For Quick Alerts
ALLOW NOTIFICATIONS  
For Daily Alerts

ಬೆಂಗಳೂರು ವಿಶ್ವದಲ್ಲಿಯೇ ಅತೀ ವೇಗವಾಗಿ ಬೆಳೆಯುತ್ತಿರುವ 3ನೇ ನಗರ

ಆಕ್ಸ್ಫರ್ಡ್ ಎಕನಾಮಿಕ್ಸ್ ಜಾಗತಿಕ ನಗರಗಳ ಸಂಶೋಧನೆಯ ಕುರಿತ ವರದಿಯಲ್ಲಿ, ಆರ್ಥಿಕ ಬೆಳವಣಿಗೆಗೆ ಸಂಬಂಧಿಸಿದಂತೆ ಭಾರತದ ಹತ್ತು ನಗರಗಳು ಸ್ಥಾನ ಪಡೆದಿದ್ದು, ಮುಂದಿನ ಎರಡು ದಶಕ ದಲ್ಲಿ ವಿಶ್ವದಲ್ಲಿಯೇ ಅತಿ ಹೆಚ್ಚಿನ ವೇಗದಲ್ಲಿ ಆರ್ಥಿಕ ಬೆಳವಣಿಗೆ

|

ಜಾಗತಿಕವಾಗಿ ಭಾರತ ತನ್ನದೇ ಛಾಪನ್ನು ಮೂಡಿಸುತ್ತಿದ್ದು, ಪ್ರತಿಯೊಂದು ಕ್ಷೇತ್ರದಲ್ಲಿ ಮೇಲುಗೈ ಸಾದಿಸುತ್ತಿರುವುದು ಖುಷಿಯ ಸಂಗತಿಯಾಗಿದ್ದು, ಜಗತ್ತಿನಲ್ಲೇ ಅತೀ ವೇಗವಾಗಿ ಬೆಳೆಯುತ್ತಿರುವ ಆರ್ಥಿಕತೆಯಾಗಿ ಹೊರಹೊಮ್ಮಿದೆ.

 
ಬೆಂಗಳೂರು ವಿಶ್ವದಲ್ಲಿಯೇ ಅತೀ ವೇಗವಾಗಿ ಬೆಳೆಯುತ್ತಿರುವ 3ನೇ ನಗರ

ಆಕ್ಸ್ಫರ್ಡ್ ಎಕನಾಮಿಕ್ಸ್ ಜಾಗತಿಕ ನಗರಗಳ ಸಂಶೋಧನೆಯ ಕುರಿತ ವರದಿಯಲ್ಲಿ, ಆರ್ಥಿಕ ಬೆಳವಣಿಗೆಗೆ ಸಂಬಂಧಿಸಿದಂತೆ ಭಾರತದ ಹತ್ತು ನಗರಗಳು ಸ್ಥಾನ ಪಡೆದಿದ್ದು, ಮುಂದಿನ ಎರಡು ದಶಕ ದಲ್ಲಿ ವಿಶ್ವದಲ್ಲಿಯೇ ಅತಿ ಹೆಚ್ಚಿನ ವೇಗದಲ್ಲಿ ಆರ್ಥಿಕ ಬೆಳವಣಿಗೆ ದಾಖಲಿಸಲಿರುವ ಮೊದಲ ಅಗ್ರ10 ನಗರಗಳು ಭಾರತದ ನಗರಗಳಾಗಿರಲಿವೆ ಎಂದು ತಿಳಿಸಿದೆ.

 

ವಜ್ರದ ಸಂಸ್ಕರಣೆ ಮತ್ತು ವ್ಯಾಪಾರದ ತಾಣ ಸೂರತ್‌ ಎರಡು ದಶಕಗಳ ಅವಧಿಯಲ್ಲಿ ವಿಶ್ವದಲ್ಲೇ ಅತಿ ವೇಗವಾಗಿ ಅಭಿವೃದ್ಧಿ ಹೊಂದುತ್ತಿರುವ ನಗರವಾಗಲಿದೆ. ವಾರ್ಷಿಕ ಸರಾಸರಿ ಶೇ. 9ರ ದರದಲ್ಲಿ ಸೂರತ್‌ ಬೆಳವಣಿಗೆ ದಾಖಲಿಸಲಿದೆ. ಬೆಂಗಳೂರು ಶೇ. 8.5 ದರದ ಬೆಳವಣಿಗೆ ದಾಖಲಿಸಿ, ಮೂರನೇ ಸ್ಥಾನದಲ್ಲಿರಲಿದೆ.

2035 ರ ವೇಳೆಗೆ ಅಭಿವೃದ್ಧಿ ಹೊಂದಿದ ವಿಶ್ವದ ಅಗ್ರ 10 ನಗರಗಳ ಪಟ್ಟಿಯಲ್ಲಿ ನ್ಯೂಯಾರ್ಕ್‌ ಮೊದಲ ಸ್ಥಾನದಲ್ಲಿದ್ದರೆ, ಟೋಕಿಯೊ, ಲಾಸ್‌ ಏಂಜಲೀಸ್‌. ಲಂಡನ್‌, ಶಾಂಘೈ, ಬೀಜಿಂಗ್‌, ಪ್ಯಾರಿಸ್‌, ಶಿಕಾಗೊ, ಗುಂಗ್ಜಾವೊ, ಶೆಂಜೆನ್‌ ನಂತರದ ಸ್ಥಾನಗಳಲ್ಲಿರಲಿವೆ. ಜಾಗತಿಕ ಆರ್ಥಿಕ ಬೆಳವಣಿಗೆ 2019ರಲ್ಲಿ ಶೇ. 3.1 ರಿಂದ ಶೇ. 2.8 ಕ್ಕೆ ತಗ್ಗಲಿದೆ ಎಂದು ಆಕ್ಸ್ಫರ್ಡ್ ಎಕನಾಮಿಕ್ಸ ವರದಿ ತಿಳಿಸಿದೆ.

Read more about: bangalore economy gdp
English summary

Surat Leads the Race as India Claims Top 10 Of World's Fastest-Growing Cities

The country’s diamond capital Surat will see the fastest economic growth in the next two decades, averaging more than nine percent, according to Oxford Economics.
Story first published: Friday, December 7, 2018, 11:55 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X