For Quick Alerts
ALLOW NOTIFICATIONS  
For Daily Alerts

ನೀವು ಎಟಿಎಂ ಬಳಸುತ್ತಿರಾ? ಹಾಗಿದ್ದರೆ ಈ ಸಂಗತಿಗಳನ್ನು ಪಾಲಿಸಿ..

ತುರ್ತಾಗಿ ಹಣ ಬೇಕಾದಾಗ ಬಹುತೇಕ ನಾವೇಲ್ಲ ಎಟಿಎಂಗಳ ಮೊರೆ ಹೋಗುತ್ತೇವೆ. ಹಗಲು, ರಾತ್ರಿ ಹೀಗೆ ಯಾವುದೇ ಸಮಯದಲ್ಲಿಯೂ ನಮ್ಮ ಬ್ಯಾಂಕ್ ಖಾತೆಯಲ್ಲಿನ ಹಣವನ್ನು ತಕ್ಷಣ ಪಡೆದುಕೊಳ್ಳಲು ಈ ಎಟಿಎಂಗಳು ಅನುಕೂಲಕರವಾಗಿವೆ.

|

ತುರ್ತಾಗಿ ಹಣ ಬೇಕಾದಾಗ ಬಹುತೇಕ ನಾವೇಲ್ಲ ಎಟಿಎಂಗಳ ಮೊರೆ ಹೋಗುತ್ತೇವೆ. ಹಗಲು, ರಾತ್ರಿ ಹೀಗೆ ಯಾವುದೇ ಸಮಯದಲ್ಲಿಯೂ ನಮ್ಮ ಬ್ಯಾಂಕ್ ಖಾತೆಯಲ್ಲಿನ ಹಣವನ್ನು ತಕ್ಷಣ ಪಡೆದುಕೊಳ್ಳಲು ಈ ಎಟಿಎಂಗಳು ಅನುಕೂಲಕರವಾಗಿವೆ. ಕಳೆದೊಂದು ದಶಕದಲ್ಲಿ ಎಟಿಎಂಗಳ ಬಳಕೆ ಗಣನೀಯ ಪ್ರಮಾಣದಲ್ಲಿ ಹೆಚ್ಚಳವಾಗಿದೆ. ಇದರೊಂದಿಗೆ ನಮ್ಮ ಬ್ಯಾಂಕ್ ಖಾತೆಗೆ ಕನ್ನ ಹಾಕಿ ಹಣ ಲಪಟಾಯಿಸುವ ವಂಚಕರ ಸಂಖ್ಯೆಯೂ ಹೆಚ್ಚಾಗುತ್ತಿದೆ. ಹೊಸ ಹೊಸ ವಿಧಾನಗಳಿಂದ ಈ ವಂಚಕರು ಹಣ ಎಗರಿಸುತ್ತಾರೆ.

ಹಾಗಂತ ವಂಚಕರಿಗೆ ಹೆದರಿ ಎಟಿಎಂ ಬಳಸುವುದನ್ನೇ ಬಿಟ್ಟು ಬಿಡಬೇಕು ಅಂತಲ್ಲ. ಆದರೆ ಎಟಿಎಂನಿಂದ ಹಣ ಪಡೆಯುವಾಗ ಕೆಲ ಮುಂಜಾಗ್ರತಾ ಕ್ರಮಗಳನ್ನು ಅನುಸರಿಸುವ ಮೂಲಕ ಇಂಥ ವಂಚನೆ ಹಾಗೂ ಮೋಸಗಳಿಂದ ಪಾರಾಗಬಹುದಾಗಿದೆ. ಎಟಿಎಂ ಬಳಸುವಾಗ ಯಾವೆಲ್ಲ ಸುರಕ್ಷತಾ ಕ್ರಮಗಳನ್ನು ಅನುಸರಿಸಬೇಕೆಂಬುದನ್ನು ಈ ಅಂಕಣದಲ್ಲಿ ತಿಳಿಸಲಾಗಿದೆ. ಈ ವಸ್ತುಗಳು ನಿಮ್ಮ ಮನೆಯಲ್ಲಿದ್ದರೆ ಬಡತನ ಹೆಚ್ಚಾಗತ್ತೆ!

ಎಟಿಎಂ ವ್ಯವಹಾರದ ಸುರಕ್ಷತೆಗೆ ಅನುಸರಿಸಬೇಕಾದ ಕ್ರಮಗಳು:

ಎಟಿಎಂ ಯಂತ್ರವನ್ನು ಪರಿಶೀಲಿಸಿ

ಎಟಿಎಂ ಯಂತ್ರವನ್ನು ಪರಿಶೀಲಿಸಿ

ಹಣ ಪಡೆಯುವ ಸಂದರ್ಭದಲ್ಲಿ ಎಟಿಎಂ ಅನ್ನು ಸಂಪೂರ್ಣವಾಗಿ ಪರಿಶೀಲನೆ ಮಾಡುವುದು ಸಾಧ್ಯವಾಗದೆ ಇರಬಹುದು. ಆದರೆ ಕೆಲ ಚಿಕ್ಕ ಪುಟ್ಟ ವಿಧಾನಗಳ ಮೂಲಕ ಎಟಿಎಂ ವ್ಯವಹಾರವನ್ನು ಸುರಕ್ಷಿತಗೊಳಿಸಬಹುದು.

ರಾತ್ರಿ ಸಮಯದಲ್ಲಿ ಉತ್ತಮ ಬೆಳಕಿರುವ ಹಾಗೂ ಹೆಚ್ಚು ಜನಸಂಚಾರ ಇರುವ ಪ್ರದೇಶಗಳಲ್ಲಿನ ಎಟಿಎಂಗಳನ್ನು ಬಳಸುವುದು ಸೂಕ್ತ. ಸಿಸಿಟಿವಿ ಅಳವಡಿಸಿರುವ ಹಾಗೂ ಬ್ಯಾಂಕ್ ಕಟ್ಟಡದಲ್ಲಿರುವ ಎಟಿಎಂಗಳನ್ನು ಹುಡುಕಿ. ಈ ಹಿಂದೆ ದರೋಡೆ ಅಥವಾ ವಂಚನೆ ಪ್ರಕರಣಗಳು ನಡೆದ ಎಟಿಎಂಗಳನ್ನು ಆದಷ್ಟು ಬಳಸದೆ ಇರಲು ಪ್ರಯತ್ನಿಸಿ.
ಕಾರ್ಡ ತೂರಿಸುವ ಮುನ್ನ ಎಟಿಎಂ ಯಂತ್ರವನ್ನು ಸರಿಯಾಗಿ ಚೆಕ್ ಮಾಡಿ. ವಾಸ್ತವ ಕಾರ್ಡ ಸ್ಲಾಟ್ ಅನ್ನು ಮರೆ ಮಾಡಿ ನಕಲಿ ಸ್ಲಾಟ್ ಅನ್ನು ಕೆಲ ಬಾರಿ ವಂಚಕರು ಅಳವಡಿಸಿರುತ್ತಾರೆ. ಇದರಲ್ಲಿ ಕಾರ್ಡ ಹಾಕಿದರೆ ನಿಮ್ಮೆಲ್ಲ ಕಾರ್ಡ ಮಾಹಿತಿಯನ್ನೂ ಸೈಬರ್ ವಂಚಕರು ಕದಿಯುವ ಸಾಧ್ಯತೆ ಇರುತ್ತದೆ. ಇನ್ನು ಕೆಲ ಬಾರಿ ಕೀಬೋರ್ಡ ಮೇಲ್ಭಾಗದಲ್ಲಿ ಮೈಕ್ರೊ ಕ್ಯಾಮೆರಾ ಅಳವಡಿಸಿ ನಿಮ್ಮ ಪಿನ್ ಕದಿಯಬಹುದು.
ಇಂಥ ಯಾವುದೇ ವಂಚನೆಯ ಯತ್ನಗಳು ನಿಮ್ಮ ಗಮನಕ್ಕೆ ಬಂದಲ್ಲಿ ಆ ಎಟಿಎಂ ಬಳಸದಿರಿ ಹಾಗೂ ಅದರ ಬಗ್ಗೆ ಸಂಬಂಧಿಸಿದ ಬ್ಯಾಂಕಿಗೆ ತಕ್ಷಣ ಮಾಹಿತಿ ನೀಡಿ. ಹೀಗೆ ಮಾಡುವುದರ ಮೂಲಕ ಇನ್ನೂ ಕೆಲವರು ಮೋಸಕ್ಕೆ ಒಳಗಾಗುವುದರಿಂದ ನೀವು ತಡೆಗಟ್ಟಬಹುದು.

ಜೊತೆಯಲ್ಲಿ ಯಾರಾದರೂ ಇರಲಿ

ಜೊತೆಯಲ್ಲಿ ಯಾರಾದರೂ ಇರಲಿ

ಕೇವಲ ಸೈಬರ್ ವಂಚನೆಯ ಮೂಲಕ ಮಾತ್ರ ಮೋಸ ನಡೆಯುತ್ತದೆ ಎಂದುಕೊಳ್ಳಬೇಡಿ. ಎಟಿಎಂಗಳಲ್ಲಿ ಪಕ್ಕದಲ್ಲಿಯೇ ನಿಂತು ನಿಮಗೆ ಗೊತ್ತಾಗದಂತೆ ಪಿನ್ ನಂಬರ್ ಗಮನಿಸುವ ವಂಚಕರು ಇರುತ್ತಾರೆ. ಇಂಥವರ ಬಗ್ಗೆ ಎಚ್ಚರವಿರಲಿ. ಯಾವುದೋ ನಿರ್ದಿಷ್ಟ ಎಟಿಎಂ ನಿಂದ ಹಣ ತೆಗೆಯುವುದು ಸುರಕ್ಷಿತವಾಗಿ ಕಾಣುತ್ತಿಲ್ಲ ಎಂದು ನಿಮಗನಿಸುತ್ತಿದ್ದರೆ ಜೊತೆಗೆ ಯಾರನ್ನಾದರೂ ಕರೆದೊಯ್ಯಿರಿ. ಇದರಿಂದ ಹಣ ಕಸಿದುಕೊಂಡು ಹೋಗುವ ವಂಚಕರಿಂದ ಪಾರಾಗಬಹುದು.
ಎಟಿಎಂ ಸುತ್ತಮುತ್ತ ಯಾರಾದರೂ ಬಹಳ ಹೊತ್ತಿನಿಂದ ಸಂಶಯಾಸ್ಪದವಾಗಿ ತಿರುಗಾಡುತ್ತಿದ್ದಾರೆ ಎಂಬುದು ನಿಮ್ಮ ಗಮನಕ್ಕೆ ಬಂದಲ್ಲಿ ತಕ್ಷಣ ಹತ್ತಿರದ ಪೊಲೀಸ್ ಠಾಣೆಗೆ ಮಾಹಿತಿ ನೀಡಿ.

ನಿಮ್ಮ ಪಿನ್ ಸುರಕ್ಷಿತವಾಗಿರಿಸಿಕೊಳ್ಳಿ

ನಿಮ್ಮ ಪಿನ್ ಸುರಕ್ಷಿತವಾಗಿರಿಸಿಕೊಳ್ಳಿ

ಪಿನ್ ನಂಬರ್ ಟೈಪ್ ಮಾಡುವಾಗ ಪಕ್ಕದಲ್ಲಿದ್ದವರಿಗೆ ಕೀಬೋರ್ಡ ಕಾಣದಂತೆ ಕೈ ಅಡ್ಡವಾಗಿಡಿ. ಎಟಿಎಂನಲ್ಲಿ ನಿಮಗೆ ತೀರಾ ಸನಿಹದಲ್ಲಿ ಜನ ನಿಂತಿದ್ದರೆ ಪಿನ್ ನಂಬರ್ ಟೈಪ್ ಮಾಡಲೇಬೇಡಿ. ಮಿತ್ರರು, ಮನೆಯವರು ಅಥವಾ ಬ್ಯಾಂಕ್ ಸಿಬ್ಬಂದಿ ಯಾರಿಗೇ ಆದರೂ ಎಟಿಎಂ ಪಿನ್ ನಂಬರ್ ತಿಳಿಸಬೇಡಿ.
ಸುಲಭವಾಗಿ ನೆನಪಿಟ್ಟುಕೊಳ್ಳಲು ಆದಷ್ಟು ನಾಲ್ಕಂಕಿಯ ಪಿನ್ ಬಳಸಿ. ಚೀಟಿಯಲ್ಲಿ ಪಿನ್ ನಂಬರ್ ಬರೆದು ಅದನ್ನು ಪರ್ಸನಲ್ಲಿ ಅಥವಾ ಬ್ಯಾಗ್‌ನಲ್ಲಿ ಇಡುವುದು ಸರ್ವಥಾ ಸಲ್ಲದು. ಪಿನ್ ನಂಬರನ್ನು ಎಲ್ಲಿಯೂ ಬರೆದಿಡದೆ ಕೇವಲ ನೆನಪಿನಲ್ಲಿಟ್ಟುಕೊಳ್ಳುವುದೇ ಕ್ಷೇಮ. ಎಟಿಎಂ ಕಾರ್ಡ ಹಾಗೂ ಅದರ ಜೊತೆಗೆಯೇ ಪಿನ್ ನಂಬರ್ ಇರುವ ಹಾಳೆಯೂ ಕಳೆದು ಹೋದರೆ ನಿಮ್ಮ ಕಾರ್ಡ ಬಳಸುವುದು ವಂಚಕರಿಗೆ ಅತಿ ಸುಲಭವಾಗುತ್ತದೆ. ಹೀಗಾಗದಂತೆ ಎಚ್ಚರ ವಹಿಸಿ.

ಅಪರಿಚಿತರಿಂದ ಸಹಾಯ ಪಡೆಯಬೇಡಿ

ಅಪರಿಚಿತರಿಂದ ಸಹಾಯ ಪಡೆಯಬೇಡಿ

ಎಟಿಎಂ ಬಳಿ ಎಷ್ಟೇ ಒಳ್ಳೆಯವರಾಗಿ ಕಂಡು ಬಂದರೂ ಎಟಿಎಂ ವ್ಯವಹಾರದಲ್ಲಿ ಮಾತ್ರ ಅಪರಿಚಿತರ ಸಹಾಯ ಪಡೆಯಲೇಬೇಡಿ. ಒಂದೊಮ್ಮೆ ನಿಮ್ಮ ಕಾರ್ಡ ಎಟಿಎಂ ಯಂತ್ರದಲ್ಲಿ ಸಿಕ್ಕಿ ಹಾಕಿಕೊಂಡರೆ ಅದನ್ನು ಅಲ್ಲಿಯೇ ಬಿಟ್ಟು ಬರಬೇಡಿ. ಮೊಬೈಲ್ ಫೋನ್ ಮುಖಾಂತರ ಕಸ್ಟಮರ್ ಕೇರ್‌ಗೆ ತಿಳಿಸಿ. ಒಂದು ವೇಳೆ ಜೊತೆಯಲ್ಲಿ ಯಾರಾದರೂ ಬಂದಿದ್ದರೆ ಒಬ್ಬರು ಎಟಿಎಂನಲ್ಲಿಯೇ ಕಾಯುತ್ತ, ಇನ್ನೊಬ್ಬರು ಸಂಬಂಧಿಸಿದ ಬ್ಯಾಂಕ್ ಶಾಖೆಗೆ ತೆರಳಿ ದೂರು ನೀಡಿ.
ಇಂಥ ಸಂದರ್ಭಗಳಲ್ಲಿ ಅಪರಿಚಿತರು ಸಹಾಯ ನೀಡಲು ಮುಂದೆ ಬಂದರೂ ಅವರಿಂದ ಸಹಾಯ ಪಡೆಯುವುದು ಸೂಕ್ತವಲ್ಲ. ಇನ್ನು ಕೆಲವೊಮ್ಮೆ ತಾವು ಬ್ಯಾಂಕ್ ಸಿಬ್ಬಂದಿ, ಎಟಿಎಂ ಯಂತ್ರದ ಮಾಲೀಕರು ಅಥವಾ ಪೊಲೀಸ್ ಎಂದು ಹೇಳಿ ನಿಮ್ಮ ಪಿನ್ ನಂಬರ್ ಕೇಳಬಹುದು. ಆದರೆ ಯಾರಿಗೇ ಆದರೂ ಪಿನ್ ಹೇಳುವ ಅಗತ್ಯವಿಲ್ಲ.

ಕುಡಿದ ಮತ್ತಿನಲ್ಲಿ ವ್ಯವಹಾರ ಮಾಡಬೇಡಿ

ಕುಡಿದ ಮತ್ತಿನಲ್ಲಿ ವ್ಯವಹಾರ ಮಾಡಬೇಡಿ

ಸಂಜೆ ಪಬ್ ಅಥವಾ ಬಾರ್‌ಗೆ ಹೋಗುವ ಯೋಜನೆ ಇದ್ದಲ್ಲಿ, ಅಲ್ಲಿಗೆ ಹೋಗುವ ಮುನ್ನವೇ ಹಣ ವಿತ್‌ಡ್ರಾ ಮಾಡಿಕೊಳ್ಳಿ. ಕುಡಿದ ಮತ್ತಿನಲ್ಲಿ ಎಟಿಎಂ ವ್ಯವಹಾರ ಮಾಡುವುದು ಸೂಕ್ತವಲ್ಲ.
ಅಲ್ಕೋಹಾಲ್ ಸೇವಿಸಿದಾಗ ನಿರ್ಣಯ ಶಕ್ತಿ ಕುಂದುವುದರಿಂದ ಮೋಸ ಅಥವಾ ವಂಚನೆಗೊಳಗಾಗುವುದು ಬೇಗ ಗಮನಕ್ಕೆ ಬರುವುದಿಲ್ಲ. ಕುಡಿದ ಮತ್ತಿನಲ್ಲಿ ಅಪರಿಚಿತರನ್ನು ನಂಬುವ ಸಾಧ್ಯತೆ ಹೆಚ್ಚಾಗಿರುತ್ತದೆ. ಇದು ಸುಲಭವಾದ ವಂಚನೆಗೆ ದಾರಿ ಮಾಡಿಕೊಡಬಹುದು. ಅದೇ ರೀತಿ ಮತ್ತಿನಲ್ಲಿ ಕಾರ್ಡ ಎಟಿಎಂನಲ್ಲಿಯೇ ಮರೆಯುವ ಅಥವಾ ಹಣವನ್ನೇ ತೆಗೆದುಕೊಳ್ಳದೆ ಬರುವ ಅಪಾಯಗಳು ಸಂಭವಿಸಬಹುದು.

ಎಟಿಎಂ ರಸೀದಿ ಚೆಕ್ ಮಾಡಿ

ಎಟಿಎಂ ರಸೀದಿ ಚೆಕ್ ಮಾಡಿ

ನೀವು ಎಟಿಎಂನಲ್ಲಿ ನಡೆಸಿದ ವ್ಯವಹಾರದ ರಸೀದಿಗಳನ್ನು ನಿಮ್ಮ ಬ್ಯಾಂಕ್ ಸ್ಟೇಟಮೆಂಟ್‌ನೊಂದಿಗೆ ಪರಿಶೀಲಿಸಿ ನೋಡಿ. ನೀವು ಮಾಡಿರದ ಯಾವುದಾದರೂ ಎಟಿಎಂ ವ್ಯವಹಾರ ಕಾಣಿಸಿದಲ್ಲಿ ತಕ್ಷಣ ಬ್ಯಾಂಕಿಗೆ ದೂರು ನೀಡಿ.
ಯಾವುದೇ ಎಟಿಎಂನಲ್ಲಿ ರಸೀದಿ ಲಭ್ಯವಿರುವಾಗ ಅದನ್ನು ನಿರಾಕರಿಸಬೇಡಿ. 'ಎಸ್' ಎಂಬ ಆಪ್ಷನ್ ಆಯ್ಕೆ ಮಾಡಿ ರಸೀದಿ ಪಡೆದುಕೊಳ್ಳಿ. ನೀವು ನಡೆಸಿದ ವ್ಯವಹಾರದ ಬಗ್ಗೆ ಯಾವುದೇ ಸಮಸ್ಯೆ ಉಂಟಾದಲ್ಲಿ ಈ ರಸೀದಿ ಸಾಕ್ಷಿಯಾಗಿ ಕೆಲಸ ಮಾಡುತ್ತದೆ.

ಅವಶ್ಯಕತೆಯಿದ್ದರೆ ಮಾತ್ರ ಎಟಿಎಂ ಬಳಸಿ

ಅವಶ್ಯಕತೆಯಿದ್ದರೆ ಮಾತ್ರ ಎಟಿಎಂ ಬಳಸಿ

ಇತ್ತೀಚಿನ ದಿನಗಳಲ್ಲಿ ಬಹುತೇಕ ವ್ಯವಹಾರ ಸ್ಥಳಗಳಲ್ಲಿ ಡೆಬಿಟ್ ಅಥವಾ ಕ್ರೆಡಿಟ್ ಕಾರ್ಡ ಮೂಲಕವೇ ಪಾವತಿ ಮಾಡಬಹುದಾಗಿದೆ. ಇಂಥ ಪಾವತಿಗಳಿಗೆ ಯಾವುದೇ ಹೆಚ್ಚುವರಿ ಶುಲ್ಕ ವಿಧಿಸುತ್ತಿಲ್ಲ ಎಂಬುದನ್ನು ಮಾತ್ರ ತಿಳಿದುಕೊಳ್ಳಬೇಕು. ಇನ್ನು ಕೆಲವೆಡೆ ಕಾರ್ಡ ಮೂಲಕ ಪಾವತಿಸಿದಾಗ ಕ್ಯಾಶ ಬ್ಯಾಕ್ ಹಾಗೂ ಪಾಯಿಂಟ್‌ಗಳು ಸಿಗುತ್ತವೆ. ಹೀಗಾಗಿ ಕ್ಯಾಶ ಬದಲು ಕಾರ್ಡನ್ನೇ ನೇರವಾಗಿ ಬಳಸಬಹುದು. ಇದರಿಂದ ಎಟಿಎಂ ಮೂಲಕ ಹಣ ಪಡೆಯುವ ಸಂದರ್ಭಗಳನ್ನು ಕಡಿಮೆ ಮಾಡಬಹುದು.

Read more about: atm money finance news banking
English summary

Are you using ATMs? If so, then remember these things

Withdrawing money from an ATM is a quick and convenient way to access your money, especially during a cash emergency.
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X