ಅಗ್ಗದ ಬೆಲೆಗೆ ಆಫರ್ ಕೊಟ್ಟು ದೇಶದ ಟೆಲಿಕಾಂ ರಂಗದಲ್ಲಿ ಸಂಚಲನ ಹುಟ್ಟಿಸಿದ ಜಿಯೋ ಆಗಾಗ್ಗೆ ಎದುರಾಳಿ ಕಂಪನಿಗಳಿಗೆ ಶಾಕಿಂಗ್ ನ್ಯೂಸ್ ಕೊಡುತ್ತಲೇ ಇರುತ್ತದೆ!

ವಾಯ್ಸ್ ಓವರ್ ಎಲ್ ಟಿಇ (Voice over LTE (VoLTE) ) ಮೂಲಕ 4ಜಿ ಸೇವೆ ನೀಡಲು ಜಿಯೋ ಮುಂದಾಗಿದ್ದು, ಏರ್ಟೆಲ್, ವೊಡಾಫೋನ್, ಐಡಿಯಾಗಳೂ ಈ ಸೇವೆಯನ್ನ ಪ್ರಾರಂಭಿಸಿದ್ದವು. ಇದೀಗ ಜಿಯೋ ಈ ಸೇವೆಯನ್ನು ಅಂತಾರಾಷ್ಟ್ರೀಯ ರೋಮಿಂಗ್ ನಲ್ಲೂ ನೀಡುಲಿದೆ. ಹೀಗಾದಲ್ಲಿ ಈ ಸೇವೆ ಒದಗಿಸಿದ ಭಾರತದ ಮೊದಲ ಸಂಸ್ಥೆ ಎಂಬ ಹೆಗ್ಗಳಿಕೆ ಜಿಯೋದ್ದಾಗಲಿದೆ.
ಏರ್ಟೆಲ್ ಮತ್ತು ವೊಡಾಫೋನ್ ಐಡಿಯವು ದೇಶದಾದ್ಯಂತ ವೋಲ್ಟ್ ಸೇವೆ ನೀಡುವ ಪ್ರಕ್ರಿಯೆಯಲ್ಲಿವೆ. ಪ್ರಸ್ತುತ VoLTE ಸೇವೆಗಳನ್ನು ಬೆಂಬಲಿಸುವ 187 ದೇಶಗಳಲ್ಲಿ ಯುಎಸ್, ಕೆನಡಾ, ಜಪಾನ್, ಕೊರಿಯಾ, ಸಿಂಗಾಪುರ್, ಯುಎಇ, ನೆದರ್ಲೆಂಡ್ಸ್ ಮತ್ತು ಭಾರತ ಸೇರಿವೆ.
ಜಪಾನ್ ನ ಕೆಡಿಡಿಐ ಕಾರ್ಪೋರೇಶನ್ ಸಹಯೋಗದೊಂದಿಗೆ ಭಾರತ ಹಾಗೂ ಜಪಾನ್ ನಲ್ಲಿ ಈ ಸೇವೆ ನೀಡಲು ಮುಂದಾಗಿರುವ ಜಿಯೋ ಮುಂದೆ ಇತರ ದೇಶಗಳಿಗೂ ವಿಸ್ತರಿಸುವ ಭರವಸೆ ನೀಡಿದೆ.
ಭಾರತದ ಟೆಲಿಕಾಂ ನಿಯಂತ್ರಣ ಪ್ರಾಧಿಕಾರದ (ಟ್ರಾಯ್) ಅಂಕಿ-ಅಂಶಗಳ ಪ್ರಕಾರ 4ಜಿ ನೆಟ್ವರ್ಕ್ ಕಂಪನಿಗಳ ಪೈಕಿ ಜಿಯೋ ಮೊದಲ ಸ್ಥಾನದಲ್ಲಿದ್ದು, ತೀವ್ರ ಪೈಪೋಟಿ ನೀಡುತ್ತಿರುವ ಏರ್ಟೆಲ್ ಎರಡನೇ ಸ್ಥಾನದಲ್ಲಿದೆ.


Click it and Unblock the Notifications