ಜಿಯೋಗೆ ಸೆಡ್ಡು ಹೊಡೆದಿರುವ ಏರ್ಟೆಲ್ ಭರ್ಜರಿ ಆಫರ್ ಘೋಷಿಸಿದೆ ನೋಡಿ..

ರಿಲಯನ್ಸ್ ಜಿಯೋ ಪ್ರವೇಶಾತಿ ನಂತರ ಟೆಲಿಕಾಂ ವಲಯದಲ್ಲಿ ದರ ಸಮರ ಏರ್ಪಟ್ಟಿದ್ದು, ಪರಸ್ಪರ ಜಿದ್ದಾಜಿದ್ದಿಯಲ್ಲಿ ಹೊಸ ಹೊಸ ಪ್ಲಾನ್ ಗಳನ್ನು ಪರಿಚಯಿಸುತ್ತಿವೆ. ಇದೀಗ ಏರ್ಟೆಲ್ ಕೂಡ ಜಿಯೋಗೆ ಪೈಪೋಟಿ ನೀಡಲು ಹೊಸ ಯೋಜನೆ ಘೋಷಿಸಿದೆ.

ದೇಶದ ಪ್ರಮುಖ ಟೆಲಿಕಾಂ ಸಂಸ್ಥೆ ಏರ್ಟೆಲ್ ಆಕ್ರಮಣಕಾರಿ ಆಫರ್ ಗಳನ್ನು ಘೋಷಿಸುವುದರಲ್ಲಿ ಮುಂಚೂಣಿಯಲ್ಲಿರುತ್ತದೆ. ರಿಲಯನ್ಸ್ ಜಿಯೋ ಪ್ರವೇಶಾತಿ ನಂತರ ಟೆಲಿಕಾಂ ವಲಯದಲ್ಲಿ ದರ ಸಮರ ಏರ್ಪಟ್ಟಿದ್ದು, ಪರಸ್ಪರ ಜಿದ್ದಾಜಿದ್ದಿಯಲ್ಲಿ ಹೊಸ ಹೊಸ ಪ್ಲಾನ್ ಗಳನ್ನು ಪರಿಚಯಿಸುತ್ತಿವೆ. ಇದೀಗ ಏರ್ಟೆಲ್ ಕೂಡ ಜಿಯೋಗೆ ಪೈಪೋಟಿ ನೀಡಲು ಹೊಸ ಯೋಜನೆ ಘೋಷಿಸಿದೆ.

ರೂ. 398 ಪ್ರೀಪೇಯ್ಡ್ ಪ್ಲಾನ್

ರೂ. 398 ಪ್ರೀಪೇಯ್ಡ್ ಪ್ಲಾನ್

ಏರ್ಟೆಲ್ ಪರಿಚಯಿಸಿರುವ ರೂ. 398 ಪ್ರೀಪೇಯ್ಡ್ ಆಫರ್, ಜಿಯೋಗಿಂತ ಕಡಿಮೆ ದರದಲ್ಲಿ ಹೆಚ್ಚು ಡೇಟಾ ಸೇವೆ ಒದಗಿಸುತ್ತದೆ. ಈ ಪ್ಲಾನ್ ಮೂಲಕ ಪ್ರತಿನಿತ್ಯ 1.5 ಜಿಬಿ ಡೆಟಾ ಸಿಗಲಿದೆ. ಅನಿಯಮಿತ ಕರೆ ಸೌಲಭ್ಯ, ಎಸ್ಎಂಎಸ್ ಸಿಗಲಿದೆ. 70 ದಿನದ ಈ ಪ್ಯಾಕ್ ನಲ್ಲಿ ಗ್ರಾಹಕರಿಗೆ ಒಟ್ಟು 105 ಜಿಬಿ ಇಂಟರ್ ನೆಟ್ ನೀಡಲಿದೆ.

ಜಿಯೋಗೆ ಟಕ್ಕರ್

ಜಿಯೋಗೆ ಟಕ್ಕರ್

ಜಿಯೋ ಘೋಷಿಸಿರುವ ರೂ. 398, 349 ಪ್ಲಾನ್ ಗಳಿಗೆ ಸೆಡ್ಡು ಹೊಡೆಯಲು ಈ ಆಫರ್ ಗಳನ್ನು ಏರ್ಟೆಲ್ ಪರಿಚಯಿಸಿದೆ ಎನ್ನಲಾಗಿದೆ.

ವೊಡಾಫೋನ್ ಗಿಂತ ಬೆಸ್ಟ್

ವೊಡಾಫೋನ್ ಗಿಂತ ಬೆಸ್ಟ್

ವೊಡಾಫೋನ್ ಕಂಪನಿ ಮಾತ್ರ ಈಗಲೂ ತನ್ನ ಗ್ರಾಹಕರಿಗೆ ದಿನಕ್ಕೆ 250 ನಿಮಿಷ ಹಾಗು ವಾರಕ್ಕೆ ೧ ಸಾವಿರ ಉಚಿತ ಕರೆಗಳ ಸೌಲಭ್ಯವನ್ನು ನೀಡುತ್ತಿದೆ. ಆದರೆ ಏರ್ಟೆಲ್ ತನ್ನ ಗ್ರಾಹಕರನ್ನು ಸೆಳೆಯಲು ಸಂಪೂರ್ಣ ಅನಿಯಮಿತ ಆಫರ್ ನೀಡಲು ಮುಂದಾಗಿದೆ.

ಎಲ್ಲೆಡೆ ಸೇವೆ ಲಭ್ಯ

ಎಲ್ಲೆಡೆ ಸೇವೆ ಲಭ್ಯ

ಹಿಂದೆ ಈಶಾನ್ಯ ರಾಜ್ಯಗಳ ಭಾಗದ ವೃತ್ತಗಳಿಗೆ ಸೀಮಿತವಾಗುವಂತೆ ಏರ್ಟೆಲ್ ಇದೇ ಮಾದರಿಯಲ್ಲಿ ರೂ. 399 ಪ್ಲಾನ್ ನೀಡಿತ್ತು. ಆದರೆ ಈಗ ದೇಶದ ಎಲ್ಲೆಡೆ ಈ ಪ್ಲಾನ್ ಬಳಸಿಕೊಳ್ಳಬಹುದಾಗಿದೆ. ದೇಶದ 22 ವೃತ್ತಗಳಿಗೆ ಅನ್ವಯವಾಗುವಂತೆ ಈ ಆಫರ್ ಸಿದ್ಧಪಡಿಸಲಾಗಿದೆ .

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+