For Quick Alerts
ALLOW NOTIFICATIONS  
For Daily Alerts

ಎಲ್ಐಸಿಯ 111 ಪಾಲಿಸಿಗಳು ಬಂದ್, ಇದರಲ್ಲಿ ನಿಮ್ಮ ಪಾಲಿಸಿ ಇದೆಯೇ ನೋಡಿ..

ದೇಶದ ಅತಿದೊಡ್ಡ ಸರ್ಕಾರಿ ಸ್ವಾಮ್ಯದ ವಿಮಾ ಕಂಪನಿಯಾಗಿರುವ ಭಾರತೀಯ ಜೀವ ವಿಮಾ ನಿಗಮ (ಎಲ್ಐಸಿ) ತನ್ನ ಗ್ರಾಹಕರಿಗೆ ಕಹಿಸುದ್ದಿಯೊಂದನ್ನು ನೀಡಿದೆ.

|

ದೇಶದ ಅತಿದೊಡ್ಡ ಸರ್ಕಾರಿ ಸ್ವಾಮ್ಯದ ವಿಮಾ ಕಂಪನಿಯಾಗಿರುವ ಭಾರತೀಯ ಜೀವ ವಿಮಾ ನಿಗಮ (ಎಲ್ಐಸಿ) ತನ್ನ ಗ್ರಾಹಕರಿಗೆ ಕಹಿಸುದ್ದಿಯೊಂದನ್ನು ನೀಡಿದೆ.

ಈಗಾಗಲೇ ಪ್ರಮುಖ ಪಾಲಿಸಿಯಲ್ಲಿ ಒಂದಾದ ಜೀವನ್ ಅಕ್ಷಯ್ ಪಾಲಿಸಿಯನ್ನು ೨೦೧೭ರ ಡಿಸೆಂಬರ್ ೧ ರಿಂದ ಸ್ಥಗಿತಗೊಳಿಸಿದೆ. ಜೊತೆಗೆ ಇನ್ನೂ ಅನೇಕ ಪಾಲಿಸಿಗಳನ್ನು ಬಂದ್ ಮಾಡಿದೆ.
ಬಡ್ಡಿದರ ಗಣನೀಯವಾಗಿ ಕುಸಿಯುತ್ತಿರುವ ಹಿ್ನೆಲೆಯಲ್ಲಿ ಪಾಲಿಸಿದಾರರಿಗೆ ಉತ್ತಮ ಆದಾಯ ನೀಡುವುದು ಕಷ್ಟವಾಗುತ್ತಿದೆ ಎಂಬ ಕಾರಣಕ್ಕೆ ಭಾರತೀಯ ಜೀವ ವಿಮಾ ನಿಗಮ ಅನೇಕ ಪಾಲಿಸಿಗಳನ್ನು ಬಂದ್ ಮಾಡುತ್ತಿದೆ.

ವೆಬ್ಸೈಟ್ ನಲ್ಲಿ ಮಾಹಿತಿ

ವೆಬ್ಸೈಟ್ ನಲ್ಲಿ ಮಾಹಿತಿ

LIC ಸಂಸ್ಥೆ ತನ್ನ ವೆಬ್ಸೈಟ್ ನಲ್ಲಿ ಸ್ಥಗಿತಗೊಂಡಿರುವ ಪಾಲಿಸಿಗಳ ಮಾಹಿತಿಯನ್ನು ಹಂಚಿಕೊಂಡಿದೆ. ಯಾವ ಯಾವ ಪಾಲಿಸಿಗಳು ಬಂದ್ ಆಗಿವೆ? ಬಂದ್ ಆಗಿರುವ ಪಾಲಿಸಿದಾರರು ಮುಂದೇನು ಮಾಡಬೇಕು? ಎಂಬ ಮಾಹಿತಿ ಇಲ್ಲಿದೆ. ಇದನ್ನು ತಿಳಿದುಕೊಂಡ ಬಳಿಕ ಯಾವುದೇ ಏಜೆಂಟ್​ಗಳು ನಿಮಗೆ ಸ್ಥಗಿತಗೊಂಡ ಪಾಲಿಸಿಯನ್ನು ನೀಡಲು ಸಾಧ್ಯವಿಲ್ಲ.

ಎಲ್ಐಸಿ ವೆಬ್ಸೈಟ್ ನಲ್ಲಿ ನೀಡಿರುವ ಮಾಹಿತಿ ಅನ್ವಯ
ಈ ಕೆಳಗೆ ನೀಡಲಾಗಿರುವ ಪಾಲಿಸಿಗಳಲ್ಲಿ ಇನ್ಮುಂದೆ ಹೂಡಿಕೆ ಮಾಡಲು ಸಾಧ್ಯವಿಲ್ಲ.

 

ಬಂದ್ ಆಗಿರುವ ಎಲ್ಐಸಿ ಪಾಲಿಸಿಗಳು

ಬಂದ್ ಆಗಿರುವ ಎಲ್ಐಸಿ ಪಾಲಿಸಿಗಳು

- ಮಾರ್ಕೆಟ್ ಫ್ಲಸ್
- ಸಮೃದ್ಧಿ ಪ್ಲಸ್​
- ಮನಿ ಪ್ಲಸ್​- I
- ಜೀವನ್​ ಸುಗಮ್​
- ಜೀವನ್​ ವೈಭವ್
- ಜೀವನ್​ ವೃದ್ಧಿ
- ಫಾರ್ಚೂನ್​ ಪ್ಲಸ್ ಪ್ಲಾನ್​
- ಪ್ರಾಫಿಟ್​ ಪ್ಲಸ್​
- ಚೈಲ್ಡ್​ ಫಾರ್ಚೂನ್​ ಪ್ಲಸ್​
-ನಜೀವನ್​ ಸಾಥೀ ಪ್ಲಸ್​
- ಜೀವನ್​ ಅಮೃತ್​
- ಜೀವನ್​ ಸುರಭಿ-25 ವರ್ಷ
- ಜೀವನ್​ ಸುರಭಿ-15 ವರ್ಷ
- ಜೀವನ್​ ಅನುರಾಗ್
- ಪೆಂನ್ಶನ್​ ಪ್ಲಸ್​
- ಜೀವನ್​ ನಿಧಿ
- ನವಜೀವನ್ ಧಾರಾ- I
- ನಯೀ ಜೀವನ್ ಸುರಕ್ಷಾ- I
- ಹೆಲ್ತ ಪ್ಲಸ್​ attached file is in PDF Document Format
- ವೆಲ್ತ್​ ಪ್ಲಸ್​
- ಸಮೂಹ್​ ಸೂಪರ್​ ಎಜುಕೇಷನ್​ ಪ್ಲಸ್​
- ವಿಮಾ ಖಾತೆ- I
- ವಿಮಾ ಖಾತೆ- 2
- ಎಸ್​ಡಿಎ ಇಂಡೋವ್ಮೆಂಟ್​ ವೆಸ್ಟಿಂಗ್​21
- ಸಿಡಿಎ ಇಂಡೋವ್ಮೆಂಟ್​ 18
- ಜೀವನ್​ ಮಿತ್ರ್​(ದ್ವಿಗುಣ ಸುರಕ್ಷೆ)
- ಧನ್​ ವಾಪಸೀ ಯೋಜನಾ-25 ವರ್ಷ
- ಜೀವನ್ ಮಿತ್ರ್​(ತ್ರಿಗುಣ ಸುರಕ್ಷೆ)
- ಜೀವನ್​ ಪ್ರಮುಖ್​
- ಆಜೀವನ್​ ಪಾಲಿಸಿ
- ಜೀವನ್​ ತರಂಗ
- ಹೊಸ ವಿಮೆ ಗೋಲ್ಡ್​
- ವಿಮಾ ಹೂಡಿಕೆ 2005
- ಜೀವನ್​ ಸರಳ್​
- ಜೀವನ್​ ಆನಂದ್
- ವಿಮಾ ಉಳಿಕೆ
- ಫ್ಲೋಟಿಂಗ್​ ಇನ್ಶೂರೆನ್ಸ್​ ಪಾಲಿಸಿ
- ಜೀವನ್​ ಮಿತ್ಸ್​(ದ್ವಿಗುಣ ಸುರಕ್ಷೆ ಬಂದೋಬಸ್ಟ್​ ಪಾಲಿಸಿ)
- ಚೈಲ್ಡ್​ ಕರಿಯರ್​ ಯೋಜನಾ
- ಜೀವನ್​ ಶ್ರೀ- I
- ಜೀವನ್​ ಅಂಕುರ್​
- ಬಂದೋಬಸ್ತಿ ವಿಮಾ ಯೋಜನೆ
- ವೈವಾಹಿಕ ಬಂದೋಬಸ್ತ್​ ಅಥವಾ ಶೈಕ್ಷಣಿಕ
- ಅನ್​ಮೋಲ್​ ಜೀವನ್- I
- ವಾರ್ಷಿಕ ಯೋಜನೆ
- ಜೀವನ್​ ಛಾಯಾ
- ಕೋಮಲ್​ ಜೀವನ್​
- ಜೀವನ್​ ಕಿಶೋರ್​
- ಧನ್​ ವಾಪ್ಸಿ ಯೋಜನಾ-20 ವರ್ಷ
- ಜೀವನ್​ ಆಧಾರ್​
- ಜೀವನ್​ ವಿಶ್ವಾಸ್​
- ಜೀವನ್​ ದಸೀಪ್
- ಜೀವನ್ ಮಂಗಲ್​
- ಜೀವನ್ ಮಧುರ್
- ಇಂಡೋವ್ಮೆಂಟ್​ ಪ್ಲಸ್​
- ಹೊಸ ಜೀವನ ನಿಧಿ
- ಹೆಲ್ತ್​ ಪ್ರೊಟೆಕ್ಷನ್​ ಪ್ಲಸ್​
- ಪರಿವರ್ತನಶೀಲ ಅವಧಿ ವಿಮಾ ಪಾಲಿಸಿ
- ಜೀವನ್​ ಶಗುಣ್ ಯೋಜನೆ
- ವಯಸ್ಕ ಪೆಂಶನ್​ ವಿಮಾ ಯೋಜನೆ
- ಅಮೂಲ್ಯ ಜೀವನ- I
- ಪ್ಲೆಕ್ಸಿ ಪ್ಲಸ್​
- ಜೀವನ್​ ಸುರಭಿ 20 ವರ್ಷ
- ಜೀವನ್​ ಭಾರತಿ- I

ಪಾಲಿಸಿ ಇದ್ದವರು ಏನು ಮಾಡಬೇಕು?

ಪಾಲಿಸಿ ಇದ್ದವರು ಏನು ಮಾಡಬೇಕು?

ತಜ್ಞರು ಹೇಳುವ ಪ್ರಕಾರ ಪಾಲಿಸಿ ಬಂದ್ ಆಗುವುದಕ್ಕೂ ಮೊದಲು ಹೂಡಿಕೆ ಮಾಡಿದವರು ಇದರ ಚಿಂತೆ ಮಾಡುವ ಅವಶ್ಯಕತೆ ಇಲ್ಲ. ಪಾಲಿಸಿ ಮೆಚ್ಯುರಿಟಿಗೆ ಬಂದಾಗ ಅವರಿಗೆ ಪಾಲಿಸಿಯಲ್ಲಿ ತಿಳಿಸಿರುವ ಎಲ್ಲಾ ಸೌಲಭ್ಯಗಳು ಸಿಗುತ್ತವೆ ಎನ್ನಲಾಗಿದೆ. ಇದೇ ಸಂದರ್ಭದಲ್ಲಿ ಹೂಡಿಕೆದಾರರು ಮುಂದಿನ ದಿನಗಳಲ್ಲಿ ಈ ಪಾಲಿಸಿಗಳನ್ನು ಖರೀದಿಸದಂತೆ ಎಚ್ಚರವಹಿಸಬೇಕು.

ಪಾಲಿಸಿ ಸ್ಥಗಿತಗೊಳಿಸಲು ಕಾರಣವೇನು?

ಪಾಲಿಸಿ ಸ್ಥಗಿತಗೊಳಿಸಲು ಕಾರಣವೇನು?

ಯಾವುದೇ ವಿಮಾ ಕಂಪೆನಿಯು ತಮ್ಮ ಆದಾಯ ಕುಸಿದಾಗ ಪಾಲಿಸಿಯನ್ನು ಸ್ಥಗಿತಗೊಳಿಸುತ್ತದೆ ಎನ್ನುವುದು ತಜ್ಞರ ಅಭಿಪ್ರಾಯ. ಕಳೆದ ವರ್ಷ LIC ಯು ಜೀವನ್​ ಅಕ್ಷಯ್​ ಪಾಲಿಸಿಯನ್ನು ಸ್ಥಗಿತಗೊಳಿಸುವ ವೇಳೆ ಬಡ್ಡಿದರವು ಗಣನೀಯವಾಗಿ ಕುಸಿಯುತ್ತಿರುವುದರಿಂದ ಹೂಡಿಕೆದಾರರಿಗೆ ಉತ್ತಮ ಆದಾಯ ನೀಡಲು ಕಷ್ಟವಾಗುತ್ತಿದೆ ಎಂದದು ತಿಳಿಸಿತ್ತು.

English summary

LIC Withdraws its famous Policy, Check out given list..

Life insurance corporation Withdraws its famous Policies, Check out given list in the lic website.
Story first published: Wednesday, October 3, 2018, 11:43 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X