ಫ್ಲಿಪ್ಕಾರ್ಟ್ ಬಿಗ್ ಬಿಲಿಯನ್ ಡೇ ಆಫರ್ ಇಂದಿನಿಂದ ಆರಂಭವಾಗಿದೆ. ಈ ಭರ್ಜರಿ ಸೇಲ್ ನಲ್ಲಿ ಹಲವು ವಸ್ತುಗಳ ಮೇಲೆ ಆಫರ್ ಸಿಗಲಿದೆ.
ಫ್ಲಿಪ್ಕಾರ್ಟ್ ಬಿಗ್ ಬಿಲಿಯನ್ ಡೇ ಆಫರ್ ಇಂದಿನಿಂದ ಆರಂಭವಾಗಿದೆ. ಈ ಭರ್ಜರಿ ಸೇಲ್ ನಲ್ಲಿ ಹಲವು ವಸ್ತುಗಳ ಮೇಲೆ ಆಫರ್ ಸಿಗಲಿದೆ.
ಐದು ದಿನಗಳ ಮಾರಾಟದಲ್ಲಿ ಮೊಬೈಲ್ ಬ್ರಾಂಡ್, ಟೆಲಿವಿಷನ್ ಮತ್ತು ಎಲೆಕ್ಟ್ರಾನಿಕ್ ಸಾಧನಗಳು ಶೇ. 80 ಮತ್ತು ಫ್ಯಾಶನ್, ಹೋಮ್ ಡೆಕೋರೇಟರ್, ಪರ್ಸನಲ್ ಕೇರ್ ಪ್ರಾಡಕ್ಟ್ಸ್ ಮತ್ತು ಇನ್ನಿತರ ವಸ್ತುಗಳ ಮೇಲೆ ಶೇ. 90ರವರೆಗೆ ಆಫರ್ ಸಿಗಲಿದೆ.
ಕೇವಲ ರೂ. 9999ಕ್ಕೆ ಅತ್ಯುತ್ತಮ ಟಿವಿ
ದಸರಾ ಮತ್ತು ದೀಪಾವಳಿ ಪ್ರಯುಕ್ತ ಹೊಸ ಟಿವಿಯನ್ನು ಖರೀದಿಸಲು ಇಚ್ಛಿಸಿದರೆ ಇದು ಒಳ್ಳೆ ಅವಕಾಶ. ಕಡಿಮೆ ಬೆಲೆಗೆ ಉತ್ತಮ ಟಿವಿ ಸಿಗುತ್ತಿದ್ದು, ಈ ಸೇಲ್ ನಲ್ಲಿ ಕೇವಲ ರೂ. 9999ಕ್ಕೆ ನೀವು ಅತ್ಯುತ್ತಮ ಟಿವಿಯನ್ನು ಖರೀದಿ ಮಾಡಬಹುದಾಗಿದೆ.
ಭಾರತೀಯ ಕಂಪನಿ Vu ಕೇವಲ ರೂ. 9,999 ಗೆ 32 ಇಂಚಿನ ಹೆಚ್ಡಿ ಎಲ್ಇಡಿ ಟಿವಿ ನೀಡುತ್ತಿದೆ. ಈ ಟಿವಿಯ ಮೂಲ ಬೆಲೆ ರೂ. 16,000. ಆದರೆ ಬಿಗ್ ಬಿಲಿಯನ್ ಡೇ ಸೇಲ್ ನಲ್ಲಿ ಶೇ. 37 ರಷ್ಟು ರಿಯಾಯಿತಿ ಸಿಗುತ್ತಿದೆ.
ಇಎಂಐ ಸೌಲಭ್ಯ
ಗ್ರಾಹಕರು ಟಿವಿಯನ್ನು ಇಎಂಐ ಮೂಲಕವೂ ಖರೀದಿ ಮಾಡುವ ಅವಕಾಶವಿದ್ದು, ಇಎಂಐ ಗ್ರಾಹಕರು ತಿಂಗಳಿಗೆ ರೂ. 333 ಪಾವತಿ ಮಾಡಿದರೆ ಆಯ್ತು. ಇನ್ನು 32 ಇಂಚಿನ ಎಂಐ ಎಲ್ಇಡಿ ಸ್ಮಾರ್ಟ್ ಟಿವಿ 13,499 ರೂಪಾಯಿಗೆ ಸಿಗುತ್ತಿದೆ. ಇದರ ಮೂಲ ಬೆಲೆ ರೂ. 15,999. ಇನ್ನು ಎಂಐನ 43 ಇಂಚಿನ ಎಲ್ಇಡಿ ಸ್ಮಾರ್ಟ್ ಟಿವಿ 4ಎ ಕೇವಲ 20,999 ರೂಪಾಯಿಗೆ ಸಿಗುತ್ತಿದೆ.
ಟಿವಿ ಖರೀದಿಸುವವರಿಗೆ ಬಂಪರ್
ಥಾಮ್ಸನ್ 32 ಇಂಚಿನ ಥಾಮ್ಸನ್ ಬಿ 9 ಪ್ರೊ ಟಿವಿ ಕೇವಲ ರೂ. 11,999 ಗೆ ಖರೀದಿಸಬಹುದು. ಇದರ ಮೇಲೆ ಶೇ. 29ರಷ್ಟು ರಿಯಾಯಿತಿ ಇದೆ. ಸ್ಯಾಮ್ಸಂಗ್ ಸೇರಿದಂತೆ ಇನ್ನೂ ಅನೇಕ ಕಂಪನಿಗಳ ಟಿವಿಗಳು ಅಗ್ಗದ ಬೆಲೆಗೆ ಸಿಗುತ್ತಿದ್ದು, ಟಿವಿ ಖರೀದಿ ಮಾಡಬಯಸುವ ಗ್ರಾಹಕರಿಗೆ ಇದು ಒಳ್ಳೆ ಅವಕಾಶ.


Click it and Unblock the Notifications