ಕಿಸಾನ ವಿಕಾಸ ಪತ್ರ Vs ರಾಷ್ಟ್ರೀಯ ಉಳಿತಾಯ ಪತ್ರ, ಯಾವುದು ಬೆಸ್ಟ್?

ಕಿಸಾನ ವಿಕಾಸ ಪತ್ರ ಹಾಗೂ ರಾಷ್ಟ್ರೀಯ ಉಳಿತಾಯ ಪತ್ರ ಇವೆರಡೂ ಅಂಚೆ ಕಚೇರಿಯಲ್ಲಿ ಲಭ್ಯವಿರುವ ನಿಶ್ಚಿತ ಆದಾಯ ನೀಡುವ ಹೂಡಿಕೆ ಯೋಜನೆಗಳಾಗಿವೆ.

ಕಿಸಾನ ವಿಕಾಸ ಪತ್ರ ಹಾಗೂ ರಾಷ್ಟ್ರೀಯ ಉಳಿತಾಯ ಪತ್ರ ಇವೆರಡೂ ಅಂಚೆ ಕಚೇರಿಯಲ್ಲಿ ಲಭ್ಯವಿರುವ ನಿಶ್ಚಿತ ಆದಾಯ ನೀಡುವ ಹೂಡಿಕೆ ಯೋಜನೆಗಳಾಗಿವೆ. ಇತ್ತೀಚಿನ ಸಣ್ಣ ಉಳಿತಾಯ ಯೋಜನೆಗಳ ಬಡ್ಡಿ ದರ ಹೆಚ್ಚಳದ ನಂತರ ಇವೆರಡೂ ಯೋಜನೆಗಳು ಸಾರ್ವಜನಿಕರಿಗೆ ಮತ್ತಷ್ಟು ಲಾಭದಾಯಕವಾಗಿವೆ. ಪ್ರಸ್ತುತ ಬಡ್ಡಿ ದರಗಳ ಹೆಚ್ಚಳದ ಹಿನ್ನೆಲೆಯಲ್ಲಿ ಈ ಯೋಜನೆಗಳ ಬಗ್ಗೆ ಮತ್ತಷ್ಟು ಮಾಹಿತಿಯನ್ನು ತಿಳಿದುಕೊಳ್ಳೋಣ.

ಕಿಸಾನ ವಿಕಾಸ ಪತ್ರ (ಕೆವಿಪಿ)

ಕಿಸಾನ ವಿಕಾಸ ಪತ್ರ (ಕೆವಿಪಿ)

ಬ್ಯಾಂಕಿಂಗ್ ಸೌಕರ್ಯಗಳಿಂದ ವಂಚಿತ ಗ್ರಾಮೀಣ ಪ್ರದೇಶದ ರೈತರ ಅನುಕೂಲಕ್ಕಾಗಿ ೧೯೮೮ ರಲ್ಲಿ ಕಿಸಾನ ವಿಕಾಸ ಪತ್ರ ಉಳಿತಾಯ ಯೋಜನೆಯನ್ನು ಆರಂಭಿಸಲಾಯಿತು. ಸುಲಭವಾಗಿ ಪಡೆಯಬಹುದಾದ ಹಾಗೂ ಸರಳವಾಗಿ ವರ್ಗಾವಣೆ ಮಾಡಬಹುದಾಗಿದ್ದ ಈ ಯೋಜನೆ ಬಹು ಬೇಗನೆ ರೈತರು ಮಾತ್ರವಲ್ಲದೆ ಎಲ್ಲ ವರ್ಗದ ಜನರ ಮೆಚ್ಚುಗೆ ಗಳಿಸಿತು. ಜೊತೆಗೆ ಇದು ಅಕ್ರಮ ಹಣ ವರ್ಗಾವಣೆಗೂ ಬಳಸಲ್ಪಡಲಾರಂಭಿಸಿದಾಗ ೨೦೧೧ ರಲ್ಲಿ ಯೋಜನೆಯನ್ನೇ ರದ್ದುಗೊಳಿಸಲಾಯಿತು. ನಂತರ ಇದರ ದುರ್ಬಳಕೆಯನ್ನು ತಡೆಗಟ್ಟಲು ಸಾಕಷ್ಟು ಸುರಕ್ಷಾ ನಿಯಮಗಳನ್ನು ವಿಧಿಸಿ ೨೦೧೪ ರಲ್ಲಿ ಮತ್ತೆ ಕೆವಿಪಿಯನ್ನು ಆರಂಭಿಸಲಾಯಿತು.

ಕೆವಿಪಿ ಪಡೆಯಲು ಅರ್ಹತೆ

ಕೆವಿಪಿ ಪಡೆಯಲು ಅರ್ಹತೆ

18 ವರ್ಷ ಅಥವಾ ಅದಕ್ಕೂ ಮೇಲ್ಪಟ್ಟ ವ್ಯಕ್ತಿಯು ವೈಯಕ್ತಿಕವಾಗಿ ಅಥವಾ ಇನ್ನೋರ್ವ ವಯಸ್ಕ ವ್ಯಕ್ತಿ ಅಥವಾ ಕಡಿಮೆ ವಯಸ್ಸಿನ ವ್ಯಕ್ತಿಯೊಂದಿಗೆ ಜಂಟಿಯಾಗಿ ಕೆವಿಪಿ ಪಡೆಯಬಹುದು.

ಅರ್ಜಿ ಸಲ್ಲಿಕೆ ಹೇಗೆ

ಅರ್ಜಿ ಸಲ್ಲಿಕೆ ಹೇಗೆ

ಹತ್ತಿರದ ಅಂಚೆ ಕಚೇರಿ ಶಾಖೆಯಲ್ಲಿ ಭಾವಚಿತ್ರ ಸಹಿತ ಗುರುತಿನ ಚೀಟಿ ಹಾಗೂ ವಿಳಾಸ ಪುರಾವೆಗಳೊಂದಿಗೆ ಕೆವಿಪಿಗೆ ಅರ್ಜಿ ಸಲ್ಲಿಸಬಹುದು. ದೊಡ್ಡ ಮೊತ್ತದ ಹೂಡಿಕೆಯಾಗಿದ್ದರೆ ಪ್ಯಾನ್ ಕಾರ್ಡ್ ಹಾಗೂ ಇನ್ನಿತರ ದಾಖಲೆಗಳನ್ನು ಸಹ ನೀಡಬೇಕಾಗುತ್ತದೆ.

ಹೂಡಿಕೆ ಮಿತಿ

ಹೂಡಿಕೆ ಮಿತಿ

ಕೆವಿಪಿಯಲ್ಲಿ ಕನಿಷ್ಠ 1 ಸಾವಿರ ರೂ. ಹಾಗೂ ಸಾವಿರದ ಗುಣಕಗಳಲ್ಲಿ ಹೆಚ್ಚಿನ ಹೂಡಿಕೆ ಮಾಡಬಹುದು. ಗರಿಷ್ಠ ಹೂಡಿಕೆ ಮಿತಿಯನ್ನು ವಿಧಿಸಲಾಗಿಲ್ಲ.
ತೆರಿಗೆ ವಿನಾಯಿತಿ
ಕೆವಿಪಿ ಯೋಜನೆಯ ಹೂಡಿಕೆ ಅಥವಾ ಆದಾಯ ಯಾವುದಕ್ಕೂ ಯಾವುದೇ ರೀತಿಯ ತೆರಿಗೆ ವಿನಾಯಿತಿ ಇರುವುದಿಲ್ಲ.

ಆದಾಯ

ಆದಾಯ

ಈ ಮುಂಚೆ ಶೇ. 7.3 ರಷ್ಟಿದ್ದ ಬಡ್ಡಿದರವನ್ನು ಇತ್ತೀಚೆಗಷ್ಟೆ ಶೇ. 7.7 ಕ್ಕೆ ಹೆಚ್ಚಿಸಲಾಗಿದೆ. ಹೀಗಾಗಿ ಹೂಡಿದ ಹಣ 112 ತಿಂಗಳಲ್ಲಿ (೯ ವರ್ಷ 4 ತಿಂಗಳು) ದುಪಟ್ಟಾಗುವುದು. ಅಂದರೆ ಈ ಮುಂಚೆ ಇದ್ದ ಅವಧಿ 118 ತಿಂಗಳು (೯ ವರ್ಷ ೧೦ ತಿಂಗಳು) ಗಳ 6 ತಿಂಗಳು ಮೊದಲೇ ಹಣ ದುಪ್ಪಟ್ಟಾಗುತ್ತದೆ.

ರಾಷ್ಟ್ರೀಯ ಉಳಿತಾಯ ಪತ್ರ (ಎನ್‌ಎಸ್‌ಸಿ)

ರಾಷ್ಟ್ರೀಯ ಉಳಿತಾಯ ಪತ್ರ (ಎನ್‌ಎಸ್‌ಸಿ)

ಎನ್‌ಎಸ್‌ಸಿ ಇದು ಅಂಚೆ ಕಚೇರಿಯಲ್ಲಿ ಪಡೆಯಬಹುದಾದ ನಿಶ್ಚಿತ ಆದಾಯದ ಉಳಿತಾಯ ಯೋಜನೆಯಾಗಿದೆ.

ಎನ್‌ಎಸ್‌ಸಿ ಪಡೆಯಲು ಅರ್ಹತೆ:
ಓರ್ವ ವಯಸ್ಕ ವ್ಯಕ್ತಿ ತನ್ನ ಹೆಸರಲ್ಲಿ ಅಥವಾ ಅಪ್ರಾಪ್ತರ ಪರವಾಗಿ ಅಥವಾ ಓರ್ವ ಅಪ್ರಾಪ್ತ ವಯಸ್ಕ ತನಗಾಗಿ ಎನ್‌ಎಸ್‌ಸಿ ಯೋಜನೆ ಪಡೆಯಬಹುದು.

ಅರ್ಜಿ ಸಲ್ಲಿಕೆ ಹೇಗೆ

ಅರ್ಜಿ ಸಲ್ಲಿಕೆ ಹೇಗೆ

ಅಂಚೆ ಕಚೇರಿ ಶಾಖೆಯಲ್ಲಿ ಪ್ಯಾನ್ ಕಾರ್ಡ ದಾಖಲೆ ಹಾಗೂ ವಿಳಾಸ ಪುರಾವೆ ನೀಡಿ ಎನ್‌ಎಸ್‌ಸಿ ಕೊಳ್ಳಬಹುದು. ಹೂಡಿಕೆ ಮೊತ್ತ ದೊಡ್ಡದಾಗಿದ್ದಲ್ಲಿ ಹೆಚ್ಚುವರಿ ಕೆವೈಸಿ ದಾಖಲೆಗಳನ್ನು ಸಲ್ಲಿಸಬೇಕಾಗುತ್ತದೆ.
ಹೂಡಿಕೆ ಮಿತಿ
ಕನಿಷ್ಠ ೧೦೦ ರೂಪಾಯಿ ಹಾಗೂ ಅದರ ಗುಣಕಗಳಲ್ಲಿ ಹೂಡಿಕೆ ಮಾಡಬಹುದು. ಗರಿಷ್ಠ ಹೂಡಿಕೆ ಮಿತಿಯನ್ನು ವಿಧಿಸಲಾಗಿಲ್ಲ.

ಆದಾಯ

ಆದಾಯ

ಈ ಮುನ್ನ 5 ವರ್ಷ ಕಾಲಾವಧಿಯ ಎನ್‌ಎಸ್‌ಸಿಗೆ ವಾರ್ಷಿಕ ಶೇ. 7.6 ರಷ್ಟು ಬಡ್ಡಿ ದರ ಇತ್ತು. ಈಗ ಇದನ್ನು ಶೇ. ೦.೪ ರಷ್ಟು ಹೆಚ್ಚಿಸಿ ಶೇ. 8 ಕ್ಕೆ ನಿಗದಿಪಡಿಸಲಾಗಿದೆ. ವಾರ್ಷಿಕವಾಗಿ ಬಡ್ಡಿ ಮೊತ್ತವನ್ನು ಸಂಯೋಜನೆ ಮಾಡಲಾಗುವುದು. ಈಗಿನ ಬಡ್ಡಿ ದರಗಳ ಅನ್ವಯ ೧೦೦ ರೂ. ಹೂಡಿಕೆ ಮಾಡಿದಲ್ಲಿ ೫ ವರ್ಷಗಳಲ್ಲಿ ಅದು ೧೪೬.೯೩ ರೂ. ಗಳಾಗುವುದು.

ತೆರಿಗೆ ವಿನಾಯಿತಿ

ತೆರಿಗೆ ವಿನಾಯಿತಿ

1 ಲಕ್ಷ 50 ಸಾವಿರ ರೂ. ಗಳವರೆಗಿನ ಹೂಡಿಕೆಗೆ ಆದಾಯ ತೆರಿಗೆ ಕಾಯ್ದೆ ೮೦ಸಿ ಪ್ರಕಾರ ತೆರಿಗೆ ವಿನಾಯಿತಿ ಇರುತ್ತದೆ. ವಾರ್ಷಿಕವಾಗಿ ಬಡ್ಡಿ ಪಾವತಿಸಲಾದರೂ ಅದನ್ನು 80ಸಿ ಅನ್ವಯ ಮರು ಹೂಡಿಕೆ ಎಂದು ಪರಿಗಣಿಸಲಾಗುತ್ತದೆ. ಹೀಗಾಗಿ ಇದರಿಂದ ದೊರಕುವ ಬಡ್ಡಿಯನ್ನು 'ಇತರ ಮೂಲಗಳಿಂದ ಆದಾಯ' ಎಂದು ಪರಿಗಣಿಸಿ ಆ ಮೊತ್ತಕ್ಕೆ ೮೦ಸಿ ಅನ್ವಯ ತೆರಿಗೆ ವಿನಾಯಿತಿ ಇರುತ್ತದೆ.

ಕೊನೆ ಮಾತು

ಕೊನೆ ಮಾತು

ಕೆವಿಪಿ ಹಾಗೂ ಎನ್‌ಎಸ್‌ಸಿ ಎರಡೂ ಯೋಜನೆಗಳನ್ನು ನೋಡಿದರೆ ಎನ್‌ಎಸ್‌ಸಿಯಲ್ಲಿ ಆದಾಯ ಹೆಚ್ಚಾಗಿದ್ದು, ತೆರಿಗೆ ವಿನಾಯಿತಿಯೂ ಇದೆ. ಆದರೆ ಇದರಲ್ಲಿನ ಕಠಿಣ ಕೆವೈಸಿ ನಿಯಮ ಹಾಗೂ ತೆರಿಗೆ ವಿನಾಯಿತಿ ಪಡೆಯಲು ವಾರ್ಷಿಕವಾಗಿ ಸಂಚಯಿತ ಮೊತ್ತ ಲೆಕ್ಕ ಹಾಕುವುದು ತುಸು ನಿರಾಶಾದಾಯಕವಾಗಿವೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+