ಗ್ರಾಹಕರಿಗೆ ಸಿಹಿಸುದ್ದಿ! ಸದ್ಯಕ್ಕೆ ಟಿವಿ, ಫ್ರಿಡ್ಜ್ ಬೆಲೆ ಏರಿಕೆ ಇಲ್ಲ, ಯಾಕೆ ಗೊತ್ತಾ?

ಒಂದು ಕಡೆ ಡಾಲರ್ ಎದುರು ರೂಪಾಯಿ ಮೌಲ್ಯ ಸತತ ಕುಸಿಯುತ್ತಿದೆ, ಇನ್ನೊಂದೆಡೆ ಪೆಟ್ರೋಲ್ ಡೀಸೆಲ್ ಬೆಲೆ ಏರುಮುಖವಾಗಿ ಸಾಗುತ್ತಿದೆ, ಮತ್ತೊಂದೆಡೆ ಹಬ್ಬಗಳ ಪ್ರಾರಂಭ..! ಡಾಲರ್ ಎದುರು ರೂಪಾಯಿ ಮೌಲ್ಯ 72 ರೂಪಾಯಿ ದಾಟಿದೆ.

ಒಂದು ಕಡೆ ಡಾಲರ್ ಎದುರು ರೂಪಾಯಿ ಮೌಲ್ಯ ಸತತ ಕುಸಿಯುತ್ತಿದೆ, ಇನ್ನೊಂದೆಡೆ ಪೆಟ್ರೋಲ್ ಡೀಸೆಲ್ ಬೆಲೆ ಏರುಮುಖವಾಗಿ ಸಾಗುತ್ತಿದೆ, ಮತ್ತೊಂದೆಡೆ ಹಬ್ಬಗಳ ಪ್ರಾರಂಭ..! ಡಾಲರ್ ಎದುರು ರೂಪಾಯಿ ಮೌಲ್ಯ 72 ರೂಪಾಯಿ ದಾಟಿದೆ.

ಇವುಗಳೇನಿದ್ದರೂ ಸಹ ಗೃಹೋಪಯೋಗಿ ಉಪಕರಣಗಳಾದ ಫ್ರಿಜ್ ಹಾಗೂ ಟಿವಿಗಳ ಬೆಲೆ ಏರಿಕೆ ಆಗಿಲ್ಲ. ಸದ್ಯಕ್ಕೆ ಇವುಗಳ ಬೆಲೆ ಹೆಚ್ಚಳವಾಗುವ ಸಾಧ್ಯತೆ ಕೂಡ ಇಲ್ಲ.

ಶೇ. 5ರಷ್ಟು ಹೆಚ್ಚಳ

ಶೇ. 5ರಷ್ಟು ಹೆಚ್ಚಳ

ಸತತವಾಗಿ ಡಾಲರ್ ಎದುರು ರೂಪಾಯಿ ಮೌಲ್ಯ ಕುಸಿಯುತ್ತಿರುವುದರಿಂದ ಕಳೆದ ತಿಂಗಳದಲ್ಲಿ ಗೃಹೋಪಯೋಗಿ ವಸ್ತುಗಳ ಬೆಲೆಯಲ್ಲಿ ಶೇ. 5ರಷ್ಟು ಹೆಚ್ಚಳ ಮಾಡಲಾಗಿತ್ತು. ರೆಫ್ರಿಜರೇಟರ್, ವಾಷಿಂಗ್ ಮೆಷಿನ್, ಮತ್ತಿತರ ಗೃಹೋಪಯೋಗಿ ವಸ್ತುಗಳ ಮೇಲಿನ ಜಿಎಸ್‍ಟಿ ದರವನ್ನು ಶೇ. 28 ರಿಂದ ಶೇ. 18ಕ್ಕೆ ಇಳಿಸಲಾಗಿದೆ.

ಕೇರಳ ವಿಕೋಪ ಪ್ರಭಾವ

ಕೇರಳ ವಿಕೋಪ ಪ್ರಭಾವ

ಕೇರಳದಲ್ಲಿನ ಪ್ರಕೃತಿ ವಿಕೋಪವು ಅಲ್ಲಿನ ವಹಿವಾಟಿನ ಮೇಲೆ ಭಾರೀ ಏಟು ನೀಡಿದೆ. ಕೇರಳದಲ್ಲಿನ ಪ್ರಕೃತಿ ವಿಕೋಪದಿಂದಾಗಿ ಓಣಂ ಸಮಯದ ವ್ಯಾಪಾರ ನಷ್ಟ ಕಂಡಿದೆ. ಕಂಪನಿಗಳು ಕೂಡ ಕಚ್ಚಾ ಪದಾರ್ಥಗಳ ಆಮದಿಗೆ ಡಾಲರ್ ಬೆಲೆ ರೂ. 72 ಇರುವಾಗಲೇ ಆರ್ಡರ್ ಕೊಟ್ಟಿವೆ.

ಕಂಪನಿಗಳ ನಿರ್ಧಾರ

ಕಂಪನಿಗಳ ನಿರ್ಧಾರ

ಡಾಲರ್ ಎದುರು ರೂಪಾಯಿ ಬೆಲೆ 75 ದಾಟಿದರೂ ಅಥವಾ ಕೊನೆ ಪಕ್ಷ ದೀಪಾವಳಿ ಮುಗಿಯುವವರೆಗೆ ಈ ಗೃಹೋಪಯೋಗಿ ವಸ್ತುಗಳ ಬೆಲೆ ಹೆಚ್ಚಿಸದಿರಲು ಕಂಪನಿಗಳು ನಿರ್ಧರಿಸಿವೆ. ರೂಪಾಯಿ ಮೌಲ್ಯ ಕುಸಿತದ ಮೇಲೆ ಉದ್ಯಮ ಕಣ್ಣಿಟ್ಟಿದ್ದು, ಯಾವುದೇ ವ್ಯತಿರಿಕ್ತ ಪರಿಣಾಮ ಬೀರದಂತೆ ನೋಡಿಕೊಳ್ಳಲಾಗುವುದು ಎಂದು ಗೋದ್ರೆಜ್ ವ್ಯವಹಾರ ಮುಖ್ಯಸ್ಥ ಕಮಲ್ ನಂದಿ ಹೇಳಿದ್ದಾರೆ.

More From GoodReturns

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+