ಅಬ್ಬಾ..! ಅಂತೂ ಇಂತೂ ಪೆಟ್ರೋಲ್, ಡೀಸೆಲ್ ಬೆಲೆ ಇಳಿಕೆ ಆಯ್ತು

ಕೇಂದ್ರ ಸರ್ಕಾರ ವಾಹನ ಸವಾರರಿಗೆ ಸಲ್ಪ ಮಟ್ಟಿಗೆ ಸಮಾದಾನ ಮಾಡಿದೆ! ಗುರುವಾರ ಪೆಟ್ರೋಲ್, ಡೀಸೆಲ್ ಮೇಲಿನ ಅಬಕಾರಿ ಸುಂಕವನ್ನು ಕಡಿಮೆ ಮಾಡಿದ್ದು.

ಕೇಂದ್ರ ಸರ್ಕಾರ ವಾಹನ ಸವಾರರಿಗೆ ಸಲ್ಪ ಮಟ್ಟಿಗೆ ಸಮಾದಾನ ಮಾಡಿದೆ! ಗುರುವಾರ ಪೆಟ್ರೋಲ್, ಡೀಸೆಲ್ ಮೇಲಿನ ಅಬಕಾರಿ ಸುಂಕವನ್ನು ಕಡಿಮೆ ಮಾಡಿದ್ದು, ಕೇಂದ್ರ ಸರ್ಕಾರದ ಈ ನಿರ್ಧಾರದ ನಂತರ ಕೆಲ ರಾಜ್ಯ ಸರ್ಕಾರಗಳು ಕೂಡ ಪೆಟ್ರೋಲ್ ಡಿಸೇಲ್ ಮೇಲಿದ್ದ ವ್ಯಾಟ್ ಅನ್ನು ಕಡಿಮೆ ಮಾಡಿವೆ.

ಈ ನಿರ್ಧಾರ ವಾಹನ ಸವಾರರ ಕೊಂಚ ನೆಮ್ಮದಿ ತಂದಿದ್ದು, ಪರಿಣಾಮ ಶುಕ್ರವಾರ ಪೆಟ್ರೋಲ್, ಡಿಸೇಲ್ ಬೆಲೆಯಲ್ಲಿ ಇಳಿಕೆ ಕಂಡು ಬಂದಿದೆ.

ಮೆಟ್ರೋ ನಗರ

ಮೆಟ್ರೋ ನಗರ

ಶುಕ್ರವಾರ ರಾಷ್ಟ್ರದ ರಾಜಧಾನಿಯಾಗಿರುವ ದೆಹಲಿಯಲ್ಲಿ ಲೀಟರ್ ಪೆಟ್ರೋಲ್ ಬೆಲೆ ರೂ. 81.50 ಆಗಿದ್ದು, ಡಿಸೇಲ್ ಬೆಲೆ ರೂ. 72.95 ಆಗಿದೆ. ಮುಂಬೈನಲ್ಲಿ ಪೆಟ್ರೋಲ್ ಲೀಟರ್ ಬೆಲೆ ರೂ. 86.97 ಹಾಗೂ ಡಿಸೇಲ್ ರೂ. 77.45 ಇದೆ. ಗುರುವಾರ ಮುಂಬೈನಲ್ಲಿ ಪೆಟ್ರೋಲ್ ಬೆಲೆ ರೂ. 91 ಹಾಗು ದೆಹಲಿಯಲ್ಲಿ ರೂ. 84 ರಷ್ಟಿತ್ತು.

ಅರುಣ್ ಜೇಟ್ಲಿ ಮನವಿ

ಅರುಣ್ ಜೇಟ್ಲಿ ಮನವಿ

ಗುರುವಾರ ಕೇಂದ್ರ ಸರ್ಕಾರ ಪೆಟ್ರೋಲ್, ಡಿಸೇಲ್ ದರ ರೂ. 2.50 ಇಳಿಕೆ ಮಾಡಿರುವ ಹಿನ್ನೆಲೆಯಲ್ಲಿ, ರಾಜ್ಯಗಳೂ ಕೂಡ ಬೆಲೆ ಇಳಿಕೆ ಮಾಡುವಂತೆ ಸಚಿವ ಅರುಣ್ ಜೇಟ್ಲಿ ಮನವಿ ಮಾಡಿದ್ದರು. ಕೇಂದ್ರದ ಮನವಿಯನ್ನು ಹಲವು ರಾಜ್ಯಗಳು ಪಾಲಿಸಿವೆ.

ರೂ. 2.50 ಇಳಿಕೆ ಮಾಡಿದ ರಾಜ್ಯಗಳು

ರೂ. 2.50 ಇಳಿಕೆ ಮಾಡಿದ ರಾಜ್ಯಗಳು

ಕೇಂದ್ರದ ಮನವಿಯಂತೆ ಉತ್ತರ ಪ್ರದೇಶ, ಮಧ್ಯಪ್ರದೇಶ, ಗುಜರಾತ್, ಮಹಾರಾಷ್ಟ್ರ, ತ್ರಿಪುರಾ, ಜಾರ್ಖಂಡ್, ಅಸ್ಸಾಂ, ಅರುಣಾಚಲ ಪ್ರದೇಶ, ಹಿಮಾಚಲ ಪ್ರದೇಶ, ಚತ್ತೀಸ್ಗಢ, ಹರ್ಯಾಣ, ಉತ್ತರಾಖಂಡ, ಗೋವಾ ರಾಜ್ಯಗಳಲ್ಲಿ ತೈಲ ಬೆಲೆಯನ್ನು 2.50 ರೂಪಾಯಿ ಇಳಿಕೆ ಮಾಡಲಾಗಿದೆ.

ತೈಲ ಬೆಲೆ ಏರಿಕೆಗೆ ಕಾರಣ

ತೈಲ ಬೆಲೆ ಏರಿಕೆಗೆ ಕಾರಣ

ಜಾಗತಿಕ ಮಾರುಕಟ್ಟೆಯಲ್ಲಿ ಕಚ್ಚಾ ತೈಲ ಬೆಲೆ ಏರಿಕೆ ಹಾಗು ಡಾಲರ್ ಎದುರು ರೂಪಾಯಿ ಮೌಲ್ಯಗಳ ಕುಸಿತ ಪೆಟ್ರೋಲ್ ಡೀಸೆಲ್ ದರಗಳ ಮೇಲೆ ಭಾರೀ ಪರಿಣಾಮ ಬೀರಿದೆ. ಜಾಗತಿಕ ಮಾರುಕಟ್ಟೆಯಲ್ಲಿನ ಪ್ರಭಾವದಿಂದಾಗಿ ತೈಲ ಬೆಲೆಗಳು ಏರಿಳಿತಕ್ಕೆ ಒಳಗಾಗುತ್ತವೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+