ದೂರಸಂಪರ್ಕ ಕ್ಷೇತ್ರದಲ್ಲಿ ಏರ್ಟೆಲ್ ಹಾಗು ಜಿಯೋ ನಡುವೆ ಸಮಬಲದ ಭಾರೀ ಪೈಪೋಟಿ ನಡೆಯುತ್ತಲೇ ಇರುತ್ತದೆ.
ಭಾರರ್ತಿ ಏರ್ಟೆಲ್ ಟಾಕ್ ಟೈಂ ರಿಚಾರ್ಜ್ ಹಾಗೂ ಮಿನಿಮಮ್ ರಿಚಾರ್ಜ್ ಪ್ಲಾನ್ ಗಳ ಭಾರವನ್ನು ಗ್ರಾಹಕರ ಮೇಲೆ ಹಾಕಿತ್ತು. ಆದರೆ ಇದು ಗ್ರಾಹಕರಿಗೆ ಇಷ್ಟವಾಗಲಿಲ್ಲ. ಹಾಗಾಗಿ ಏರ್ಟೆಲ್ ತನ್ನ ಪ್ಲಾನ್ ಗಳಲ್ಲಿ ಕೆಲವೊಂದು ಬದಲಾವಣೆ ಮಾಡಿದ್ದು, ರೂ. 549 ಹಾಗೂ ರೂ. 799 ರಿಚಾರ್ಜ್ ಪ್ಲಾನ್ ತೆಗೆದು ಹಾಕಿದೆ.
ರೂ. 419 ರಿಚಾರ್ಜ್ ಪ್ಲಾನ್
ಏರ್ಟೆಲ್ ರೂ. 419 ರಿಚಾರ್ಜ್ ಪ್ಲಾನ್ ಶುರು ಮಾಡಿದ್ದು, ಇದು 75 ದಿನಗಳ ವ್ಯಾಲಿಡಿಟಿ ಹೊಂದಿದೆ.
ಪ್ರತಿದಿನ 1.4 ಜಿಬಿ ಡೇಟಾ ಗ್ರಾಹಕರಿಗೆ ಸಿಗಲಿದೆ. ಅಂದರೆ ಒಟ್ಟು 105 ಜಿಬಿ ಡೇಟಾ ಸಿಗಲಿದೆ. ಪ್ರತಿದಿನ 100 ಎಸ್ಎಂಎಸ್ ಸಿಗಲಿದೆ. ಗ್ರಾಹಕರು ಯಾವುದೇ ನೆಟ್ವರ್ಕ್ ಗೆ ಕರೆ ಮಾಡಬಹುದಾಗಿದೆ.
4ಜಿ, 3ಜಿ, 2ಜಿ ವೇಗದ ನೆಟ್ವರ್ಕ್
4ಜಿ ನೆಟ್ವರ್ಕ್ ಜೊತೆಗೆ 3ಜಿ, 2ಜಿ ವೇಗದ ನೆಟ್ವರ್ಕ್ ಕೂಡ ಬಳಕೆ ಮಾಡಬಹುದಾಗಿದೆ. 3ಜಿ ಹಾಗೂ 2ಜಿ ಗ್ರಾಹಕರು ಕೂಡ ಪ್ರತಿದಿನ 1.4 ಜಿಬಿ ಡೇಟಾ ಬಳಸಬಹುದಾಗಿದೆ.
ಜಿಯೋಗೆ ಟಕ್ಕರ್
ಜಿಯೋ ಪ್ರವೇಶಾತಿ ನಂತರ ಟೆಲಿಕಾಂ ವಲಯದಲ್ಲಿ ಭಾರೀ ಬೆಳವಣಿಗೆಯಾಗಿದ್ದು, ದರಸಮರ ಏರ್ಪಟ್ಟಿದೆ. ಇದಲ್ಲದೆ ಏರ್ಟೆಲ್ ಜಿಯೋಗೆ ಟಕ್ಕರ್ ನೀಡಲು ರೂ. 399 ಹಾಗೂ ರೂ. 448 ಪ್ಲಾನ್ ಕೂಡ ಆರಂಭಿಸಿದೆ. ಇದು 70 ಹಾಗೂ 82 ದಿನಗಳ ವ್ಯಾಲಿಡಿಟಿ ಹೊಂದಿವೆ. ಚಿನ್ನಾಭರಣಪ್ರಿಯರಿಗೆ ಬಂಪರ್! ಚಿನ್ನ, ಬೆಳ್ಳಿ ಬೆಲೆ ಭಾರೀ ಇಳಿಕೆ
More From GoodReturns

ಓಮ್ ಪವರ್ ಟ್ರಾನ್ಸ್ಮಿಷನ್ ಐಪಿಒ: ಸೋಮವಾರ ಹೂಡಿಕೆದಾರರಿಗೆ ಅಗ್ನಿಪರೀಕ್ಷೆ?

ಮಿಂತ್ರಾ ಫ್ಯಾಶನ್ ಕಾರ್ನಿವಲ್: ಇಂದೇ ಕೊನೆಯ ಅವಕಾಶ, ತಪ್ಪಿಸಿಕೊಳ್ಳಬೇಡಿ!

NSE ಆಯಿಲ್ ಫ್ಯೂಚರ್ಸ್ ಆರಂಭ: ಹೂಡಿಕೆದಾರರಿಗೆ ಸಿಗಲಿದೆ ಭಾರಿ ಲಾಭ?

ಷೇರು ಮಾರುಕಟ್ಟೆ ಏರಿಕೆ: ಹೂಡಿಕೆದಾರರಿಗೆ ಸಿಕ್ಕಿತು ಭರ್ಜರಿ ಲಾಭದ ಅವಕಾಶ

ಆರ್ಬಿಐ ರೆಪೋ ದರ ಸ್ಥಿರ: ನಿಮ್ಮ ಹಣದ ಭವಿಷ್ಯ ಬದಲಾಗುತ್ತಾ?

ಚಿನ್ನದ ಬೆಲೆ ಸ್ಥಿರ: ಆರ್ಬಿಐ ನಿರ್ಧಾರದಿಂದ ದರ ಇಳಿಕೆಯಾಗುತ್ತಾ?

ಆರ್ಬಿಐ ನಿರ್ಧಾರದಿಂದ ನಿಮ್ಮ ಇಎಂಐ ಹೊರೆ ಹೆಚ್ಚಾಗಲಿದೆಯೇ? ಎಚ್ಚರ!

ಚಿನ್ನದ ಬೆಲೆ ಸ್ಥಿರ: ಖರೀದಿಗೆ ಇದೇ ಸುವರ್ಣಾವಕಾಶವೇ?

ಷೇರು ಮಾರುಕಟ್ಟೆ ಶನಿವಾರದ ವಿಶೇಷ ವಹಿವಾಟು: ಹೂಡಿಕೆದಾರರೇ ಎಚ್ಚರ!

ಎಮಿಯಾಕ್ ಟೆಕ್ನಾಲಜೀಸ್ ಐಪಿಒ: ಹೂಡಿಕೆದಾರರ ಮುಗಿಬಿದ್ದ ಭರ್ಜರಿ ಬೇಡಿಕೆ!

ಆರ್ಬಿಐ ರೆಪೋ ದರ ಸ್ಥಿರತೆ: ನಿಮ್ಮ ಇಎಂಐ ಹೊರೆ ಇಳಿಯುತ್ತಾ?



Click it and Unblock the Notifications