For Quick Alerts
ALLOW NOTIFICATIONS  
For Daily Alerts

ದೇನಾ ಬ್ಯಾಂಕ್, ಬರೋಡಾ ಬ್ಯಾಂಕ್ ಮತ್ತು ವಿಜಯ ಬ್ಯಾಂಕ್ ವಿಲೀನ, ಕಾರಣ-ಪರಿಣಾಮಗಳೇನು?

ಸರ್ಕಾರಿ ಸ್ವಾಮ್ಯದ ಬ್ಯಾಂಕುಗಳಾದ ದೇನಾ ಬ್ಯಾಂಕ್, ಬರೋಡಾ ಬ್ಯಾಂಕ್ ಮತ್ತು ವಿಜಯ ಬ್ಯಾಂಕ್ ಗಳನ್ನು ಸರ್ಕಾರ ವಿಲೀನಗೊಳಿಸಲು ಮುಂದಾಗಿದೆ. ಇವುಗಳ ವಿಲೀನದ ನಂತರ ಮೂರನೇ ಅತಿದೊಡ್ಡ ಬ್ಯಾಂಕ್ ಆಗಿ ರೂಪಗೊಳ್ಳಲಿವೆ.

By Lekhaka
|

ಕೇಂದ್ರ ಸರ್ಕಾರ ಕಳೆದ ವರ್ಷ ಐದು ಸಹವರ್ತಿ ಬ್ಯಾಂಕ್ ಗಳನ್ನು ಎಸ್ಬಿಐನಲ್ಲಿ ವಿಲೀನಗೊಳಿಸಿದಂತೆ, ಇದೀಗ ಇನ್ನೊಂದು ವಿಲೀನಕ್ಕೆ ಮುಂದಾಗಿದೆ.

 

ಸರ್ಕಾರಿ ಸ್ವಾಮ್ಯದ ಬ್ಯಾಂಕುಗಳಾದ ದೇನಾ ಬ್ಯಾಂಕ್, ಬರೋಡಾ ಬ್ಯಾಂಕ್ ಮತ್ತು ವಿಜಯ ಬ್ಯಾಂಕ್ ಗಳನ್ನು ಸರ್ಕಾರ ವಿಲೀನಗೊಳಿಸಲು ಮುಂದಾಗಿದೆ. ಇವುಗಳ ವಿಲೀನದ ನಂತರ ಮೂರನೇ ಅತಿದೊಡ್ಡ ಬ್ಯಾಂಕ್ ಆಗಿ ರೂಪಗೊಳ್ಳಲಿವೆ. ದೇನಾ ಬ್ಯಾಂಕ್, ಬರೋಡಾ ಬ್ಯಾಂಕ್ ಮತ್ತು ವಿಜಯ ಬ್ಯಾಂಕ್ ವಿಲೀನ ಪ್ರಕ್ರಿಯೆಯನ್ನು ಕೇಂದ್ರ ಹಣಕಾಸು ಸಚಿವ ಅರುಣ್ ಜೇಟ್ಲಿ ಪ್ರಕಟಿಸಿದ್ದಾರೆ. ಹದಗೆಡುತ್ತಿರುವ ಬ್ಯಾಂಕಿಂಗ್ ವ್ಯವಸ್ಥೆಯನ್ನು ಉಳಿಸಿಕೊಳ್ಳಲು ಭಾರತ ಮಾಡಬೇಕಾದದ್ದೇನು?

ವಿಲೀನದ ಪರಿಣಾಮ

ವಿಲೀನದ ಪರಿಣಾಮ

ಈ ಮೂರು ಬ್ಯಾಂಕುಗಳ ವಿಲೀನದಿಂದ ಬ್ಯಾಂಕ್‌ಗಳು ಸೃದೃಢಗೊಂಡು, ಸಾಲ ನೀಡುವ ಸಾಮರ್ಥ್ಯ‌ ಹೆಚ್ಚಾಗಲಿದೆ. ಆರ್ಥಿಕ ಪ್ರಗತಿ ಸ್ಥಿರತೆ ಹಾಗು ವೃದ್ಧಿಗೆ ವಿಲೀನ ಪೂರಕವಾಗಲಿದೆ. ಬ್ಯಾಂಕಿಂಗ್‌ ಕಾರ್ಯಾಚರಣೆ ಹೆಚ್ಚಿಸಲಿದೆ. ಜತೆಗೆ ಖಾಸಗಿ ಸ್ವಾಮ್ಯದ ಬ್ಯಾಂಕುಗಳಿಗೆ ಪೈಪೋಟಿ ನೀಡಲು ಇದು ಸಹಕಾರಿಯಾಗಲಿದೆ.

ವಿಲೀನದ ಕಾರಣ

ವಿಲೀನದ ಕಾರಣ

ದೇಶದ ಬ್ಯಾಂಕುಗಳು ಆರ್ಥಿಕ ನಷ್ಟಕ್ಕೆ ಸಿಲುಕಿದ್ದು, ವಸೂಲಾದಿಂದ ತೀವ್ರ ಒತ್ತಡದಲ್ಲಿವೆ.
ಕ್ರಮೇಣ ಬ್ಯಾಂಕಿಂಗ್‌ ವಲಯದಲ್ಲಿ ಸಾಲ ನೀಡುವ ಸಾಮರ್ಥ್ಯ‌ ಕಡಿಮೆಯಾಗುತ್ತಿದೆ. ಕಾರ್ಪೊರೇಟ್‌ ಕ್ಷೇತ್ರದ ಹೂಡಿಕೆಗಳ ಮೇಲೆ ಪ್ರತಿಕೂಲ ಪರಿಣಾಮ ಬೀರುತ್ತಿದೆ.

ವಿಲೀನದ ನಂತರ ಉದ್ಯೋಗಿಗಳ ಗತಿ?
 

ವಿಲೀನದ ನಂತರ ಉದ್ಯೋಗಿಗಳ ಗತಿ?

ದೇನಾ ಬ್ಯಾಂಕ್, ಬರೋಡಾ ಬ್ಯಾಂಕ್ ಮತ್ತು ವಿಜಯ ಬ್ಯಾಂಕ್ ವಿಲೀನ ಪ್ರಕ್ರಿಯೆ ಮುಗಿದ ನಂತರ ಉದ್ಯೋಗಿಗಳಿಗೆ ಏನಾದರೂ ತೊಂದರೆ ಇದೆಯೇ ಎಂಬ ಪ್ರಶ್ನೆ ಮೂಡುವುದು ಸಹಜ. ಆದರೆ ಪ್ರಸ್ತುತ ಇರುವ ನಿಯಮಗಳೇ ವಿಲೀನದ ನಂತರ ಮುಂದುವರೆಯಲಿವೆ. ಉದ್ಯೋಗಿಗಳಿಗೆ ಯಾವುದೇ ತೊಡಕುಗಳಿರುವುದಿಲ್ಲ ಎಂದು ಸರ್ಕಾರ ಹೇಳಿದೆ.

Read more about: banking money sbi finance news
English summary

Bank of Baroda, Vijaya Bank, Dena Bank Merger, What are the Reasons?

The government announced its merger with Vijaya Bank, Bank of Baroda and Dena Bank.
Story first published: Tuesday, September 18, 2018, 11:53 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X