For Quick Alerts
ALLOW NOTIFICATIONS  
For Daily Alerts

ಮಲ್ಯ, ನೀರವ್ ಮೋದಿ ಮಾತ್ರವಲ್ಲದೇ ಒಟ್ಟು 58 ಲೂಟಿಕೋರರ ಬೇಟೆಗೆ ಸರ್ಕಾರ ಸಿದ್ದ

ದೇಶ ತೊರೆದು ವಿದೇಶಗಳಲ್ಲಿ ತಲೆಮರೆಸಿಕೊಂಡಿರುವ ವಿಜಯ್‌ ಮಲ್ಯ, ನೀರವ್‌ ಮೋದಿ, ಮೆಹುಲ್‌ ಚೋಕ್ಸಿ ಅಷ್ಟೇ ಅಲ್ಲದೆ ಒಟ್ಟು 58 ವಿತ್ತಪರಾಧಿಗಳನ್ನು ಕರೆ ತರಲು ಕಾರ್ಯಚರಣೆ ನಡೆಸಿರುವುದಾಗಿ ಕೇಂದ್ರ ಸರಕಾರ ಸಂಸತ್ತಿಗೆ ಹೇಳಿದೆ.

|

ದೇಶ ತೊರೆದು ವಿದೇಶಗಳಲ್ಲಿ ತಲೆಮರೆಸಿಕೊಂಡಿರುವ ವಿಜಯ್‌ ಮಲ್ಯ, ನೀರವ್‌ ಮೋದಿ, ಮೆಹುಲ್‌ ಚೋಕ್ಸಿ ಅಷ್ಟೇ ಅಲ್ಲದೆ ಒಟ್ಟು 58 ವಿತ್ತಪರಾಧಿಗಳನ್ನು ಕರೆ ತರಲು ಕಾರ್ಯಚರಣೆ ನಡೆಸಿರುವುದಾಗಿ ಕೇಂದ್ರ ಸರಕಾರ ಸಂಸತ್ತಿಗೆ ಹೇಳಿದೆ.

ಮಲ್ಯ, ನೀರವ್ ಮೋದಿ ಮಾತ್ರವಲ್ಲದೇ ಒಟ್ಟು 58 ಲೂಟಿಕೋರರ ಬೇಟೆ

ಒಟ್ಟು 58 ಆರೋಪಿಗಳ ವಿರುದ್ಧ ಇಂಟರ್‌ಪೋಲ್‌ ರೆಡ್‌ ಕಾರ್ನರ್‌ ನೋಟಿಸ್‌ ಜಾರಿಗೊಳಿಸಲಾಗಿದೆ ಎಂದು ಸಚಿವ ವಿ.ಕೆ ಸಿಂಗ್‌ ಮಾಹಿತಿ ನೀಡಿದ್ದಾರೆ. ಒಟ್ಟು 58 ವಿತ್ತಪರಾಧಿಗಳ ಪೈಕಿ 16 ಮಂದಿಯ ಗಡಿಪಾರು ಕೋರಿ ಬ್ರಿಟನ್‌, ಯುಎಇ, ಬೆಲ್ಜಿಯಂ, ಈಜಿಪ್ತ್‌, ಅಮೆರಿಕ, ಅಂಟಿಗುವಾ ಮತ್ತು ಬಾರ್ಬುಡಾಗೆ ಮನವಿ ಸಲ್ಲಿಸಲಾಗಿದೆ.

ನೀರವ್‌ ಮೋದಿ, ಮೆಹುಲ್‌ ಚೋಕ್ಸಿ, ಲಲಿತ್ ಮೋದಿ, ನೀರವ್‌ ಮೋದಿ ಸೋದರ ನೀಶಲ್, ಆಪ್ತನಾದ ಸುಭಾಷ್‌ ಪರಬ್, ನಿತಿನ್‌ ಮತ್ತು ಚೇತನ್‌ ಸಂದೇಸರ, ಯುರೋಪಿನ ಮಧ್ಯವರ್ತಿ ಗುಯಿಡೊ ರಾಲ್ಫ್‌ ಹಷ್ಕೆ, ಕಾರ್ಲೊ ಜೆರೋಸಾ, ನೀರವ್‌, ಗುಜರಾತ್‌ ಮೂಲದ ಉದ್ಯಮಿ ಆಶಿಶ್ ಜೋಬಾನ್ ಪುತ್ರ ಮತ್ತು ಪತ್ನಿ ಪ್ರೀತಿ ದೇಸಾಯಿ ಮತ್ತಿತರ ಪ್ರಮುಖರು ಈ 58 ಆರೋಪಿಗಳ ಪಟ್ಟಿಯಲ್ಲಿದ್ದಾರೆ. ವಿದೇಶಗಳಲ್ಲಿ ತಲೆಮರೆಸಿಕೊಂಡವರಲ್ಲಿ ಗುಜರಾತ್ ರಾಜ್ಯದವರೇ ಹೆಚ್ಚಿದ್ದಾರೆ.

Read more about: vijay mallya money
English summary

Not just Vijay Mallya, govt trying to get back 58 looters

Not just Vijay Mallya, govt trying to get back 58 looters.
Story first published: Friday, December 21, 2018, 18:08 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X