ಎಥೆನಾಲ್ ಘಟಕಗಳು ಆರಂಭಗೊಂಡ ನಂತರ ಪತ್ರಿ ಲೀಟರ್ ಪೆಟ್ರೋಲ್ ರೂ. ೫೫ ಹಾಗು ಡೀಸೆಲ್ ರೂ. ೫೦ ದರದಲ್ಲಿ ಸಿಗಲಿದೆ ಎಂದು ಕೇಂದ್ರ ಸಾರಿಗೆ ಸಚಿವ ನಿತಿನ್ ಗಡ್ಕರಿ ತಿಳಿಸಿದ್ದಾರೆ.
ದೇಶದಾದ್ಯಂತ ತೈಲ ದರಗಳು ಏರಿಕೆಯಾಗುತ್ತಿರುವ ಬಿಸಿ ಎಲ್ಲರಿಗೂ ಮುಟ್ಟಿದ್ದು, ಪೆಟ್ರೋಲ್, ಡೀಸೆಲ್ ಬೆಲೆ ಏರಿಕೆಯನ್ನು ವಿರೋಧಿಸಿ ನಿನ್ನೆ ಭಾರತ ಬಂಧ್ ಮಾಡಲಾಗಿತ್ತು. ಇಂದು ಕೂಡ ಯಥಾಪ್ರಕಾರ ತೈಲ ಬೆಲೆ ಏರಿಕೆ ಕಂಡಿದೆ.
ಎಥೆನಾಲ್ ಘಟಕಗಳು ಆರಂಭಗೊಂಡ ನಂತರ ಪತ್ರಿ ಲೀಟರ್ ಪೆಟ್ರೋಲ್ ರೂ. 55 ಹಾಗು ಡೀಸೆಲ್ ರೂ. 50 ದರದಲ್ಲಿ ಸಿಗಲಿದೆ ಎಂದು ಕೇಂದ್ರ ಸಾರಿಗೆ ಸಚಿವ ನಿತಿನ್ ಗಡ್ಕರಿ ತಿಳಿಸಿದ್ದಾರೆ.
ನಗರ ಪ್ರದೇಶಗಳಲ್ಲಿ ಹಾಗು ಕೃಷಿಯಿಂದ ಉತ್ಪತ್ತಿಯಾಗುವ ತ್ಯಾಜ್ಯಗಳನ್ನು ಬಳಸಿ ಘಟಕಗಳ ಮೂಲಕ ಇಂಧನ ಉತ್ಪತ್ತಿ ಮಾಡಲಾಗುತ್ತದೆ. 'ಚೀನಾ ಮತ್ತು ಯುಎಸ್ಎ ವ್ಯಾಪಾರ ಯುದ್ದ' ಅತೀಹೆಚ್ಚು ಅಪಾಯದಲ್ಲಿರುವ 10 ದೇಶಗಳು
ತ್ಯಾಜ್ಯಗಳಿಂದ ಇಂಧನ ಉತ್ಪತ್ತಿ
ಮುಂದುವರೆದ ತಂತ್ರಜ್ಞಾನದ ಫಲವಾಗಿ ತ್ಯಾಜ್ಯಗಳಿಂದ ಇಂಧನ ಉತ್ಪತ್ತಿ ಮಾಡಬಹುದು. ನಗರ ಪ್ರದೇಶಗಳಲ್ಲಿ ಉತ್ಪತ್ತಿಯಾಗುವ ತ್ಯಾಜ್ಯ ಹಾಗು ಕೃಷಿಯಿಂದ ಉತ್ಪತ್ತಿಯಾಗುವ ತ್ಯಾಜ್ಯಗಳನ್ನು ಬಳಸಿ ಘಟಕಗಳ ಮೂಲಕ ಇಂಧನ ಉತ್ಪತ್ತಿ ಮಾಡಲಾಗುತ್ತದೆ.
ತ್ಯಾಜ್ಯಗಳನ್ನು ಬಳಸಿ ಇಂಧನ ಉತ್ಪತ್ತಿ ಮಾಡುವ ಸಲುವಾಗಿ ದೇಶದಾದ್ಯಂತ ಐದು ಘಟಕಗಳನ್ನು ಸ್ಥಾಪಿಸಲಾಗುವುದು ಎಂದಿದ್ದಾರೆ.
ರೂ. 8 ಲಕ್ಷ ಕೋಟಿ ಮೌಲ್ಯದ ಇಂಧನ ಅಮದು
ಡಾಲರ್ ಎದುರು ರೂಪಾಯಿ ಮೌಲ್ಯ ಕುಸಿತ ಹಾಗು ಜಾಗತಿಕ ಮಾರುಕಟ್ಟೆಯ ಏರುಪೇರುಗಳಿಂದಾಗಿ ಇಂಧನ ಬೆಲೆ ಏರಿಕೆಯಾಗುತ್ತಿದೆ. ಪ್ರಸ್ತುತ ರೂ. ೮ ಲಕ್ಷ ಕೋಟಿ ಮೌಲ್ಯದ ಪೆಟ್ರೋಲ್, ಡೀಸೆಲ್ ಅನ್ನು ಅಮದು ಮಾಡಲಾಗುತ್ತಿದೆ.
ರೈತರು, ಬುಡಕಟ್ಟುಗಳ ಪಾತ್ರ
ರೈತರು, ಬುಡಕಟ್ಟುಗಳು, ಅರಣ್ಯವಾಸಿಗಳ ಸಹಾಯದಿಂದ ಎಥೆನಾಲ್ ಇಂಧನ ಉತ್ತಪತ್ತಿಗೆ ವಿಪುಲ ಅವಕಾಶಗಳಿವೆ ಎಂದು ಗಡ್ಕರಿ ಹೇಳಿದ್ದಾರೆ.
ಕೇಂದ್ರ ಸರ್ಕಾರ ಪೆಟ್ರೋಲ್ ಮತ್ತು ಡೀಸೆಲ್ ಮೇಲಿನ ಅಬಕಾರಿ ಸುಂಕವನ್ನು ಕಡಿತಗೊಳಿಸಿದರೆ ಅದು ಹಣಕಾಸಿನ ಕೊರತೆಯ ಮೇಲೆ ಪರಿಣಾಮ ಬೀರಲಿದೆ.
ತೈಲ ಬೆಲೆ ಏರಿಕೆಗೆ ಕಾರಣ
ಜಾಗತಿಕ ಮಾರುಕಟ್ಟೆಯಲ್ಲಿ ಕಚ್ಚಾ ತೈಲ ಬೆಲೆ ಏರಿಕೆ ಹಾಗು ಡಾಲರ್ ಎದುರು ರೂಪಾಯಿ ಮೌಲ್ಯಗಳ ಕುಸಿತ ಪೆಟ್ರೋಲ್ ಡೀಸೆಲ್ ದರಗಳ ಮೇಲೆ ಭಾರೀ ಪರಿಣಾಮ ಬೀರಿದೆ. ಜಾಗತಿಕ ಮಾರುಕಟ್ಟೆಯಲ್ಲಿನ ಪ್ರಭಾವದಿಂದಾಗಿ ತೈಲ ಬೆಲೆಗಳು ಏರಿಳಿತಕ್ಕೆ ಒಳಗಾಗುತ್ತವೆ.
More From GoodReturns

ICC T20 World Cup: ವಿಶ್ವಕಪ್ ಗೆದ್ದ ಭಾರತಕ್ಕೆ ಬಿಸಿಸಿಐನಿಂದ ಗುಡ್ ನ್ಯೂಸ್; 131 ಕೋಟಿ ಬಹುಮಾನ ಘೋಷಣೆ

ದಿನವೂ 500 ರೂ. ಖರ್ಚು ಮಾಡ್ತಿದ್ದೀರಾ? ನಿಮ್ಮ ಭವಿಷ್ಯದ ಲಕ್ಷಗಳನ್ನು ನೀವೇ ಕಳೆದುಕೊಳ್ಳುತ್ತಿದ್ದೀರಾ!

IPL 2026: ಕೊನೆಗೂ ಐಪಿಎಲ್ 2026ರ ಆರಂಭದ ದಿನಾಂಕ ಬಹಿರಂಗ! ಯಾವಾಗ ಗೊತ್ತಾ?

Bengaluru 2nd Airport: ಬೆಂಗಳೂರು 2ನೇ ವಿಮಾನ ನಿಲ್ದಾಣ ಯೋಜನೆಗೆ ಹೊಸ ಶಕ್ತಿ…ಸಿಎಂ ಸಿದ್ದರಾಮಯ್ಯ ಮಹತ್ವದ ಘೋಷಣೆ!

LPG Gas Helpline Number: ದೇಶದಲ್ಲಿ ಎಲ್ಪಿಜಿ ಸಿಲಿಂಡರ್ ಕೊರತೆ; ತುರ್ತು ಅಗತ್ಯಕ್ಕೆ ಇಲ್ಲಿದೆ ಸಹಾಯವಾಣಿ

Bengaluru 2nd Airport: ಬೆಂಗಳೂರು 2ನೇ ಏರ್ಪೋರ್ಟ್ಗೆ ಇದೇ ಸ್ಥಳ ಬೆಸ್ಟ್; ಉದ್ಯಮಿ ಕೊಟ್ರು ಬಿಗ್ ಟ್ವಿಸ್ಟ್

Gold Rate Bengaluru: ಚಿನ್ನದ ಬೆಲೆಯಲ್ಲಿ ಜಿಗಿತ.. ಇಂದು 24K, 22K, 18K ಬೆಲೆ ಎಷ್ಟು? ಇಲ್ಲಿದೆ ಸಂಪೂರ್ಣ ವಿವರ

Bengaluru Metro: ಗ್ರೀನ್ ಲೈನ್ ಮೆಟ್ರೋ ಪ್ರಯಾಣಿಕರಿಗೆ ಸಿಹಿಸುದ್ದಿ! ಮತ್ತೊಂದು ರೈಲಿನ ಆಗಮನ

Karnataka Weather: ಬಿಸಿಲಿನ ತಾಪಮಾನ ಇನ್ನಷ್ಟು ಹೆಚ್ಚಳ…ಕರ್ನಾಟಕದಲ್ಲಿ ಸದ್ಯಕ್ಕೆ ತಪ್ಪದು ಒಣಹವೆಯ ಕಾಟ!

ಮತ್ತೆ ಭಾರತ-ಪಾಕ್ ನಡುವೆ ಯುದ್ಧದ ಛಾಯೆ..ಭುಗಿಲೆದ್ದ 'ಸಿಂಧೂ ನದಿ' ವಿವಾದ, ಬಿಲಾವಲ್ ಭುಟ್ಟೋ ಕಿಡಿ

Bengaluru Metro: ಬೆಂಗಳೂರು ಮೆಟ್ರೋ 3ನೇ ಹಂತ ಮತ್ತೆ ವಿಳಂಬ, ಯಾವ ವರ್ಷಕ್ಕೆ ಈ ಸೇವೆ ಸಿಗಲಿದೆ ತಿಳಿಯಿರಿ



Click it and Unblock the Notifications