ನೋಟು ನಿಷೇಧ: ನವೆಂಬರ್ 8ಕ್ಕೆ ಎರಡು ವರ್ಷ, ಕಾಂಗ್ರೆಸ್ ಬ್ಲಾಕ್ ಡೇ ಆಚರಣೆ

ಪ್ರಧಾನಿ ನರೇಂದ್ರ ಮೋದಿಯವರು 2016 ರ ನವೆಂಬರ್ 8 ರಂದು ರೂ. 500 ಹಾಗೂ 1000 ಮುಖಬೆಲೆಯ ನೋಟುಗಳನ್ನು ನಿಷೇಧಿಸಿ ಇಂದಿಗೆ ಎರಡು ವರ್ಷ ಕಳೆದಿವೆ.

ಪ್ರಧಾನಿ ನರೇಂದ್ರ ಮೋದಿಯವರು 2016 ರ ನವೆಂಬರ್ 8 ರಂದು ರೂ. 500 ಹಾಗೂ 1000 ಮುಖಬೆಲೆಯ ನೋಟುಗಳನ್ನು ನಿಷೇಧಿಸಿ ಇಂದಿಗೆ ಎರಡು ವರ್ಷ ಕಳೆದಿವೆ.

ನೋಟು ನಿಷೇಧ: ನವೆಂಬರ್ 8ಕ್ಕೆ ಎರಡು ವರ್ಷ, ಕಾಂಗ್ರೆಸ್ ಬ್ಲಾಕ್ ಡೇ

ನೋಟು ನಿಷೇಧಕ್ಕೆ ಎರಡು ವರ್ಷ ಆದ ಹಿನ್ನೆಲೆಯಲ್ಲಿ ವಿರೋಧ ಪಕ್ಷ ಕಾಂಗ್ರೆಸ್ ಬ್ಲಾಕ್ ಡೇ ಆಚರಣೆ ಮಾಡುತ್ತಿದೆ. ಈ ಹೊತ್ತನಲ್ಲಿ ನೋಟು ನಿಷೇಧದ ಯಶಸ್ಸು, ವೈಫಲ್ಯ ಕುರಿತು ಚರ್ಚೆಗಳು ಜೋರಾಗಿ ನಡೆದಿವೆ. ನೋಟು ಅಮಾನ್ಯೀಕರಣ ದೊಡ್ಡ ವೈಫಲ್ಯ ಎಂದು ಕೆಲವರು ಹೇಳುತ್ತಿದ್ದರೆ, ಹಲವರು ಡಿಮಾನಿಟೈಸೇಷನ್ ವಿಫಲವಾಗಿಲ್ಲ, ಅದರಿಂದ ಭಾರತದ ಆರ್ಥಿಕತೆ ಸುಧಾರಿಸಿದೆ ಎಂದಿದ್ದಾರೆ.
ಡಿಮಾನಿಟೈಸೇಷನ್‍ನಿಂದಾಗಿಯೇ ದೇಶದ ಡಿಜಿಟಲ್ ಪೇಮೆಂಟ್ ನಿರೀಕ್ಷಿಸಿದ್ದಕ್ಕಿಂತಲೂ ಅಧಿಕ ಪ್ರಗತಿ ಕಂಡಿದೆ ಎಂದು ಕ್ಯಾಪ್‍ಜೆಮಿನಿಸ್ ವರ್ಲ್ಡ್ ಪೇಮೆಂಟ್ಸ್-2018 ರ ವರದಿ ಹೇಳಿದೆ.

ಡಿಮಾನಿಟೈಸೇಷನ್‍ನಿಂದಾಗಿ ಭಾರತದಲ್ಲಿನ ನಗದು ರಹಿತ ವಹಿವಾಟು ನಿರೀಕ್ಷೆಗೂ ಮೀರಿ ಎಂದರೆ ಶೇ. 33.2 ಮತ್ತು ಡೆಬಿಟ್ ಕಾರ್ಡ್ ಮೂಲಕ ವಹಿವಾಟು ಶೇ. 76.2 ನಡೆದಿದೆ. ಜೊತೆಗೆ ದೇಶದ ಆರ್ಥಿಕ ವ್ಯವಸ್ಥೆಯಲ್ಲಿ ಡೆಬಿಟ್ ಮತ್ತು ಪ್ರಿಪೇಯ್ಡ್ ಕಾರ್ಡುಗಳ ಅಳವಡಿಕೆ ಹೆಚ್ಚಾಗಿದೆ. ಅಲ್ಲದೆ 2015ರಲ್ಲಿ ಶೇ. 27.8ರಷ್ಟಿದ್ದ ಕ್ರೆಡಿಟ್ ಕಾರ್ಡ್ ವಹಿವಾಟು ಶೇ. 38.1 ಕ್ಕೇರಿದೆ.
ದೇಶದ ಇ-ಪೇಮೆಂಟ್ಸ್ ಹೀಗೆಯೇ ಮುಂದುವರಿದರೆ ಇನ್ನೆರಡು ವರ್ಷಗಳಲ್ಲಿ ಭಾರತ ಆಸ್ಟ್ರೇಲಿಯಾ ಹಾಗೂ ಕೆನಡಾವನ್ನು ಹಿಂದಿಕ್ಕಲಿದೆ. ಮಾತ್ರವಲ್ಲ ಈ ಕ್ಷೇತ್ರದಲ್ಲಿ ಭಾರತ ಜಗತ್ತಿನ 9ನೇ ಅತಿದೊಡ್ಡ ದೇಶ ಎನಿಸಿಕೊಳ್ಳಲಿದೆ ಎನ್ನಲಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+