ದೇಶದ ಕೊಟ್ಯಂತರ ನಿರ್ಗತಿಕರಿಗೆ, ಬಡವರಿಗೆ ಆಧಾರ್ ಅಸ್ತಿತ್ವ ಕೊಟ್ಟಿದ್ದು, ಆಧಾರ್ ಡೇಟಾ ಸಂರಕ್ಷಣಾ ಕಾನೂನನ್ನು ಶೀಘ್ರದಲ್ಲಿ ಜಾರಿ ಮಾಡಬೇಕು ಎಂದು ಸುಪ್ರೀಂಕೋರ್ಟ್ ಹೇಳಿದೆ.
ಆಧಾರ್ ಹಲವಾರು ವಾದ ವಿವಾದಗಳಿಗೆ ಕಾರಣವಾಗಿ ದೇಶದಾದ್ಯಂತ ಚರ್ಚೆಗಳು ನಡೆಯುತ್ತಲೇ ಇವೆ.
ಆಧಾರ್ ಸಾಂವಿಧಾನಿಕ ಮಾನ್ಯತೆ ಕುರಿತಂತೆ ಸುಪ್ರೀಂ ಕೋರ್ಟಿನಲ್ಲಿ ಮಹತ್ವದ ತೀರ್ಪು ಹೊರಬಿದ್ದಿದ್ದು, ಆಧಾರ್ ಸಾಂವಿಧಾನಿಕ ಮಾನ್ಯತೆ ಸುಪ್ರೀಂಕೋರ್ಟ್ ಎತ್ತಿಹಿಡಿದಿದೆ.
ದೇಶದ ಕೊಟ್ಯಂತರ ನಿರ್ಗತಿಕರಿಗೆ, ಬಡವರಿಗೆ ಆಧಾರ್ ಅಸ್ತಿತ್ವ ಕೊಟ್ಟಿದ್ದು, ಆಧಾರ್ ಡೇಟಾ ಸಂರಕ್ಷಣಾ ಕಾನೂನನ್ನು ಶೀಘ್ರದಲ್ಲಿ ಜಾರಿ ಮಾಡಬೇಕು. ಯಾವುದೇ ಖಾಸಗಿ ಸಂಸ್ಥೆಗಳು ಆಧಾರ್ ಕಾರ್ಡ್ ಕೇಳಬಾರದು ಎಂದು ಸುಪ್ರೀಂಕೋರ್ಟ್ ಹೇಳಿದೆ.
ಆಧಾರ್ ಕಡ್ಡಾಯ
ಆಧಾರ್ ಕಾರ್ಡ್ ನ್ನು ಸರ್ಕಾರದ ಪಿಎಂ ಅವಾಸ್ ಯೋಜನೆ, ಸುಕನ್ಯಾ ಯೋಜನೆ, ಅಟಲ್ ಪಿಂಚಣಿ ಒಳಗೊಂಡಂತೆ ಎಲ್ಲಾ ಯೋಜನೆಗಳಿಗೆ ಕಡ್ಡಾಯವಾಗಿ ಬಳಸಬೇಕು. ಪ್ಯಾನ್ ಕಾರ್ಡ್ ಲಿಂಕ್ ಮಾಡಲು ಕಡ್ಡಾಯ. ಆಧಾರ್ ದಾಖಲಾತಿಗಾಗಿ ಕನಿಷ್ಠ ಮಾಹಿತಿಯನ್ನು ಮಾತ್ರ ಸಂಗ್ರಹಿಸಬೇಕು ಎಂದಿದೆ.
ಆಧಾರ್ ಕಡ್ಡಾಯವಲ್ಲ
ಬ್ಯಾಂಕ್ ಖಾತೆ ತೆರೆಯಲು
ಮೊಬೈಲ್ ಸಂಖ್ಯೆ ಪಡೆಯಲು (ಸಿಮ್)
ಶಾಲಾ ಮಕ್ಕಳಿಗೆ ಅಡ್ಮಿಶನ್
ಯುಜಿಸಿ, ನೀಟ್, ಸಿಬಿಎಸ್ಇ ಪರೀಕ್ಷೆ
ನ್ಯಾಯಮೂರ್ತಿ ಎ.ಕೆ ಸಿಕ್ರಿ
ಬಯೋಮೆಟ್ರಿಕ್ ಮೂಲಕ ಮಾಹಿತಿ ಪಡೆಯುವುದರಿಂದ ಅದು ಶಾಶ್ವತವಾಗಿ ಉಳಿಯಲಿದೆ. ಜನರಿಗೆ ವಿಶಿಷ್ಟ ಗುರುತು ನೀಡುವುದು ಇದರ ಉದ್ದೇಶವಾಗಿರಬೇಕು. ಅತ್ಯುತ್ತಮವಾಗಿರದಿದ್ದರೂ ವಿಶಿಷ್ಟವಾಗಿರುವುದು ಮುಖ್ಯವಾಗಿದ್ದು, ಇದು ಆಧಾರ್ ನ ಮುಖ್ಯ ಸಂದೇಶ ಎಂದು ನ್ಯಾಯಮೂರ್ತಿ ಎ.ಕೆ ಸಿಕ್ರಿ ಹೇಳಿದ್ದಾರೆ.
ಆಧಾರ್ ಕಾರ್ಡ್ ನೀಡುವಾಗ ಜಾಗೃತಿ
ಕೇಂದ್ರ ಸರ್ಕಾರ ಅತೀ ಶೀಘ್ರದಲ್ಲಿ ದೃಢವಾದ ಮಾಹಿತಿ ಸಂರಕ್ಷಣಾ ಕಾನೂನನ್ನು ಜಾರಿಗೆ ತರಬೇಕು. ಮುಖ್ಯವಾಗಿ ಅಕ್ರಮ ವಾಸಿಗಳಿಗೆ ಆಧಾರ್ ಸಿಗದಂತೆ ಎಚ್ಚರವಹಿಸಬೇಕು ಎಂದು ಸುಪ್ರೀಂಕೋರ್ಟ್ ಕೇಂದ್ರಕ್ಕೆ ತಿಳಿಸಿದೆ.
ಬಯೋಮೆಟ್ರಿಕ್ ಮಾಹಿತಿ ನೀಡಬಾರದು
ಆಧಾರ್ ಕಾಯಿದೆಯ ಸೆಕ್ಷನ್ 57 ಅನ್ನು ಸುಪ್ರೀಂಕೋರ್ಟ್ ರದ್ದುಗೊಳಿಸಿದ್ದು, ಖಾಸಗಿ ಸಂಸ್ಥೆಗಳಿಗೆ ಅಥವಾ ಕಾರ್ಪೊರೇಟ್ ಸಂಸ್ಥೆಗಳಿಗೆ ಬಯೋಮೆಟ್ರಿಕ್ ಮಾಹಿತಿಯನ್ನು ನೀಡಬಾರದು ಎಂದು ಸುಪ್ರೀಂಕೋರ್ಟ್ ತಿಳಿಸಿದೆ.


Click it and Unblock the Notifications