For Quick Alerts
ALLOW NOTIFICATIONS  
For Daily Alerts

ಡಿಸೆಂಬರ್ 1ಕ್ಕೆ ಎಲ್ಪಿಜಿ ಗ್ಯಾಸ್ ಕನೆಕ್ಷನ್ ರದ್ದಾಗಲಿದೆ! ನೀವು ಇದ್ದಿರಾ ಈ ಪಟ್ಟಿಯಲ್ಲಿ..?

ಡಿಸೆಂಬರ್ 1 ರಿಂದ ಸುಮಾರು 1 ಕೋಟಿ ಎಲ್ಪಿಜಿ ಸಿಲಿಂಡರ್ ಕನೆಕ್ಷನ್ ರದ್ದಾಗಲಿದ್ದು, ಕೆವೈಸಿ (KYC) ಮಾಡದಿರುವ ಗ್ರಾಹಕರ ಗ್ಯಾಸ್ ಕನೆಕ್ಷನ್ ಗೆ ಸರ್ಕಾರ ಕತ್ತರಿ ಬೀಳಲಿದೆ. ಡಿಸೆಂಬರ್ 1ರ ನಂತರ ಕೆವೈಸಿ ಅಪ್ಡೇಟ್ ಮಾಡದಿರುವ ಗ್ರಾಹಕರಿಗೆ ಎಲ್ಪಿಜ

|

ಎಲ್ಪಿಜಿ ಗ್ರಾಹಕರಿಗೆ ಪ್ರಮುಖ ಸುದ್ದಿ ಇದೆ. ಡಿಸೆಂಬರ್ 1 ರಿಂದ ಸುಮಾರು 1 ಕೋಟಿ ಎಲ್ಪಿಜಿ ಸಿಲಿಂಡರ್ ಕನೆಕ್ಷನ್ ರದ್ದಾಗಲಿದ್ದು, ಕೆವೈಸಿ (KYC) ಮಾಡದಿರುವ ಗ್ರಾಹಕರ ಗ್ಯಾಸ್ ಕನೆಕ್ಷನ್ ಗೆ ಸರ್ಕಾರ ಕತ್ತರಿ ಹಾಕಲಿದೆ. ಡಿಸೆಂಬರ್ 1ರ ನಂತರ ಕೆವೈಸಿ ಅಪ್ಡೇಟ್ ಮಾಡದಿರುವ ಗ್ರಾಹಕರಿಗೆ ಎಲ್ಪಿಜಿ ಸಿಗುವುದಿಲ್ಲ ಎಂದು ವರದಿಯಾಗಿದೆ. ಸುಜನ್ ಯೋಜನೆಗೆ ಅರ್ಜಿ ಸಲ್ಲಿಸಿ, 10 ಲಕ್ಷ ಸಾಲ ಪಡೆಯಿರಿ..

 

ಗ್ರಾಹಕರ ಗಮನಕ್ಕೆ

ಗ್ರಾಹಕರ ಗಮನಕ್ಕೆ

ಭಾರತ್ ಗ್ಯಾಸ್, ಹೆಚ್ ಪಿ, ಇಂಡೆನ್ ಹೀಗೆ ಎಲ್ಲಾ ಕಂಪನಿಗಳ ಗ್ರಾಹಕರ KYC ಪೂರ್ಣಗೊಳಿಸಲು ನವೆಂಬರ್ 30 ರವರೆಗೆ ಕಾಲಾವಕಾಶ ನೀಡಲಾಗಿದೆ. ಆದರೆ ತುಂಬಾ ಗ್ರಾಹಕರು KYC ಪ್ರಕ್ರಿಯೆ ಇನ್ನೂ ಪೂರ್ಣಗೊಳಿಸಿಲ್ಲ. ನವೆಂಬರ್ 30 ರವರೆಗೆ ಕೈವೈಸಿಗೆ ಅವಕಾಶವಿದ್ದು, ತದನಂತರ ಗ್ಯಾಸ್ ಕನೆಕ್ಷನ್ ಕಡಿದುಕೊಳ್ಳಬೇಕಾಗುತ್ತದೆ.

ಬ್ಯಾಂಕ್ ಖಾತೆ ವಿವರ

ಬ್ಯಾಂಕ್ ಖಾತೆ ವಿವರ

ಗ್ಯಾಸ್ ಕಂಪನಿಗಳ ಬಳಿ ಕೆವೈಸಿ ಅಡಿಯಲ್ಲಿ ಆಧಾರ್ ಸಂಖ್ಯೆ ನೀಡದ ಹಾಗೂ ಗಿವ್ ಇಟ್ ಅಪ್ ಸ್ಕೀಮ್ ಅಳವಡಿಸಿಕೊಳ್ಳದ ಗ್ರಾಹಕರ ಬಗ್ಗೆ ವರದಿ ಕೇಳಿದೆ ಎಂದು ಕೇಂದ್ರ ಸರ್ಕಾರ ತಿಳಿಸಿದೆ. ಸರ್ಕಾರ ಮೂರು ವರ್ಷಗಳ ಹಿಂದೆಯೇ ಎಲ್ಪಿಜಿ ಸಂಪರ್ಕ ಪಡೆದ ಗ್ರಾಹಕರು ಬ್ಯಾಂಕ್ ಖಾತೆ ವಿವರ ನೀಡುವಂತೆ ಸೂಚಿಸಿದೆ.

ಸಬ್ಸಿಡಿ ಲಾಭ ಇಲ್ಲ
 

ಸಬ್ಸಿಡಿ ಲಾಭ ಇಲ್ಲ

ಬ್ಯಾಂಕ್ ಖಾತೆ ವಿವರ ನೀಡಿದರೆ ನೇರವಾಗಿ ಸಬ್ಸಿಡಿ ಬ್ಯಾಂಕ್ ಖಾತೆಗೆ ಹಾಕುವುದು ಸರ್ಕಾರದ ಉದ್ದೇಶ. ಆದರೆ ಅನೇಕರು ಬ್ಯಾಂಕ್ ಖಾತೆ ವಿವರ ನೀಡಿಲ್ಲವಾದ್ದರಿಂದ ಸಬ್ಸಿಡಿ ಲಾಭ ಪಡೆಯುತ್ತಿಲ್ಲ. ಮಾಧ್ಯಮಗಳ ವರದಿ ಪ್ರಕಾರ, 1 ಕೋಟಿ ಜನರು ಕೆವೈಸಿ ಅಪ್ಡೇಟ್ ಮಾಡಿಲ್ಲ ಎನ್ನಲಾಗಿದೆ.

ಎಲ್ಪಿಜಿ ಬೆಲೆ ಏರಿಕೆ ಶಾಕ್

ಎಲ್ಪಿಜಿ ಬೆಲೆ ಏರಿಕೆ ಶಾಕ್

ಎಲ್ಪಿಜಿ ಗ್ರಾಹಕರಿಗೆ ಇದೇ ತಿಂಗಳಲ್ಲಿ ಎರಡು ಬಾರಿ ಸರ್ಕಾರ ಬಿಸಿ ಮುಟ್ಟಿಸಿದೆ. ಶ್ರೀಸಾಮಾನ್ಯರ ಜೇಬಿಗೆ ಮತ್ತೆ ಕತ್ತರಿ ಬಿದ್ದಿದ್ದು, ನವೆಂಬರ್ ನಲ್ಲಿ ಎರಡನೇ ಬಾರಿ ಅಡುಗೆ ಅನಿಲ ಎಲ್ಪಿಜಿ ಸಿಲಿಂಡರ್ ಬೆಲೆ ಮತ್ತೆ ಏರಿಕೆಯಾಗಿದೆ. ಅಂದರೆ ಕೇವಲ ಎರಡು ವಾರದೊಳಗೆ ಎರಡು ಬಾರಿ ಎಲ್ಪಿಜಿ ದರ ಏರಿದೆ.

ಎಲ್ಪಿಜಿ ದರ ಏರಿಕೆಗೆ ಕಾರಣ

ಎಲ್ಪಿಜಿ ದರ ಏರಿಕೆಗೆ ಕಾರಣ

ಸರ್ಕಾರ ಎಲ್ಪಿಜಿ ಗ್ಯಾಸ್ ವಿತರಕರಿಗೆ ನೀಡಲಾಗುವ ಕಮಿಷನ್ ದರವನ್ನು ಹೆಚ್ಚಳ ಮಾಡಿರುವ ಪರಿಣಾಮವಾಗಿ ಎಲ್ಪಿಜಿ ದುಬಾರಿಯಾಗಿದೆ. ಇದೀಗ ಎಲ್ಪಿಜಿ ದರ ರೂ. 2 ಏರಿಕೆ ಕಂಡಿದೆ.

ಸಿಲಿಂಡರ್ ಬೆಲೆ

ಸಿಲಿಂಡರ್ ಬೆಲೆ

14.2 ಕೆಜಿ ತೂಕದ ಸಬ್ಸಿಡಿ ಸಹಿತ ಎಲ್ಪಿಜಿ ಸಿಲಿಂಡರ್ ಬೆಲೆ ದೆಹಲಿಯಲ್ಲಿ ರೂ. 507.42 ಆಗಿದೆ. ಇದರ ಹಿಂದಿನ ಬೆಲೆ ರೂ. 505.34 ಆಗಿತ್ತು. ಈ ತಿಂಗಳಲ್ಲಿ ಎಲ್ ಪಿ ಜಿ ಸಿಲಿಂಡರ್ ಬೆಲೆ ಎರಡನೇ ಬಾರಿ ಹೆಚ್ಚಳ ಕಂಡಿದೆ. ಮುಂಬೈನಲ್ಲಿ ರೂ. 503.11, ಚೆನ್ನೈನಲ್ಲಿ ರೂ. 493.87 ರಷ್ಟಿದ್ದ ಬೆಲೆ ಇದೀಗ ರೂ. 2 ಏರಿಕೆ ಕಂಡಿದೆ.

ಸತತ ಏಳು ಬಾರಿ ಏರಿಕೆ

ಸತತ ಏಳು ಬಾರಿ ಏರಿಕೆ

ಕಳೆದ ಜೂನ್ ತಿಂಗಳಿನಿಂದ ಇಲ್ಲಿಯವರೆಗೆ ಸಬ್ಸಿಡಿ ಸಹಿತ ಸಿಲಿಂಡರ್ ಗಳ ಬೆಲೆಯಲ್ಲಿ ಸತತ ಏಳು ಬಾರಿ ಏರಿಕೆಯಾಗಿದೆ. ಈ ಅವಧಿಯಲ್ಲಿ ಪ್ರತಿ ಸಿಲಿಂಡರ್ ಬೆಲೆಯಲ್ಲಿ ಒಟ್ಟು ರೂ. 16.13 ಹೆಚ್ಚಳವಾದಂತಾಗಿದೆ.
ನವೆಂಬರ್ 1ರಂದು ಸಿಲಿಂಡರ್ ಮೂಲ ಬೆಲೆಯನ್ನು 2.84 ಹೆಚ್ಚಳ ಮಾಡಲಾಗಿತ್ತು. ಜಿಎಸ್ಟಿ ದರ ಏರಿಕೆಯಾದ ಕಾರಣ ಜೂನ್ ತಿಂಗಳಿಂದ ಪ್ರತಿ ತಿಂಗಳು ಎಲ್ಪಿಜಿ ಗ್ಯಾಸ್ ಸಿಲಿಂಡರ್ ಬೆಲೆಯಲ್ಲಿ ಏರಿಕೆಯಾಗಿದೆ.

English summary

You may lose LPG connection December 1st, update your KYC

You may lose LPG connection December 1st, update your KYC
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X