For Quick Alerts
ALLOW NOTIFICATIONS  
For Daily Alerts

ಹೊಸ ವರ್ಷಕ್ಕೆ ಬಿಎಸ್ಎನ್ಎಲ್ ಭರ್ಜರಿ ಆಫರ್, ನೀಡುತ್ತಿದೆ ಹೆಚ್ಚುವರಿ ಡೇಟಾ ಮತ್ತು ಟಾಕ್ ಟೈಂ

ಸರ್ಕಾರಿ ಸ್ವಾಮ್ಯದ ಬಿಎಸ್ಎನ್ಎಲ್ ಖಾಸಗಿ ವಲಯದ ಟೆಲಿಕಾಂ ಕಂಪನಿಗಳಿಗೆ ಟಕ್ಕರ್ ನೀಡುತ್ತಲೇ ಬಂದಿದೆ. ಅದರಲ್ಲೂ ಜಿಯೋ ಪ್ರವೇಶಾತಿ ನಂತರ ದರ ಸಮರ ಜೋರಾಗಿ ಸಾಗಿದೆ.

|

ಸರ್ಕಾರಿ ಸ್ವಾಮ್ಯದ ಬಿಎಸ್ಎನ್ಎಲ್ ಖಾಸಗಿ ವಲಯದ ಟೆಲಿಕಾಂ ಕಂಪನಿಗಳಿಗೆ ಟಕ್ಕರ್ ನೀಡುತ್ತಲೇ ಬಂದಿದೆ. ಅದರಲ್ಲೂ ಜಿಯೋ ಪ್ರವೇಶಾತಿ ನಂತರ ದರ ಸಮರ ಜೋರಾಗಿ ಸಾಗಿದೆ. ಜಿಯೋ, ಏರ್ಟೆಲ್, ವೋಡಾಫೋನ್ ಸೇರಿದಂತೆ ಪ್ರಮುಖ ಕಂಪನಿಗಳಿಗೆ ಸ್ಪರ್ಧೆ ನೀಡಲು ಹೊಸ ಹೊಸ ಯೋಜನೆಗಳನ್ನು ಬಿಡುಗಡೆ ಮಾಡುತ್ತಿದೆ. ಬಿಎಸ್ಎನ್ಎಲ್ ಹೊಸ ವರ್ಷಕ್ಕೆ ತನ್ನ ಗ್ರಾಹಕರಿಗೆ ಭರ್ಜರಿ ಉಡುಗೊರೆ ನೀಡಲು ಮುಂದಾಗಿದೆ.

ಹೆಚ್ಚುವರಿ ಟಾಕ್ ಟೈಂ ಆಫರ್

ಹೆಚ್ಚುವರಿ ಟಾಕ್ ಟೈಂ ಆಫರ್

ಬಿಎಸ್ಎನ್ಎಲ್ ಪ್ರಿಪೇಡ್ ಗ್ರಾಹಕರಿಗೆ ಹೆಚ್ಚುವರಿ ಟಾಕ್ ಟೈಂ ನೀಡಲು ಮುಂದಾಗಿದ್ದು, ರೂ. 252 ರಿಚಾರ್ಜ್ ಪ್ಲಾನ್ಗೆ ಬಿಎಸ್ಎನ್ಎಲ್ ಶೇ. 66 ರಷ್ಟು ಹೆಚ್ಚುವರಿ ಟಾಕ್ ಟೈಂ ನೀಡುತ್ತಿದೆ. ರೂ. 402 ಪ್ರಿಪೇಡ್ ಪ್ಲಾನ್ ಮೇಲೆಯೂ ಹೆಚ್ಚುವರಿ ಟಾಕ್ ಟೈಂ ನೀಡಲು ಮುಂದಾಗಿದೆ.

ಹೆಚ್ಚುವರಿ ಡೇಟಾ

ಹೆಚ್ಚುವರಿ ಡೇಟಾ

ರೂ. 252 ಪ್ಲಾನ್ ನಲ್ಲಿ 2ಜಿಬಿ ಹೆಚ್ಚುವರಿ ಡೇಟಾ ಸಿಗಲಿದೆ. ಇನ್ನು ರೂ. 402 ಪ್ಲಾನ್ ನಲ್ಲಿ 4ಜಿಬಿ ಡೇಟಾ ಸಿಗಲಿದೆ.

ಎಷ್ಟು ಹೆಚ್ಚುವರಿ, ಯಾರಿಗೆ ಲಭ್ಯ?

ಎಷ್ಟು ಹೆಚ್ಚುವರಿ, ಯಾರಿಗೆ ಲಭ್ಯ?

ರೂ. 252 ಪ್ಲಾನ್ ನಲ್ಲಿ ಕಂಪನಿ 210 ರೂಪಾಯಿ ಟಾಕ್ ಟೈಂ ಹೆಚ್ಚುವರಿ ನೀಡುತ್ತಿದ್ದು, ಈ ಏರಿಕೆ ನಂತರ 252 ಪ್ಲಾನ್ ನಡಿ ಗ್ರಾಹಕರಿಗೆ ರೂ. 350 ಟಾಕ್ ಟೈಂ ಸಿಗಲಿದೆ.
ಜೊತೆಗೆ ರೂ. 402 ಪ್ಲಾನ್ ನಲ್ಲಿ 600 ರೂಪಾಯಿ ಟಾಕ್ ಟೈಂ ಸಿಗಲಿದೆ. ಇದು ಆಂಧ್ರಪ್ರದೇಶ ಹಾಗೂ ತೆಲಂಗಾಣ ಪ್ರದೇಶದ ಗ್ರಾಹಕರಿಗೆ ಮಾತ್ರ ಇದು ಲಭ್ಯವಾಗಲಿದೆ.

English summary

BSNL offers 66 percent more talk time on prepaid recharges

BSNL offers 66 percent more talk time on prepaid recharges
Story first published: Thursday, December 27, 2018, 12:02 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X