ಬಿಎಸ್ಎನ್ಎಲ್, ಬದಲಾದ 7 ಪ್ಲಾನ್ ಗಳಾವುವು ಗೊತ್ತೆ?

ಸರ್ಕಾರಿ ಸ್ವಾಮ್ಯದ ಟೆಲಿಕಾಂ ಸಂಸ್ತೆ ಭಾರತೀಯ ಸಂಚಾರ ನಿಗಮ ಲಿಮಿಟೆಡ್ (ಬಿಎಸ್ಎನ್ಎಲ್) ಗ್ರಾಹಕರನ್ನು ಸೆಳೆಯಲು ಹಾಗು ಪ್ರಮುಖ ಟೆಲಿಕಾಂ ಕಂಪನಿಗಳೊಂದಿಗೆ ಪೈಪೋಟಿ ನೀಡಲು ಪ್ರಯತ್ನ ನಡೆಸುತ್ತಿದೆ.

ಸರ್ಕಾರಿ ಸ್ವಾಮ್ಯದ ಟೆಲಿಕಾಂ ಸಂಸ್ತೆ ಭಾರತೀಯ ಸಂಚಾರ ನಿಗಮ ಲಿಮಿಟೆಡ್ (ಬಿಎಸ್ಎನ್ಎಲ್) ಗ್ರಾಹಕರನ್ನು ಸೆಳೆಯಲು ಹಾಗು ಪ್ರಮುಖ ಟೆಲಿಕಾಂ ಕಂಪನಿಗಳೊಂದಿಗೆ ಪೈಪೋಟಿ ನೀಡಲು ಪ್ರಯತ್ನ ನಡೆಸುತ್ತಿದೆ. ಬಿಎಸ್ಎನ್ಎಲ್ ಹೊಸ ಪ್ಲಾನ್ ಗಳನ್ನು ಘೋಷಿಸುವುದರ ಜೊತೆಗೆ ಹಳೆಯ ಪ್ಲಾನ್ ಗಳ ಬದಲಾವಣೆ ಮಾಡುತ್ತಿದೆ. ಇದೀಗ ಹಳೆಯ 7 ಯೋಜನೆಗಳಲ್ಲಿ ಬದಲಾವಣೆ ಮಾಡಿದೆ.

ಬದಲಾವಣೆಯಾದ ಪ್ಲಾನ್

ಬದಲಾವಣೆಯಾದ ಪ್ಲಾನ್

ಬಿಎಸ್ಎನ್ಎಲ್ ಹಳೆಯ 7 ಪ್ಲಾನ್ ಗಳ ಬದಲಾವಣೆಯಿಂದ ಗ್ರಾಹಕರಿಗೆ ಲಾಭವಾಗಲಿದ್ದು, ಬಿಎಸ್ಎನ್ಎಲ್ ಬ್ರಾಡ್ಬ್ಯಾಂಡ್ ಯೋಜನೆಯಲ್ಲೂ ಕೆಲವೊಂದು ಬದಲಾವಣೆ ಮಾಡಿದೆ.
ಸದ್ಯ ರೂ. 675, ರೂ. 845, ರೂ. 999, ರೂ. 1199, ರೂ. 1495, ರೂ. 1745 ಮತ್ತು 2295 ರೂಪಾಯಿ ಯೋಜನೆಯಲ್ಲಿ ಬದಲಾವಣೆ ಮಾಡಿದೆ.

ಹೆಚ್ಚುವರಿ ಡೇಟಾ ಲಭ್ಯ

ಹೆಚ್ಚುವರಿ ಡೇಟಾ ಲಭ್ಯ

ಬದಲಾವಣೆಯಾದ ಪ್ಲಾನ್ ಪ್ರಕಾರ, ರೂ. 675 ಯೋಜನೆಯಲ್ಲಿ ಗ್ರಾಹಕರಿಗೆ ಪ್ರತಿ ದಿನ 5ಜಿಬಿ ಡೇಟಾ ಸಿಗಲಿದೆ. ರೂ. 845 ಪ್ಲಾನ್ ನಲ್ಲಿ ಪ್ರತಿ ದಿನ 10 ಜಿಬಿ ಡೇಟಾ, ರೂ. 999 ಪ್ಲಾನ್ ನಲ್ಲಿ 15 ಜಿಬಿ, ರೂ. 1199 ಪ್ಲಾನ್ ನಲ್ಲಿ ಪ್ರತಿದಿನ 20 ಜಿಬಿ, ರೂ. 1495 ಪ್ಲಾನ್ ನಲ್ಲಿ 140 ಜಿಬಿ ಪ್ರತಿ ತಿಂಗಳು ಲಭ್ಯವಾಗುತ್ತಿತ್ತು. ಆದರೆ ಈಗ ಪ್ರತಿದಿನ 25 ಜಿಬಿ ಸಿಗಲಿದೆ. ರೂ. 1745 ಯೋಜನೆಯಲ್ಲಿ ಪ್ರತಿದಿನ 30 ಜಿಬಿ ಡೇಟಾ, ರೂ. 2295 ಯೋಜನೆಯಡಿ ಪ್ರತಿದಿನ 35 ಜಿಬಿ ಡೇಟಾ ಸಿಗಲಿದೆ.

ವೋಡಾಫೋನ್ ರೂ. 159 ಪ್ಲಾನ್

ವೋಡಾಫೋನ್ ರೂ. 159 ಪ್ಲಾನ್

ವೋಡಾಫೋನ್ ರೂ. 159 ಪ್ಲಾನ್ ಆರಂಭಿಸಿದ್ದು, ಈ ಯೋಜನೆ ಏರ್ಟೆಲ್ ಹಾಗೂ ಜಿಯೋದ ರೂ. 149 ಪ್ಲಾನ್ ಗೆ ಟಕ್ಕರ್ ನೀಡಲಿದೆ. ಈ ಪ್ಲಾನ್ 28 ದಿನಗಳ ವ್ಯಾಲಿಡಿಟಿ ಹೊಂದಿದೆ. ಪ್ರತಿದಿನ 1 ಜಿಬಿ ಡೇಟಾ ಅಂದರೆ 28 ದಿನಗಳಲ್ಲಿ ಒಟ್ಟು 28 ಜಿಬಿ ಡೇಟಾ ಸಿಗಲಿದೆ. ಪ್ರತಿ ದಿನ 100 ಎಸ್ಎಂಎಸ್ ಹಾಗು ಅನಿಯಮಿತ ಕರೆ ಸೌಲಭ್ಯ ಸಿಗಲಿದೆ. ಆದರೆ ಜಿಯೋ ತನ್ನ ರೂ. 149 ಪ್ಲಾನ್ ನಡಿಯಲ್ಲಿ ಪ್ರತಿ ದಿನ 1.5 ಜಿಬಿ ಡೇಟಾ ನೀಡುತ್ತಿದ್ದು, 28 ದಿನಗಳ ವ್ಯಾಲಿಡಿಟಿ ಹೊಂದಿದೆ. ವೋಡಾಫೋನ್ ಈ ಪ್ಲಾನ್ ಕೆಲ ಗ್ರಾಹಕರಿಗೆ ಮಾತ್ರ ಲಭ್ಯವಾಗಲಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+