ಈ ಖ್ಯಾತ ಕ್ರಿಕೆಟಿಗರ ಬಿಸಿನೆಸ್ ಬಗ್ಗೆ ಕೇಳಿದ್ರೆ ಶಾಕ್ ಆಗ್ತಿರಾ!

Subscribe to GoodReturns Kannada
For Quick Alerts
ALLOW NOTIFICATIONS  
For Daily Alerts

  ಆಟಗಾರರು ತಮ್ಮ ಆಟಕ್ಕೆ ಹೆಚ್ಚು ಸಮರ್ಪಿಸಿಕೊಂಡಿರುತ್ತಾರೆ. ಇದಕ್ಕೆ ಕ್ರಿಕೆಟಿಗರೇನು ಹೊರತಾಗಿಲ್ಲ. ಕ್ರಿಕೇಟ್ ಅನ್ನೋದು ಅವರಿಗೆ ಬ್ರೆಡ್ ಮತ್ತು ಬೆಣ್ಣೆ ಇದ್ದ ಹಾಗೆ! ಬಿಡುವಿನ ಸಮಯದಲ್ಲಿ ಮುಂಬರಲಿರುವ ಸರಣಿಯ ತಯಾರಿಯಲ್ಲಿರುತ್ತಾರೆ ಅಥವಾ ದೈಹಿಕ ಫಿಟ್ನೆಸ್ ಕಸರತ್ತಿನಲ್ಲಿ ತೊಡಗಿರುತ್ತಾರೆ. ಆದರೆ ಇನ್ನೂ ಕೆಲ ಕ್ರಿಕೆಟಿಗರು ವೃತ್ತಿ ಜೀವನದ ಜೊತೆಗೆ ಬಿಸಿನೆಸ್ ನಲ್ಲೂ ಕೂಡ ತೊಡಗಿಸಿಕೊಂಡಿರುತ್ತಾರೆ.

  ಇವರು ವೃತ್ತಿ ಜೀವನದಲ್ಲಿ ಮಾತ್ರವಲ್ಲ ಬದಲಾಗಿ ಬ್ರ್ಯಾಂಡ್ ಮೌಲ್ಯ ಕೂಡ ಹೊಂದಿದ್ದಾರೆ. ಅನೇಕ ಕ್ರಿಕೆಟಿಗರು ಅತ್ಯುನ್ನತ ಬ್ರ್ಯಾಂಡ್ ಗಳ ಮತ್ತು ಎಂಎನ್ಸಿ ಉತ್ಪನ್ನಗಳ ಬ್ರಾಂಡ್ ಅಂಬಾಸೀಡರ್ ಆಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಅಲ್ಲದೇ ತಮ್ಮ ಸ್ವಂತ ಉದ್ಯಮವನ್ನು ಪ್ರಾರಂಭಿಸಿದ್ದರೆ. ಐಪಿಎಲ್ 2018: ಅತಿಹೆಚ್ಚು ಸಂಭಾವನೆ ಪಡೆದ ದುಬಾರಿ ಆಟಗಾರರು ಯಾರು ಗೊತ್ತೆ?

   

  ಹಾಗಿದ್ದರೆ ತಮ್ಮದೇ ವ್ಯಾಪಾರ/ಬ್ರಾಂಡ್ಸ್ ಅನ್ನು ಆರಂಭಿಸಿರುವ ಪ್ರಸಿದ್ದ ಕ್ರಿಕೆಟಿಗರು ಯಾರು ಎಂಬುದನ್ನು ನೋಡೋಣ ಬನ್ನಿ..

  ಎಂಎಸ್ ಧೋನಿ

  ಭಾರತದ ಅತ್ಯಂತ ಯಶಸ್ವಿ ನಾಯಕರಾದ ಕೂಲ್ ಕ್ಯಾಪ್ಟನ್ ಖ್ಯಾತಿಯ ಮಹೇಂದ್ರ ಸಿಂಗ್ ಧೋನಿ ಹಲವಾರು ಪ್ರಶಸ್ತಿಗಳನ್ನು ಗೆದ್ದ ದಾಖಲೆಯನ್ನು ಹೊಂದಿದ್ದಾರೆ. ಯುವಕರನ್ನು ಬೆಂಬಲಿಸುವ ಮೂಲಕ ಭಾರತದ ಕ್ರಿಕೆಟ್ ಸಂಸ್ಕೃತಿಯನ್ನು ಮರುರೂಪಿಸುವಲ್ಲಿ ಯಶಸ್ವಿಯಾಗಿದ್ದಾರೆ.
  ಯಶಸ್ವಿ ಕ್ರಿಕೆಟಿಗನ ಹೊತಾಗಿ, 20 ಕ್ಕೂ ಅಧಿಕ ಒಡಂಬಡಿಕೆ ಮತ್ತು ವೆಂಚರ್ ಗಳಲ್ಲಿ ತೊಡಗಿಸಿಕೊಂಡಿದ್ದಾರೆ. ಮಹೇಂದ್ರ ಸಿಂಗ್ ಧೋನಿ ಅಕ್ಕಿನೀನಿ ನಾಗಾರ್ಜುನ ಸಹ-ಮಾಲೀಕತ್ವ ಹೊಂದಿರುವ ಸೂಪರ್ ರೇಸಿಂಗ್ ವಿಶ್ವ ಚಾಂಪಿಯನ್ಶಿಪ್ ಟೀಮ್, ಮಹಿ ರೇಸಿಂಗ್ ಟೀಮ್ ಇಂಡಿಯಾ ಮೂಲಕ ವ್ಯವಹಾರದಲ್ಲಿ ತೊಡಗಿದ್ದಾರೆ.

  ನಂತರ, ನಾನು ಐಎಸ್ಎಲ್ನಲ್ಲಿ ಅಭಿಷೇಕ್ ಬಚ್ಚನ್ ಅವರೊಂದಿಗೆ ಚೆನೈಯಿನ್ ಎಫ್ಸಿ (Chennaiyin FC) ಸಹ-ಮಾಲೀಕರಾದರು ಮತ್ತು ಸಹಾರಾ ಇಂಡಿಯಾ ಪರಿವಾರ್ ಜೊತೆ ಹಾಕಿ ಇಂಡಿಯಾ ಲೀಗ್ ನಲ್ಲಿ ರಾಂಚಿ ರೇಸ್ ತಂಡ ಹೊಂದಿದ್ದಾರೆ. ಝೋವೆನ್ (ZEVEN) ಎಂಬ ಜೀವನಶೈಲಿ ಬ್ರಾಂಡ್ ಅನ್ನು ಧೋನಿ ಪ್ರಾರಂಭಿಸಿ, ಬ್ರ್ಯಾಂಡ್ ಪಾದರಕ್ಷೆಗಳ ವಿಭಾಗವನ್ನು ಇದೆ.

   

  ವಿರಾಟ್ ಕೊಹ್ಲಿ

  ಶತಮಾನದ ಶ್ರೇಷ್ಠ ಕ್ರಿಕೆಟಿಗರಲ್ಲಿ ವಿರಾಟ್ ಕೊಹ್ಲಿ ಒಬ್ಬರು. ಕ್ರಿಕೆಟ್ ಜೊತೆಗೆ ಮಾಡೆಲಿಂಗ್, ವ್ಯಾಪಾರ ಕ್ಷೇತ್ರದಲ್ಲೂ ಮುಂಚೂಣಿಯಲ್ಲಿದ್ದಾರೆ. ಧೋನಿ ಐಎಸ್ಎಲ್ ನ ಚೆನ್ನಾಯಿನ್ ಎಫ್ಸಿಯಲ್ಲಿ ಬಂಡವಾಳ ಹೂಡಿದ್ದರೆ, ವಿರಾಟ್ ಕೊಹ್ಲಿ ಎಫ್ಸಿ ಗೋವಾ ತಂಡದ ಸಹ ಮಾಲೀಕರಾಗಿದ್ದಾರೆ. ಮಿಂತ್ರದೊಂದಿಗಿನ ಸಹಭಾಗಿತ್ವದಲ್ಲಿ ಜವಳಿ ಉದ್ಯಮದಲ್ಲೂ ಹಣ ಹೂಡಿದ್ದಾರೆ.
  ಕ್ರೀಡಾ ಪ್ರೇಮಿಗಳ ಸಾಮಾಜಿಕ ನೆಟ್ವರ್ಕಿಂಗ್ ತಾಣವಾಗಿರುವ ಲಂಡನ್ ಮೂಲದ ಟೆಕ್ ಸ್ಟಾರ್ಟ್ಅಪ್, ಸ್ಪೋರ್ಟ್ ಕಾನ್ವೊನಲ್ಲಿ ಸಹ ಕೊಹ್ಲಿ ಷೇರನ್ನು ಹೂಡಿದ್ದಾರೆ.
  ಮಕ್ಕಳ ಫಿಟ್ನೆಸ್ವೆಂಚರ್ ಸ್ಟೆಥಾಥ್ಲಾನ್ ಕಿಡ್ಸ್ ನಲ್ಲೂ ವಿರಾಟ್ ಹೂಡಿಕೆ ಮಾಡಿದ್ದಾರೆ.

  ಗ್ಯಾರಿ ಕಸ್ಟರ್ನ್

  2011ರಲ್ಲಿ ಭಾರತ ವಿಶ್ವಕಪ್ ವಿಜೇತ ತಂಡದ ತರಬೇತುದಾರರಾಗಿದ್ದರು. ದಕ್ಷಿಣ ಆಫ್ರಿಕಾದ ಓಪನಿಂಗ್ ಬ್ಯಾಟ್ಸ್ ಮನ್ ಗ್ಯಾರಿ ಕರ್ಸ್ಟರ್ನ್ ಕೂಡ ಬಂಡವಾಳ ಹೂಡಿಕೆಯಲ್ಲಿ ಹಿಂದೆ ಬಿದ್ದಿಲ್ಲ. ಭಾರತಕ್ಕೆ ಕೋಚ್ ಆಗಿ ಬರುವ ಮೊದಲೇ ಅವರು ಪ್ಯಾಡಿ ಅಪ್ಟೋನ್ ಎಂಬವರ ಜೊತೆ ಸೇರಿ ಪರ್ಫಾರ್ಮೆನ್ಸ್ ಝೋನ್ ಎಂಬ ಕಂಪನಿ ಪ್ರಾರಂಭಿಸಿದ್ದರು. ಭಾರತದಿಂದ ಮರಳಿದ ಬಳಿಕ ದಕ್ಷಿಣ ಆಫ್ರಿಕಾದಲ್ಲಿ ತನ್ನದೇ ಸ್ವಂತ ಟ್ರಾವೆಲ್ ಕಂಪನಿ ಪ್ರಾರಂಭಿಸಿದರು. ಪ್ರಸ್ತುತ, ಗ್ಯಾರಿ ಕಿರ್ಸ್ಟನ್ ಕ್ರಿಕೆಟ್ ಅಕಾಡೆಮಿಯನ್ನೂ ಸಹ ಹೊಂದಿದ್ದು, ಇದು ವೃದ್ಧ ಕ್ರಿಕೆಟಿಗರಿಗೆ ಖಾಸಗಿ ತರಬೇತಿಯನ್ನು ನೀಡುತ್ತದೆ ಮತ್ತು ಎಲ್ಲಾ ವಯಸ್ಸಿನ ಆಟಗಾರರಿಗೆ ಹೆಚ್ಚಿನ ಸಾಮರ್ಥ್ಯದ ತರಬೇತಿ ನೀಡುತ್ತದೆ.
  ತನ್ನ ವ್ಯವಹಾರದ ಪ್ರಯಾಣವನ್ನು ಮುಂದುವರೆಸಲು ತನ್ನದೇ ಆದ ಬ್ರ್ಯಾಂಡ್ ಗ್ಯಾರಿಕಿರ್ಟೆನ್.ಕಾಮ್ ಮೂಲಕ ಮುಂದುವರೆಸಿದ್ದಾರೆ.

  ಸುನಿಲ್ ಗವಾಸ್ಕರ್

  ಭಾರತದ ಲಿಟಲ್ ಮಾಸ್ಟರ್ ಸುನಿಲ್ ಗಾವಸ್ಕರ್ ಬದುಕು ಕೇವಲ ಕ್ರಿಕೆಟ್ ಕ್ಷೇತ್ರಕ್ಕೆ ಸೀಮಿತವಾಗಿಲ್ಲ. ಕ್ರಿಕೆಟ್ ಹೊರತಾದ ಮನೋಧರ್ಮ ಮತ್ತು ಸಮರ್ಪಣೆಯ ಫಲವಾಗಿ 1985 ರಲ್ಲಿ ಪ್ರೊಫೆಷನಲ್ ಮ್ಯಾನೇಜ್ಮೆಂಟ್ ಗ್ರೂಪ್ (PMG) ಎಂಬ ಹೆಸರಿನ ಭಾರತದ ಮೊದಲ ಕ್ರೀಡಾ ಮಾರ್ಕೆಟಿಂಗ್ ಏಜೆನ್ಸಿಯನ್ನು ಪ್ರಾರಂಭಿಸಿದರು. ಇಂಡಿಯನ್ ಬ್ಯಾಡ್ಮಿಂಟನ್ ಲೀಗ್ ನ ಮುಂಬಯಿ ಮುಂಬೈ ಮಾಸ್ಟರ್ಸ್ ಫ್ರಾಂಚೈಸಿಯ ಸಹ-ಮಾಲೀಕರಾಗಿದ್ದಾರೆ.

  ಮಹೇಲ ಜಯವರ್ದನೆ ಮತ್ತು ಕುಮಾರ ಸಂಗಕ್ಕಾರ

  ಶ್ರೀಲಂಕಾದ ಖ್ಯಾತ ಜೋಡಿಯಾದ ವಿಶ್ವಶ್ರೇಷ್ಠ ಬೌಲರ್ ಗಳಿಗೂ ಸಿಂಹಸ್ವಪ್ನರಾಗಿ ಕಾಡಿದ್ದ ಮಹೇಲಾ ಜಯವರ್ಧನೆ ಮತ್ತು ಕುಮಾರ ಸಂಗಕ್ಕಾರ ಜಂಟಿಯಾಗಿ ಹೋಟೆಲ್ ಉದ್ಯಮಕ್ಕೆ ಕೈ ಹಾಕಿದ್ದಾರೆ. ಶ್ರೀಲಂಕಾದ ಪ್ರಸಿದ್ಧ ಶೆಫ್, ದರ್ಶನ್ ಮುಂಡಿಸಾ ಜೊತೆ ಸೇರಿ ಮಿನಿಷ್ಟ್ರೀ ಆಫ್ ಕ್ರ್ಯಾಬ್ಸ್ ಎಂಬ ರೆಸ್ಟೋರೆಂಟ್ ಅನ್ನು ನಡೆಸುತ್ತಿದ್ದಾರೆ. ಇದು ಈಗ ಶ್ರೀಲಂಕಾದ ಅತ್ಯಂತ ಪ್ರಸಿದ್ಧ ಸೀ ಫುಡ್ ರೆಸ್ಟೋರೆಂಟ್ ಆಗಿ ಗುರುತಿಸಲ್ಪಟ್ಟಿದೆ.

  ಜಹೀರ್ ಖಾನ್

  ಭಾರತದ ವೇಗದ ಬೌಲರ್ ಜಹೀರ್ ಖಾನ್ 2005 ರಲ್ಲೇ ಆತಿಥ್ಯ ಉದ್ಯಮಕ್ಕೆ ಕೈ ಹಾಕಿ, ಪುಣೆಯಲ್ಲಿ ಅವರು ಮೊದಲ ರೆಸ್ಟೋರೆಂಟ್ ಆದ ಝೆಡ್ ಕೆ ಪ್ರಾರಂಭಿಸಿದ್ದರು. ಈ ರೆಸ್ಟೋರೆಂಟ್ ಲಾಭ ತಂದು ಕೊಟ್ಟ ಬಳಿಕ ಪುಣೆಯಲ್ಲೇ ಉದ್ಯಮ ವಿಸ್ತರಿಸಿದ ಜಹೀರ್, ಟಾಸ್ ಮತ್ತು ಬಾಂಕ್ವೆಟ್ ಫೋಯರ್ ಎಂಬೆರಡು ರೆಸ್ಟೋರೆಂಟ್ ಗಳನ್ನು ಪ್ರಾರಂಭಿಸಿ ಯಶಸ್ಸು ಕಂಡಿದ್ದಾರೆ.

  ವೀರೇಂದ್ರ ಸೆಹ್ವಾಗ್

  ಭಾರತದ ಹೊಡೆಬಡಿಯ ದಾಂಡಿಗ ವೀರೇಂದ್ರ ಸೆಹ್ವಾಗ್ ಬೌಲರ್ ಗಳ ಎದೆಯಲ್ಲಿ ನಡುಕ ಹುಟ್ಟಿಸಿದವರು. ಹರ್ಯಾಣದ ಜಾಜರ್ ನಲ್ಲಿ 'ಸೆಹ್ವಾಗ್ ಇಂಟರನ್ಯಾಷನಲ್ ಸ್ಕೂಲ್' ನಡೆಸುತ್ತಿದ್ದಾರೆ. ಇದು ಭಾರತದ ಅತ್ಯಂತ ಶ್ರೇಷ್ಠ ಕ್ರೀಡಾ ಅಕಾಡೆಮಿಯನ್ನೊಳಗೊಂಡ ಶಾಲೆ ಎಂಬುದಾಗಿ ಪರಿಗಣಿಸಲ್ಪಟ್ಟಿದೆ.

  Read more about: money business finance news savings
  English summary

  Top Successful Cricketers and Their Business

  There are a few cricketers who, along with their successful cricket career, managed to find out time for various Business and other activities.
  Company Search
  Enter the first few characters of the company's name or the NSE symbol or BSE code and click 'Go'

  Find IFSC

  Get Latest News alerts from Kannada Goodreturns

  We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Goodreturns sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Goodreturns website. However, you can change your cookie settings at any time. Learn more