ವಜ್ರ ಉದ್ಯಮಿಯಿಂದ ದೀಪಾವಳಿ ಬೋನಸ್ ಆಗಿ 600 ಕಾರುಗಳ ಉಡುಗೊರೆ!!

ಸೂರತ್ ಮೂಲದ ಬಿಲಿಯನೇರ್ ವಜ್ರ ವ್ಯಾಪಾರಿ ಸಾವ್ಜಿ ಧೋಲಾಕಿಯಾ ದೀಪಾವಳಿ ಹಬ್ಬದ ಸಡಗರದ ಸಂದರ್ಭದಲ್ಲಿ ತನ್ನ ಉದ್ಯೋಗಿಗಳಿಗೆ ಪ್ರತಿ ವರ್ಷ ಭಾರೀ ಉಡುಗೊರೆಗಳನ್ನು ನೀಡುತ್ತಾ ಬಂದಿರುವುದಕ್ಕೆ ತುಂಬಾ ಹೆಸರುವಾಸಿಯಾಗಿದ್ದಾರೆ.

ಸೂರತ್ ಮೂಲದ ಬಿಲಿಯನೇರ್ ವಜ್ರ ವ್ಯಾಪಾರಿ ಸಾವ್ಜಿ ಧೋಲಾಕಿಯಾ ದೀಪಾವಳಿ ಹಬ್ಬದ ಸಡಗರದ ಸಂದರ್ಭದಲ್ಲಿ ತನ್ನ ಉದ್ಯೋಗಿಗಳಿಗೆ ಪ್ರತಿ ವರ್ಷ ಭಾರೀ ಉಡುಗೊರೆಗಳನ್ನು ನೀಡುತ್ತಾ ಬಂದಿರುವುದಕ್ಕೆ ತುಂಬಾ ಹೆಸರುವಾಸಿಯಾಗಿದ್ದಾರೆ.
ಪ್ರತಿ ವರ್ಷದಂತೆ ಈ ವರ್ಷ ಕೂಡ ಸಾವ್ಜಿ ಧೋಲಾಕಿಯಾ ದೀಪಾವಳಿ ಹಬ್ಬದ ಪ್ರಯುಕ್ತ ತನ್ನ ಉದ್ಯೋಗಿಗಳಿಗೆ ಭಾರೀ ಉಡುಗೊರೆಯನ್ನೇ ನೀಡಿದ್ದಾರೆ.

600 ಕಾರುಗಳ ಉಡುಗೊರೆ!

600 ಕಾರುಗಳ ಉಡುಗೊರೆ!

ಇದು ಆಶ್ಚರ್ಯಕರವಾಗಿದ್ದರೂ ಸಹ, ಸಾವ್ಜಿ ಧೋಲಾಕಿಯಾ 600 ಕಾರುಗಳನ್ನು ದೀಪಾವಳಿಯ ಉಡುಗೊರೆಯಾಗಿ ಹಂಚಿದ್ದಾರೆ. ಹರೇ ಕೃಷ್ಣ ಎಕ್ಸಪೋರ್ಟ್ ಕಂಪನಿ ತನ್ನ ಉದ್ಯೋಗಿಗಳಿಗೆ 600 ಕಾರುಗಳನ್ನು ಗಿಪ್ಟ್ ನೀಡುವುದಾಗಿ ಘೋಷಿಸಿದೆ.

ಮೋದಿಯವರಿಂದ ಕೀ ಹಸ್ತಾಂತರ

ಮೋದಿಯವರಿಂದ ಕೀ ಹಸ್ತಾಂತರ

ಪ್ರಧಾನಿ ನರೇಂದ್ರ ಮೋದಿಯವರು ಹರೇ ಕೃಷ್ಣ ಎಕ್ಸಪೋರ್ಟ್ ಕಂಪನಿ ಅಂಕವಿಕಲ ಮಹಿಳೆ ಸೇರಿದಂತೆ ನಾಲ್ಕು ಜನ ಉದ್ಯೋಗಿಗಳಿಗೆ ಸಾಂಕೇತಿಕವಾಗಿ ಕೀಯನ್ನು ಹಸ್ತಾಂತರಿಸಿದರು.

4 ಸಾವಿರ ಉದ್ಯೋಗಿಗಳಿಗೆ ಬೋನಸ್

4 ಸಾವಿರ ಉದ್ಯೋಗಿಗಳಿಗೆ ಬೋನಸ್

ಕಳೆದ ಕೆಲ ವರ್ಷಗಳಿಂದ ದಿಪಾವಳಿ ಸಂದರ್ಭದಲ್ಲಿ ಕಾರು, ಫ್ಲಾಟ್, ದುಬಾರಿ ಬೆಲೆಯ ಉಡುಗೊರೆಗಳನ್ನು ನೀಡುತ್ತಾ ಬಂದಿದೆ. ಈ ಬಾರಿ ದೀಪಾವಳಿ ಹಬ್ಬದ ಬೋನಸ್ ಆಗಿ ಸಂಸ್ಥೆಯ ಒಟ್ಟು 5500 ಉದ್ಯೋಗಿಗಳಲ್ಲಿ 4000 ಉದ್ಯೋಗಿಗಳು ಗಿಪ್ಟ್ ಪಡೆದಿದ್ದಾರೆ ಎಂದು ಸಾವ್ಜಿ ಧೋಲಾಕಿಯಾ ಹೇಳಿದ್ದಾರೆ.

ಮಾರುತಿ ಸುಜುಕಿ, ಸೆಲೆರಿಯೋ ಕಾರು

ಮಾರುತಿ ಸುಜುಕಿ, ಸೆಲೆರಿಯೋ ಕಾರು

ಈ ದೀಪಾವಳಿಗೆ ೬೦೦ ನೌಕರರು ಮಾರುತಿ ಸುಜುಕಿ ಆಲ್ಟೊ ಹಾಗು ಸೆಲೆರಿಯೋ ಕಾರುಗಳನ್ನು ಉದುಬಾರಿ ಉಡುಗೊರೆಯಾಗಿ ಪಡೆಯುತ್ತಿದ್ದಾರೆ.

ಮರ್ಸಿಡಿಸ್ ಬೆಂಝ್ ಗಿಫ್ಟ್

ಮರ್ಸಿಡಿಸ್ ಬೆಂಝ್ ಗಿಫ್ಟ್

ಸೆಪ್ಟೆಂಬರ್ ತಿಂಗಳಲ್ಲಿ, ಸಾವ್ಜಿ ಧೋಲಾಕಿಯಾ ಅವರು 25 ವರ್ಷ ಪೂರ್ಣಗೊಂಡ ನಂತರ ತನ್ನ ಮೂವರು ಹಿರಿಯ ನೌಕರರಿಗೆ 1 ಕೋಟಿ ರೂಪಾಯಿ ಮೌಲ್ಯದ ಮರ್ಸಿಡಿಸ್ ಬೆಂಝ್ ಜಿಎಲ್ಎಸ್ ಅನ್ನು ನೀಡಿದ್ದಾರೆ. 25 ವರ್ಷಗಳ ಹಿಂದೆ ವಜ್ರ ಕತ್ತರಿಸುವವರಾಗಿ ( diamond cutters) ನಿಲೇಶ್ ಜಡ (40), ಮುಖೇಶ್ ಚಂದ್ಪಾರಾ (38) ಮತ್ತು ಮಹೇಶ್ ಚಂದಪಾರ (43) ಸೇರ್ಪಡೆಗೊಂಡಿದ್ದರು. ಇದೀಗ ಅವರು ಸೀನಿಯರ್ ಮಟ್ಟದ ಸ್ಥಾನದಲ್ಲಿದ್ದಾರೆ.

Image courtesy: images posted on FaceBook by Savji Dholakia

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+