For Quick Alerts
ALLOW NOTIFICATIONS  
For Daily Alerts

ಎಲ್ಪಿಜಿ ಗ್ರಾಹಕರಿಗೆ ಸಿಹಿಸುದ್ದಿ! ಸಿಲಿಂಡರ್ ದರ ಇಳಿಕೆ

ಕಳೆದ ತಿಂಗಳು ಎರಡು ಬಾರಿ ಬಿಸಿ ಮುಟ್ಟಿಸಿದ್ದ ಸರ್ಕಾರ ಈ ಬಾರಿ ಎಲ್ಪಿಜಿ ಗ್ರಾಹಕರನ್ನು ಸಮಾಧಾನ ಪಡಿಸಿದೆ! ಡಿಸೆಂಬರ್ ತಿಂಗಳಲ್ಲಿ ಎಲ್ಪಿಜಿ ಸಿಲಿಂಡರ್ (ಅಡುಗೆ ಅನಿಲ) ಬೆಲೆಯನ್ನು ಕಡಿಮೆ ಮಾಡಿದೆ.

|

ಕಳೆದ ತಿಂಗಳು ಎರಡು ಬಾರಿ ಬಿಸಿ ಮುಟ್ಟಿಸಿದ್ದ ಸರ್ಕಾರ ಈ ಬಾರಿ ಎಲ್ಪಿಜಿ ಗ್ರಾಹಕರನ್ನು ಸಮಾಧಾನ ಪಡಿಸಿದೆ! ಡಿಸೆಂಬರ್ ತಿಂಗಳಲ್ಲಿ ಸಬ್ಸಿಡಿ ಸಹಿತ ಹಾಗು ಸಬ್ಸಿಡಿ ರಹಿತ ಎಲ್ಪಿಜಿ ಸಿಲಿಂಡರ್ (ಅಡುಗೆ ಅನಿಲ) ಬೆಲೆಯನ್ನು ಕಡಿಮೆ ಮಾಡಿದೆ. ಸುಕನ್ಯಾ ಸಮೃದ್ಧಿ ಖಾತೆ, ಎಫ್‌ಡಿ, ಆರ್‌ಡಿ, ಪಿಪಿಎಫ್, ಎಂಎಫ್, ವಿಮೆ: ನಿಮ್ಮ ಮಗುವಿಗೆ ಯಾವುದು ಸೂಕ್ತ ಆಯ್ಕೆ?

ಎಲ್ಪಿಜಿ ಸಿಲಿಂಡರ್ ದರ

ಎಲ್ಪಿಜಿ ಸಿಲಿಂಡರ್ ದರ

14.2 ಕೆ.ಜಿ ತೂಕದ ಸಬ್ಸಿಡಿ ಸಹಿತ ಎಲ್ಪಿಜಿ ಸಿಲಿಂಡರ್ ಬೆಲೆ ಶನಿವಾರದಿಂದ ಜಾರಿ ಬಂದಿದ್ದು, ರೂ. 6.52 ರಷ್ಟು ಬೆಲೆಯನ್ನು ತಗ್ಗಿಸಲಾಗಿದೆ ಎಂದು ಇಂಡಿಯನ್ ಆಯಿಲ್ ಕಾರ್ಪೋರೇಷನ್ ಹೇಳಿದೆ.
ಎಲ್ಪಿಜಿ ದರ ರೂ. 507.42 ದಿಂದ ರೂ. 500.90 ಕ್ಕೆ ಇಳಿದಿದೆ.
ಕಳೆದ ತಿಂಗಳು 14.2 ಕೆಜಿ ತೂಕದ ಸಬ್ಸಿಡಿ ಸಹಿತ ಎಲ್ಪಿಜಿ ಸಿಲಿಂಡರ್ ಬೆಲೆ ದೆಹಲಿಯಲ್ಲಿ ರೂ. 507.42 ರಷ್ಟಿತ್ತು. ಇದರ ಹಿಂದಿನ ಬೆಲೆ ರೂ. 505.34 ಆಗಿತ್ತು.

ಸಬ್ಸಿಡಿ ರಹಿತ ಸಿಲಿಂಡರ್ ಬೆಲೆ

ಸಬ್ಸಿಡಿ ರಹಿತ ಸಿಲಿಂಡರ್ ಬೆಲೆ

ಸಬ್ಸಿಡಿ ರಹಿತ ಸಿಲಿಂಡರ್ ದರ ಪ್ರತಿ ಸಿಲಿಂಡರ್ ಗೆ ರೂ. 133 ಇಳಿಕೆ ಮಾಡಲಾಗಿದ್ದು, ದೆಹಲಿಯಲ್ಲಿ 14.2 ಕೆಜಿ ತೂಕದ ಸಿಲಿಂಡರ್ ಪ್ರಸ್ತುತ ಬೆಲೆ ರೂ. 805.50 ರಷ್ಟಿದೆ.

ಪ್ರತಿವರ್ಷ 12 ಸಿಲಿಂಡರ್

ಪ್ರತಿವರ್ಷ 12 ಸಿಲಿಂಡರ್

ದೇಶದ ಕುಟುಂಬಗಳು ಪ್ರತಿವರ್ಷ 12 ಸಬ್ಸಿಡಿ ಸಹಿತ ಸಿಲಿಂಡರ್ ಗಳನ್ನು ವಿಪಡೆಯಬಹುದಾಗಿದೆ. ಇದಕ್ಕಿಂತ ಹೆಚ್ಚಿನ ಸಿಲಿಂಡರ್ ಗಳನ್ನು ಸಬ್ಸಿಡಿ ರಹಿತ ಖರೀದಿಸಬೇಕಾಗುತ್ತದೆ.

ಸತತ ಏಳು ಬಾರಿ ಏರಿಕೆ ಕಂಡ ನಂತರ ಇಳಿಕೆ

ಸತತ ಏಳು ಬಾರಿ ಏರಿಕೆ ಕಂಡ ನಂತರ ಇಳಿಕೆ

ಕಳೆದ ಜೂನ್ ತಿಂಗಳಿನಿಂದ ಇಲ್ಲಿಯವರೆಗೆ ಸಬ್ಸಿಡಿ ಸಹಿತ ಸಿಲಿಂಡರ್ ಗಳ ಬೆಲೆಯಲ್ಲಿ ಸತತ ಏಳು ಬಾರಿ ಏರಿಕೆಯಾಗಿದೆ. ಈ ಅವಧಿಯಲ್ಲಿ ಪ್ರತಿ ಸಿಲಿಂಡರ್ ಬೆಲೆಯಲ್ಲಿ ಒಟ್ಟು ರೂ. 16.13 ಹೆಚ್ಚಳವಾದಂತಾಗಿದೆ. ನವೆಂಬರ್ 1ರಂದು ಸಿಲಿಂಡರ್ ಮೂಲ ಬೆಲೆಯನ್ನು 2.84 ಹೆಚ್ಚಳ ಮಾಡಲಾಗಿತ್ತು. ಜಿಎಸ್ಟಿ ದರ ಏರಿಕೆಯಾದ ಕಾರಣ ಜೂನ್ ತಿಂಗಳಿಂದ ಪ್ರತಿ ತಿಂಗಳು ಎಲ್ಪಿಜಿ ಗ್ಯಾಸ್ ಸಿಲಿಂಡರ್ ಬೆಲೆಯಲ್ಲಿ ಏರಿಕೆಯಾಗಿದೆ. ಆದರೆ ಡಿಸೆಂಬರ್ ತಿಂಗಳಲ್ಲಿ ಮಾತ್ರ ಇಳಿಕೆ ಕಂಡಿದೆ.

Read more about: lpg money
English summary

Subsidised LPG price cut by Rs 6.5; non-subsidised rate reduced

LPG price on Friday was cut by Rs. 6.52 per cylinder on account of tax impact on the reduced market rate for the fuel.
Story first published: Saturday, December 1, 2018, 11:20 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X