For Quick Alerts
ALLOW NOTIFICATIONS  
For Daily Alerts

ಅಮೆಜಾನ್, ಫ್ಲಿಪ್‌ಕಾರ್ಟ್ ನಂತಹ ಇ-ಕಾಮರ್ಸ್ ಸಂಸ್ಥೆಗಳು ಡಿಸ್ಕೌಂಟ್ ಘೋಷಿಸುವಂತಿಲ್ಲ!

ಹಬ್ಬ ಹರಿದಿನ ಮತ್ತು ಹೊಸ ವರ್ಷದ ಸಂದರ್ಭಗಳಲ್ಲಿ ಇ-ಕಾಮರ್ಸ್ ಕಂಪನಿಗಳು ಭರ್ಜರಿ ಆಫರ್ ಹಾಗು ರಿಯಾಯಿತಿಗಳನ್ನು ಘೋಷಿಸುವುದು ಸಾಮಾನ್ಯ ಸಂಗತಿ. ಆದರೆ ಇನ್ನುಮುಂದೆ ಅಮೆಜಾನ್ ಮತ್ತು ಫ್ಲಿಪ್‌ಕಾರ್ಟ್‌ನಂತಹ ಸಂಸ್ಥೆಗಳು ನೀಡುವ ಭರ್ಜರಿ ರಿಯಾಯಿತಿ ಮ

|

ಹಬ್ಬ ಹರಿದಿನ ಮತ್ತು ಹೊಸ ವರ್ಷದ ಸಂದರ್ಭಗಳಲ್ಲಿ ಇ-ಕಾಮರ್ಸ್ ಕಂಪನಿಗಳು ಭರ್ಜರಿ ಆಫರ್ ಹಾಗು ರಿಯಾಯಿತಿಗಳನ್ನು ಘೋಷಿಸುವುದು ಸಾಮಾನ್ಯ ಸಂಗತಿ. ಆದರೆ ಇನ್ನುಮುಂದೆ ಅಮೆಜಾನ್ ಮತ್ತು ಫ್ಲಿಪ್‌ಕಾರ್ಟ್‌ನಂತಹ ಸಂಸ್ಥೆಗಳು ನೀಡುವ ಭರ್ಜರಿ ರಿಯಾಯಿತಿ ಮತ್ತು ವಿವಿಧ ಕೊಡುಗೆಗಳಿಗೆ ತಡೆ ಬೀಳಲಿದೆ.

ಇ-ಕಾಮರ್ಸ್ ಸಂಸ್ಥೆಗಳು ಡಿಸ್ಕೌಂಟ್ ಘೋಷಿಸುವಂತಿಲ್ಲ!

ಇ-ಕಾಮರ್ಸ್ ಕಂಪನಿಗಳು ನೀಡುವ ಆಫರ್ ಮತ್ತು ಹಬ್ಬದ ಮಾರಾಟ ಹೆಸರಿನಲ್ಲಿ ನೀಡುತ್ತಿರುವ ದರ ಕಡಿತ ಮಾರಾಟ ಮತ್ತು ಕಾಂಬಿ ಆಫರ್, ಕ್ಯಾಶ್ ಬ್ಯಾಕ್ ನಿಂದಾಗಿ ಇತರ ವ್ಯಾಪಾರಿಗಳು/ಮಳಿಗೆಗಳಿಗೆ ಭಾರೀ ನಷ್ಟ ಉಂಟಾಗುತ್ತಿದೆ.

ಉದ್ಯಮ ಮತ್ತು ವಾಣಿಜ್ಯ ಒಕ್ಕೂಟವು ಯಾವುದೇ ನಿರ್ಬಂಧವಿಲ್ಲದ ದರ ನಿಗದಿಯಿಂದ ಉದ್ಯಮ ನಡೆಸಲು ಸಾಧ್ಯವಾಗುತ್ತಿಲ್ಲ ಎಂದು ಸರಕಾರಕ್ಕೆ ದೂರು ಸಲ್ಲಿಸಿತ್ತು. ಅಲ್ಲದೇ ಇ-ಕಾಮರ್ಸ್ ಸರಕುಗಳ ಮರಾಟಕ್ಕೆ ಸಂಬಂಧಿಸಿದಂತೆ ಸರ್ಕಾರ ಈಗಾಗಲೇ ಹಲವು ನಿಯಮ ರೂಪಿಸಿದೆ. ಆದರೆ ಅದನ್ನು ಸಂಸ್ಥೆಗಳು ಪಾಲಿಸದೇ ಬೇಕಾಬಿಟ್ಟಿ ಕೊಡುಗೆ ಮತ್ತು ಮಾರಾಟ ಉತ್ಸವ ಮೂಲಕ ಉತ್ಪನ್ನಗಳ ಮೇಲೆ ದರ ಕಡಿತ ಮಾಡಿ ಮಾರಾಟ ಮಾಡುತ್ತಿವೆ. ಇನ್ನುಮುಂದೆ ಇದಕ್ಕೆಲ್ಲ ಕೇಂದ್ರ ಸರ್ಕಾರ ನಿರ್ಬಂಧ ವಿಧಿಸಲಿದೆ. ಈ ನಿಯಮಗಳ ಪರಿಷ್ಕರಣೆಯಿಂದ ದೇಶೀಯ ಮಾರಾಟಗಾರರಿಗೆ ಪ್ರಯೋಜನವಾಗಲಿದೆ.

Read more about: amazon flipkart money savings
English summary

Norms for e-tailers tweaked to check discounts, cashbacks

The government on Wednesday tightened guidelines for FDI in e-commerce, barring players, including Amazon and Flipkart.
Story first published: Thursday, December 27, 2018, 13:19 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X