ಹದಗೆಡುತ್ತಿರುವ ಬ್ಯಾಂಕಿಂಗ್ ವ್ಯವಸ್ಥೆಯನ್ನು ಉಳಿಸಿಕೊಳ್ಳಲು ಭಾರತ ಮಾಡಬೇಕಾದದ್ದೇನು?

Subscribe to GoodReturns Kannada
For Quick Alerts
ALLOW NOTIFICATIONS  
For Daily Alerts

  ದೇಶದ ಮತ್ತು ಜನಸಾಮಾನ್ಯರ ಅಭ್ಯುದಯ ಮತ್ತು ಬೆಳವಣಿಗೆಗೆ ಪ್ರತ್ಯಕ್ಷವಾಗಿ, ಪರೋಕ್ಷವಾಗಿ ಬ್ಯಾಂಕಿಂಗ್ ವ್ಯವಸ್ಥೆ ಬೆನ್ನೆಲುಬಾಗಿದೆ.

  ಆದರೆ, ಕುಸಿಯುವುದರಲ್ಲಿದ್ದ ಭಾರತೀಯ ಬ್ಯಾಂಕಿಂಗ್ ವ್ಯವಸ್ಥೆ ಕೇವಲ ಕೂದಲೆಳೆಯಲ್ಲಿ ನುಣುಚಿಕೊಂಡಿದೆ.
  ಸರ್ಕಾರವು ಬ್ಯಾಂಕ್ ಕ್ರೆಡಿಟ್ ಕಡೆ ಲಕ್ಷ ಹರಿಸಿದಾಗ ಆರ್ಥಿಕ ಬೆಳವಣಿಗೆಗೆ ದಾರಿಯಾಗಿದ್ದು ಒಂದು ಕಡೆಯಾದರೆ, ಇನ್ನೊಂದೆಡೆ ಉಳಿತಾಯಕ್ಕಾಗಿ ಎಲ್ಲರನ್ನೂ ಬ್ಯಾಂಕ್ ಕಡೆಗೆ ತಳ್ಳಲಾಯಿತು. ಎಲ್ಲ ರೀತಿಯಿಂದಲೂ ಪಿ.ಎನ್.ಬಿ ಮತ್ತು ರೋಟೊಮ್ಯಾಕ್ ಹಗರಣಗಳು ಭಾರತದ ಬ್ಯಾಂಕ್ ವ್ಯವಹಾರವನ್ನು ಅಡ್ಡ ರಸ್ತೆಗಳ ಮಧ್ಯೆ ತಂದು ನಿಲ್ಲಿಸುವಂತಹ ಪರಿಸ್ಥಿತಿಗೆ ನೂಕಿದೆ. ಭಾರತಕ್ಕೆ ಇನ್ಯಾವ ಆಯ್ಕೆ ಇಲ್ಲ. ಬ್ಯಾಂಕುಗಳು ಸಾಮಾನ್ಯ ವ್ಯಕ್ತಿಗಳಿಗೆ ವಿಶ್ವಾಸಾರ್ಹವಾಗಿರಲು ವಿಧಿಯಿಲ್ಲದೆ, ಬ್ಯಾಂಕುಗಳು ಮತ್ತು ಉದ್ಯಮಗಳಿಗೆ ಪೂರ್ಣವಾದ ಹೊಸ ಹಣಕಾಸು ಪಾರದರ್ಶಕ ವಾಸ್ತುಶಿಲ್ಪವನ್ನು ಪರಿಚಯಿಸಬೇಕಾಗಿ ಬಂದಿದೆ.

   

  ಕ್ರೆಡಿಟ್ ಚಾಲಿತ ಬೆಳವಣಿಗೆ ವ್ಯವಸ್ಥೆಯನ್ನು ರಚಿಸುವಲ್ಲಿ ಬ್ಯಾಂಕನ್ನು ಅವಲಂಬಿಸುವ ಜನರಿಗೆ ನ್ಯಾಯವನ್ನು ಖಚಿತಪಡಿಸಿಕೊಳ್ಳುವ ಸಲುವಾಗಿ ನಾವು ಮೂರು ಪ್ರಶ್ನೆಗಳಿಗೆ ಉತ್ತರವನ್ನು ಕಂಡುಕೊಳ್ಳಬೇಕು. 'ಬ್ಲಾಕ್‌ಚೈನ್ ವೋಟಿಂಗ್ ಸಿಸ್ಟಂ' ರಾಜಕೀಯ ವ್ಯವಸ್ಥೆಯನ್ನು ನಾಶಪಡಿಸಲಿದೆ! ಯಾಕೆ ಗೊತ್ತೆ?

  1. ಕಟ್ಟುನಿಟ್ಟಿನ ನಿಯಮಗಳು

  ನಮ್ಮಲ್ಲಿ ಸಾರ್ವಜನಿಕ ಈಕ್ವಿಟಿ ಹೊಂದಿರುವ ಕಂಪನಿಗಳಿಗೆ ಮಾತ್ರ ಅತಿ ಕಟ್ಟುನಿಟ್ಟಿನ ಪಾರದರ್ಶಕತೆಯ ನಿಯಮಗಳಿವೆ. ಆದರೆ ಸಾಲದ ಹಣಕಾಸು ಖಾಸಗಿ ಸಂಸ್ಥೆಗಳು ಮಾತ್ರ ಆರ್ಥಿಕ ಮುಕ್ತತೆಗೆ ಸುಲಭವಾಗಿ ಹೋಗಲು ಅವಕಾಶವು ಹೇಗಿದೆ?

   

   

  2. ಸಾರ್ವತ್ರಿಕ ಹಣಕಾಸಿನ ಬಹಿರಂಗಪಡಿಸುವಿಕೆ

  ಸಾಲದ ಮೂಲಕ ವ್ಯವಹಾರವು ಆರ್ಥಿಕತೆ ಹೊಂದಿದೆಯಾ ಅಥವಾ ಸಾರ್ವಜನಿಕ ಇಕ್ವಿಟಿ ಇಂದ ಆರ್ಥಿಕತೆ ಹೊಂದಿದೆಯಾ ಎಂಬುದನ್ನೂ ಪರಿಗಣನೆಗೆ ತೆಗೆದುಕೊಳ್ಳದೆ, ಕಂಪೆನಿಗಳು ಮತ್ತು ಸಂಸ್ಥೆಗಳಿಗೆ ಸಾರ್ವತ್ರಿಕ ಹಣಕಾಸಿನ ಬಹಿರಂಗಪಡಿಸುವಿಕೆಯ ನಿಯಮಗಳನ್ನು ನಾವೇಕೆ ಹೊಂದಿರಬಾರದು?

  3. ಪಾರದರ್ಶಕತೆ

  ಹಣಕಾಸಿನ ಪಾರದರ್ಶಕತೆಗೆ ಸಂಬಂಧಿಸಿದಂತೆ ಬ್ಯಾಂಕ್ ಠೇವಣಿದಾರರನ್ನು ಮತ್ತು ಗ್ರಾಹಕರನ್ನು ಷೇರುದಾರರು ಮತ್ತು ಹೂಡಿಕೆದಾರ ರೊಂದಿಗೆ ಸರಾಸರಿ ಹೇಗೆ ತರಬಹುದು?

  ಈ ಪ್ರಶ್ನೆಗಳಿಗೆ ಉತ್ತರಗಳು ನಡೆಯುತ್ತಿರುವ ಪಿ ಎನ್ ಬಿ ಮತ್ತು ರೋಟೊಮ್ಯಾಕ್ ಹಗರಣಗಳ ಒಡಲರಿಮೆಯಲ್ಲಿದೆ. ಬನ್ನಿ ನೋಡೋಣ.

  ಪಾರದರ್ಶಕತೆ ಹೇಗೆ ಕಾರ್ಯನಿರ್ವಹಿಸಿದೆ

  ಭಾರತದ ಎರಡನೆಯ ಅತಿ ದೊಡ್ಡ ಸಾರ್ವಜನಿಕ ಬ್ಯಾಂಕ್ ನಲ್ಲಿ ನಡೆದ ಮಹಾ ವಂಚನೆಯ ಬಗ್ಗೆ ಮೊದಲ ಮಾಹಿತಿಯು ಅಸಾಮಾನ್ಯ ಚಾನೆಲ್ ಮೂಲಕ ಹೊರ ಬಂದಿದ್ದನ್ನು ನಮ್ಮಲ್ಲಿ ಎಷ್ಟು ಜನ ಗಮನಿಸಿದ್ದೇವೆ? ಸರ್ಕಾರವು ಭ್ರಷ್ಟಾಚಾರದ ವಿರುದ್ಧ ಶೂನ್ಯ- ಸಹಿಷ್ಣುತೆಗೆ ಬದ್ಧವಾಗಿದ್ದರೂ ನಿಜಾಂಶವೇನೂ ಬದಲಾಗಲಿಲ್ಲ. ಮೋಸಕ್ಕೆ ವಿರುದ್ಧವಾಗಿ ತೆಗೆದುಕೊಂಡ ಕ್ರಮವೂ ಮೊದಲ ಎಫ್.ಐ.ಆರ್ ಜನವರಿ 31 ಆದಮೇಲೆ, ಶುರುವಾದದ್ದೇ 15 ದಿನಗಳ ನಂತರ ಮತ್ತು ನೀರವ್ ಮೋದಿ ಹಾಗೂ ಮೆಹುಲ್ ಚೋಕ್ಸಿ ಭಾರತದಿಂದ ಪಲಾಯನ ಮಾಡಿದರು.

  ಈ ಹಗರಣವನ್ನು ಮುಚ್ಚಿ ತೆರೆ ಎಳೆದಿದ್ದು ಸ್ಟಾಕ್ ಮಾರುಕಟ್ಟೆ. ಫೆಬ್ರವರಿ 14ರಂದು ಎಸ್.ಇ.ಬಿ.ಐ (ಸೆಕ್ಯುರಿಟೀಸ್ ಅಂಡ್ ಎಕ್ಸ್ ಚೇಂಜ್ ಬೋರ್ಡ್ ಆಫ್ ಇಂಡಿಯಾ) ಸ್ಥಾಪಿಸಿದ ಬಹಿರಂಗ ನಿಯಮಗಳ ಪ್ರಕಾರ ಪಿ. ಎನ್. ಬಿ ಬಾಂಬೆ ಸ್ಟಾಕ್ ಎಕ್ಸ್ಚೇಂಜ್ ಗೆ ಕೊಟ್ಟಿರುವ ಮಾಹಿತಿ ಏನೆಂದರೆ ಮುಂಬೈನಲ್ಲಿ ತನ್ನ ಶಾಖೆಯೊಂದರ ಲ್ಲಿ 1771.69 ಡಾಲರ್ ಮಿಲಿಯನ್ (11,000ಕೋಟಿ ರೂಪಾಯಿ) ವಂಚನೆಯ ಮತ್ತು ಅನಧಿಕೃತ ವಹಿವಾಟನ್ನು ಪತ್ತೆ ಮಾಡಿದೆ ಎಂದು. ಈ ಪ್ರಕಟಣೆಯ ಅನುಸಾರವಾಗಿ ‌ಪಿ. ಎನ್. ಬಿ ಯ ಷೇರಿನ ಬೆಲೆ 10% ಕೆಳಗೆ ಬಿದ್ದಿತು. ಆಗಲೇ ಮೈಮರೆತು ನಿದ್ದೆ ಮಾಡುತ್ತಿದ್ದ ಸರ್ಕಾರ ಮತ್ತು ನಿಯಂತ್ರಕರು ಎಚ್ಚರಗೊಂಡಿದ್ದು.

   

  ಅಪಾರದರ್ಶಕತೆಯ ಮೋಸ ಹೇಗೆ?

  ರೋಟೊಮ್ಯಾಕ್ ಗ್ಲೋಬಲ್ ಗ್ರೂಪ್ ಎನ್. ಪಿ .ಎ ಪ್ರಕರಣವನ್ನು ಮುಂದಿಟ್ಟು ಕೊಳ್ಳೋಣ .

  ಸಾಲ ಮರುಪಾವತಿಯ ಮೇಲೆ ಕಂಪೆನಿ ತಪ್ಪಿತಸ್ಥನಾದ ಅಥವಾ ವಂಚನೆಗೊಳಗಾದ 7ತಿಂಗಳ ನಂತರ ಕಂಪೆನಿಯ ವಿರುದ್ಧ ಅಲಹಾಬಾದ್ ಸಾಲ ಪುನರ್ವಶ ನ್ಯಾಯಮಂಡಳಿ Debt Recovery Tribunal's(DRT)ಆದೇಶ ಹೊರಡಿಸಿದ ಮೇಲೆ ಸಿಬಿಐ(CBI) ಮತ್ತು ಇಡಿ (ED)(ಅಕ್ಟೋಬರ್ 2015) ಸಕ್ರಿಯವಾಗಿತ್ತು ಇದು ಎಚ್ಚೆತ್ತುಕೊಳ್ಳಲು ಎರಡು ವರ್ಷಗಳನ್ನು ಬೇಕಿತ್ತಾ!!!

  ಪ್ರಕರಣದ ಗುಣಮಟ್ಟಕ್ಕೆ ಹೋಗದೆ ಸಿಗಬಹುದಾದ ಸಾದಾ ಉತ್ತರವೆಂದರೆ ಭಾರತೀಯ ಹಣಕಾಸು ವ್ಯವಸ್ಥೆಯ ಪಾರದರ್ಶಕತೆಯೇ ಈ ವಿಳಂಬಕ್ಕೆ ಕಾರಣವಾಗಿದೆ ಎಂದು.

   

  ಪಾರದರ್ಶಕತೆಯ ಎರಡು ಲೋಕಗಳು

  ಪಿ ಎನ್ ಬಿ ಮತ್ತು ರೋಟೊಮ್ಯಾಕ್ ಭಾರತದ ಆರ್ಥಿಕ ಪಾರದರ್ಶಕತೆಯ ವಿರುದ್ಧದ ಮುಖಗಳಾಗಿವೆ.
  ಸ್ಟಾಕ್ ಮಾರುಕಟ್ಟೆಯಲ್ಲಿ ಪಟ್ಟಿ ಮಾಡಲಾದ ಕಂಪನಿಗಳಿಗೆ ಸೂಚಿಸಲಾದ ಕಠಿಣ ಶಿಸ್ತಿನ ಬಹಿರಂಗಪಡಿಸುವಿಕೆಯ ನಿಯಮಗಳು ಪಿ ಎನ್ ಬಿ ಪಟ್ಟಿಯಲ್ಲಿರುವ ಕಂಪನಿ ಯನ್ನು ಎರಡು ವಾರಗಳ ಅಲೆದಾಟದ ನಂತರ ಎರಡನೇ ಎಫ್ಐಆರ್ ಇನ್ನೂ ದಾರಿಯಲ್ಲಿರುವಾಗಲೇ ಅದರ ಪೂರ್ಣ ಪ್ರಮಾಣದಲ್ಲಿ ವಿಪತ್ತನ್ನು ಬಹಿರಂಗಪಡಿಸಲು ಕ್ರಮ ನಡೆಯುತ್ತಿದೆ.

  ಆದರೂ ರೋಟೊಮ್ಯಾಕ್ ಪೂರ್ವನಿಯೋಜಿತ ಪ್ರಕರಣವಾಗಿ ಬ್ಯಾಂಕುಗಳು ತಪ್ಪಿತಸ್ಥರ ಬಗ್ಗೆ ಗುಪ್ತವಾದ ಮಾಹಿತಿಯನ್ನು ಇರಿಸಿಕೊಳ್ಳಲು ಅನುಮತಿಸಲಾಗಿದೆ. ಅವರು ಎನ್ ಪಿ ಎ ಗಳ ಪರಿಮಾಣವನ್ನು ಮಾತ್ರ ಬಹಿರಂಗಪಡಿಸುತ್ತಾರೆ. ಎರಡು ವರ್ಷಗಳ ಕಾಲ ಸಾರ್ವಜನಿಕ ಪರಿಶೀಲನೆಯಿಂದ ಉಳಿಸದೆ ಇರುವ ಹಣವನ್ನು ಪಾವತಿಸಬೇಕಾಗುತ್ತದೆ. ರೋಟೊಮ್ಯಾಕ್ ಭ್ರಷ್ಟಾಚಾರವು ಸುತ್ತುವರಿದಿದೆ. ಏಕೆಂದರೆ ಎರಡನೆಯದು ಖಾಸಗಿ ಸೀಮಿತ ಕಂಪನಿಯಾಗಿದ್ದು ಬ್ಯಾಂಕ್ ಠೇವಣಿದಾರರ ದೊಡ್ಡ ಮೊತ್ತವನ್ನು ಅಪಾಯದಡಿಗೆ ಸಿಕ್ಕಿಸಿದರು ಅದರ ಅಳಿವನ್ನು ಸಾರ್ವಜನಿಕವಾಗಿ ಬಹಿರಂಗಪಡಿಸುವುದಿಲ್ಲ.

   

  ಅನುಸರಣೆ ಮತ್ತು ವಿಶ್ವಾಸಾರ್ಹತೆ

  ಉದ್ಯಮಗಳಿಗೆ ಭಾರತದ ಆರ್ಥಿಕ ಪಾರದರ್ಶಕತೆ ಸ್ಥಾಪನೆ ವಿಚಿತ್ರ ಅಸಮಂಜಸತೆಯಿಂದ ನಾಶವಾಗುತ್ತದೆ. ಬಹಿರಂಗಪಡಿಸುವಿಕೆಯ ಮಾನದಂಡಗಳನ್ನು ಸಾಮಾನ್ಯವಾಗಿ ಮಾಲೀಕತ್ವದ ಮಾದರಿಯಿಂದ ಮಾರ್ಗದರ್ಶನ ಮಾಡಲಾಗುತ್ತದೆ. ಸಾರ್ವಜನಿಕ, ಖಾಸಗಿ ಮತ್ತು ಸ್ವಾಮ್ಯದ ವ್ಯವಹಾರ ಉದ್ಯಮಗಳು ನಿಯಂತ್ರಕ ಅಭಿವ್ಯಕ್ತಿಗಳಿಗಾಗಿ ವಿಭಿನ್ನ ಮಾನದಂಡಗಳ ಅಡಿಯಲ್ಲಿ ಬರುತ್ತವೆ.
  1992 ಮತ್ತು 2001 ರಲ್ಲಿ ಒಂದರ ಹಿಂದೆ ಒಂದು ನಡೆದ ಹರ್ದಾದ್ ಮೆಹ್ತಾ ಮತ್ತು ಕೇತನ್ ಪರೇಖ್ ಅವರ ಮುಖ್ಯ ಹಗರಣಗಳೊಂದಿಗೆ ಮಾರುಕಟ್ಟೆ ನಿಯಂತ್ರಕ ಸೆಬಿಯು ಸಾರ್ವಜನಿಕ ಇಕ್ವಿಟಿಗಳನ್ನು ಉಪಯೋಗ ಮಾಡಲು ಅಥವಾ ಸಾರ್ವಜನಿಕ ಷೇರುಗಳನ್ನು ಹೊಂದಿರುವ ಸ್ಟಾಕ್ ಎಕ್ಸ್ಚೇಂಜ್ನಲ್ಲಿ ಪಟ್ಟಿ ಮಾಡುವ ಕಂಪನಿಗಳ ಬಗ್ಗೆ ವಿಸ್ತಾರವಾದ ಬಹಿರಂಗಪಡಿಸುವಿಕೆಯ ಮಾಪನಗಳನ್ನು ಮಾಡಿದೆ. ಸೆಬಿ ನಿಯಮಗಳ ಅಡಿಯಲ್ಲಿ ಕಂಪನಿಗಳು ಭದ್ರವಾದ ಆರ್ಥಿಕ ಮಾಪನಗಳನ್ನು ಅನುಸರಿಸುವುದಿಲ್ಲ, ಆದರೆ ಸ್ಟಾಕ್ ವಿನಿಮಯಗಳ ಮೂಲಕ ಸಾರ್ವಜನಿಕರೊಂದಿಗೆ ಪ್ರತಿ ಸಣ್ಣ ತುಣುಕಿನ ಮಾಹಿತಿಯನ್ನು ಹಂಚಿಕೊಳ್ಳಲು ಸಹ ಒತ್ತಾಯ ಮಾಡುತ್ತದೆ. ಪಿಎನ್ ಬಿ ಹಗರಣವು ಎರಡೂ ಕಂಪನಿಗಳ ರಹಸ್ಯ ಪರಿಮಿತಿಯಲ್ಲಿ ಉಳಿಯಲು ಸಾಧ್ಯವಾಗಲಿಲ್ಲ. ಏಕೆಂದರೆ ಇದು ಸಾರ್ವಜನಿಕವಾಗಿ ನಿರ್ವಹಿಸುತ್ತಿರುವ ಎರಡು ಕಂಪೆನಿಗಳಾದ ಪಿಎನ್ ಬಿ ಮತ್ತು ಗೀತಾಂಜಲಿ ಜೆಮ್ಸ್ ಒಳಗೊಂಡಿರುತ್ತದೆ.
  ಮತ್ತೊಂದೆಡೆ, ತಮ್ಮ ವ್ಯವಹಾರದ ಗಾತ್ರದ ಹೊರತಾಗಿ, ಖಾಸಗಿ ಸಂಸ್ಥೆಗಳಿಗೆ (ಸೀಮಿತ ಮತ್ತು ಒಬ್ಬ ವ್ಯಕ್ತಿ ಸೇರಿದಂತೆ) ಹಣಕಾಸಿನ ಪಾರದರ್ಶಕತೆಯ ಹೆಚ್ಚು ಉದಾರವಾದ ನಿಯಮಗಳಿಂದ ಲಾಭವಾಗುತ್ತದೆ. ಅಢಾವೆ ಪಟ್ಟಿಗೆ , ಲಾಭ ಮತ್ತು ನಷ್ಟ ಖಾತೆಗಳನ್ನು ಒಳಗೊಂಡಿರುವ ವಾರ್ಷಿಕ ದಾಖಲೆಗಳ ಕಂತೆಯನ್ನು ಅವರು ಫೈಲು ಮಾಡಿದರಷ್ಟೇ ಸಾಕು ಎಂದು ಸೂಚಿಸಲಾಗಿದೆ.
  ಸರ್ಕಾರದ ಶುಲ್ಕವನ್ನು ಪಾವತಿಸಿದ ನಂತರ ಮಾತ್ರ ಸಾಮಾನ್ಯ ಜನರು ಈ ದಾಖಲೆಗಳನ್ನು ಗ್ರಹಿಸಬಹುದು.

  ಸಾಲ ಪಾರದರ್ಶಕತೆ

  ಕಳೆದ ಎರಡು ದಶಕಗಳಲ್ಲಿ, ಬ್ಯಾಂಕುಗಳಲ್ಲಿ ಭಾರತೀಯ ಆರ್ಥಿಕತೆ ಬೃಹತ್ ಬೆಳವಣಿಗೆಯನ್ನು ಕಂಡುಕೊಂಡಿದ್ದು, ಉದ್ಯಮಗಳಿಗೆ ಸಾಲದ-ಹಣಕಾಸು ಒದಗಿಸುತ್ತಿದೆ. ಅಗ್ಗದ ಕ್ರೆಡಿಟ್ ಕಂಪೆನಿಗಳಿಗೆ ತಮ್ಮ ವ್ಯವಹಾರವನ್ನು ಪ್ರಾರಂಭಿಸಲು ಅಥವಾ ವಿಸ್ತರಿಸಲು ಬ್ಯಾಂಕಿನ (ಎರವಲು ಪಡೆದ) ನಿಧಿಯ ಮೇಲೆ ಅತೀವವಾಗಿ ನಿಯಂತ್ರಣ ಸಾಧಿಸುವ ಮೂಲಕ, ಲಕ್ಷಾಂತರ ಠೇವಣಿದಾರರು ತಮ್ಮ ವ್ಯಾಪಾರದಲ್ಲಿ ಪರೋಕ್ಷವಾಗಿ ಪಾಲುದಾರರಾಗಿದ್ದಾರೆ. ಈ ಪ್ರಕಾರವಾಗಿ, ಷೇರುದಾರರಂತೆ ಭಿನ್ನವಾಗಿ, ಠೇವಣಿದಾರರು ಕಂಪನಿಯ ಯಶಸ್ಸಿಗೆ ಯಾವುದೇ ನೇರ ಪ್ರಯೋಜನವನ್ನು ಪಡೆಯುವುದಿಲ್ಲ, ಆದರೆ ಕಂಪನಿಯ ಬ್ಯಾಂಕುಗಳ ಕ್ರೆಡಿಟ್ ಮಾನ್ಯತೆ ಮೂಲಕ ವಿಫಲವಾದ ಅಪಾಯವನ್ನು ಎದುರಿಸುತ್ತಾರೆ.
  ಪಾರದರ್ಶಕತೆಯ ಸಮಸ್ಯೆಯು ಪ್ರಭಾವಿ ಖಾಸಗೀ ಸೀಮಿತ ಸಂಸ್ಥೆಗಳ (ರೊಟೊಮ್ಯಾಕ್ ನಂತಹ) ಪ್ರಕರಣಗಳಲ್ಲಿ ಹೆಚ್ಚು ಎದ್ದುಕಾಣುತ್ತಿರುವುದು. ಇದು ಸೆಬಿ - ನಿಯಂತ್ರಿತ ವರ್ಗದವರೊಂದಿಗೆ ಹೋಲಿಸಿದರೆ ಹೆಚ್ಚು ಪಾರದರ್ಶಕವಾಗಿರುತ್ತದೆ. ಸಾರ್ವಜನಿಕರಲ್ಲಿ ಕಡಿಮೆ ಮಾಹಿತಿಯೊಂದಿಗೆ ಖಾಸಗಿ ನಿಯಮಿತ ಕಂಪೆನಿಗಳು (ನಿರವ್ ಮೋದಿ ಅವರ ಫೈರ್ ಸ್ಟಾರ್ ಡೈಮಂಡ್ ಇಂಟರ್ನ್ಯಾಷನಲ್ ಪ್ರೈವೇಟ್ ಲಿಮಿಟೆಡ್) ವಹಿವಾಟು ಮತ್ತು ಸಾಲ ಕೋಟಿಗಳಲ್ಲಿ ನಡೆಯುತ್ತಿದೆ .
  ಬ್ಯಾಂಕುಗಳು ಮತ್ತು ಖಾಸಗಿ ನಿಯಮಿತ ಸಂಸ್ಥೆಗಳು ತಮ್ಮ ವ್ಯವಹಾರಗಳಲ್ಲಿ ಗೋಪ್ಯತೆಯನ್ನು ಗಮನಿಸುವುದರಿಂದ ಬೇಪಾವತಿಗಳ ಹೊಡೆತ ತಿಂದಾಗ ಮಾತ್ರ ಇದು ಅರಿವಿಗೆ ಬರುತ್ತದೆ.

  ಹಾಗಾದರೆ ಅವಶ್ಯಕವಾಗಿರುವುದೇನು?

  ಪಿ.ಎನ್.ಬಿ ಮತ್ತು ರೋಟೊಮ್ಯಾಕ್ ಹಗರಣಗಳು ಸ್ಪಷ್ಟವಾಗಿ ಬೆಳಕು ಚೆಲ್ಲಿದರ ಪ್ರಕಾರ ಸರ್ಕಾರವು ವಾಣಿಜ್ಯ ಶೇರು ಮಾಪನಗಳನ್ನು ಮತ್ತು ವಿವಿಧ ಶಾಸನಗಳ ಅಡಿಯಲ್ಲಿ ಉದ್ಯಮಕ್ಕಾಗಿ ಪಾರದರ್ಶಕತೆಯ ನಿಯಮಗಳನ್ನು ಸಂಪೂರ್ಣವಾಗಿ ಮಾರ್ಪಡಿಸಿ ಬೇಕಾಗಿದೆ.

  1. ಸೂಕ್ತವಾದುದೇನೆಂದರೆ, ಉದ್ಯಮಗಳಿಗೆ ಬಹಿರಂಗಪಡಿಸುವಿಕೆಯ ಮಾನದಂಡಗಳು ವ್ಯವಹಾರದ ಹಣಕಾಸಿನ ವಿಧಾನವನ್ನು ಆಧರಿಸ ಬೇಕೇ ವಿನಃ, ಒಡೆತನದ ಆಧಾರವನ್ನು ಅವಲಂಬಿಸುವುದಿಲ್ಲ.

  2. ಸಂಪೂರ್ಣವಾದ ಸ್ವ- ಬಂಡವಾಳದ ಸಣ್ಣ ಉದ್ಯಮಗಳನ್ನು ಪ್ರೋತ್ಸಾಹಿಸಬಹುದಾಗಿದೆ. ಆದರೆ, ಸಾಲ ಮತ್ತು ಇಕ್ವಿಟಿ ಹಣಕಾಸು ಸಂಸ್ಥೆಗಳು ಹಣಕಾಸು ಬಹಿರಂಗಪಡಿಸುವಿಕೆಯ ವಿಸ್ತಾರವಾದ ಗುಣಮಟ್ಟವನ್ನು ಅನುಸರಿಸಬೇಕು. ಪ್ರಾರಂಭಿಕವಾಗಿ ಬ್ಯಾಂಕನ್ನು ಅವಲಂಬಿಸಿರುವ ಕಂಪೆನಿಗಳಿಗೆ
  ಪ್ರತ್ಯೇಕವಾದ ಬಹಿರಂಗಪಡಿಸುವಿಕೆಯ ನಿಯಮಗಳನ್ನು ನಿಯತ ಮಾಡುವುದು.

  3. ಷೇರುದಾರರು ಮತ್ತು ಠೇವಣಿದಾರರ ರೊಂದಿಗೆ ತಮ್ಮ ಸಾಲದ ಬಂಡವಾಳದ ಮಾಹಿತಿಯನ್ನು ಹಂಚಿಕೊಳ್ಳುವಲ್ಲಿ ಬ್ಯಾಂಕುಗಳ ಆಡಳಿತವು ಹೆಚ್ಚು ಪಾರದರ್ಶಕವಾಗಿರಬೇಕು.

  4. ನಿಶ್ಚಿತ ಮಿತಿಗಿಂತ ಹೆಚ್ಚಿನ ವ್ಯಾಪಾರ ವಹಿವಾಟು ಹೊಂದಿರುವ ಕಂಪನಿಗಳು ರೂ. 100 ಕೋಟಿ ಮತ್ತು ಅದಕ್ಕಿಂತ ಹೆಚ್ಚಿನವು ಮಾರುಕಟ್ಟೆಯಲ್ಲಿ ಕಡ್ಡಾಯವಾಗಿ ಪಟ್ಟಿಗೆ ಸೇರ್ಪಡೆಗೊಳ್ಳಬೇಕು. ಅವರಿಗಾಗಿ ವಿಶೇಷ ವಿನಿಮಯಗಳನ್ನು ರಚಿಸಬಹುದು. ಇದು ಸಾರ್ವಜನಿಕ ಪರಿಶೀಲನೆಗೆ ತರಲು ಮತ್ತು ಹೂಡಿಕೆದಾರರಿಗೆ ಹೊಸ ಬಂಡವಾಳದ ಅವಕಾಶಗಳನ್ನು ಹೆಚ್ಚಿಸುತ್ತದೆ.

  5. ಅಷ್ಟೇ ಅಲ್ಲದೆ, ಸುಧಾರಣೆಗಳು ಸಾಲದ ಹಣಕಾಸುಗಳಲ್ಲಿ ಕೂಡ ಜರುಗಬೇಕಾಗಿದೆ. ಹಣಕಾಸು ನಿಯೋಜನೆ ಬ್ಯಾಂಕುಗಳಲ್ಲಿ ಭಾರಿ ಪ್ರಮಾಣದ ಸುಂಕವನ್ನು ತೆಗೆದುಕೊಂಡಿದೆ. ಬ್ಯಾಂಕಿನ ಠೇವಣಿದಾರರ ಉಳಿತಾಯವನ್ನು ಅಪಾಯಕ್ಕೆ ತಳ್ಳುವ ಬದಲು ತಮ್ಮದೇ ಆದ ಬಂಡವಾಳ ಗಳಲ್ಲಿ ಪ್ರವರ್ತಕ ರನ್ನು ಅಪಾಯಕ್ಕೆ ತೆಗೆದುಕೊಳ್ಳದಂತೆ ಒತ್ತಾಯಿಸಲು ಇದು ಅತಿ ಸೂಕ್ತವಾದ ಸಮಯವಾಗಿದೆ.

   

  ಸೆಬಿ ಅಧಿಕೃತ ಆದೇಶ

  ಸಂಸ್ಥೆಗಳನ್ನು ಬಾಂಡ್ ಮಾರುಕಟ್ಟೆಯನ್ನು ಪ್ರವೇಶಿಸಲು ಮುಂದೂಡುವುದಕ್ಕಾಗಿ ಭಾರತೀಯ ರಿಸರ್ವ್ ಬ್ಯಾಂಕ್ ಮಾರ್ಗದರ್ಶನವನ್ನು ಪ್ರಕಟಿಸಿದೆ. 2018 ಬಜೆಟ್ ನಲ್ಲಿ ಘೋಷಿಸಿದಂತೆ ಬಾಂಡ್ ಮಾರುಕಟ್ಟೆಯಿಂದ ತಮ್ಮ ಹಣಕಾಸು ಅಗತ್ಯಗಳಲ್ಲಿ 1/4ಸ್ಥಾನವನ್ನು ಪೂರೈಸಲು ಸೆಬಿ ಸಂಬಂಧಪಟ್ಟ ಸಂಸ್ಥೆಗಳಿಗೆ ಅಧಿಕೃತ ಆದೇಶ ನೀಡಬೇಕು. ಪ್ರಬಲವಾದ ಬಾಂಡ್ ಮಾರುಕಟ್ಟೆಯು ಬ್ಯಾಂಕುಗಳ ಹೊರೆಯನ್ನು ಬದಲಿಸಬಹುದು ಮತ್ತು ಕಂಪನಿಗಳನ್ನು ಪಾರದರ್ಶಕತೆಯ ಕಡೆಗೆ ಒತ್ತಾಯಿಸಬಹುದು.

  ಎನ್ ಪಿ ಎ, ಹಗರಣ ಸಮಸ್ಯೆ

  ಭಾರತದ ಎನ್. ಪಿ .ಎ ಸಮಸ್ಯೆ ಈಗಾಗಲೇ ಸ್ಫೋಟಕವಾಗಿದೆ. ಹಗರಣಗಳು ಪಾರದರ್ಶಕತೆಯನ್ನು ತಳ್ಳಿಹಾಕಲು ಅಗತ್ಯವಿದ್ದರೆ, ಪಿ.ಎನ್.ಬಿ ಮತ್ತು ರೋಟೊಮ್ಯಾಕ್ ಹರ್ಷದ್ ಮೆಹತಾ ಅಥವಾ ಕೇತನ್ ಪರೇಖ್ ರನ್ನು ಭಾರತೀಯ ಬ್ಯಾಂಕಿಂಗ್ ಉದ್ಯಮದ ಕ್ರೆಡಿಟ್ ವ್ಯವಸ್ಥೆಯಲ್ಲಿ ಮಹತ್ವ ಕೊಟ್ಟಿದೆ.

  ಕ್ರಮಕ್ಕೆ ಅತಿ ಸೂಕ್ತ ಸಮಯ

  ಯಾವುದೇ ಹಣಕಾಸು ವ್ಯವಸ್ಥೆಯಲ್ಲಿ ಬ್ಯಾಂಕುಗಳು ವಿಶ್ವಾಸದ ತಳಹದಿಯಾಗಿವೆ. 2001 ರಲ್ಲಿ ನಡೆದ ಹಗರಣಗಳಿಗೆ ಸೆಬಿ ಸ್ಟಾಕ್ ಮಾರುಕಟ್ಟೆಯಲ್ಲಿ ತೆಗೆದುಕೊಂಡ ಕ್ರಮವನ್ನು ಆರ್. ಬಿ .ಐ ಮತ್ತು ಸರ್ಕಾರವು ಕೂಡ ಅದೇ ರೀತಿ ಕ್ರಮವನ್ನು ಜರುಗಿಸಲು ಈಗ ಅತಿ ಸೂಕ್ತ ಸಮಯವಾಗಿದೆ. ಇನ್ನೊಂದು ಗಮನಾರ್ಹ ಸಂಗತಿ ಎಂದರೆ ಸೆಬಿ ಶಾಶ್ವತವಾಗಿ ಭಾರತೀಯ ಸ್ಟಾಕ್ ಮಾರುಕಟ್ಟೆ ಯನ್ನು ಪರಿವರ್ತಿಸಿರುವುದು.

  ಇಂತಹ ಸಮಂಜಸ ಸಮಯವನ್ನು ಆರ್. ಬಿ. ಐ ಮತ್ತು ಸರ್ಕಾರ ಹೇಗೆ ವಿನಿಯೋಗಿಸಿಕೊಳ್ಳುತ್ತದೆ? ಎಚ್ಚೆತ್ತುಕೊಳ್ಳುತ್ತದೆ ಎಂದು ಕಾದುನೋಡಬೇಕಾಗಿದೆ!!!

  English summary

  What India needs to do to save its Banking System

  What India needs to do to save its Banking System
  Story first published: Tuesday, June 5, 2018, 11:05 [IST]
  Company Search
  Enter the first few characters of the company's name or the NSE symbol or BSE code and click 'Go'

  Find IFSC

  Get Latest News alerts from Kannada Goodreturns

  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Goodreturns sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Goodreturns website. However, you can change your cookie settings at any time. Learn more