For Quick Alerts
ALLOW NOTIFICATIONS  
For Daily Alerts

59 ನಿಮಿಷದಲ್ಲಿ 1 ಕೋಟಿ ಸಾಲ ಮಂಜೂರು: ಮೋದಿಯವರ ಪ್ರಮುಖ ಘೋಷಣೆಗಳೇನು?

ಅತಿ ಸಣ್ಣ, ಸಣ್ಣ ಹಾಗು ಮಧ್ಯಮ ಕೈಗಾರಿಕೆಗಳಿಗೆ (ಎಂಎಸ್ಎಂಇ) ಸಹಾಯಕವಾಗುವ 59 ನಿಮಿಷದಲ್ಲಿ ಸಾಲ ಮಂಜೂರು ಯೋಜನೆಗೆ ಪ್ರಧಾನಿ ನರೇಂದ್ರ ಮೋದಿಯವರು ಶುಕ್ರವಾರ ಚಾಲನೆ ನೀಡಿದ್ದಾರೆ.

|

ಪ್ರಧಾನಿ ನರೇಂದ್ರ ಮೋದಿಯವರು ದೀಪಾವಳಿಗೆ ಭರ್ಜರಿ ಕೊಡುಗೆಯನ್ನು ಘೋಷಣೆ ಮಾಡಿದ್ದಾರೆ! ಅತಿ ಸಣ್ಣ, ಸಣ್ಣ ಹಾಗು ಮಧ್ಯಮ ಕೈಗಾರಿಕೆಗಳಿಗೆ (ಎಂಎಸ್ಎಂಇ) ಸಹಾಯಕವಾಗುವ 59 ನಿಮಿಷದಲ್ಲಿ ಸಾಲ ಮಂಜೂರು ಯೋಜನೆಗೆ ಪ್ರಧಾನಿ ನರೇಂದ್ರ ಮೋದಿಯವರು ಶುಕ್ರವಾರ ಚಾಲನೆ ನೀಡಿದ್ದಾರೆ.

ಕೇಂದ್ರ ಸರ್ಕಾರ ಕೈಗೊಂಡಿರುವ ೧೨ ಪ್ರಮುಖ ಯೋಜನೆಗಳು ಅತಿ ಸಣ್ಣ, ಸಣ್ಣ, ಮಧ್ಯಮ ಕೈಗಾರಿಕೆಗಳಿಗೆ ವರದಾನವಾಗಲಿದೆ ಎಂದಿದ್ದಾರೆ.

59 ನಿಮಿಷದಲ್ಲಿ 1 ಕೋಟಿ ಸಾಲ ಮಂಜೂರು

59 ನಿಮಿಷದಲ್ಲಿ 1 ಕೋಟಿ ಸಾಲ ಮಂಜೂರು

ಅತಿ ಸಣ್ಣ, ಸಣ್ಣ, ಮಧ್ಯಮ ಕೈಗಾರಿಕೆ (ಎಂಎಸ್ಎಂಇ) ಯೋಜನೆ ಮೂಲಕ ಒಂದು ಗಂಟೆಯ ಅವಧಿಯೊಳಗೆ 1 ಕೋಟಿವರೆಗೆ ಸಾಲ ಮಂಜೂರು ಮಾಡಲಾಗುವುದು. ಇದಕ್ಕೆ ಪ್ರತ್ಯೇಕ ಅಂತರ್ಜಾಲ ತಾಣ ಇದ್ದು, ಶೇ. ೨ ರಷ್ಟು ಬಡ್ಡಿ ರಿಯಾಯಿತಿ ಸೇರಿದಂತೆ ಅನೇಕ ಕೊಡುಗೆಗಳನ್ನು ಘೋಷಿಸಿದ್ದಾರೆ. ದೇಶದಲ್ಲಿ ಎಂಎಸ್ಎಂಇ ವಲಯ ಉದ್ಯೋಗ ನೀಡುವ ಎರಡನೇ ಅತಿದೊಡ್ಡ ರಂಗವಾಗಿದೆ.

ಎಂಎಸ್ಎಂಇ ವಲಯಕ್ಕೆ ಮೋದಿ ಮಾಡಿದ ಮುಖ್ಯ ಘೋಷಣೆಗಳು:

ಎಂಎಸ್ಎಂಇ ವಲಯಕ್ಕೆ ಮೋದಿ ಮಾಡಿದ ಮುಖ್ಯ ಘೋಷಣೆಗಳು:

1. ಅತಿಸಣ್ಣ, ಸಣ್ಣ ಮತ್ತು ಮಧ್ಯಮ ಉದ್ಯಮಗಳಿಗೆ ರೂ 1 ಕೋಟಿ ವರೆಗೆ ಮಂಜೂರಾತಿಗಾಗಿ 59 ನಿಮಿಷಗಳ ಲೋನ್ ಪೋರ್ಟಲ್ ಅನ್ನು ಪ್ರಧಾನಿ ಮೋದಿ ಘೋಷಿಸಿದ್ದಾರೆ.
2. ಜಿಎಸ್ಟಿ ನೋಂದಾಯಿತ ಎಮ್ಎಸ್ಎಂಇಗಳು 1 ಕೋಟಿ ಮೊತ್ತದ ಸಾಲದ ಮೇಲೆ ಶೇ. 2 ರಷ್ಟು ರಿಯಾಯಿತಿಗಳನ್ನು ಪಡೆಯಲಿದ್ದಾರೆ.
3. ಎಂಎಸ್ಎಂಇಗಳಿಂದ ರಫ್ತು ಮತ್ತು ಪೂರ್ವ ಶೇಖರಣಾ ಸಾಲದ ಮೇಲಿನ ಬಡ್ಡಿಯ ಸಬ್ವೆನ್ಷನ್ನನ್ನು (ಸಾಲದ ಮೇಳೆ ಬಡ್ಡಿ ಸಹಾಯಧನ) ಶೇ. 3 ರಿಂದ 5ಕ್ಕೆ ಏರಿಸಲು ನಿರ್ಧರಿಸಿದೆ ಎಂದು ಮೋದಿ ಹೇಳಿದ್ದಾರೆ.
4. ಮಹಿಳಾ ಉದ್ಯಮಿಗಳಿಂದ ಸರ್ಕಾರ ಶೇ. 3ರಷ್ಟು ಖರೀದಿಸಬೇಕು.
5. ಎಲ್ಲ ಕಂಪನಿಗಳು GeM ಸದಸ್ಯತ್ವ ಹಾಗೂ ಅದರ ಖರೀದಿದಾರರು -MSME ನೋಂದಣಿ ಮಾಡಲೇಬೇಕು.
6. ತಾಂತ್ರಿಕ ಉನ್ನತೀಕರಣಕ್ಕಾಗಿ ದೇಶದ ಎಲ್ಲೆಡೆ ಟೂಲ್ ರೂಮ್ಸ್ ಗಳನ್ನು ಸ್ಥಾಪನೆ ಮಾಡಲಾಗುವುದು.
7. ಯೋಜನೆಗಾಗಿ ರೂ. 6000 ಕೋಟಿ ಪ್ಯಾಕೇಜ್ ಘೋಷಣೆ
8. ದೇಶದಾದ್ಯಂತ ಇಪ್ಪತ್ತು ಹಬ್ ಸ್ಥಾಪನೆ ಮತ್ತು 100 ಟೂಲ್ ರೂಮ್ ಸ್ಥಾಪನೆ.
9. ಎಂಎಸ್ಎಂಇ ವಲಯ ಔಷಧಿ ಕಂಪೆನಿಗಳಿಗೆ ವ್ಯಾಪಾರ ಸುಲಭವಾಗುವಂತೆ ಘೋಷಿಸಿದೆ. ಈ ಪ್ರಕ್ರಿಯೆಗಳ ಸುಧಾರಣೆ ಸಣ್ಣ ಮತ್ತು ಮಧ್ಯಮ ಉದ್ಯಮಗಳಿಗೆ ಸಹಾಯ ಮಾಡುತ್ತದೆ.
10. ಸ್ವಯಂ ಪ್ರಮಾಣ ಪತ್ರಗಳ (ಪರಿಸರ, ವಾಯುಮಾಲಿನ್ಯ, ಜಲಮಾಲಿನ್ಯ) ಘೋಷಣೆ.
11. MSME ವಲಯ ಇಲ್ಲಿಯರೆಗೆ ಕಾರ್ಮಿಕ ಕಾನೂನು 8ರ ಅಡಿ ಹಾಗೂ ಕೇಂದ್ರ ಕಾನೂನು 10ರ ಅಡಿ ಪ್ರತಿ ವರ್ಷ ಒಂದು ರಿಟರ್ನ್ಸ್ ಮಾಡಿದರೆ ಸಾಕು.
12. ಕಂಪೆನಿಗಳ ಕಾಯ್ದೆಯಲ್ಲಿ ದೊಡ್ಡ ಬದಲಾವಣೆಯನ್ನು ಮಾಡಿದೆ ಮತ್ತು ಕಾನೂನು ಸಮಸ್ಯೆಗಳಿಂದ MSME ಗಳಿಗೆ ಪರಿಹಾರವನ್ನು ಒದಗಿಸಲು ಮೋದಿ ಸರ್ಕಾರ ಮುಂದಾಗಿದೆ.

ಭಾರತ 23 ಶ್ರೇಯಾಂಕ ಏರಿಕೆ

ಭಾರತ 23 ಶ್ರೇಯಾಂಕ ಏರಿಕೆ

ವ್ಯಾಪಾರ ಆರಂಭಿಸಲು ಉತ್ತಮ ಪೂರಕ ವಾತಾವರಣ ಇರುವ ದೇಶಗಳ ಪಟ್ಟಿಯಲ್ಲಿ ಭಾರತ 23 ಶ್ರೇಯಾಂಕ ಏರಿಕೆ ಕಂಡಿದೆ. 4 ವರ್ಷದ ಹಿಂದೆ ಬಿಜೆಪಿ ಅಧಿಕಾರಕ್ಕೆ ಬರುವಾಗ ಭಾರತ 142ನೇ ಸ್ಥಾನದಲ್ಲಿತ್ತು. ಈಗ 77ನೇ ಸ್ಥಾನಕ್ಕೆರಿದೆ. ಈ ಸಂದರ್ಭದಲ್ಲಿ ಟಾಪ್ 50ರ ಪಟ್ಟಿಯೊಳಗೆ ಬರುವುದು ಬಹಳ ದೂರ ಏನಿಲ್ಲ ಎಂದು ಮೋದಿ ವಿಶ್ವಾಸ ವ್ಯಕ್ತಪಡಿಸಿದರು.

English summary

Rs 1 crore loan sanctioned in 59 minutes: What are Modi's major announcements?

PM Modi announced the 12 historic decisions including 59-minute loan portal for sanction of up to Rs 1 crore for small and medium enterprises.
Story first published: Saturday, November 3, 2018, 11:44 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X