ಫ್ಲಿಪ್ಕಾರ್ಟ್ ಇಯರ್ ಎಂಡರ್ ಕಾರ್ನಿವಲ್ ಸೇಲ್ ಡಿಸೆಂಬರ್ 23 ರಿಂದ ಡಿಸೆಂಬರ್ 31 ರವರೆಗೆ ಆಯೋಜಿಸಿದೆ ಎಂದು ಕಂಪನಿ ಹೇಳಿದೆ.
ಫ್ಲಿಪ್ಕಾರ್ಟ್ ಇಯರ್ ಎಂಡರ್ ಕಾರ್ನಿವಲ್ ಸೇಲ್ ಡಿಸೆಂಬರ್ 23 ರಿಂದ ಡಿಸೆಂಬರ್ 31 ರವರೆಗೆ ಆಯೋಜಿಸಿದೆ ಎಂದು ಕಂಪನಿ ಹೇಳಿದೆ.

ಇಯರ್ ಎಂಡರ್ ಕಾರ್ನಿವಲ್ ಸೇಲ್ ನಲ್ಲಿ ಟಿವಿ ಸೇರಿದಂತೆ ದೊಡ್ಡ ಎಲೆಕ್ಟ್ರಾನಿಕ್ ವಸ್ತುಗಳಿಗೆ ರಿಯಾಯಿತಿ ಭಾರೀ ಸಿಗಲಿದೆ. ಒಂಭತ್ತು ದಿನಗಳ ಈ ಸೇಲ್ ನಲ್ಲಿ ಶಿಯೊಮಿ, ಸ್ಯಾಮ್ಸಂಗ್, ವಿಯು ಸೇರಿದಂತೆ ಅನೇಕ ಕಂಪನಿಗಳು ರಿಯಾಯಿತಿ ನೀಡಲಿವೆ.
ಭಾರೀ ರಿಯಾಯಿತಿ
ಗ್ರಾಹಕರಿಗೆ ಎಲ್ಜಿ ಸೇರಿದಂತೆ ಹಲವು ಬ್ರಾಂಡ್ ಗಳ ವಾಷಿಂಗ್ ಮಶಿನ್, ಫ್ರಿಜ್, ಮೈಕ್ರೋವೇವ್ ಮೇಲೆ ಭರ್ಜರಿ ರಿಯಾಯಿತಿ ಸಿಗುತ್ತಿದೆ. ಜೊತೆಗೆ ರಾತ್ರಿ 12 ಗಂಟೆಯಿಂದ 1 ಗಂಟೆಯವರೆಗೆ ಮ್ಯಾಜಿಕಲ್ ಡೀಲ್ಸ್ ಕೂಡ ಸಿಗಲಿದೆ.
ಟಿವಿಗಳ ಮೇಲೆ ಡಿಸ್ಕೌಂಟ್
ಸೇಲ್ ನಲ್ಲಿ ಶಿಯೊಮಿ ರೂ. 22,999 ಗೆ Mi 43 ಇಂಚಿನ ಟಿವಿ 4ಎಯನ್ನು ರೂ. 21,999ಗೆ ನೀಡುತ್ತಿದೆ.
ಸ್ಯಾಮ್ಸಂಗ್ ನ 32 ಇಂಚಿನ ಹೆಚ್ ಡಿ ಎಲ್ಇಡಿ ಟಿವಿ ರೂ. 15,999 ಗೆ ಸಿಗಲಿದೆ. ಇದರ ಮೂಲ ಬೆಲೆ ರೂ. 26,900 ಆಗಿದೆ. ಇನ್ನು Thomson B9 Pro 40 ಇಂಚಿನ ಫುಲ್ ಹೆಚ್ಡಿ ಸ್ಮಾರ್ಟ್ ಟಿವಿ ರೂ. 25,999 ಬದಲು ರೂ. 17,999 ಸಿಗುತ್ತಿದೆ.


Click it and Unblock the Notifications