For Quick Alerts
ALLOW NOTIFICATIONS  
For Daily Alerts

2030 ರ ವೇಳೆಗೆ ಶೇ. 50 ನೈಸರ್ಗಿಕ ಇಂಧನ ಚಾಲಿತ ವಾಹನ

ಮುಂದಿನ ದಶಕದಲ್ಲಿ ಬೇಕಾಗುವ ಅಗತ್ಯ ಅಗತ್ಯ ಮೂಲ ಸೌಕರ್ಯಗಳನ್ನು ಸರ್ಕಾರ ಒದಗಿಸಿಕೊಟ್ಟರೆ 2030 ರ ವೇಳೆಗೆ ಅರ್ಧದಷ್ಟು (ಎರಡರಲ್ಲಿ ಒಂದು) ನೈಸರ್ಗಿಕ ಅನಿಲದಿಂದ ಚಲಿಸುವ ವಾಹನಗಳಿರುವ ಸಾಧ್ಯತೆಗಳಿವೆ.

|

ಮುಂದಿನ ದಶಕದಲ್ಲಿ ಬೇಕಾಗುವ ಅಗತ್ಯ ಅಗತ್ಯ ಮೂಲ ಸೌಕರ್ಯಗಳನ್ನು ಸರ್ಕಾರ ಒದಗಿಸಿಕೊಟ್ಟರೆ 2030 ರ ವೇಳೆಗೆ ಅರ್ಧದಷ್ಟು (ಎರಡರಲ್ಲಿ ಒಂದು) ನೈಸರ್ಗಿಕ ಅನಿಲದಿಂದ ಚಲಿಸುವ ವಾಹನಗಳಿರುವ ಸಾಧ್ಯತೆಗಳಿವೆ.
ಇದು ಸಾದ್ಯವಾದರೆ ದೇಶದ ಪ್ರಮುಖ ಕಾರು ತಯಾರಕ ಕಂಪನಿಗಳಾದ ಮಾರುತಿ ಸುಝುಕಿ (ಎಂಎಸ್ಐಎಲ್) ಮತ್ತು ಹುಂಡೈ ಮೋಟಾರ್ ಇಂಡಿಯಾ ಲಿಮಿಟೆಟ್ ಕಂಪನಿಗಳು ಹೆಚ್ಚಿನ ಲಾಭ ಪಡೆಯಲಿವೆ.

 

10 ಸಾವಿರ CNG ಘಟಕ

10 ಸಾವಿರ CNG ಘಟಕ

ಮುಂದಿನ ದಶಕದಲ್ಲಿ 10 ಸಾವಿರಕ್ಕೂ ಅಧಿಕ ಕಂಪ್ರೆಸ್ಡ್ ನ್ಯಾಚುರಲ್ ಗ್ಯಾಸ್ (ಸಿ.ಎನ್.ಜಿ) ಘಟಕಗಳನ್ನು ಸ್ಥಾಪಿಸುವ ಬಗ್ಗೆ ಸರ್ಕಾರ ಪ್ರಸ್ತಾಪಿಸಿದೆ. ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ನಿಯಂತ್ರಣ ಮಂಡಳಿ, ಈ ತಿಂಗಳಂತ್ಯದ ವೇಳೆ ನಗರ ಅನಿಲ ವಿತರಣೆ (ಸಿಜಿಡಿ) ಸಲುವಾಗಿ 10ನೇ ಸುತ್ತಿನ ಬಿಡ್ಡಿಂಗ್ ಕರೆದಿದ್ದು, 124 ಜಿಲ್ಲೆಗಳಿಗೆ ಸಿಎನ್ಜಿ ಮೂಲ ಸೌಕರ್ಯವನ್ನು ವಿಸ್ತರಿಸಲು ಯೋಜಿಸಿದೆ.

ಶೇ. 50 ರಷ್ಟು ಮಾರಾಟ ಸಾಧ್ಯತೆ

ಶೇ. 50 ರಷ್ಟು ಮಾರಾಟ ಸಾಧ್ಯತೆ

ಇದು ಯಶಸ್ವಿಗೊಂಡರೆ 2030ರ ವೇಳೆಗೆ ಶೇ. 50 ಕ್ಕೂ ಹೆಚ್ಚು ನೈಸರ್ಗಿಕ ಅನಿಲ ಚಾಲಿತ ವಾಹನಗಳ ಮಾರಾಟಕ್ಕೆ ಕಾರಣವಾಗಲಿದೆ. ಇದರಿಂದಾಗಿ ಅಷ್ಟು ವರ್ಷಗಳಲ್ಲಿ ಕಚ್ಚಾ ತೈಲ ಆಮದಿಗಾಗಿ ವ್ಯಯ ಮಾಡುತ್ತಿರುವ ಹಣದಲ್ಲಿ ರೂ. 11 ಲಕ್ಷ ಕೋಟಿ ಉಳಿತಾಯ ಆಗಲಿದೆ ಎನ್ನಲಾಗಿದೆ.

ಸಿಎನ್ಜಿ ವಾಹನಗಳ ಮಾರಾಟ
 

ಸಿಎನ್ಜಿ ವಾಹನಗಳ ಮಾರಾಟ

ಪ್ರಸ್ತುತ ದೆಹಲಿ, ಗುಜರಾತ್, ಮಹಾರಾಷ್ಟ್ರ, ಆಂಧ್ರ ಪ್ರದೇಶ, ತೆಲಂಗಾಣ, ಒಡಿಶಾ, ಉತ್ತರ ಪ್ರದೇಶ ಹಾಗು ಪಂಜಾಬ್ ಗಳಲ್ಲಿ ಹೆಚ್ಚು ಸಿಎನ್ಜಿ ವಾಹನಗಳು ಮಾರಾಟವಾಗುತ್ತಿವೆ.

Read more about: money finance news
English summary

CNG likely to make up 50% of vehicle sales by 2030

If the required infrastructure is put in place by the government over the next decade, natural gas vehicles.
Story first published: Tuesday, November 20, 2018, 15:57 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X