ಭಾರತದ ಟಾಪ್ 10 ಟೆಲಿಕಾಂ/ಮೊಬೈಲ್ ಟವರ್ ಕಂಪನಿಗಳು ಯಾವುವು ಗೊತ್ತೆ?

ಭಾರತದ ಪ್ರಮುಖ ಹತ್ತು ದೂರಸಂಪರ್ಕ/ಮೊಬೈಲ್ ಟವರ್ ಕಂಪನಿಗಳು ಯಾವುವು ಎನ್ನುವುದು ಕುತೂಹಲಕಾರಿ ಸಂಗತಿ. ಹೊಸದಾಗಿ ಪ್ರವೇಶಿಸಿರುವ ಟೆಲಿಕಾಂ ಕಂಪನಿಗಳು ಉನ್ನತ ಮಟ್ಟದ ಸೇವೆಗಳೊಂದಿಗೆ ಹಳೆ ಕಂಪನಿಗಳಿಗೆ ಕಠಿಣ ಪೈಪೋಟಿ ನೀಡುತ್ತಿವೆ.

ಭಾರತದ ಪ್ರಮುಖ ಹತ್ತು ದೂರಸಂಪರ್ಕ/ಮೊಬೈಲ್ ಟವರ್ ಕಂಪನಿಗಳು ಯಾವುವು ಎನ್ನುವುದು ಕುತೂಹಲಕಾರಿ ಸಂಗತಿ. ಹೊಸದಾಗಿ ಪ್ರವೇಶಿಸಿರುವ ಟೆಲಿಕಾಂ ಕಂಪನಿಗಳು ಉನ್ನತ ಮಟ್ಟದ ಸೇವೆಗಳೊಂದಿಗೆ ಹಳೆ ಕಂಪನಿಗಳಿಗೆ ಕಠಿಣ ಪೈಪೋಟಿ ನೀಡುತ್ತಿವೆ.
ಇಲ್ಲಿ ಭಾರತದ ಅಗ್ರ ಹತ್ತು ಟೆಲಿಕಾಂ/ಮೊಬೈಲ್ ಟವರ್ ಕಂಪನಿಗಳ ಪಟ್ಟಿಯನ್ನು ನೀಡಲಾಗಿದೆ.

ಅಮೆರಿಕನ್ ಟವರ್ ಕಾರ್ಪ್

ಅಮೆರಿಕನ್ ಟವರ್ ಕಾರ್ಪ್

ಅಮೆರಿಕನ್ ಟವರ್ ಸ್ವತಂತ್ರ ಆಯೋಜಕರಾಗಿ, ಡೆವಲಪರ್ ಆಗಿ ಪ್ರಸಾರ ಮತ್ತು ನಿಸ್ತಂತು ಸಂವಹನಗಳ (wireless communications) ಮಾಲೀಕತ್ವವನ್ನು ಹೊಂದಿದ್ದಾರೆ.
ನಿರ್ವಹಣಾ ಮೇಲ್ಛಾವಣಿಗಳು (managed rooftops), ಇನ್-ಬಿಲ್ಡಿಂಗ್ ಸಿಸ್ಟಮ್ಸ್, ಹೊರಾಂಗಣ ವಿತರಣೆ ಆಂಟೆನಾ ಸಿಸ್ಟಮ್ ಗಳ ಮೂಲಕ ಕಸ್ಟಮೈಸ್ ಸೋಲೂಷನ್ ಅನ್ನು ಈ ಪ್ರಮುಖ ದೂರಸಂಪರ್ಕ ಕಂಪನಿ ಒದಗಿಸುತ್ತದೆ. ಇದು ನೆಟ್ವರ್ಕ್ ನಿಯೋಜನೆಯನ್ನು ವೇಗಗೊಳಿಸಲು ಸೇವೆಗಳನ್ನು ಒದಗಿಸುತ್ತದೆ. ಕಂಪನಿಯು ಬೋಸ್ಟನ್, ಮ್ಯಾಸಚೂಸೆಟ್ಸ್ ನಲ್ಲಿ ಪ್ರಧಾನ ಕಚೇರಿಯನ್ನು ಹೊಂದಿದೆ. ಇದು ಯುನೈಟೆಡ್ ಸ್ಟೇಟ್ಸ್ ಮತ್ತು ಅರ್ಜೆಂಟೈನಾ, ಕೊಸ್ಟಾ ರಿಕಾ, ಜರ್ಮನಿ, ಭಾರತ, ಮೆಕ್ಸಿಕೊ, ಪೆರು, ಉಗಾಂಡಾ, ಫ್ರಾನ್ಸ್, ಕೊಲಂಬಿಯಾ ಇತ್ಯಾದಿಗಳಲ್ಲಿ ಕಚೇರಿಗಳನ್ನು ಹೊಂದಿದೆ.

ಆಸ್ಟರ್ ಇನ್ಫ್ರಾಸ್ಟ್ರಕ್ಚರ್

ಆಸ್ಟರ್ ಇನ್ಫ್ರಾಸ್ಟ್ರಕ್ಚರ್

ಆಸ್ಟರ್ ಎಂಬುದು ವೃತ್ತಿಪರವಾಗಿ ಇನ್ಫ್ರಾ ಎಂಜಿನಿಯರಿಂಗ್ ಕಂಪನಿಯಾಗಿದ್ದು, ಮುಖ್ಯವಾಗಿ ವಿದ್ಯುತ್ ಮತ್ತು ಟೆಲಿಕಾಂ ಮೂಲಸೌಕರ್ಯ ವಿಭಾಗಗಳಲ್ಲಿ ಗ್ರಾಹಕರ ಅಗತ್ಯತೆಗಳನ್ನು ಪೂರೈಸಲು ವ್ಯಾಪಕವಾದ ಉತ್ಪನ್ನಗಳನ್ನು & ಸೇವೆಗಳನ್ನು ಒದಗಿಸುತ್ತದೆ. ಇದು ಭಾರತದಲ್ಲಿನ ಅಗ್ರ ಮೊಬೈಲ್ ಟವರ್ ಕಂಪನಿಗಳಲ್ಲಿ ಒಂದಾಗಿದೆ. ಇದು ಏಷ್ಯಾ, ಆಫ್ರಿಕಾ ಪ್ರದೇಶಗಳು ಮತ್ತು ಮಧ್ಯ ಪ್ರಾಚ್ಯವನ್ನು ಒಳಗೊಂಡಂತೆ ಪ್ರಪಂಚದಾದ್ಯಂತ ಕಾರ್ಯನಿರ್ವಹಿಸುತ್ತಿದೆ.

ಭಾರ್ತಿ ಇನ್ಫ್ರಾಟೆಲ್

ಭಾರ್ತಿ ಇನ್ಫ್ರಾಟೆಲ್

ಭಾರತಿ ಇನ್ಫ್ರಾಟೆಲ್ ಅನ್ನು 1995 ರಲ್ಲಿ ಸ್ಥಾಪಿಸಲಾಯಿತು. ಇದು ಭಾರತ, ಶ್ರೀಲಂಕಾ, ಬಾಂಗ್ಲಾದೇಶ, ಆಫ್ರಿಕಾ ಮುಂತಾದ ದೇಶಗಳಲ್ಲಿ ಸೇವೆ ಸಲ್ಲಿಸುತ್ತಿದೆ. ಇದರ ಪ್ರಧಾನ ಕಚೇರಿ ಭಾರತದ ನವದೆಹಲಿಯ ನೆಲ್ಸನ್ ಮಂಡೇಲಾ ರಸ್ತೆಯಲ್ಲಿದೆ. ಇದರ ಉತ್ಪನ್ನ ವ್ಯಾಪ್ತಿಯು ಸ್ಥಿರ ಲೈನ್, ಮೊಬೈಲ್ ಟೆಲಿಫೋನಿ ಮತ್ತು ಬ್ರಾಡ್ಬ್ಯಾಂಡ್ ಅನ್ನು ಒಳಗೊಂಡಿದೆ. ಭಾರತಿ ಇನ್ಫ್ರಾಟೆಲ್ ಕಂಪನಿಯ ಸ್ಥಾಪಕ ಸುನಿಲ್ ಭಾರತ್ ಮಿತ್ತಲ್.

ಎಸ್ಸಾರ್ ಟೆಲಿಕಾಂ

ಎಸ್ಸಾರ್ ಟೆಲಿಕಾಂ

ಎಸ್ಸಾರ್ ಟೆಲಿಕಾಂ ಭಾರತದ ಪ್ರಮುಖ ಮೊಬೈಲ್ ಟೆಲಿಕಾಂ ಕಂಪನಿಗಳಲ್ಲಿ ಒಂದಾಗಿದೆ. ಇದು ಜಗತ್ತಿನಾದ್ಯಂತ ಕಾರ್ಯನಿರ್ವಹಿಸುತ್ತಿದೆ.

ಜಿಟಿಎಲ್

ಜಿಟಿಎಲ್

ಜಿಟಿಎಲ್ ಲಿಮಿಟೆಡ್ ಜಾಗತಿಕ ಉದ್ಯಮ ಸಂಸ್ಥೆಯಾಗಿದೆ. 1987 ರಲ್ಲಿ ಇದನ್ನು ಸ್ಥಾಪಿಸಲಾಗಿದ್ದು, ನವೀ ಮುಂಬಯಿಯಲ್ಲಿ ಪ್ರಧಾನ ಕಚೇರಿ ಇದೆ. ಇದು ಭಾರತದಲ್ಲಿ ನೆಟ್ವರ್ಕ್ ಸೇವೆ ಒದಗಿಸುವ ಪ್ರಮುಖ ಕಂಪನಿಯಾಗಿದೆ. ಈ ಪ್ರಮುಖ ಮೊಬೈಲ್ ಟವರ್ ಕಂಪನಿಯ ಸ್ಥಾಪಕ ಮನೋಜ್ ತಿರೋಡ್ಕರ್. ಟೆಲಿಕಾಂ ಆಪರೇಟರ್ಸ್, ಟೆಕ್ನಾಲಜಿ ಪೂರೈಕೆದಾರರು (OEM's) ಮತ್ತು ಟವರ್ ಕಂಪನಿಗಳ ನೆಟ್ವರ್ಕ್ ಲೈಫ್ ಸೈಕಲ್ ಅಗತ್ಯತೆ ಸೇವೆಗಳನ್ನು ಮತ್ತು ಪರಿಹಾರಗಳನ್ನು ಒದಗಿಸುತ್ತದೆ. ಕಾರ್ಪೊರೇಟ್ ಗವರ್ನನ್ಸ್ ಬಿಸಿನೆಸ್ ಮತ್ತು ಸಿಎಸ್ಆರ್ ನಲ್ಲಿ ಜಿಟಿಎಲ್ ಹಲವಾರು ಪ್ರಶಸ್ತಿಗಳನ್ನು ಸ್ವೀಕರಿಸಿದೆ.

ಇಂಡಿಯಾ ಟೆಲಿಕಾಂ ಇನ್ಫ್ರಾ ಲಿಮಿಟೆಡ್

ಇಂಡಿಯಾ ಟೆಲಿಕಾಂ ಇನ್ಫ್ರಾ ಲಿಮಿಟೆಡ್

ಇಂಡಿಯಾ ಟೆಲಿಕಾಂ ಇನ್ಫ್ರಾ ಲಿಮಿಟೆಡ್ ಭಾರತದಲ್ಲಿ ಟೆಲಿಕಾಂ ಟವರ್ ಕಂಪೆನಿಗಳನ್ನು ಮುನ್ನಡೆಸುತ್ತಿದೆ. ಇದು ಉನ್ನತ ಗುಣಮಟ್ಟದ ಸೇವೆಗಳಿಗೆ ಹೆಸರುವಾಸಿಯಾಗಿದೆ.

ಇಂಡಸ್

ಇಂಡಸ್

ಇಂಡಸ್ ಟವರ್ ಲಿಮಿಟೆಡ್ ಅನ್ನು 2007 ರಲ್ಲಿ ಇನ್ ಕಾರ್ಪೋರೇಟ್ ಮಾಡಲಾಯಿತು. ಇಂಡಸ್ ಟವರ್ಸ್ ಎಲ್ಲಾ ಟೆಲಿಕಾಂ ನಿರ್ವಾಹಕರು ಮತ್ತು ಬ್ರಾಡ್ಬ್ಯಾಂಡ್ ಸೇವಾ ಪೂರೈಕೆದಾರರಂತಹ ಇತರ ನಿಸ್ತಂತು ಸೇವಾ ಪೂರೈಕೆದಾರರಿಗೆ ಪ್ಯಾಸಿವ್ ಮೂಲಸೌಕರ್ಯ ಸೇವೆಗಳನ್ನು ಒದಗಿಸುವ ಕಂಪನಿಯಾಗಿದೆ. ದೇಶಾದ್ಯಂತ ಇದು ಹಲವಾರು ಸಂಪರ್ಕ ಜಾಲಗಳನ್ನು ಹೊಂದಿದೆ.

ಕ್ವಿಪ್ಪೊ ಟೆಲಿಕಾಂ ಇನ್ಫ್ರಾಸ್ಟ್ರಕ್ಚರ್ (QTIL)

ಕ್ವಿಪ್ಪೊ ಟೆಲಿಕಾಂ ಇನ್ಫ್ರಾಸ್ಟ್ರಕ್ಚರ್ (QTIL)

ಕ್ವಿಪ್ಪೊ ಟೆಲಿಕಾಂ ಇನ್ಫ್ರಾಸ್ಟ್ರಕ್ಚರ್ ಭಾರತದಲ್ಲಿ ಮೊಬೈಲ್ ಟವರ್ ಕಂಪೆನಿಗಳನ್ನು ನಡೆಸುತ್ತಿದೆ. ಇದು ಕ್ವಿಪ್ಪೊ ಸಮೂಹದ ಭಾಗವಾಗಿದೆ.

 

ರಿಲಯನ್ಸ್ ಇನ್ಫ್ರಾಟೆಲ್

ರಿಲಯನ್ಸ್ ಇನ್ಫ್ರಾಟೆಲ್

ರಿಲಯನ್ಸ್ ಇನ್ಫ್ರಾಟೆಲ್ ರಿಲಯನ್ಸ್ ಗ್ರೂಪ್ ನ ಭಾಗವಾಗಿತ್ತು. ಇದು ಕಡಿಮೆ ಸಮಯದ ಅವಧಿಯಲ್ಲಿ ಟೆಲಿಕಾಂ ಟವರ್ ಕಂಪೆನಿಯಾಗಿ ಹೊರಹೊಮ್ಮಿದೆ.

ಟವರ್ ವಿಷನ್

ಟವರ್ ವಿಷನ್

ಟವರ್ ವಿಷನ್ ಎನ್ನುವುದು ವೈರ್ಲೆಸ್ ದೂರಸಂಪರ್ಕ ಉದ್ಯಮವಾಗಿದ್ದು, ಟವರ್ ನಿರ್ವಹಣಾ ಕಂಪೆನಿಯಾಗಿದೆ. ಟವರ್ ವಿಷನ್ ಸಂಸ್ಥೆ ರೋಲ್ ಔಟ್, ಕಾರ್ಯಾಚರಣೆ ಮತ್ತು ಟೆಲಿಕಾಂ ಮೂಲಭೂತ ಸೌಕರ್ಯಗಳ ನಿರ್ವಹಣೆಗೆ ಹೆಚ್ಚಿನ ಪರಿಣತಿಯನ್ನು ಹೊಂದಿದೆ. ನಿರ್ವಹಣೆ, ಗ್ರೀನ್ಫೀಲ್ಡ್ ಟವರ್ಸ್, ಮೇಲ್ಛಾವಣಿಗಳು ಮತ್ತು ಇನ್-ಬಿಲ್ಡಿಂಗ್ ವಿತರಣೆ ಆಂಟೆನಾ ವ್ಯವಸ್ಥೆಗಳು ಸೇರಿದಂತೆ ಎಲ್ಲಾ ರೀತಿಯ ಮತ್ತು ಸ್ಥಳಗಳ ವೈರ್ಲೆಸ್ ಸಂವಹನ ಟವರ್ ಕಾರ್ಯಾಚರಣೆಯನ್ನು ನಡೆಸುತ್ತದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+