For Quick Alerts
ALLOW NOTIFICATIONS  
For Daily Alerts

ಅಂಚೆ ಕಚೇರಿ ಖಾತೆಗಳಿಗೆ ನೆಟ್ ಬ್ಯಾಂಕಿಂಗ್ ಸೌಲಭ್ಯ

ಅಂಚೆ ಕಚೇರಿ ಉಳಿತಾಯ ಖಾತೆಗೆ ಇಂಟರ್ನೆಟ್ ಬ್ಯಾಂಕಿಂಗ್ ವ್ಯವಸ್ಥೆಯನ್ನು ಅಂಚೆ ಇಲಾಖೆ ಜಾರಿಗೆ ತಂದಿದ್ದು, ಸಚಿವ ಮನೋಜ್ ಸಿನ್ಹಾ ಅವರು ನೆಟ್‌ ಬ್ಯಾಂಕಿಂಗ್ ಸೌಲಭ್ಯವನ್ನು ಅನಾವರಣಗೊಳಿಸಿದರು.

|

ಅಂಚೆ ಕಚೇರಿ ಉಳಿತಾಯ ಖಾತೆಗೆ ಇಂಟರ್ನೆಟ್ ಬ್ಯಾಂಕಿಂಗ್ ವ್ಯವಸ್ಥೆಯನ್ನು ಅಂಚೆ ಇಲಾಖೆ ಜಾರಿಗೆ ತಂದಿದ್ದು, ಸಚಿವ ಮನೋಜ್ ಸಿನ್ಹಾ ಅವರು ನೆಟ್‌ ಬ್ಯಾಂಕಿಂಗ್ ಸೌಲಭ್ಯವನ್ನು ಅನಾವರಣಗೊಳಿಸಿದರು.

 
ಅಂಚೆ ಕಚೇರಿ ಖಾತೆಗಳಿಗೆ ನೆಟ್ ಬ್ಯಾಂಕಿಂಗ್ ಸೌಲಭ್ಯ

ಅಂಚೆ ಕಚೇರಿಯಲ್ಲಿ ಉಳಿತಾಯ ಖಾತೆ ಹೊಂದಿರುವ ಗ್ರಾಹಕರಿಗೆ ಇದು ಖುಷಿಯ ವಿಚಾರವಾಗಿದ್ದು, ಪದೇ ಪದೇ ಕಚೇರಿಗಳಿಗೆ ಹೋಗಿ ಖಾತೆ ಪರಿಶೀಲಿಸುವವರ ಕಷ್ಟ ತಪ್ಪಿದಂತಾಗಿದೆ. ಇದರ ಜೊತೆಗೆ ಮಾರುಕಟ್ಟೆ ವೆಬ್ಸೈಟ್ ಪೋರ್ಟಲ್ ಹಾಗೂ ಗ್ರಾಮೀಣ ಭಾಗದ ಕುಶಲಕರ್ಮಿಗಳು ಮತ್ತು ಇನ್ನಿತರ ಉತ್ಪನ್ನಗಳ ಮಾರಾಟಕ್ಕೆ ವೇದಿಕೆ ಒದಗಿಸುವ ವೆಬ್ ಪೋರ್ಟಲ್ ಗೆ ಮನೋಜ್ ಸಿನ್ಹಾ ಚಾಲನೆ ನೀಡಿದರು.

 

ಈ ವೆಬ್ಸೈಟ್ ಪೋರ್ಟಲ್ ಮೂಲಕ ಸಣ್ಣ ಕುಶಲಕರ್ಮಿಗಳಿಗೆ ಅನುಕೂಲವಾಗಲಿದ್ದು, ಇಲ್ಲಿ ಯಾವುದೇ ರೀತಿಯ ಮಿತಿಯನ್ನು ಹೇರಲಾಗಿಲ್ಲ. ಬೃಹತ್ ಜಾಲವನ್ನು ಹೊಂದಿರುವ ಅಂಚೆ ಇಲಾಖೆ ಸುಮಾರು 1.5 ಲಕ್ಷ ಜಾಗಗಳಿಗೆ ಸುಲಭವಾಗಿ ಈ ಉತ್ಪನ್ನಗಳನ್ನು ತಲುಪಿಸುವ ವ್ಯವಸ್ಥೆ ಹೊಂದಿದೆ. ಸ್ಪೀಡ್ ಪೋಸ್ಟ್ ಸೇವೆಗಳ ಮುಖಾಂತರವೂ ಕೂಡ ತ್ವರಿತವಾಗಿ ವಿಲೇವಾರಿ ಮಾಡುವ ಉದ್ದೇಶವನ್ನು ಹೊಂದಲಾಗಿದ್ದು, ಇದಕ್ಕಾಗಿಯೇ ಪ್ರತ್ಯೇಕವಾಗಿ ಪಾರ್ಸಲ್ ಗಳ ನಿರ್ವಹಣಾ ವಿಭಾಗವನ್ನು ರಚಿಸಲಾಗಿದೆ ಎಂದು ಸಚಿವ ಮನೋಜ್ ಸಿನ್ಹಾ ತಿಳಿಸಿದ್ದಾರೆ.

English summary

India Post Launches Internet Banking Facility For Savings Account Users

Communications Minister Manoj Sinha on Friday launched the internet banking facility for Post Office Savings Bank (POSB) customers who are under Core Banking Solution.
Story first published: Saturday, December 15, 2018, 16:05 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X