ಮುಂಬರಲಿರುವ ಜಿಯೋಫೋನ್ 2 ಫ್ಲಾಶ್ ಮಾರಾಟ ಸೆಪ್ಟಂಬರ್ 12 ರ ಬುಧವಾರದಂದು 12:00 ಕ್ಕೆ ಪ್ರಾರಂಭವಾಗುತ್ತದೆ ಎಂದು ಟೆಲಿಕಾಂ ಕಂಪನಿಯ jio.com ನಲ್ಲಿ ಮಾಹಿತಿ ಲಭ್ಯವಿದೆ.
ಜಿಯೋ ಫೋನ್ 2 ಲಾಂಚ್ ಮಾಡಿದಾಗಿನಿಂದ ಸದಾ ಸುದ್ದಿಯಲ್ಲಿದ್ದು, ಜಿಯೋಫೋನ್ 2 ಫ್ಲಾಶ್ ಸೇಲ್ ಘೋಷಿಸಿದ್ದು, ಸೆಪ್ಟಂಬರ್ 12ರಿಂದ ಆರಂಭವಾಗಲಿದೆ.
ಮುಂಬರಲಿರುವ ಜಿಯೋಫೋನ್ 2 ಫ್ಲಾಶ್ ಮಾರಾಟ ಸೆಪ್ಟಂಬರ್ 12 ರ ಬುಧವಾರದಂದು 12:00 ಕ್ಕೆ ಪ್ರಾರಂಭವಾಗುತ್ತದೆ ಎಂದು ಟೆಲಿಕಾಂ ಕಂಪನಿಯ jio.com ನಲ್ಲಿ ಮಾಹಿತಿ ಲಭ್ಯವಿದೆ. ಮುಖೇಶ್ ಅಂಬಾನಿ ಒಡೆತನದ ರಿಲಯನ್ಸ್ ಜಿಯೋ ಕಳೆದ ವರ್ಷ ಜಿಯೋಫೋನ್ ಅನ್ನು ಬಿಡುಗಡೆ ಮಾಡಿತು. ಇಂದಿನಿಂದ ಜಿಯೋ ಫೋನ್-2 ಫ್ಲಾಶ್ ಸೇಲ್ ಆರಂಭ, ಪಡೆಯೋದು ಹೇಗೆ?
ಜಿಯೋಫೋನ್ 2 ಬುಕ್ ಮಾಡೋದು ಹೇಗೆ?
ಮುಂಬರುವ ಫ್ಲಾಶ್ ಮಾರಾಟದಲ್ಲಿ ಜಿಯೋಫೋನ್ 2 ಅನ್ನು ಬುಕ್ ಮಾಡಲು ಇಲ್ಲಿ 12 ಹಂತಗಳಿವೆ:
1. ರಿಲಯನ್ಸ್ ಜಿಯೊ ವೆಬ್ಸೈಟ್ jio.com ಗೆ ಲಾಗ್ ಆನ್ ಮಾಡಬೇಕಾಗುತ್ತದೆ - ಮತ್ತು JioPhone2 ಅನ್ನು ಆಯ್ಕೆ ಮಾಡಿ.
2. ಅದರ ನಂತರ, ಬಳಕೆದಾರನು ತನ್ನ ಪಿನ್ ಕೋಡ್ ಅನ್ನು ನಮೂದಿಸಿ, ಚೆಕ್ಔಟ್ ಮಾಡಬೇಕು.
3. ಬಳಕೆದಾರ ಹೆಸರು, ಇಮೇಲ್ ID ಮತ್ತು ಮೊಬೈಲ್ ಸಂಖ್ಯೆಯಂತಹ ವೈಯಕ್ತಿಕ ವಿವರಗಳನ್ನು ಒದಗಿಸಬೇಕಾಗಿದೆ.
4. ಇದರ ನಂತರ, ಬಳಕೆದಾರನು ಬಯಸುವ ಪಾವತಿ ಆಯ್ಕೆಯನ್ನು ಆರಿಸಬೇಕಾಗುತ್ತದೆ.
5. ಬಳಕೆದಾರರು ರೂ. 2,999 ಮೊತ್ತವನ್ನು ಪಾವತಿಸಬೇಕು. ಇಮೇಲ್ ಅಥವಾ ಎಸ್ಎಂಎಸ್ ಮೂಲಕ ಆರ್ಡರ್ ಮಾಡಿರುವ ದೃಢೀಕರಣ ಸಂದೇಶ ನೀಡಲಾಗುತ್ತದೆ.
ರೀಚಾರ್ಜ್ ಯೋಜನೆಗಳು
ಜಿಯೋಫೋನ್ ಪ್ರಿಪೇಯ್ಡ್ ರೀಚಾರ್ಜ್ ಆಫರ್ಸ್
ರಿಲಯನ್ಸ್ ಜಿಯೋ ಜಿಯೋಫೋನ್ ಗಾಗಿ ಮೂರು ಪ್ರಿಪೇಯ್ಡ್ ಯೋಜನೆಗಳನ್ನು ನೀಡುತ್ತಿದೆ.
ರೀಚಾರ್ಜ್ ಯೋಜನೆಗಳು
1. ರೂ. 49
2. ರೂ. 99
3. ರೂ. 153
ಜಿಯೋಫೋನ್ ರೂ. 49 ಪ್ಲಾನ್
- ಈ ಯೋಜನೆಯಲ್ಲಿ ರಿಲಯನ್ಸ್ ಜಿಯೊ ಅನಿಯಮಿತ ಕರೆ ಮತ್ತು 1 GB ಡೇಟಾವನ್ನು ನೀಡುತ್ತದೆ. ಇದರ ಬಳಕೆ ನಂತರ 64 kbps ಗೆ ಕಡಿಮೆಯಾಗುತ್ತದೆ.
- 50 ಎಸ್ಎಂಎಸ್ ನೀಡುತ್ತದೆ.
- 28 ದಿನಗಳವರೆಗೆ ವ್ಯಾಲಿಡಿಟಿ ಹೊಂದಿರುತ್ತದೆ.
ಜಿಯೋಫೋನ್ ರೂ. 99 ಪ್ಲಾನ್
- ಈ ಯೋಜನೆ ಅಡಿಯಲ್ಲಿ, ರಿಲಯನ್ಸ್ ಜಿಯೊ ಅನಿಯಮಿತ ಕರೆ ಮತ್ತು 14 ಜಿಬಿ ಡೇಟಾವನ್ನು ನೀಡುತ್ತದೆ.
- ದೈನಂದಿನ ಡೇಟಾ ಮಿತಿ 0.5 ಜಿಬಿ ಆಗಿರುತ್ತದೆ. ಡೇಟಾ ಬಳಕೆಯ ನಂತರ 64 kbps ಕಡಿಮೆಯಾಗುತ್ತದೆ. - 300 ಎಸ್ಎಂಎಸ್ ಸೌಲಭ್ಯ ನೀಡುತ್ತದೆ.
- 28 ದಿನಗಳವರೆಗೆ ವ್ಯಾಲಿಡಿಟಿ ಹೊಂದಿರುತ್ತದೆ.
ಜಿಯೊ ಜಿಯೋಫೋನ್ ರೂ. 153 ಪ್ಲಾನ್
- ಈ ಯೋಜನೆಯಡಿಯಲ್ಲಿ, ರಿಲಯನ್ಸ್ ಜಿಯೊ ಅನಿಯಮಿತ ಕರೆ ಮತ್ತು 42 ಜಿಬಿ ಡೇಟಾವನ್ನು ನೀಡುತ್ತದೆ.
- ದೈನಂದಿನ ಡೆಟಾ ಮಿತಿ 1.5 ಜಿಬಿ ಆಗಿದ್ದು, ಇದರ ಬಳಕೆ ನಂತರ 64 kbps ಕಡಿಮೆಯಾಗುತ್ತದೆ.
- ದಿನಕ್ಕೆ 100 SMS ಗಳನ್ನು ಒದಗಿಸುತ್ತದೆ.
- ಇದು 28 ದಿನಗಳ ಮಾನ್ಯತೆ ಹೊಂದಿರುತ್ತದೆ.
ಜಿಯೋ ಫೋನ್ ೨ ವಿಶೇಷತೆ
ಹೊಸ ಜಿಯೋ ಫೋನ್ ೨ ನಲ್ಲಿ ಫೇಸ್ಬುಕ್, ವಾಟ್ಸಾಪ್, ಯುಟ್ಯೂಬ್ ಮತ್ತು ಗೂಗಲ್ ನಕ್ಷೆಗಳು ಲಭ್ಯವಾಗಲಿವೆ.
- 2.4 ಇಂಚಿನ ಸ್ಕ್ರೀನ್
- QWERTY ಕೀ ಪ್ಯಾಡ್
- 512 ಎಂಬಿ ರ್ಯಾಮ್, 4ಜಿಬಿ ಇಂಟರ್ನಲ್ ಮೆಮೊರಿ
- 2 ಮೆಗಾಪಿಕ್ಸಲ್ ಕ್ಯಾಮರಾ
- ವಿಡಿಯೋ ಕಾಲಿಂಗ್ ಗಾಗಿ 0.3 ಮೆಗಾಪಿಕ್ಸಲ್ ಸೆಲ್ಫಿ ಕ್ಯಾಮರಾ
- 2000 mAh ಬ್ಯಾಟರಿ


Click it and Unblock the Notifications