ಎಟಿಎಂ ನಗದು ವಿತ್ ಡ್ರಾ ಮಿತಿ: ನಿಮ್ಮ ಎಟಿಎಂನಿಂದ ದಿನಕ್ಕೆ ಎಷ್ಟು ಹಣ ತೆಗೆಯಬಹುದು?

ಎಟಿಎಂಗಳಿಂದ ನಗದು ವಿತ್ ಡ್ರಾ ಮಾಡುವಾಗ ಖಚಿತ ಮಿತಿಗಳಿದ್ದು, ಇದು ಬ್ಯಾಂಕಿನಿಂದ ಬ್ಯಾಂಕಿಗೆ ಬದಲಾಗುತ್ತಿರುತ್ತದೆ. ಗ್ರಾಹಕರು ತಮ್ಮ ಖಾತೆಯಿಂದ ಹಣ ಹಿಂಪಡೆಯುವ ಪ್ರಮಾಣವು ಅವರು ಹೊಂದಿರುವ ಖಾತೆಗೆ ಅನುಗುಣವಾಗಿರುತ್ತದೆ.

ಎಟಿಎಂಗಳಿಂದ ನಗದು ವಿತ್ ಡ್ರಾ ಮಾಡುವಾಗ ಖಚಿತ ಮಿತಿಗಳಿದ್ದು, ಇದು ಬ್ಯಾಂಕಿನಿಂದ ಬ್ಯಾಂಕಿಗೆ ಬದಲಾಗುತ್ತಿರುತ್ತದೆ. ಗ್ರಾಹಕರು ತಮ್ಮ ಖಾತೆಯಿಂದ ಹಣ ಹಿಂಪಡೆಯುವ ಪ್ರಮಾಣವು ಅವರು ಹೊಂದಿರುವ ಖಾತೆಗೆ ಅನುಗುಣವಾಗಿರುತ್ತದೆ.

ಎಸ್ಬಿಐ, ಎಚ್ಡಿಎಫ್ಸಿ, ಪಿ.ಎನ್.ಬಿ, ಐಸಿಐಸಿಐ ಬ್ಯಾಂಕ್ ಗಳ ಎಟಿಎಂ ನಗದು ವಿತ್ ಡ್ರಾ ಮಿತಿಯಲ್ಲಿ ಕೆಲವು ಬದಲಾವಣೆಗಳಾಗಿದ್ದು, ನಿಮ್ಮ ಬಳಿ ಯಾವ ಮಾದರಿಯ ಕಾರ್ಡ್ ಗಳಿವೆ ಎಂಬುದರ ಮೇಲೆ ಮಿತಿ ನಿಗದಿಪಡಿಸಲಾಗಿದೆ. ಎಟಿಎಂ ಮೂಲಕ ಈ 16 ವ್ಯವಹಾರಗಳನ್ನು ಮಾಡಬಹುದು

ಎಸ್ಬಿಐ ಬ್ಯಾಂಕ್

ಎಸ್ಬಿಐ ಬ್ಯಾಂಕ್

ಈಗಾಗಲೇ ಎಸ್ಬಿಐ ತನ್ನ ಗ್ರಾಹಕರಿಗೆ ದಿನವೊಂದಕ್ಕೆ ಎಟಿಎಂ ವಿತ್ ಡ್ರಾ ಮಿತಿಯನ್ನು ರೂ. 40,000 ದಿಂದ ರೂ. 20,000 ಕ್ಕೆಇಳಿಸಿದೆ. ಈ ನೀತಿಯು ಎಸ್.ಬಿ.ಐ. ಕ್ಲಾಸಿಕ್ ಮತ್ತು ಮಾಸ್ಟ್ರೋ ಡೆಬಿಟ್ ಕಾರ್ಡ್ ಗೆ ಅನ್ವಯಿಸಲಿದೆ.

ಬೇರೆ ಕಾರ್ಡ್ ಗಳ ಮಿತಿ:
SBI's Global International debit card: Rs 50,000 per day
SBI's Platinum International debit card: Rs 100,000per day

ಐಸಿಐಸಿಐ ಬ್ಯಾಂಕ್

ಐಸಿಐಸಿಐ ಬ್ಯಾಂಕ್

ಐಸಿಐಸಿಐ ಬ್ಯಾಂಕ್ ಗ್ರಾಹಕರು ದಿನವೊಂದಕ್ಕೆ ರೂ. 50 ಸಾವಿರ ಮೊತ್ತವನ್ನು ಎಟಿಎಂ ಗಳಿಂದ ವಿತ್ ಡ್ರಾ ಮಾಡಬಹುದು.
ಬೇರೆ ಕಾರ್ಡ್ ಗಳ ಮಿತಿ
ಐಸಿಐಸಿಐ ಪ್ರಿವಿಲೇಜ್ ಬ್ಯಾಂಕಿಂಗ್ ಟೈಟಾನಿಯಂ ಡೆಬಿಟ್ ಕಾರ್ಡ್ ರೂ. 1,00,000.
ಐಸಿಐಸಿಐ ಸ್ಮಾರ್ಟ್ ಶಾಪರ್ ಗೋಲ್ಡ್ ಡೆಬಿಟ್ ಕಾರ್ಡ್ ರೂ. 75,000.
ಐಸಿಐಸಿಐ ಸ್ಮಾರ್ಟ್ ಶಾಪರ್ ಸಿಲ್ವರ್ ಡೆಬಿಟ್ ಕಾರ್ಡ್ ರೂ. 50,000.

ಪಂಜಾಬ್ ನ್ಯಾಷನಲ್ ಬ್ಯಾಂಕ್

ಪಂಜಾಬ್ ನ್ಯಾಷನಲ್ ಬ್ಯಾಂಕ್

ಪಂಜಾಬ್ ನ್ಯಾಷನಲ್ ಬ್ಯಾಂಕ್ (ಪಿಎನ್ಬಿ) ಪ್ಲಾಟಿನಮ್ ಮತ್ತು ಕ್ಲಾಸಿಕ್ ಕಾರ್ಡ್ ಬಳಕೆದಾರರಿಗೆ ಪ್ರತ್ಯೇಕ ನಗದು ಹಿಂತೆಗೆದುಕೊಳ್ಳುವ ಮಿತಿಗಳನ್ನು ಹೊಂದಿದೆ. ಎರಡೂ ಕಾರ್ಡುಗಳು ರುಪೇ ಮತ್ತು ಮಾಸ್ಟರ್ ರೂಪಾಂತರಗಳಲ್ಲಿ ಬರುತ್ತವೆ.
ಪಿಎನ್ಬಿ ಪ್ಲಾಟಿನಂ ಕಾರ್ಡ್ ರೂ. 50,000 ಪ್ರತಿದಿನ.
ಪಿಎನ್ಬಿ ಕ್ಲಾಸಿಕ್ ಕಾರ್ಡ್ ರೂ. 25,000.

ಆಕ್ಸಿಸ್ ಬ್ಯಾಂಕ್

ಆಕ್ಸಿಸ್ ಬ್ಯಾಂಕ್

ಆಕ್ಸಿಸ್ ಬ್ಯಾಂಕ್ ಹಲವಾರು ಡೆಬಿಟ್ ಕಾರ್ಡ್ ಗಳನ್ನು ಒದಗಿಸುತ್ತದೆ.
ಆಕ್ಸಿಸ್ ಬ್ಯಾಂಕ್ ನ ಬರ್ಗಂಡಿ ಡೆಬಿಟ್ ಕಾರ್ಡ್ ಮೂಲಕ ಪ್ರತಿದಿನ ರೂ. 3,00,000 ವಿತ್ ಡ್ರಾ ಮಾಡಬಹುದು.
ಟೈಟಾನಿಯಂ ಪ್ರೈಮ್ & ಫ್ಲಸ್ ಡೆಬಿಟ್ ಕಾರ್ಡ್ ಮೂಲಕ ರೂ. 50,000 ವಿತ್ ಡ್ರಾ ಮಾಡಬಹುದು.

ಎಚ್ಡಿಎಫ್ಸಿ ಬ್ಯಾಂಕ್

ಎಚ್ಡಿಎಫ್ಸಿ ಬ್ಯಾಂಕ್

ಎಚ್ಡಿಎಫ್ಸಿ ಬ್ಯಾಂಕ್ ತನ್ನ ಗ್ರಾಹಕರಿಗೆ ಎಟಿಎಂಗಳಿಂದ ಪ್ಲ್ಯಾಟಿನಂ ಚಿಪ್ ಡೆಬಿಟ್ ಕಾರ್ಡ ಮೂಲಕ ದಿನಕ್ಕೆ ರೂ. 1 ಲಕ್ಷ ಹಿಂತೆಗೆದುಕೊಳ್ಳಲು ಅವಕಾಶ ಕಲ್ಪಿಸಿದೆ.

ಇತರ ಕಾರ್ಡುಗಳ ಮಿತಿಗಳು:
ಎಚ್ಡಿಎಫ್ಸಿ ಬ್ಯಾಂಕ್ ಟೈಟೇನಿಯಮ್ ರಾಯಲ್ ಡೆಬಿಟ್ ಕಾರ್ಡ್: ದಿನಕ್ಕೆ ರೂ. 75,000
ಎಚ್ಡಿಎಫ್ಸಿ ಈಜಿಶಾಪ್ ಡೆಬಿಟ್ ಕಾರ್ಡ್: ದಿನಕ್ಕೆ ರೂ. 25,000
ಎಚ್ಡಿಎಫ್ಸಿ ರುಪೇ ಪ್ರೀಮಿಯಂ ಡೆಬಿಟ್ ಕಾರ್ಡ್: ದಿನಕ್ಕೆ ರೂ. 25,000
ಈಜಿಶಾಪ್ ಟೈಟೇನಿಯಮ್ ಡೆಬಿಟ್ ಕಾರ್ಡ್: ದಿನಕ್ಕೆ ರೂ. 50,000

ಬ್ಯಾಂಕ್ ಆಫ್ ಬರೋಡಾ

ಬ್ಯಾಂಕ್ ಆಫ್ ಬರೋಡಾ

ಬ್ಯಾಂಕ್ ಆಫ್ ಬರೋಡಾದ ರುಪೇ ಕ್ಲಾಸಿಕ್ ಕಾರ್ಡ್ ದಿನಕ್ಕೆ ರೂ. 25,000 ಹಿಂತೆಗೆದುಕೊಳ್ಳುವ ಮಿತಿಯನ್ನು ಹೊಂದಿದೆ.
ಇತರ ಕಾರ್ಡುಗಳ ಮಿತಿಗಳು:
ಬರೋಡಾ ಮಾಸ್ಟರ್ ಪ್ಲ್ಯಾಟಿನಂ ಕಾರ್ಡ್: ದಿನಕ್ಕೆ ರೂ. 50,000
ರೂಪೇ ಪ್ಲಾಟಿನಂ ಕಾರ್ಡ್: ದಿನಕ್ಕೆ ರೂ. 50,000
ವೀಸಾ ಎಲೆಕ್ಟ್ರಾನ್ ಕಾರ್ಡ್: ದಿನಕ್ಕೆ ರೂ. 25,000
ಮಾಸ್ಟರ್ ಕ್ಲಾಸಿಕ್ ಕಾರ್ಡ್: ದಿನಕ್ಕೆ ರೂ. 25,000
ವೀಸಾ ಪ್ಲಾಟಿನಂ ಚಿಪ್ ಕಾರ್ಡ್: ದಿನಕ್ಕೆ ರೂ. 1 ಲಕ್ಷ

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+