವ್ಯಾಪಾರಕ್ಕೆ ಹೊಸ ವೇಗ!

Karnataka Weather: ರಾಜ್ಯದಲ್ಲಿ ಮತ್ತಷ್ಟು ಹೆಚ್ಚಾಗಲಿದೆ ಬಿಸಿಲು! ಹೇಗಿದೆ ಇಂದಿನ ಹವಾಮಾನ?

Gold Rate: ಅಂತೂ ಇಳಿಕೆ ಹಾದಿಗೆ ಬಂದ ಚಿನ್ನದ ಬೆಲೆ…ಬೆಂಗಳೂರಿನಲ್ಲಿ ಇಂದಿನ ರೇಟ್ ಎಷ್ಟು?

Karnataka Weather: ಬಿಸಿಲಿನ ತಾಪಮಾನ ಇನ್ನಷ್ಟು ಹೆಚ್ಚಳ…ಕರ್ನಾಟಕದಲ್ಲಿ ಸದ್ಯಕ್ಕೆ ತಪ್ಪದು ಒಣಹವೆಯ ಕಾಟ!

Tata Groups: ಕರ್ನಾಟಕದಲ್ಲಿ ಟಾಟಾ ಸಂಸ್ಥೆ 2.9 ಬಿಲಿಯನ್ ಡಾಲರ್ ಹೂಡಿಕೆ…ಸಾವಿರಾರು ಉದ್ಯೋಗಿಗಳಿಗೆ ಗುಡ್ನ್ಯೂಸ್!

Karnataka Budget 2026: ಬಜೆಟ್ ನಂತರ ಗ್ಯಾರಂಟಿ ಯೋಜನೆಗಳು ಇರುತ್ತಾ? ರಾಜ್ಯದ ಜನರಿಗೆ ಇರುವ ನಿರೀಕ್ಷೆಗಳೇನು? ತಿಳಿಯಿರಿ

Bengaluru Gold Rate: ಬೆಂಗಳೂರಿನಲ್ಲಿ ಗಗನಕ್ಕೇರಿದ ಚಿನ್ನದ ಬೆಲೆ! ದಿಢೀರ್ 31,600 ರೂ. ಏರಿಕೆ

Iran-Israel War: ಇಸ್ರೇಲ್-ಅಮೆರಿಕ ವೈಮಾನಿಕ ದಾಳಿಯಲ್ಲಿ ಇರಾನ್ನ ಸರ್ವೋಚ್ಚ ನಾಯಕ ಅಯತೊಲ್ಲಾ ಅಲಿ ಖಮೇನಿ ಮರಣ!

High Speed Train: ಬೆಂಗಳೂರಿಗೆ ಮತ್ತೊಂದು ಹೈಸ್ಪೀಡ್ ರೈಲು! ಇನ್ಮೇಲೆ ಹೈದರಾಬಾದ್ಗೆ ಬರೀ 2 ಗಂಟೆ ಜರ್ನಿ

ಇರಾನ್ ಮೇಲೆ ಅಮೆರಿಕ-ಇಸ್ರೇಲ್ ದಾಳಿ: ಭಾರತೀಯ ಷೇರು ಮಾರುಕಟ್ಟೆ, ಚಿನ್ನ-ಬೆಳ್ಳಿ ಮತ್ತು ತೈಲ ಬೆಲೆ ಮೇಲೆ ತೀವ್ರ ಪರ



Click it and Unblock the Notifications