ದೀಪಾವಳಿ ವಿಶೇಷ ಮಾರಾಟ (Diwali special sale) ಅಡಿಯಲ್ಲಿ ಇಂಡಿಗೋ ಸಂಸ್ಥೆ ತನ್ನ 64 ಮಾರ್ಗದ ಮಧ್ಯೆ ರಿಯಾಯಿತಿ ದರವನ್ನು ಘೋಷಿಸಿದ್ದು, ರೂ. 899 ರೂಪಾಯಿಯಿಂದ ಪ್ರಯಾಣ ದರ ಆರಂಭವಾಗಲಿದೆ.
ದೀಪಾವಳಿ ಪ್ರಯುಕ್ತ ಹಲವು ಕಮಪನಿಗಳು ವಿಶೇಷ ಆಫರ್ ಗಳನ್ನು ಘೋಷಣೆ ಮಾಡುತ್ತಿವೆ. ಇದಕ್ಕೆ ವಿಮಾನಯಾನ ಸಂಸ್ತೆಗಳು ಹೊರತಾಗಿಲ್ಲ. ಇದೀಗ ಇಂಡಿಗೋ ವಿಮಾನಯಾನ ಸಂಸ್ಥೆ ತನ್ನ ಪ್ರಯಾಣಿಕರಿಗೆ ದೀಪಾವಳಿ ಕೊಡುಗೆಯಾಗಿ ರಿಯಾಯಿತಿ ದರ ಒದಗಿಸಿದೆ.
ರೂ. 899 ಆರಂಭ ದರ
ದೀಪಾವಳಿ ವಿಶೇಷ ಮಾರಾಟ (Diwali special sale) ಅಡಿಯಲ್ಲಿ ಇಂಡಿಗೋ ಸಂಸ್ಥೆ ತನ್ನ 64 ಮಾರ್ಗದ ಮಧ್ಯೆ ರಿಯಾಯಿತಿ ದರವನ್ನು ಘೋಷಿಸಿದ್ದು, ರೂ. 899 ರೂಪಾಯಿಯಿಂದ ಪ್ರಯಾಣ ದರ ಆರಂಭವಾಗಲಿದೆ.
ಬುಕಿಂಗ್ ಅವಧಿ
ವಿಮಾನ ಟಿಕೇಟ್ ಬುಕಿಂಗ್ ಅವಧಿ ಮೂರು ದಿನ ಇದ್ದು, ಅಕ್ಟೋಬರ್ 24 ರಿಂದ 26 ರವರೆಗೆ ಅವಕಾಶವಿದೆ. 8 ನವೆಂಬರ್ 2018 ರಿಂದ 15 ಏಪ್ರಿಲ್ 2019 ರ ಅವಧಿಯಲ್ಲಿ ದೇಶ ಮತ್ತು ವಿದೇಶ ಪ್ರವಾಸ ಮಾಡಬಹುದು.