ಏಪ್ರಿಲ್‌ 1ರಿಂದ ಎಲ್ಲ ವಾಹನಗಳ ನಂಬರ್ ಪ್ಲೇಟ್ ಆಗಲಿದೆ ಹೈ ಸೆಕ್ಯುರಿಟಿ

2019ರ ಏಪ್ರಿಲ್‌ 1ರಿಂದ ಎಲ್ಲ ಮೋಟಾರು ವಾಹನಗಳಿಗೆ ಹೆಚ್ಚು ಭದ್ರತಾ ಅಂಶಗಳಿರುವ, ತಿರುಚಲು ಅಸಾಧ್ಯವಾದ ನಂಬರ್‌ ಪ್ಲೇಟ್‌ಗಳನ್ನು ಕಡ್ಡಾಯವಾಗಿ ಅಳವಡಿಸಬೇಕಾಗುತ್ತದೆ.

ವಾಹನಗಳ ನಕಲಿ ನಂಬರ್ ಪ್ಲೇಟ್ ಗಳನ್ನು ತಡೆಗಟ್ಟಲು ಸರ್ಕಾರ ಮುಂದಾಗಿದೆ. ಇದಕ್ಕಾಗಿ 2019ರ ಏಪ್ರಿಲ್‌ 1ರಿಂದ ಎಲ್ಲ ಮೋಟಾರು ವಾಹನಗಳಿಗೆ ಹೆಚ್ಚು ಭದ್ರತಾ ಅಂಶಗಳಿರುವ, ತಿರುಚಲು ಅಸಾಧ್ಯವಾದ ನಂಬರ್‌ ಪ್ಲೇಟ್‌ಗಳನ್ನು ಕಡ್ಡಾಯವಾಗಿ ಅಳವಡಿಸಬೇಕಾಗುತ್ತದೆ.

ಏಪ್ರಿಲ್‌ 1ರಿಂದ ಎಲ್ಲ ವಾಹನಗಳ ನಂಬರ್ ಪ್ಲೇಟ್ ಆಗಲಿದೆ ಹೈ ಸೆಕ್ಯುರಿಟಿ

ನಕಲಿ ನಂಬರ್‌ ಪ್ಲೇಟ್, ವಾಹನಗಳ ಕಳ್ಳತನ ತಡೆಗಟ್ಟಲೂ ಈ ಕ್ರಮ ಸಹಕಾರಿಯಾಗುವ ನಿರೀಕ್ಷೆ ಇದೆ ಎನ್ನಲಾಗಿದೆ. 2019 ಏಪ್ರಿಲ್‌ 1ರ ನಂತರ ಉತ್ಪಾದನೆಯಾಗುವ ಎಲ್ಲ ವಾಹನಗಳಿಗೆ ಹೈ ಸೆಕ್ಯುರಿಟಿ ರಿಜಿಸ್ಪ್ರೇಶನ್‌ ಪ್ಲೇಟ್‌ (ಎಚ್‌ಎಸ್‌ಆರ್‌ಪಿ) ಕಡ್ಡಾಯವಾಗಲಿದೆ ಎಂದು ಕೇಂದ್ರ ಸಾರಿಗೆ ಸಚಿವ ನಿತಿನ್ ಗಡ್ಕರಿ ಲೋಕಸಭೆಗೆ ಲಿಖಿತ ಉತ್ತರದಲ್ಲಿ ತಿಳಿಸಿದ್ದಾರೆ.

ಎಚ್‌ಎಸ್‌ಆರ್‌ಪಿಎಸ್ ನಿರ್ದಿಷ್ಟ ಭದ್ರತಾ ಅಂಶಗಳನ್ನು ಒಳಗೊಂಡಿದ್ದು ದುರುಪಯೋಗ ಮಾಡಿಕೊಳ್ಳಲು ಸಾಧ್ಯವಿಲ್ಲ ಹಾಗು ನಂಬರ್ ಗಳನ್ನು ತಿರುಚಲೂ ಸಾಧ್ಯವಿಲ್ಲ. ಅಟೊಮೇಟಿವ್ ರಿಸರ್ಚ್‌ ಅಸೋಸಿಯೇಶನ್‌ ಆಫ್‌ ಇಂಡಿಯಾ, ಸೆಂಟ್ರಲ್‌ ಇನ್‌ಸ್ಟಿಟ್ಯೂಟ್‌ ಆಫ್‌ ರೋಡ್‌ ಟ್ರಾನ್ಸ್‌ಪೋರ್ಟ್‌, ಸೆಂಟ್ರಲ್‌ ರೋಡ್‌ ರಿಸರ್ಚ್‌ ಇನ್‌ಸ್ಟಿಟ್ಯೂಟ್‌, ಸೊಸೈಟಿ ಆಫ್‌ ಇಂಡಿಯನ್‌ ಅಟೊಮೊಬೈಲ್‌ ಮಾನ್ಯುಫಾಕ್ಚರರ್ಸ್ ಸರ್ಕಾರದ ಈ ಪ್ರಸ್ತಾಪವನ್ನು ಬೆಂಬಲಿಸಿವೆ ಎಂದು ನೀತಿನ್ ಗಡ್ಕರಿ ಹೇಳಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+